ಹಿಂದೆ ಕೈಹಾಕಿ ಬಾಲಿವುಡ್​ ಬ್ಯೂಟಿ ಆಕಾಂಕ್ಷಾ ಮಾಡ್ತಿರೋದೇನು? ವೈರಲ್​ ವಿಡಿಯೋಗೆ ನೆಟ್ಟಿಗರು ಸುಸ್ತು!

By Suvarna News  |  First Published Jan 15, 2025, 6:59 PM IST

ಕೈಯಲ್ಲಿ ಸ್ಮಾರ್ಟ್​ಫೋನ್​ ಹಿಡಿದು ಬಳಿಕ, ಅದನ್ನು ಬೆನ್ನಿಗೆ ಸಿಕ್ಕಿಸಿಕೊಂಡ  ಬಾಲಿವುಡ್​ ಬ್ಯೂಟಿ ಆಕಾಂಕ್ಷಾ ಪುರಿಯ ವಿಡಿಯೋ ವೈರಲ್​ ಆಗಿದ್ದು, ಈಕೆ ಜಾಣ್ಮೆಗೆ ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡಿ...
 


ಈ ಹಿಂದೆ ಹಿಂದಿ ಬಿಗ್​ಬಾಸ್​ನಲ್ಲಿ ತಮ್ಮ ಸಹ ಸ್ಪರ್ಧಿ, ಮಾಡೆಲ್​ ಜದ್ ಹದೀದ್ ಜೊತೆ 30 ಸೆಕೆಂಡ್​ಗಳವರೆಗೆ ಎಲ್ಲರ ಎದುರೇ ಲಿಪ್​ಲಾಕ್​ ಮಾಡಿಕೊಂಡು ಹಲ್​ಚಲ್​ ಸೃಷ್ಟಿಸಿದ್ದ ಬಹುಭಾಷಾ ತಾರೆ ಆಕಾಂಕ್ಷಾ ಪುರಿಯ ವಿಡಿಯೋ ಒಂದು ಈಗ ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.   ಹಿಂದಿ, ತಮಿಳು, ಕನ್ನಡ, ಮಲಯಾಳಿ ಸಿನಿಮಾಗಳಲ್ಲಿ, ಜೊತೆಗೆ ವಿಭಿನ್ನ ಭಾಷೆಗಳ ಮ್ಯೂಸಿಕ್ ಆಲ್ಬಂಗಳಲ್ಲಿ ಫೇಮಸ್​ ಆಗಿರುವ ನಟಿ ಬಿಕಿನಿ ರಾಣಿ ಎಂದೇ ಫೇಮಸ್​. ಆದರೆ ವಿಚಿತ್ರ ಎಂದರೆ, ಈಕೆ ಸಕತ್​ ಫೇಮಸ್​ ಆಗಿದ್ದು ಮಾತ್ರವಲ್ಲದೇ ಈಕೆಗೆ ಹೆಸರು ತಂದುಕೊಟ್ಟದ್ದು, ವಿಘ್ನಹರ್ತ ಗಣೇಶ ಎನ್ನುವ ಸೀರಿಯಲ್​ನಲ್ಲಿ  ಪಾರ್ವತಿ ದೇವಿಯಾಗಿ ನಟಿಸಿದ್ದ ಸಂದರ್ಭದಲ್ಲಿ.  ದೈವೀಕತೆ ತುಂಬಿದ ಪಾತ್ರದ ಮೂಲಕ ಹೆಸರು ಮಾಡಿದ್ದದರು ನಟಿ. ಇದೇ ಸೀರಿಯಲ್‌ನಲ್ಲಿ ಸತಿದೇವಿಯಾಗಿಯೂ ನಟಿಸಿದ್ದರು. 

ಸೋಷಿಯಲ್ ಮೀಡಿಯಾದಲ್ಲಿ (Social Media) ತುಂಬಾನೆ ಆಕ್ಟೀವ್ ಆಗಿರುವ ಅಕಾಂಕ್ಷಾ ಪುರಿ ಹೆಚ್ಚಾಗಿ ತಮ್ಮ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬೋಲ್ಡ್ ಮತ್ತು ಬ್ಯೂಟಿ ಫುಲ್ ಫೋಟೋಗಳದ್ದೆ ಹೆಚ್ಚು ಕಾರುಬಾರು. ಸ್ವಿಮ್ ಸೂಟ್, ಬಿಕಿನಿ, ಬೋಲ್ಡ್ ತುಂಡುಡುಗೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಅಕಾಂಕ್ಷಾಗೆ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಸುಮಾರು ಮೂರು ಸಾವಿರ ಫೋಟೋಗಳನ್ನು ಹಂಚಿಕೊಂಡಿರುವ ಈಕೆಗೆ ಸುಮಾರು 4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇದೀಗ ಈಕೆಯ ವಿಡಿಯೋ ಒಂದು ಸದ್ದು ಮಾಡುತ್ತಿದೆ. ಅದೇನೆಂದರೆ, ಈಕೆ ಮೊಬೈಲ್​ ಇಡಲು ಮಾಡಿಕೊಂಡ ವ್ಯವಸ್ಥೆಯ ಬಗ್ಗೆ! ಕೆಲವು ಹೆಂಗಸರನ್ನು ನೋಡಿರಬಹುದು. ಪರ್ಸ್​ಗಳನ್ನು ಬ್ಲೌಸ್​ ಒಳಗೆ ಸೇಫ್​ ಆಗಿ ಇಟ್ಟುಕೊಳ್ಳುತ್ತಾರೆ. ಆದರೆ ನಟಿ ಆಕಾಂಕ್ಷಾ ಪುರಿ, ಹೀಗೆ ಅಲ್ಲದಿದ್ದರೂ ತಮ್ಮ ಮೊಬೈಲ್​ ಅನ್ನು ಸೇಫ್​ ಆಗಿ ಇಟ್ಟುಕೊಳ್ಳಲು ಆಯ್ದುಕೊಂಡಿರುವ ಜಾಗ ಹಿಂಭಾಗದ ಡ್ರೆಸ್​! ಫೋಟೋಗೆ ಪೋಸ್​ ಕೊಡುವ ಸಂದರ್ಭದಲ್ಲಿ ಮೊಬೈಲ್​ ಅನ್ನು ಹಿಂಬದಿ ಡ್ರೆಸ್​ ಒಳಗೆ ಸಿಕ್ಕಿಸಿ ಪೋಸ್​ ಕೊಟ್ಟಿರೋ ನಟಿ, ಕೊನೆಗೆ ಅದನ್ನು ಅಲ್ಲಿಂದಲೇ ತೆಗೆದಿರುವ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ಉಫ್​ ಎನ್ನುತ್ತಿದ್ದಾರೆ.

