Latest Videos

ಹೊಗಳಿದ್ರೂ ಬಿಡಲ್ಲ; 'ನನ್ನ ಬಳಿ 4 ರಾಷ್ಟ್ರ ಪ್ರಶಸ್ತಿಗಳಿವೆ' ಎಂದು ಆಮೀರ್ ಖಾನ್‌ ಕಾಲೆಳೆದ ಕಂಗನಾ

By Shruthi KrishnaFirst Published Feb 11, 2023, 11:59 AM IST
Highlights

ಹೊಗಳಿದ್ರೂ ಕಂಗನಾ ಸುಮ್ಮನೆ ಬಿಡಲ್ಲ. ಆಮೀರ್ ಖಾನ್ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಕಂಗನಾ 4 ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಎಂದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಯಾರ ಬಗ್ಗೆ ಮಾತನಾಡಲೂ ಹಿಂಜರಿಯುವುದಿಲ್ಲ. ನೇರ ನುಡಿಯ ಕಂಗನಾ ಇದೀಗ ಆಮೀರ್ ಖಾನ್ ಅವರನ್ನು ಟ್ರೋಲ್ ಮಾಡಿದ್ದಾರೆ. ತನ್ನನ್ನು ಹೊಗಳಿದ್ರೂ ಆಮೀರ್ ಖಾನ್‌ನನ್ನೂ ಕಾಲೆಳೆದಿದ್ದಾರೆ ಕ್ವೀನ್ ಸ್ಟಾರ್. ಇತ್ತೀಚಿಗಷ್ಟೆ ಆಮೀರ್ ಖಾನ್ ಕಾದಂಬರಿಗಾರ್ತಿ ಮತ್ತು ಅಂಕಣಗಾರ್ತಿ ಶೋಭಾ ಡೇ ಅವರ ಹೊಸ ಪುಸ್ತಕ Insatiable-My Hunger for Life ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು. ಸಂವಾದದಲ್ಲಿ ಆಮೀರ್ ಖಾನ್ ಕಂಗನಾ ಬಗ್ಗೆ ಮಾತನಾಡಿದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ. 

ಅಷ್ಟಕ್ಕೂ ಸಂವಾದದಲ್ಲಿ ಶೋಭಾ ಡೇ ಪಾತ್ರಕ್ಕೆ ಯಾವ ನಟಿ ಸೂಕ್ತ ಎಂದು ಆಮೀರ್ ಖಾನ್ ಅವರನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಆಮೀರ್ ಖಾನ್, ಅಲಿಯಾ ಭಟ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಎಂದು ಹೇಳಿದರು. ಆಮೀರ್ ಹೀಗೆ ಹೇಳಿದ ಬಳಿಕ ಕಂಗನಾ ರಣಾವತ್ ಅವರನ್ನು ಮರೆತಿದ್ದೀರಿ ಎಂದು ಶೋಭಾ ಡೇ ನೆನಪಿಸಿದರು. ಬಳಿಕ ಆಮೀರ್ ಖಾನ್ ಕಂಗನಾ ಅವರನ್ನು ಹೊಗಳಿದರು. 'ತುಂಬಾ ಸ್ಟ್ರಾಂಗ್ ನಟಿ, ಅವರೂ ಕೂಡ ಈ ಪಾತ್ರಕ್ಕೆ ಫಿಟ್ ಆಗುತ್ತಾರೆ' ಎಂದು ಹೇಳಿದರು. 

ಪಠಾಣ್ ಸಕ್ಸಸ್: ಭಾರತ ಕೇವಲ ಖಾನ್‌ಗಳನ್ನು ಮಾತ್ರ ಇಷ್ಟಪಡೋದು; ಕಂಗನಾ ಅಚ್ಚರಿ ಹೇಳಿಕೆ

ಆಮೀರ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಕಂಗನಾ, ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 'ಬೇಚಾರ ಅಮೀರ್ ಖಾನ್... ಹ ಹ್ಹಾ.. ಅವರು ನಾನು ಮೂರು ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಎಂದು ಗೊತ್ತಿಲ್ಲದವರಂತೆ ನಟಿಸಲು ಅವರು ಅತ್ಯುತ್ತಮವಾಗಿ ಪ್ರಯತ್ನಿಸಿದರು. ಶೋಭಾ ಡೇ ಧನ್ಯವಾದಗಳು. ನಾನು ನಿಮ್ಮ ಪಾತ್ರ ಮಾಡಲು ಇಷ್ಟಪಡುತ್ತೇನೆ' ಎಂದು ಹೇಳಿದರು. 

