ಪಾಕಿಸ್ತಾನದಲ್ಲಿ ನಟಿ ಐಶ್ವರ್ಯ ರೈ! ಹಲ್​ಚಲ್​ ಸೃಷ್ಟಿಸಿದ ವೈರಲ್ ಫೋಟೋ

By Suvarna News  |  First Published Sep 10, 2023, 12:02 PM IST

ಪಾಕಿಸ್ತಾನದಲ್ಲಿ ನಟಿ ಐಶ್ವರ್ಯ ರೈ ಅವರು ಹೋಗಿದ್ದಾರೆ ಎನ್ನಲಾದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ. ಅಷ್ಟಕ್ಕೂ ಆಗಿದ್ದೇನು?
 


ಐಶ್ವರ್ಯಾ ರೈ ಬಚ್ಚನ್ (Aishwarya Rai ) ಕೆಲ ದಶಕಗಳಿಂದ ಬಾಲಿವುಡ್‌ ಆಳುತ್ತಿರುವ ನಟಿ. ವಯಸ್ಸು 49 ಆದರೂ ಆಕೆಯ ವರ್ಚಸ್ಸು, ಸೌಂದರ್ಯ ಇನ್ನೂ ಕುಗ್ಗಿಲ್ಲ. ಅದಕ್ಕೆ ಕಾರಣ, ಅವರ ಮೇಕಪ್‌ ಎಂದು ಹೇಳುತ್ತಿದೆಯಾದರೂ ಫಿಟ್‌ನೆಟ್‌ ಹಾಗೂ ಸೌಂದರ್‍ಯವನ್ನು ಐಶ್ವರ್ಯಾ ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದೂ ಸುಳ್ಳಲ್ಲ. ಈಗಲೂ ಬಾಲಿವುಡ್‌ನ ಬ್ಯೂಟಿ ಕ್ವೀನ್‌ ಎಂದಾಕ್ಷಣ ಹಲವರ ಕಣ್ಣ ಮುಂದೆ ಬರುವುದು ಇದೇ ನಟಿಯ ಮುಖ. ವಿಶ್ವ ಸುಂದರಿ, ಭುವನ ಸುಂದರಿಯರಾಗಿ ಇದಾಗಲೇ  ಭಾರತದ ಕೆಲವು ಸುಂದರಿಯರು ವಿಜೇತರಾಗಿದ್ದರೂ ಸೌಂದರ್‍ಯದ ವಿಷಯ ಬಂದಾಗ ಐಶ್ವರ್ಯ ರೈ ಅವರ ಹೆಸರೇ ಎಲ್ಲರ ಬಾಯಲ್ಲ ನಲಿದಾಡುತ್ತದೆ. ಅಷ್ಟು ಫೇಮಸ್​ ನಟಿ ಐಶ್ವರ್ಯ ರೈ. ಅದರಲ್ಲಿಯೂ ಅಮಿತಾಭ್​ ಬಚ್ಚನ್​ ಅವರ ಮನೆಗೆ ಸೊಸೆಯಾಗಿ ಹೋದ ಮೇಲಂತೂ ಇವರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ. 

 ಐಶ್ವರ್ಯಾ ಖಾಸಗಿ ಜೀವನವನ್ನು ಇಷ್ಟಪಡುತ್ತಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೀಗ ಅವರು ಪಾಕಿಸ್ತಾನಕ್ಕೆ ಹೋಗಿದ್ದಾರೆ ಎನ್ನುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲ್​ಚಲ್​  ಸೃಷ್ಟಿಸಿದೆ. ಅಷ್ಟಕ್ಕೂ ಈ ಚಿತ್ರದಲ್ಲಿ ಇರುವಾಕೆ ಐಶ್ವರ್ಯ ರೈ ಅಲ್ಲ, ಬದಲಿಗೆ ಐಶ್ವರ್ಯ ಅವರನ್ನೇ ಹೋಲುವ ಪಾಕಿಸ್ತಾನದ ಉದ್ಯಮಿ  ಕನ್ವಾಲ್ ಚೀಮಾ. ಹೆಸರಾಂತ ಉದ್ಯಮಿಯಾಗಿರೋ ಕನ್ವಾಲ್​ ಅವರ ಸಂದರ್ಶನವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಸಮಯದಲ್ಲಿ ಥೇಟ್​ ಐಶ್ವರ್ಯ ರೈ ಅವರಂತೆಯೇ ಈಕೆ ಕಂಡಿದ್ದ ಹಿನ್ನೆಲೆಯಲ್ಲಿ ಇವರ ಫೋಟೋ ಹಾಗೂ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ.  ವಿಶೇಷವಾಗಿ ಇಬ್ಬರ ಚೂಪಾದ ಮೂಗು ಮತ್ತು ಸುಂದರವಾದ ಕಣ್ಣುಗಳಲ್ಲಿ ಹೋಲಿಕೆ ಇರುವುದೇ ಇದಕ್ಕೆ ಕಾರಣ, 

