ಪ್ರತಿಯೊಬ್ಬ ರೈತನ ಖಾತೆಗೆ 1 ಲಕ್ಷ; ಫ್ರೀಯಾಗಿ 'ಖುಷಿ'ಯಿಂದ ಕೊಟ್ಟ ವಿಜಯ್!

Published : Sep 05, 2023, 12:52 PM IST
 ಪ್ರತಿಯೊಬ್ಬ ರೈತನ ಖಾತೆಗೆ 1 ಲಕ್ಷ; ಫ್ರೀಯಾಗಿ 'ಖುಷಿ'ಯಿಂದ ಕೊಟ್ಟ ವಿಜಯ್!

ಸಾರಾಂಶ

ಖುಷಿ ಸಕ್ಸಸ್ ಆಗಿದ್ದಕ್ಕೆ ಸಂಭಾವನೆಯನ್ನು 100 ರೈತ ಕುಟುಂಬಕ್ಕೆ ನೀಡಲು ಮುಂದ ವಿಜಯ್ ದೇವರಕೊಂಡ. ಸಂಭ್ರಮದಲ್ಲಿ ಅಭಿಮಾನಿಗಳು....

ಟಾಲಿವುಡ್ ಕಿಸ್ಸಿಂಗ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ಬ್ಯೂಟಿ ಸಮಂತಾ ಜೋಡಿಯಾಗಿ ನಟಿಸಿರುವ ಖುಷಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿದೆ. 50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಖುಷಿ ಸಿನಿಮಾಗೆ ವಿಜಯ್ ದೇವರಕೊಂಡ ಸುಮಾರು 1 ಕೋಟಿ ಸಂಭಾವನೆಯಾಗಿ ಪಡೆದಿದ್ದರು. ಸಿನಿಮಾ ಯಶಸ್ಸಿನ ಬೆನ್ನಲ್ಲಿ ವಿಶಾಖಪಟ್ಟಣದಲ್ಲಿ ಕಾರ್ಯಕ್ರಮ ವ್ಯವಸ್ಥೆಯಾಗಿತ್ತು ಆಗ ವಿಜಯ್ ವಿಶೇಷ ಘೋಷಣೆ ಸಖತ್ ಸುದ್ದಿ ಮಾಡುತ್ತಿದೆ. 

'ನಾನು ಒಂದು ಕೋಟಿ ರೂಪಾಯಿ ಹಣವನ್ನು ಸುಮಾರು 100 ರೈತ ಕುಟುಂಬಗಳಿಗೆ ನೀಡಬೇಕು ಎಂದು ನಿರ್ಧಾರ ಮಾಡಿರುವೆ, ಇದರಿಂದ ನನಗೆ ತುಂಬಾ ಖುಷಿ ಆಗಲಿದೆ. ನಾವು ಪಟ್ಟಿ ಮಾಡುವ 100 ರೈತ ಕುಟುಂಬಗಳಿಗೆ 1 ಲಕ್ಷ ಹಣವನ್ನು ವರ್ಗಾವಣೆ ಮಾಡುತ್ತೀವಿ. ಇದು ನನ್ನ ವೈಯಕ್ತಿಕ ಖಾತೆಯಿಂದ ನಿಮಗೆ ಹಣ ಬರಲಿದೆ' ಎಂದು ವೇದಿಕೆ ಮೇಲೆ ನಿಂತು ತೆಲಗು ಭಾಷೆಯಲ್ಲಿ ಘೋಷಣೆ ಮಾಡುತ್ತಾರೆ. ವಿಜಯ್ ಮಾತು ಕೇಳಿ ಅಲ್ಲಿದ್ದ ಜನತೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ಈ ಹಿಂದೆ ಸುಮಾರು 100 ಅಭಿಮಾನಿಗಳಿಗೆ ಫ್ರೀ ಆಗಿ ಮನಾಲಿ ಟ್ರಿಪ್ ಕಳುಹಿಸಿದ್ದರು.

