ಪಕ್ಕದಲ್ಲೇ ಪತಿ ಇದ್ರೂ ಮಾಜಿ ಪ್ರೇಮಿ ಸಲ್ಮಾನ್​ ಹೆಸ್ರು ಕೇಳಿ ಐಶ್ವರ್ಯ ರೈ ಮುಖ ಹೀಗಾಗೋದಾ?

By Suvarna News  |  First Published Sep 5, 2023, 3:41 PM IST

ನಟ ಸಲ್ಮಾನ್​ ಖಾನ್​ ಬಗ್ಗೆ ನಿರ್ದೇಶಕ ಕರಣ್​ ಜೋಹರ್​ ಅವರು ಅಭಿಷೇಕ್​ ಬಚ್ಚನ್​ಗೆ ಪ್ರಶ್ನೆ ಕೇಳುತ್ತಿದ್ದಂತೆಯೇ ಐಶ್ವರ್ಯ ರೈ ಮುಖದಲ್ಲಿ ಇದೆಂಥ ಬದಲಾವಣೆ? 
 


ಐಶ್ವರ್ಯ ರೈ ಮತ್ತು ಸಲ್ಮಾನ್​ ಖಾನ್​ ಅವರ ಲವ್​ ಸ್ಟೋರಿ ಎಲ್ಲರಿಗೂ ತಿಳಿದದ್ದೆ.  ಐಶ್ವರ್ಯ ಅವರು, ಅಭಿಷೇಕ್‌ ಬಚ್ಚನ್‌ ಅವರನ್ನು ಮದುವೆಯಾಗುವುದಕ್ಕೂ ಮುನ್ನ ಸಲ್ಮಾನ್‌ ಖಾನ್‌ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇವರಿಬ್ಬರ ಮದುವೆ ನಡೆಯುತ್ತದೆ ಎಂದು ಭಾರಿ ಸುದ್ದಿಯಾಗಿತ್ತು.  90ರ ದಶಕದಲ್ಲಿ ಸಲ್ಮಾನ್ ಖಾನ್  (Salman Khan) ಮತ್ತು ಐಶ್ವರ್ಯಾ ರೈ (Aishwarya Rai) ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ  ಅವರ ರೊಮ್ಯಾನ್ಸ್‌ಗಿಂತ ಬ್ರೇಕಪ್‌ ಹೆಚ್ಚು ಚರ್ಚೆಯಾಗಿತ್ತು.  ವಾಸ್ತವವಾಗಿ, 1999 ರಲ್ಲಿ ಬಿಡುಗಡೆಯಾದ 'ಹಮ್ ದಿಲ್ ಚುಕೆ ಸನಮ್' ಚಿತ್ರದ ಸೆಟ್‌ಗಳಲ್ಲಿ ಐಶ್ವರ್ಯಾ ಮತ್ತು ಸಲ್ಮಾನ್ ಪರಸ್ಪರ ಹತ್ತಿರವಾಗಿದ್ದರು. 2001 ರಲ್ಲಿ ಇಬ್ಬರೂ ಬೇರ್ಪಟ್ಟರು. 

ಇವರಿಬ್ಬರು ಬೇರ್ಪಟ್ಟಿರುವುದದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಾರೆಯಾದರೂ, ಐಶ್ವರ್ಯ ತಮಗೆ ಕೈಕೊಟ್ಟಿದ್ದಾರೆ ಎಂದು ಮೊನ್ನೆಮೊನ್ನೆಯವರೆಗೂ ಸಲ್ಮಾನ್​ ಖಾನ್​ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಯಾವುದೇ ಹುಡುಗಿ ಐ ಲವ್​ಯೂ ಎಂದರೆ ಆಕೆ ನಿಮಗೆ  ಕೈಕೊಟ್ಟಂತೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳುವ ಮೂಲಕ ಐಶ್ವರ್ಯ ರೈ ಅವರನ್ನು ಚುಚ್ಚಿದ್ದರು. ಅದೇನೇ ಇದ್ದರೂ, ಸಲ್ಮಾನ್​ ಖಾನ್​ ಜೊತೆ ಐಶ್ವರ್ಯ ರೈ ಸಂಬಂಧ ಮುರಿದುಕೊಂಡಾಗ ಐಶ್ವರ್ಯಾ  ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಆದರೆ ಬ್ರೇಕಪ್​ ಆದ ಬಳಿಕ ಐಶ್ವರ್ಯ ರೈ, ನನ್ನ ವಿವೇಕ, ನನ್ನ ಘನತೆ ಮತ್ತು ನನ್ನ ಕುಟುಂಬದ ಘನತೆಯನ್ನು ಪರಿಗಣಿಸಿ, ಇದು ಸಾಕು. ನಾನು ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡುವುದಿಲ್ಲ' ಎಂದು ಐಶ್ವರ್ಯ ಹೇಳಿದ್ದರು. ಇದೇ ಕಾರಣಕ್ಕೆ ಅವರು ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನೂ ಕಳೆದುಕೊಂಡಿದ್ದರು. ಇಷ್ಟೆಲ್ಲಾ ಗಲಾಟೆಯಾದ ಬಳಿಕ ಐಶ್ವರ್ಯ ರೈ ಅವರ ವಿರುದ್ಧ ನಿರ್ಮಾಪಕರು ಗರಂ ಆಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲು ನೀವೇ ಬೇಕು ಎಂದು ಒಪ್ಪಿಸಿಕೊಂಡು ಬಂದ ನಿರ್ಮಾಪಕರು (Producers) ಐದು ಹಿಟ್‌ ಚಿತ್ರಗಳಿಂದ ಐಶ್ವರ್ಯ ಅವರ ಕೈ ಬಿಟ್ಟಿದ್ದರು. ಈ ಬಗ್ಗೆ ಖುದ್ದು ಐಶ್ವರ್ಯ ಹೇಳಿಕೊಂಡರು.