Tap to resize

Latest Videos

ಬಿಗ್​ಬಾಸ್​ ಮನೆಯಲ್ಲಿ ಗರ್ಭಿಣಿಯಾದೆ ಎಂದಿದ್ದ ಅಂಕಿತಾ ಲೋಖಂಡೆ ಹಿಜಾಬ್​ನಲ್ಲಿ! ವಿಡಿಯೋ ವೈರಲ್

ಇನ್ನು ಆಕಾಂಕ್ಷಾ ಪುರಿಯ ಕುರಿತು ಹೇಳುವುದಾದರೆ, ಮಾಡೆಲ್ ಆಗಿದ್ದ ಈಕೆ ತಮಿಳಿನ ಅಲೆಕ್ಸ್ ಪಾಂಡಿಯನ್ (Alex Pandian) ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ನಂತರ ಆಕ್ಷನ್ ಸಿನಿಮಾ, ಮಲಯಾಳದ ಪ್ರೈಸ್ ದ ಲಾರ್ಡ್, ಅಮರ್ ಅಕ್ಬರ್ ಆಂಥೋನಿ, ಕನ್ನಡದಲ್ಲಿ ಲೊಡ್ಡೆ, ಹಿಂದಿಯಲ್ಲಿ ಕ್ಯಾಲೆಂಡರ್ ಗರ್ಲ್ ಸಿನಿಮಾದಲ್ಲಿ ನಟಿಸಿದ್ದಾರೆ. ಲೊಡ್ಡೆ 2015ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿತ್ತು. ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಗೆ ಅಕಾಂಕ್ಷಾ ಪುರಿ ನಾಯಕಿಯಾಗಿದ್ದರು. ಇದು ಅಕಾಂಕ್ಷಾ ಅವರ ಡೆಬ್ಯೂ ಕನ್ನಡ ಸಿನಿಮಾವಾಗಿತ್ತು. 

ಅಕಾಂಕ್ಷಾ ಇನ್ಸ್​ಪೆಕ್ಟರ್​ ಅವಿನಾಶ್ ಎನ್ನುವ ವೆಬ್ ಸೀರೀಸ್, ಸಿಐಡಿ, ಬಿಗ್ ಬಾಸ್ 13 ಮತ್ತು 15 ನಲ್ಲೂ ಅತಿಥಿಯಾಗಿ ಮತ್ತು ಚಾಲೆಂಜರ್ ಆಗಿ ಹಾಗೂ ಬಿಗ್ ಬಾಸ್ ಓಟಿಟಿಯಲ್ಲೂ  (Bigg Boss OTT) ಭಾಗವಹಿಸಿದ್ದರು. ಅಷ್ಟೇ ಅಲ್ಲ ಸ್ವಯಂವರ್ ವಿಕಾ ದಿ ವೋಹ್ಟಿಯಲ್ಲೂ ಸಹ ಭಾಗಿಯಾಗಿದ್ದರು. ಇನ್ನು 2017 ರಿಂದ ಇಲ್ಲಿಯವರೆಗೆ ಹಲವಾರು ಮ್ಯೂಸಿಕ್ ಆಲ್ಬಂಗಳಲ್ಲೂ ನಟಿಸಿದ್ದಾರೆ ಈ ಬೋಲ್ಡ್ ಬ್ಯೂಟಿ. ಆದರೆ ಈಕೆ ಎಲ್ಲದಕ್ಕಿಂತ ಹೆಚ್ಚು ಜನಪ್ರಿಯತೆ ಪಡೆದದ್ದು ಮಾತ್ರ ಪಾರ್ವತಿಯಾಗಿ. ಆದರೆ ಈ ಪಾರ್ವತಿ ದೇವಿಯ ಬೋಲ್ಡ್ ಅವತಾರ ನೋಡಿ ಪಡ್ಡೆ ಹುಡುಗರೂ ಸಹ ಬಿದ್ದು ಬಿಡ್ತಾರೆ. 

ಸೀರಿಯಲ್​ಗೆ ಚಕ್ಕರ್​, ರೊಮಾನ್ಸ್​ಗೆ ಹಾಜರ್​! 'ಅಮೃತಧಾರೆ' ಜೀವಾ ಕಾಲೆಳಿರಿತೋ ಫ್ಯಾನ್ಸ್​

click me!