ಲೆಕ್ಕವಿಲ್ಲದಷ್ಟು ದಿನ ಅತ್ತಿರುವೆ; ಡಿಪ್ರೆಶನ್- ಸಾವು ಬಗ್ಗೆ ಚೈತ್ರಾ ವಾಸುದೇವನ ಹೇಳಿಕೆ ವೈರಲ್

ಜೀವನದಲ್ಲಿ ಚೆನ್ನಾಗಿ ಸಂಪಾದನೆ ಮಾಡಿ ಪೋಷಕರನ್ನು ಖುಷಿಯಾಗಿ ನೋಡಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಒಳ್ಳೆ ಹೆಸರು ಮಾಡಬೇಕು ಅನ್ನೋದು ನಟ ವಿಜಯ್ ದೇವರಕೊಂಡ ಆಸೆ ಆಗಿತ್ತು.ಇನ್ನು ಮುಂದೆ ನಾನು ಅಭಿಮಾನಿಗಳಿಗೋಸ್ಕರ ಕೆಲಸ ಮಾಡುವೆ ನನ್ನ ಯಶಸ್ಸಿಗೆ ಕಾರಣ ಖುಷಿ ಸಿನಿಮಾ ಯಶಸ್ಸಿಗೆ ಕಾರಣ ಆಗಿರುವು ಅಪಾರ ಪ್ರೀತಿ ಕೊಡುತ್ತಿರುವ ಜನರು. ಅದೆಷ್ಟೋ ನೆಗೆಟಿವ್ ಕಾಮೆಂಟ್ ಮತ್ತು ವಿಮರ್ಶೆ ಬರುತ್ತಿದ್ದರೂ ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್ ಎಂದು ವಿಜಯ್ ಈ ಹಿಂದೆ ಹೇಳಿದ್ದರು. ತಮ್ಮ ಸಂಭಾವನೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವುದಾಗಿ ಘೋಷಣೆ ಮಾಡಿದಾಗ ವಿಜಯ್ ಭಾವುಕರಾಗಿದ್ದಾರೆ. 

ಹಳ್ಳಿ ಹೈದಾ ರಾಜೇಶ್ ಸಾವು; ಆತ್ಮಹತ್ಯೆ ಅಸಲಿ ಕಥೆ ಬಿಚ್ಚಿಟ್ಟ ಐಶ್ವರ್ಯ!

ಖುಷಿ ಸಿನಿಮಾ ಮೊದಲು ವಾರವೇ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಸದ್ಯ 39.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶಿವ ನಿರ್ವಾನ್ ನಿರ್ದೇಶನ ಮಾಡಿರುವ ಖುಷಿ ಚಿತ್ರದಲ್ಲಿ ಸಚಿನ್, ಶರಣ್ಯಾ, ಮುರಳಿ ಶರ್ಮಾ, ಲಕ್ಷ್ಮಿ ಜಯರಾಮಮ್ ಮತ್ತು ರೋಷಿಣಿ ನಟಿಸಿದ್ದಾರೆ.ಕಾಶ್ಮೀರಿ ಟ್ರಿಟ್‌ನಲ್ಲಿ ಒಬ್ಬರನೊಬ್ಬರು ನೋಡಿ ಇಷ್ಟ ಪಡುತ್ತಾರೆ ಪ್ರೀತಿಯಲ್ಲಿ ಬಿದ್ದು ಮನೆಯವರನ್ನು ವಿರೋಧಿಸಿ ಮದುವೆ ಮಾಡಿಕೊಳ್ಳುತ್ತಾರೆ. ಅವರಿಬ್ಬರ ಜಾತಗ ಮ್ಯಾಚ್ ಆಗದಿದ್ದರೂ ಕೇರ್ ಮಾಡುವುದಿಲ್ಲ. ಕೊನೆಯಲ್ಲಿ ಇಬ್ಬರ ನಡುವೆ ಮನಸ್ಥಾಪವಾಗಿ ದೂರಾಗುವ ಪರಿಸ್ಥಿತಿ ಎದುರಾಗುತ್ತದೆ. ಖುಷಿ ಒಂದು ಸುಂದರ ಲವ್ ಸ್ಟೋರಿ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Record Breaking Collection.. ಬಾಲಯ್ಯರ 'ಅಖಂಡ 2' ಚಿತ್ರದ ಮೊದಲ ದಿನದ ಗಳಿಕೆ ಇಷ್ಟೊಂದು ಕೋಟಿನಾ?
ಬಾಲಿವುಡ್‌ನ ಇಬ್ಬರು ಸ್ಟಾರ್‌ಗಳ ಬಗ್ಗೆ ಜೋರಾದ ಚರ್ಚೆ.. 'ಯಾರದೂ ತಪ್ಪಲ್ಲ ಯಾರದೂ ಸರಿಯಲ್ಲ' ಅಂತಿರೋದ್ಯಾಕೆ?