ಬಳಿಕ ಮತ್ತೊಂದು ಟ್ವೀಟ್ ನಲ್ಲಿ ಕಂಗನಾ, 'ಶೋಭಾ ಡೆ ನಾವು ವಿರೋಧಾತ್ಮಕ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿದ್ದೇವೆ. ಆದರೆ ಅದು ನನ್ನ ಕಲೆ. ಕಠಿಣ ಪರಿಶ್ರಮ ಮತ್ತು ನನ್ನ ಕರಕುಶಲತೆಗೆ ಸಮರ್ಪಣೆ ಮಾಡುವುದನ್ನು ತಡೆಯುವುದಿಲ್ಲ. ನಿಮ್ಮ ಹೊಸ ಪುಸ್ತಕಕ್ಕೆ ನಾನು ಶುಭ ಹಾರೈಸುತ್ತೇನೆ. ಕ್ಷಮಿಸಿ ನನ್ನ ಬಳಿ ಈಗಾಗಲೇ ನಾಲ್ಕು ರಾಷ್ಟ್ರ ಪ್ರಶಸ್ತಿಗಳಿವೆ ಮತ್ತು ಪದ್ಮಶ್ರೀ ಪ್ರಶಸ್ತಿಯೂ ಇದೆ ಎಂದು ನನ್ನ ಅಭಿಮಾನಿಗಳು ನೆನಪಿಸಿದ್ದಾರೆ, ನನಗೆ ಎಷ್ಟು ಇದೆ ಎಂಬುದು ನೆನಪಿಲ್ಲ' ಎಂದು ಹೇಳಿದ್ದಾರೆ. 

ಚಂಗು-ಮಂಗು, ನಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿತೀನಿ; ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ವಾರ್ನಿಂಗ್

ಬಾಲಿವುಡ್ ಸ್ಟಾರ್ ಜೋಡಿಗೆ ಕಂಗನಾ ವಾರ್ನಿಂಗ್

ಇತ್ತೀಚಿಗಷ್ಟೆ ಕಂಗನಾ ಬಾಲಿವುಡ್ ಸ್ಟಾರ್ ಜೋಡಿಗೆ ಎಚ್ಚರಿಕೆ ನೀಡಿದ್ದರು. ಬಾಲಿವುಡ್ ಸ್ಟಾರ್ ಜೋಡಿ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದ್ದರು. ಅವರ ಮನೆಗೆ ನುಗ್ಗಿ ಹೊಡೆಯುತ್ತೇನೆ ಎಂದು ಗುಡುಗಿದ್ದರು. 'ಚಂಗು - ಮಂಗುಗೆ ಇದು ನನ್ನ ಸಂದೇಶ, ನೀವು ಹಳ್ಳಿಯಿಂದ ಬಂದ ಯಾರನ್ನೋ ಎದುರಿಸುತ್ತಿಲ್ಲ. ನಿಮ್ಮ ದಾರಿ ಸರಿಪಡಿಸಿಕೊಳ್ಳಲು ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮ ಮನೆಗೆ ನುಗ್ಗಿ ನಾನು ಹೊಡೆಯುತ್ತೇನೆ. ನನ್ನನ್ನು ಹುಚ್ಚಿ ಎಂದು ಕರೆದವರಿಗೂ ಕೂಡ ನಾನು ಯಾವ ಮಟ್ಟಕ್ಕೆ ಹೋಗಬಹುದು ಎಂಬ ತಿಳಿದಿಲ್ಲ' ಎಂದು ಕಂಗನಾ ಬರೆದುಕೊಂಡಿದ್ದರು. 
 
 

click me!