Tap to resize

Latest Videos

ಹಿಂದೆ ಭಾವಿ ಪತಿ, ಪಕ್ಕ ಭಗ್ನಪ್ರೇಮಿ! ಐಶ್ವರ್ಯ ರೈ ಫೋಟೋ ವೈರಲ್​- ಲೈಫು ಇಷ್ಟೆನೇ ಅಂತಿದ್ದಾರೆ ಫ್ಯಾನ್ಸ್​

ಇದೀಗ ಸಲ್ಮಾನ್ ಖಾನ್​ 57 ನೇ ವಯಸ್ಸಿನಲ್ಲಿ ಏಕಾಂಗಿಯಾಗಿದ್ದಾರೆ,  ಐಶ್ವರ್ಯಾ ರೈ ಅವರು,  ಪತಿ ಅಭಿಷೇಕ್ ಬಚ್ಚನ್ ಮತ್ತು ಅವರ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಸಂತೋಷ ಮತ್ತು ತೃಪ್ತಿಕರ ಜೀವನವನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಕಾಫಿ ವಿತ್​ ಕರಣ್​ ಷೋ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ಐಶ್ವರ್ಯ ಮತ್ತು ಅಭಿಷೇಕ್​ ಬಚ್ಚನ್​ ಅವರು ಬಂದಿದ್ದರು. ಈ ಸಂದರ್ಭದಲ್ಲಿ ಕೆಲವೊಂದು ನಟರ ಬಗ್ಗೆ ಅಭಿಷೇಕ್​ ಅವರಲ್ಲಿ ಕರಣ್​ (Karan Johr) ಕೇಳಿದ್ದಾರೆ. ಕೆಲವರ ಬಗ್ಗೆ ಕೇಳಿ, ಅವರ ಮಾತನ್ನು ಸಲ್ಮಾನ್​ ಖಾನ್​ನತ್ತ ತಿರುಗಿಸಿದ್ದಾರೆ. ಸಲ್ಮಾನ್​ ಖಾನ್​ ಬಗ್ಗೆ ಏನು ಹೇಳುತ್ತೀರಿ ಕೇಳಿದಾಗ, ಅಭಿಷೇಕ್​ ಕೂಡಲೇ ವರ್ಕೌಟ್ ಮಾಡುವುದನ್ನು ನಿಲ್ಲಿಸಿ ಎಂದು ಹೇಳುತ್ತೇನೆ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಅವರು, ಸಲ್ಮಾನ್​ ಖಾನ್​  ಶರ್ಟ್ ತೆಗೆಯಲು ಹೆಸರುವಾಸಿಯಾಗಿದ್ದಾರೆ, ಆದರೆ ಅವರು ಅಷ್ಟಕ್ಕೇ ಸೀಮಿತವಲ್ಲ. ಅದಕ್ಕಿಂತ ಹೆಚ್ಚು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಅಲ್ಲಿಯವರೆಗೆ ಕೇಳುವ ಪ್ರಶ್ನೆಗಳಿಗೆ ನಡುನಡುವೆ ಐಶ್ವರ್ಯ ರೈ ಕೂಡ ಪತಿ ಅಭಿಷೇಕ್​ ಜೊತೆಗೆ ಉತ್ತರಿಸುತ್ತಿದ್ದರು. ಸಲ್ಮಾನ್​ ಖಾನ್​ ಹೆಸರು ಕೇಳುತ್ತಿದ್ದಂತೆಯೇ ಕ್ಯಾಮೆರಾ ಅವರ ಮೇಲೆ ಫೋಕಸ್​ ಮಾಡಲಾಗಿದೆ. ಸಲ್ಮಾನ್​ ಹೆಸರು ಕೇಳುತ್ತಲೇ ಐಶ್ವರ್ಯ ಮೌನಕ್ಕೆ ಜಾರಿದರು, ಮಾತ್ರವಲ್ಲದೇ ಅವರ ಮುಖದಲ್ಲಿ ವಿಚಿತ್ರ ಎಕ್ಸ್​ಪ್ರೆಷನ್​ನನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಪ್ರೇಮಿಗಳು ಮಾಜಿಗಳಾದರೂ ಅವರ ವಿಷಯ ಬಂದಾಗ ಮುಖದಲ್ಲಿ ಒಂದು ರೀತಿಯ ಬದಲಾವಣೆ ಸಹಜ ಎಂದು ಈ ವಿಡಿಯೋ ನೋಡಿದವರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸಲ್ಮಾನ್​ ಖಾನ್​ (Salman Khan) ಹೆಸರು ಕೇಳುತ್ತಿದ್ದಂತೆಯೇ ಐಶ್ವರ್ಯ ಮುಜುಗರಕ್ಕೂ ಒಳಗಾದಂತೆ ಕಾಣಿಸುತ್ತಿರುವುದನ್ನು ನೋಡಬಹುದು. 

Aishwarya Rai: ಮೀನು​ ತಿಂದ್ರೆ ಬಾಲಿವುಡ್​​ ನಟಿಯಂತೆ ಆಗ್ತಾರಾ? ಸಚಿವರ ಮಾತೀಗ ಸಖತ್​ ಟ್ರೋಲ್​

click me!