ಪುರುಷರೇ, ಕನ್ಯತ್ವ ಉಳಿಸಿಕೊಂಡಿರುವ ಹೆಂಡತಿಗಾಗಿ ಹುಡುಕಬೇಡಿ: ಪ್ರಿಯಾಂಕಾ ಚೋಪ್ರಾ

Published : Dec 29, 2024, 06:06 PM IST
ಪುರುಷರೇ, ಕನ್ಯತ್ವ ಉಳಿಸಿಕೊಂಡಿರುವ ಹೆಂಡತಿಗಾಗಿ ಹುಡುಕಬೇಡಿ: ಪ್ರಿಯಾಂಕಾ ಚೋಪ್ರಾ

ಸಾರಾಂಶ

ಪ್ರಿಯಾಂಕಾ ಚೋಪ್ರಾ ಮದುವೆ ಸಲಹೆ ನೀಡಿದ್ದಾರೆ. ಮದುವೆಯಾಗುವಾಗ ಗಂಡುಮಕ್ಕಳು ಕನ್ಯತ್ವವನ್ನು ಉಳಿಸಿಕೊಂಡಿರುವ ಹೆಂಡತಿಗಾಗಿ ಹುಡುಕಬೇಡಿ.. ಏಕೆಂದರೆ ಅದು ಒಂದೇ ರಾತ್ರಿಯಲ್ಲಿ ಕಳೆದು ಹೋಗುತ್ತದೆ. ಒಳ್ಳೆಯ ನಡತೆ ಇರುವ ಹುಡುಗಿಯನ್ನು ಮದುವೆಯಾಗಿ. ಅದು ಜೀವನದ ಕೊನೆಯವರೆಗೂ ಇರುತ್ತದೆ' ಎಂದಿದ್ದಾರೆ.

ಬಾಲಿವುಡ್‌ನಲ್ಲಿ ಮಿಂಚಿದ ಬಳಿಕ ಮದುವೆಯಾಗಿ ಹಾಲಿವುಡ್‌ಗೆ ಹಾರಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹೀಗೊಂದು ಮಾತು ಹೇಳಿದ್ದಾರೆ. ಆ ಮಾತು ಈಗ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ, ಆ ಬಗ್ಗೆ ಮದುವೆ ಆಗಲಿರುವ ಹಾಗೂ ಆಗಿರುವ ಹೀಗೆ ಎಲ್ಲ ಪುರುಷರೂ ಚರ್ಚೆಯಲ್ಲಿ, ಚಿಂತನೆಯಲ್ಲಿ ತೊಡಗಿದ್ದಾರೆ. ಇನ್ನೂ ಹಲವರು ಚಿಂತೆಗೇ ಜಾರಿದ್ದಾರೆ. ಹಾಗಿದ್ದರೆ ಅಷ್ಟಕ್ಕೂ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾದರೂ ಏನು? 

'ಮದುವೆಯಾಗುವಾಗ ಗಂಡುಮಕ್ಕಳು ಕನ್ಯತ್ವವನ್ನು ಉಳಿಸಿಕೊಂಡಿರುವ ಹೆಂಡತಿಗಾಗಿ ಹುಡುಕಬೇಡಿ.. ಏಕೆಂದರೆ ಅದು ಒಂದೇ ರಾತ್ರಿಯಲ್ಲಿ ಕಳೆದು ಹೋಗುತ್ತದೆ. ಒಳ್ಲೆಯ ನಡತೆ ಇರುವ ಹುಡುಗಿಯನ್ನು ಮದುವೆಯಾಗಿ. ಅದು ಜೀವನದ ಕೊನೆಯವರೆಗೂ ಇರುತ್ತದೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಇತ್ತೀಚೆಗೆ ಬಹಳಷ್ಟು ವಿಷಯಗಳ ಬಗ್ಗೆ ಬಿಂದಾಸ್ ಆಗಿ ಮಾತನ್ನಾಡುವನಟಿ ಪ್ರಿಯಾಂಕಾ ಚೋಪ್ರಾ ಅವರು ಹೀಗೆ ಹೇಳುವ ಮೂಲಕ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. 

ಪಡ್ಡೆ ಹೈಕ್ಳಿಗೆ ಫಜೀತಿ ತಂದಿಟ್ಟ ಕೃತಿ ಸನನ್, ಮೈಮಾಟ ನೋಡಿ ಕಣ್ಣು ಮುಚ್ಚಲಾಗ್ತಿಲ್ಲ!

ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ಅಮೆರಿಕಾ ಸೊಸೆ. ಬಾಲಿವುಡ್‌ನಲ್ಲಿ ಬಹುಬೇಡಿಕೆಯಲ್ಲಿ ಇದ್ದಾಗಲೇ ಪಿಗ್ಗಿ ಅಮೆರಿಕದ ಪಾಪ್ ಸಿಂಗರ್ ನಿಕ್ ಜೊನಾಸ್ (Nick Jonas) ಪ್ರೇಮಪಾಶದಲ್ಲಿ ಬಿದ್ದರು. ಡೇಟಿಂಗ್ ಮಾಡಿಯೂ ಪ್ರಾಬ್ಲಂ ಏನೂ ಆಗದೇ ಮದುವೆಯೂ ಆಗಿಬಿಟ್ಟರು. ಈಗ ಸುಖ ಸಂಸಾರ ಸಾಗರದಲ್ಲಿ ತೇಲಾಡುತ್ತಿರುವ ನಟಿ ಪ್ರಿಯಾಂಕಾ, ಹಲವು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ, ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಅವರು ಆಗಾಗ ಅಮೆರಿಕಾದ ಸಂದರ್ಶನಗಳಲ್ಲಿ ಪಾಲ್ಗೊಳ್ಳುವುದು ಬಹುತೇಕರಿಗೆ ಗೊತ್ತೇ ಇದೆ. ಅಲ್ಲಿ ಕೇಳಲಾಗುವ ಹಲವು ಪ್ರಶ್ನೆಗಳಿಗೆ ಅನಿರೀಕ್ಷಿತ ಉತ್ತರ ಕೊಡುವ ಪ್ರಿಯಾಂಕಾ, ಅಲ್ಲಿನ ಸಂದರ್ಶಕನ್ನೇ ಹಲವು ಬಾರಿ ಬೆಚ್ಚಿ ಬೀಳಿಸುತ್ತಾರೆ. ಇತ್ತೀಚೆಗೆ ಕೂಡ ಒಮ್ಮೆ ಹಾಗೇ ಆಗಿದ್ದು, ಭಾರತದ ನಟಿ ಪ್ರಿಯಾಂಕಾ ಉತ್ತರ ಕೇಳಿ ಅಲ್ಲಿನ ಸಂದರ್ಶಕರು ಅಚ್ಚರಿಯಿಂದ ಶಾಕ್ ಆಗಿದ್ದಾರೆ. ಹಾಗಿದ್ದರೆ ನಟಿ ಪ್ರಿಯಾಂಕಾ ತಮಗೆ ಬಂದ ಪ್ರಶ್ನೆಗೆ ಏನಂತ ಉತ್ತರಿಸಿದ್ದಾರೆ?

ಅಪ್ಪನ ಮೇಲಿರೋ ಪ್ರೀತಿ ತಡೆಯೋಕಾಗ್ದೇ ಸ್ವಲ್ಪ ಜಾಸ್ತಿನೇ ಮಾತಾಡ್ಬಿಟ್ರಾ ಆಯುಷ್?

ಇಲ್ಲಿದೆ ನೋಡಿ ಪ್ರಿಯಾಂಕಾ ಹಾಟ್ ