ನೇಪಾಳದಲ್ಲಿ ಶೆಫ್ ಆಗಿ ಕೆಲಸ ಮಾಡಿದ ನಟ ಅಜಿತ್; ವಿಡಿಯೋ ವೈರಲ್

Published : Apr 26, 2023, 03:50 PM IST
ನೇಪಾಳದಲ್ಲಿ ಶೆಫ್ ಆಗಿ ಕೆಲಸ ಮಾಡಿದ ನಟ ಅಜಿತ್; ವಿಡಿಯೋ ವೈರಲ್

ಸಾರಾಂಶ

ನೇಪಾಳದಲ್ಲಿ ಶೆಫ್ ಆಗಿ ಕೆಲಸ ಮಾಡಿದ ನಟ ಅಜಿತ್  ಕುಮಾರ್  ವಿಡಿಯೋ ವೈರಲ್ ಆಗಿದೆ.

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟರಲ್ಲಿ ಅಜಿತ್ ಕುಮಾರ್ ಕಡ ಒಬ್ಬರು. ಅಜಿತ್ ರೀಲ್ ಮೇಲೆ ಮಾತ್ರವಲ್ಲದೆ  ರಿಯಲ್ ಲೈಫ್‌ನಲ್ಲೂ ಹೀರೋ. ಯಾವಾಗಲೂ ಸರಳತೆ ಮತ್ತು ವಿನಮ್ರ ಸ್ವಭಾವದ ಮೂಲಕವೇ ಅಜಿತ್ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ. ನಿಜ ಜೀವನದಲ್ಲಿ ಅಜಿತ್ ನಡೆದುಕೊಳ್ಳುವ ರೀತಿ ಅಭಿಮಾನಿಗಳು ಮೆಚ್ಚುಗೆ ಪಾತ್ರವಾಗುತ್ತಿದೆ. ಅನೇಕ ಬಾರಿ ಅಜಿತ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಾಗಾಗಿಯೇ ಅಜಿತ್ ಎಂದರೆ ಅಭಿಮಾನಿಗಳಿಗೆ ಪ್ರಾಣ. ಸಿನಿಮಾಗಿಂತ ಹೊರತೆಯಾಗಿಯೂ ಅಜಿತ್ ಇಷ್ಟವಾಗುತ್ತಾರೆ. ಸದಾ ದೇಶ-ವಿದೇಶಗಳನ್ನು ಸುತ್ತಾಡುವ ಅಜಿತ್ ಇದೀಗ ನೇಪಾಳದಲ್ಲಿದ್ದಾರೆ. 

ಪ್ರತಿ ಬಾರಿಯೂ ಪ್ರವಾಸಕ್ಕೆ ತೆರಳಿದಾಗ ಅಭಿಮಾನಿಗಳ ಹೃದಯಗೆಲ್ಲುತ್ತಾರೆ. ಬೈಕ್ ರೈಡ್, ಸೈಕ್ಲಿಂಗ್ ಅಂದರೆ ಅಜಿತ್‌ಗೆ ತುಂಬಾ ಇಷ್ಟ. ಸದಾ ಬೈಕ್ ರೈಡ್ ಹೋಗುತ್ತಾರೆ. ಇದೀಗ ನೇಪಾಳದಲ್ಲಿರುವ ಅಜಿತ್ ಶೆಫ್ ಆಗಿ ಬದಲಾಗಿದ್ದಾರೆ. ಅಜಿತ್ ಶೆಫ್ ಆಗಿ ಬದಲಾಗಿರುವ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಅಜಿತ್ ಕುಮಾರ್ ಅಲ್ಲಿನ ರೆಸ್ಟೋರೆಂಟ್‌ನಲ್ಲಿ ಅಡುಗೆ ಮಾಡಿ ಗಮನ ಸೆಳೆದಿದ್ದಾರೆ. ಅಡುಗೆ ಸಿಬ್ಬಂದಿಯನ್ನು ಪಕ್ಕದಲ್ಲಿ ನಿಲ್ಲಿಸಿ ಅಜಿತ್ ಅಡುಗೆ ಮಾಡಿದ್ದಾರೆ. ಅವರು ಶೆಫ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.  ಟೋಪಿ ಮತ್ತು ಏಪ್ರನ್ ಧರಿಸಿದ್ದಾರೆ.  ಈ ವಿಡಿಯೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ. ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

10 ತಿಂಗಳ ಮಗು ಜೊತೆ ಕಷ್ಟ ಪಡುತ್ತಿದ್ದ ಮಹಿಳೆಯ ಬ್ಯಾಗ್ ಹೊತ್ತು ಸಹಾಯ ಮಾಡಿದ ಅಜಿತ್‌ಗೆ ಮೆಚ್ಚುಗೆಯ ಮಹಾಪೂರ

ಇತ್ತೀಚೆಗಷ್ಟೆ ನಟ ಅಜಿತ್ 10 ತಿಂಗಳ ಮಗುವನ್ನು ಹೊತ್ತು ಲಗೇಜ್ ಜೊತೆ ಕಷ್ಟಪಡುತ್ತಿದ್ದ ಮಹಿಳೆಗೆ ಸಹಾಯ ಮಾಡಿ ಸುದ್ದಿಯಾಗಿದ್ದರು. ಗ್ಲಾಸ್ಗೋದಿಂದ ಚೆನ್ನೈಗೆ ವಿಮಾದಲ್ಲಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರು ಏರ್ಪೋರ್ಟ್‌ನಲ್ಲಿ ತನ್ನ 10 ತಿಂಗಳ ಮಗುವನ್ನು ಹೊತ್ತುಕೊಂಡು ಜೊತೆಗೆ ಲಗೇಜ್ ಅನ್ನು ತೆಗೆದುಕೊಂಡು ಹೋಗಲು ಕಷ್ಟಪಡುತ್ತಿದ್ದರು. ಇದನ್ನು ನೋಡಿದ ನಟ ಅಜಿತ್ ಆ ಮಹಿಳೆಯ ಲಗೇಜ್ ಹೊತ್ತು ಸಹಾಯ ಮಾಡಿದ್ದರು. ಈ ಬಗ್ಗೆ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಧನ್ಯವಾದ ತಿಳಿಸಿದ್ದರು. ಅಜಿತ್ ಅವರ ಗೆಸ್ಚರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಶೆಫ್ ಆಗಿ ಅಜಿತ್ ಗಮನ ಸೆಳೆಯುತ್ತಿದ್ದಾರೆ.

'ಅಜಿತ್‌ಗಿಂತ ವಿಜಯ್ ದೊಡ್ಡ ಸ್ಟಾರ್' ಎಂದು ವಿವಾದ ಸೃಷ್ಟಿಸಿದ ದಿಲ್ ರಾಜು; ರೊಚ್ಚಿಗೆದ್ದ ತಲಾ ಅಭಿಮಾನಿಗಳು

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಅಜಿತ್ ಕೊನೆಯದಾಗಿ ತುನಿವು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಾಕ್ಸ್ ಆಫೀಸ್ ನಲ್ಲಿ ತುನಿವು ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದೀಗ AK 62 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಜೊತೆಗೆ ಅಜಿತ್ ಸಿಕ್ಕಾಪಟ್ಟೆ ಟ್ರಾವೆಲಿಂಗ್ ಮಾಡುತ್ತಾರೆ. ಸದಾ ಸೈಕ್ಲಿಂಗ್, ಬೈಕ್ ಅಂತ ಸುತ್ತಾಡುತ್ತಿರುತ್ತಾರೆ. ದೇಶ-ವಿದೇಶ ಓಡಾತ್ತಿರುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?