ನಿಮ್ಮ ಸಂಸ್ಥೆ ಕೆಲಸ ಕಲಿಸಿಲ್ವಾ?; ಜರ್ನಲಿಸ್ಟ್ ಅಸಂಬದ್ಧ ಪ್ರಶ್ನೆಗೆ ಐಶ್ವರ್ಯಾ ರೈ ಫುಲ್ ಗರಂ

Published : Mar 23, 2023, 03:51 PM IST
ನಿಮ್ಮ ಸಂಸ್ಥೆ ಕೆಲಸ ಕಲಿಸಿಲ್ವಾ?; ಜರ್ನಲಿಸ್ಟ್  ಅಸಂಬದ್ಧ ಪ್ರಶ್ನೆಗೆ ಐಶ್ವರ್ಯಾ ರೈ ಫುಲ್ ಗರಂ

ಸಾರಾಂಶ

 ಸರಿಯಾಗಿ ಪ್ರಶ್ನೆ ಕೇಳಿಲ್ಲ ಎಂದು ಪತ್ರಕರ್ತನ ವಿರುದ್ಧ ಗರಂ ಆದ ಐಶ್ವರ್ಯ ರೈ. ಯಾಕಿಷ್ಟು ರಿಯಾಕ್ಟ್‌ ಮಾಡಿದ್ದು ಎಂದ ನೆಟ್ಟಿಗರು....  

ವಿಶ್ವ ಸುಂದರಿ ಐಶ್ವರ್ಯ ರೈ ಇತ್ತೀಚಿಗೆ ಯಾಕೋ ಜಯಾ ಬಚ್ಚನ್ ರೀತಿ ವರ್ತಿಸುತ್ತಿದ್ದಾರೆ ಅಂತ ಆಗಾಗ ಅಲ್ಲೊಂದು ಇಲ್ಲೊಂದು ಮಾತು ಕೇಳಿ ಬರುತ್ತಿತ್ತು. ಇಲ್ಲ ಕಣ್ರೀ ನಮ್ಮ ಮಂಗಳೂರು ಚೆಲುವ ಎಲ್ಲರೊಟ್ಟಿಗೆ ಚೆನ್ನಾಗಿರುತ್ತಾರೆ ಎಂದು ತಮ್ಮಗೆ ತಾವೇ ಸಮಾಧಾನ ಮಾಡಿಕೊಂಡು ಗಾಸಿಪ್‌ಗೆ ಬ್ರೇಕ್ ಹಾಕಿದವರೂ ಇದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವುದು ನೋಡಿದರೆ ಹೌದು ಎನ್ನಬಹುದು. 

2016ರಲ್ಲಿ ಐಶ್ವರ್ಯ ರೈ, ರಣದೀಪ್, ರಿಚ್ಚಾ ಚಡ್ಡಾ ಮತ್ತು ದರ್ಶನ್ ಕುಮಾರ್ ನಟನೆಯ ಸರಬ್ಜಿತ್ ಸಿನಿಮಾ ಬಿಡುಗಡೆ ಕಂಡಿತ್ತು. 15 ಕೋಟಿ ಬಜೆಟ್ ಸಿನಿಮಾ ಇದಾಗಿದ್ದು ಸುಮಾರು 8 ಜನ ಬಂಡವಾಳ ಹಾಕಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯ ರೈ ವಯಸ್ಸಾದವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಜ ಹೇಳಬೇಕು ಅಂದ್ರೆ ಆ ಬಿಳಿ ಕೂದಲು ಮೇಕಪ್‌ ನೋಡಿದರೆ ಪಕ್ಕಾ 60 ಎನ್ನಬಹುದು. ಹೀಗಾಗಿ ಪ್ರೆಸ್‌ಮೀಟ್‌ನಲ್ಲಿ ಪತ್ರಕರ್ತನೊಬ್ಬ ಕೇಳುವ ಪ್ರಶ್ನೆಗೆ ಐಶ್ವರ್ಯ ಫುಲ್ ಗರಂ ಆಗುತ್ತಾರೆ...