Tap to resize

Latest Videos

Aishwarya Rai: ಮೀನು​ ತಿಂದ್ರೆ ಬಾಲಿವುಡ್​​ ನಟಿಯಂತೆ ಆಗ್ತಾರಾ? ಸಚಿವರ ಮಾತೀಗ ಸಖತ್​ ಟ್ರೋಲ್​

ಇದು ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿದ್ದಂತೆಯೇ ಹಲವಾರು ಮಂದಿ ಅಚ್ಚರಿ ವ್ಯಕ್ತಪಡಿಸಿದ್ದರೆ, ಇನ್ನುಕೆಲವರು ಐಶ್ವರ್ಯ ಅವರಿಗಿಂತ  ಕನ್ವಾಲ್ ಚೀಮಾ ಅವರೇ ಸಕತ್​ ಸ್ಮಾರ್ಟ್​ ಆಗಿದ್ದಾರೆ ಎನ್ನುತ್ತಿದ್ದಾರೆ. ಈ ಹಿಂದೆ ಕೂಡ  ವೆಬ್ ಸರಣಿಯ 'ಸುಹಾನಿ ಅಹುಜಾ' ಪಾತ್ರಕ್ಕೆ ಹೆಸರುವಾಸಿಯಾದ ಅಂಜಲಿ ಶಿವರಾಮನ್ ಅವರು ಕೂಡ ಐಶ್ವರ್ಯ ರೈ ಅವರಂತೆಯೇ ಹೋಲಿಕೆ ಇರುವ ಕಾರಣ ಸಕತ್​ ಸುದ್ದಿ ಮಾಡಿದ್ದರು.  ವೆಬ್ ಸೀರೀಸ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ನಟಿಯ ಚಿತ್ರವನ್ನು ರೆಡ್ಡಿಟ್ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾಗಿತ್ತು.  

ಅಂದಹಾಗೆ, ಐಶ್ವರ್ಯಾ ರೈ ಬಚ್ಚನ್ ಅವರನ್ನು ಹೋಲುತ್ತಿರುವ  ಕನ್ವಾಲ್ ಚೀಮಾ ಪಾಕಿಸ್ತಾನದ ಉದ್ಯಮಿ. ಅವರು ಮೈ ಇಂಪ್ಯಾಕ್ಟ್ ಮೀಟರ್‌ನ ಸ್ಥಾಪಕರು ಮತ್ತು CEO ಆಗಿದ್ದಾರೆ, ಇದು ಪ್ರಮುಖ ತಂತ್ರಜ್ಞಾನ ವೇದಿಕೆಯಾಗಿದೆ. ಈ ವೇದಿಕೆಯು ಜಗತ್ತಿನಾದ್ಯಂತ ಜನರನ್ನು ಸಂಪರ್ಕಿಸುತ್ತದೆ, ಅವರು ಅಗತ್ಯವಿರುವವರಿಗೆ ಸಹಾಯ ಮಾಡಲು ಸಿದ್ಧವಿದೆ.  

ಐಶ್ವರ್ಯ ರೈಗಾಗಿ ಶಾರುಖ್​-ಸಲ್ಮಾನ್​ 5 ವರ್ಷಗಳ ಭಯಂಕರ ಶತ್ರುತ್ವ; ಬಿರಿಯಾನಿ ಮೂಲಕ ಪ್ಯಾಚಪ್​!

click me!