ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಜಯಾ ಬಚ್ಚನ್ ಮಧ್ಯೆ ಎಲ್ಲವೂ ಸರಿ ಇಲ್ಲ. ಇದು ಪದೇ ಪದೇ ಸ್ಪಷ್ಟವಾಗ್ತಿದೆ. ಅತ್ತೆ ಬಂದ ಸಮಾರಂಭಕ್ಕೆ ಸೊಸೆ ಬರ್ತಿಲ್ಲ. ಸೊಸೆ ಬಂದ ಕಾರ್ಯಕ್ರಮಕ್ಕೆ ಅತ್ತೆ ಬರ್ತಿಲ್ಲ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ (Bollywood actor Abhishek Bachchan) ಹಾಗೂ ನಟಿ ಐಶ್ವರ್ಯ ರೈ ಬಚ್ಚನ್ (actress Aishwarya Rai Bachchan) ಬೇರೆಯಾಗಿದ್ದಾರೆ ಎನ್ನುವ ಸುದ್ದಿ ತಾರಕಕ್ಕೇರಿರುವ ಸಮಯದಲ್ಲೇ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಫ್ಯಾನ್ಸ್ ಗೆ ನೆಮ್ಮದಿ ನೀಡಿದ್ದರು. ಆರಾಧ್ಯ ಬಚ್ಚನ್ (Aaradhya Bachchan) ಸ್ಕೂಲ್ ಕಾರ್ಯಕ್ರಮದಲ್ಲಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ (Amitabh Bachchan) ಎಲ್ಲರ ಗಮನ ಸೆಳೆದಿದ್ದರು. ನಗ್ತಾ, ಒಟ್ಟಿಗೆ ಫೋಟೋಕ್ಕೆ ಪೋಸ್ ಕೂಡ ನೀಡಿದ್ದರು. ಆದ್ರೆ ಐಶ್ವರ್ಯ ಮತ್ತೆ ಮಿಸ್ ಆಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಜಯಾ ಬಚ್ಚನ್, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮದುವೆಗೆ ಐಶ್ವರ್ಯ ಗೈರಾಗಿದ್ದು ಸ್ಪಷ್ಟವಾಗಿಲ್ಲವಾದ್ರೂ ಐಶ್ ಫೋಟೋ ಎಲ್ಲೂ ಕಾಣಿಸ್ತಿಲ್ಲ. ವಿಶೇಷವಾಗಿ ಅತ್ತೆ ಹಾಗೂ ನಟಿ ಜಯಾ ಬಚ್ಚನ್ (Jaya Bachchan) ಹಾಜರಾಗುವ ಕಾರ್ಯಕ್ರಮಕ್ಕೆ ಐಶ್ ಬರ್ತಿಲ್ಲ. ಅತ್ತೆ ಹಾಗೂ ಸೊಸೆ ಒಂದೇ ಫ್ರೇಮ್ ನಲ್ಲಿ ಬಂದು ಎಷ್ಟೋ ದಿನ ಕಳೆದಿದೆ. ಐಶ್ ಹಾಗೂ ಅಭಿಷೇಕ್ ಬೇರೆಯಾಗಲು ಅತ್ತೆ ಕಾಟವೇ ಕಾರಣ ಎನ್ನುವ ಒಂದು ವದಂತಿ ಅನೇಕ ದಿನಗಳಿಂದ ಹರಿದಾಡ್ತಾನೆ ಇದೆ. ಈ ಅನುಮಾನಕ್ಕೆ ಮತ್ತೆ ಪುಷ್ಠಿ ಸಿಕ್ಕಿದಂತಾಗಿದೆ.