ಐಶ್ವರ್ಯ ರೈ ಮಿಸ್‌ ಇಂಡಿಯಾ ಗೆಲ್ಲಲು ಅರ್ಹರಲ್ಲ; ಸುಶ್ಮಿತಾ ಸೇನ್ ಶಾಕಿಂಗ್ ಹೇಳಿಕೆ

'60 ವರ್ಷದ ಮಹಿಳೆಯಾಗಿ ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವುದಕ್ಕೆ ಹೇಗೆ ಅನಿಸುತ್ತಿತ್ತು?' ಎಂದು ಪತ್ರಕರ್ತನೊಬ್ಬ ವಿಶ್ವ ಸುಂದರಿಗೆ ಪ್ರಶ್ನೆ ಮಾಡುತ್ತಾರೆ. ಪ್ರಶ್ನೆ ಕೇಳಿಸಿಕೊಳ್ಳುತ್ತಿದ್ದಂತೆ ಗರಂ ಆದ ಐಶು 'ನೀವು ಚೆನ್ನಾಗಿ ಓದಿ ಈ ಕೆಲಸ ಗಿಟ್ಟಿಸಿಕೊಂಡು ಬಂದವರು ಪ್ರಶ್ನೆ ಕೇಳುವಾಗ ಸ್ವಲ್ಪ ಯೋಚನೆ ಮಾಡಿ. ನಾವು ಪ್ರೋಫೆಶನಲ್‌ಗಳು ನಮ್ಮ ಕೆಲಸವನ್ನು ಕೆಲಸದ ರೀತಿ ನೋಡುತ್ತೀವಿ ವೈಯಕ್ತಿಕವಾಗಿ ನೀವು ಪ್ರಶ್ನೆ ಕೇಳುವುದು ತಪ್ಪು. ಇಷ್ಟು ವರ್ಷಗಳಿಂದ ನಾವು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವಾಗ ಈಗ ನೀವು ನನ್ನ ವ್ಯಾನಿಟಿ ನನ್ನ ಲುಕ್ ಬಗ್ಗೆ ಪ್ರಶ್ನೆ ಮಾಡುವುದು ಸರಿ ಅಲ್ಲ. ನನಗೆ ಮತ್ತು ನನ್ನ ಸಿನಿಮಾ ವಿಚಾರಕ್ಕೆ ನೀವು ಕೇಳಿದ ಪ್ರಶ್ನೆ ಸಂಬಂಧವಿಲ್ಲ. ಹೌದು ಧೈರ್ಯ ಮಾಡಿ ಕೇಳಿರುವುದಕ್ಕೆ ನಿಮಗೆ ತುಂಬಾ ಗೌರವ ಕೊಡುತ್ತೀನಿ ಆದರೆ ಸರಿಯಲ್ಲ. ಕಲಾವಿದರಾಗಿ ನಾನು ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವುದು ಸರಸ್ವತಿ ನಮಗೆ ಪ್ರತಿ ದಿನ ಪೂಜೆ ಮಾಡಿ ಕೆಲಸ ಶುರು ಮಾಡುತ್ತೀವಿ. ಹೊಸಬ್ಬರಾಗಿ ನೀವು ವೃತ್ತಿ ಆರಂಭಿಸಿದ್ದೀರಾ? ನಿಮ್ಮ ಸಂಸ್ಥೆ ನಿಮಗೆ ಕೆಲಸ ಕೇಳಿಕೊಟ್ಟಿಲ್ವಾ?' ಎಂದು ಐಶ್ವರ್ಯ ರೈ ಗರಂ ಆಗಿದ್ದಾರೆ. 

ನೆಟ್ಟಿಗರ ರಿಯಾಕ್ಷನ್:

'ಪತ್ರಕರ್ತ ಪ್ರಶ್ನೆ ಕೇಳಿರುವುದರಲ್ಲಿ ತಪ್ಪಿಲ್ಲ ಯಾಕಿಷ್ಟು ಓವರ್ ಆಗಿ ರಿಯಾಕ್ಟ್‌ ಮಾಡಿದ್ದೀರಾ? ಪಾತ್ರವನ್ನು ಆಯ್ಕೆ ಮಾಡಿಕೊಂಡಿರೋದು ನೀವು ಅದಿಕ್ಕೆ ಕೇಳಿದ್ದಾರೆ. ಸಿನಿಮಾ ಬಗ್ಗೆ ಕೇಳಿದರೆ ಅದೇ ರೀತಿ ಮಾತನಾಡಿ ಅತ ನಿಮಗೆ ವಯಸ್ಸಾಗಿದೆ ಅಂತ ಹೇಳಿಲ್ಲ.ಪ್ರಶ್ನೆಯನ್ನು ಸರಿಯಾಗಿ ಕೇಳಿಸಿಕೊಳ್ಳಿ. ನಿಮಗೆ ಪ್ರಚಾರ ಕೊಡಲು ಬಂದವರನ್ನು ಗೌರವಿಸಿ' ಎಂದು ಕಾಮೆಂಟ್ಸ್‌ನಲ್ಲಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಐಶ್ವರ್ಯ ರೈನ ಮದುವೆ ಆಗಿದ್ದಕ್ಕೆ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಯ್ತು: ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್

1973ರ ನವೆಂಬರ್ 1ರಂದು  ಮಂಗಳೂರಿನಲ್ಲಿ ಜನಿಸಿರುವ ಈ ಕನ್ನಡತಿಗೆ ಈಗ 49 ವರ್ಷ ವಯಸ್ಸು. ವಯಸ್ಸು ಇಷ್ಟಾದರೂ ಈಕೆಯ ಸೌಂದರ್ಯಕ್ಕೇನೂ ಕೊರತೆಯಿಲ್ಲ. ಈಗಲೂ ಚಿತ್ರರಂಗದಲ್ಲಿಯೇ ಅಷ್ಟೇ ಬೇಡಿಕೆ ಕುದುರಿಸಿಕೊಂಡಿರುವ ನಟಿ. ಅಂದಹಾಗೆ ಈಕೆ, ಮುಂಬೈನ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದುತ್ತಿರುವಾಗ  ಒಂಬತ್ತನೆಯ ತರಗತಿಯಲ್ಲಿ ಇರುವಾಗಲೇ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ (Model) ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿರೋ  ಐಶ್ವರ್ಯಾ, 1994ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದು ಅದೇ  ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದ ಮೇಲೆ ಅವರು ಸಕತ್​ ಫೇಮಸ್​ ಆಗಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Priyamani: 'ರಾವಣ' ಬಳಿಕ ಬಾಲಿವುಡ್‌ನಲ್ಲಿ ಹೆಚ್ಚಿನ ಅವಕಾಶ ಸಿಗುತ್ತೆ ಅಂದುಕೊಂಡಿದ್ದೆ, ಆದ್ರೆ ಹಾಗಾಗಲಿಲ್ಲ; ಸೀಕ್ರೆಟ್ ರಿವೀಲ್!
Pawan Kalyan House: ಪವನ್ ಮನೆ ಬೆಲೆ ಎಷ್ಟು? ಹೈದರಾಬಾದ್ ಬಂಗಲೆ, ಫಾರ್ಮ್‌ಹೌಸ್ ವಿಶೇಷತೆಗಳೇನು?