ಸದಾ ಅಮ್ಮನನ್ನೇ ಅಂಟಿಕೊಂಡಿರೋ ಆರಾಧ್ಯ, ಐಶ್ವರ್ಯಾಳಿಂದ ಪೇರೆಂಟಿಂಗ್ ಟಿಪ್ಸ್
ಅಮಿತಾಬ್ ಬಚ್ಚನ್, ತಮ್ಮ ಕುಟುಂಬದೊಂದಿಗೆ ಬಹುಕಾಲದಿಂದ ಒಡನಾಟ ಹೊಂದಿರುವ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಯಾದವ್ ಅವರ ಪುತ್ರ ರಿಕಿನ್ ಮದುವೆಯಲ್ಲಿ ಪಾಲ್ಗೊಂಡಿದ್ದರು. ಪತ್ನಿ ಜಯಾ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಕೂಡ ಮದುವೆಗೆ ಹಾಜರಾಗಿದ್ದರು. ಬಚ್ಚನ್ ಕುಟುಂಬ ವಧು ಮತ್ತು ವರರೊಂದಿಗೆ ಪೋಸ್ ನೀಡಿದೆ. ಫೋಟೋದಲ್ಲಿ ಅಮಿತಾಬ್ ಬಚ್ಚನ್ ಕಪ್ಪು ಇಂಡೋ ವೆಸ್ಟರ್ನ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ಬಿಳಿ ಕುರ್ತಾದಲ್ಲಿ ಮಿಂಚಿದ್ದಾರೆ. ಜಯಾ ಬಚ್ಚನ್ ಗುಲಾಬಿ ಬಣ್ಣದ ಸೀರೆಯಲ್ಲಿ ಪೋಸ್ ನೀಡಿದ್ದಾರೆ. ಇಲ್ಲಿ ಐಶ್ವರ್ಯ ರೈ ಬಚ್ಚನ್ ಕಾಣ್ತಿಲ್ಲ. ಅತ್ತೆ ಜಯಾ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಮಧ್ಯೆ ಎಲ್ಲವೂ ಸರಿಯಿಲ್ಲ. ಜಯಾ ಬಚ್ಚನ್ ಕಾರಣಕ್ಕೆ ಐಶ್ ಮನೆ ಬದಲಿಸಿದ್ದಾರೆ, ಅಭಿಷೇಕ್ ರಿಂದ ದೂರವಾಗಿದ್ದಾರೆ, ಹಾಗಾಗಿಯೇ ಇಬ್ಬರು ಒಟ್ಟಿಗೆ ಯಾವುದೇ ಸಮಾರಂಭದಲ್ಲಿ ಕಾಣಿಸಿಕೊಳ್ತಿಲ್ಲ ಎಂದು ಫ್ಯಾನ್ಸ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಐಶ್ವರ್ಯ ರೈ ಸಲ್ಮಾನ್ ಖಾನ್ ಜೀವನ ಹಾಳ್ ಮಾಡಿದ್ರಾ? ಸಹೋದರ ಸೋಹೈಲ್ ಹೀಗೆ ಹೇಳಿದ್ಯಾಕೆ?
ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಬೇರೆಯಾಗಿದ್ದಾರೆ ಎಂಬ ಸಣ್ಣ ಸುದ್ದಿಗೆ ಅನಂತ್ ಅಂಬಾನಿ ಮದುವೆ ಬೆಂಕಿ ಹಚ್ಚಿತ್ತು. ಇಬ್ಬರೂ ಬೇರೆ ಬೇರೆಯಾಗಿ ಮದುವೆ ಸಮಾರಂಭಕ್ಕೆ ಬಂದಿದ್ದರು. ಅದಾದ್ಮೇಲೆ ಐಶ್ವರ್ಯ ಹಾಗೂ ಅಭಿಷೇಕ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಐಶ್ ಎಲ್ಲ ಪ್ರವಾಸದಲ್ಲಿ ಮಗಳು ಆರಾಧ್ಯ ಜೊತೆಗಿದ್ದಳೇ ವಿನಃ ಅಭಿಷೇಕ್ ಬಂದಿರಲಿಲ್ಲ. ಗಣೇಶೋತ್ಸವ, ಹುಟ್ಟುಹಬ್ಬವನ್ನು ಮಗಳ ಜೊತೆ ಐಶ್ ಆಚರಿಸಿಕೊಂಡಿದ್ದರು. ಆದ್ರೆ ಆರಾಧ್ಯ ವಿಷ್ಯ ಬಂದಾಗ ಇಬ್ಬರೂ ಒಂದಾಗಿದ್ದರು. ಆರಾಧ್ಯ ಬರ್ತ್ ಡೇ ಕಾರ್ಯಕ್ರಮ, ಶಾಲೆ ಕಾರ್ಯಕ್ರಮದಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ಒಂದಾಗಿ ಕಾಣಿಸಿಕೊಂಡಿದ್ದರು. ಅವರಿಬ್ಬರು ಕಾರ್ಯಕ್ರಮಕ್ಕೆ ಬರುವ ಹಾಗೂ ಮಗಳ ವಿಡಿಯೋ ಮಾಡುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ನೋಡಿದ ಫ್ಯಾನ್ಸ್, ಮತ್ತೆ ಇಬ್ಬರು ಒಂದಾಗಿದ್ದಾರೆ. ಈ ಜೋಡಿ ನೋಡಲು ಖುಷಿಯಾಗುತ್ತೆ ಎಂದೆಲ್ಲ ಕಮೆಂಟ್ ಮಾಡಿದ್ದರು. ಈಗ ಮತ್ತೆ ಅನುಮಾನ ಶುರುವಾಗಿದೆ. ಕೇವಲ ಮಗಳಿಗಾಗಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ರಾ, ಇಬ್ಬರು ಬೇರೆಯಾಗಿದ್ದು ಸತ್ಯವಾ? ಐಶ್ ಬೇರೆ ಮನೆಯಲ್ಲಿ ವಾಸವಾಗಿದ್ದಾರಾ ಎಂಬೆಲ್ಲ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿಲ್ಲ. ಸಂಬಂಧದ ಬಗ್ಗೆ ಐಶ್ ಹಾಗೂ ಅಭಿಷೇಕ್ ಮಾತ್ರ ಈವರೆಗೆ ಒಂದೇ ಒಂದು ಮಾತನ್ನಾಡಿಲ್ಲ.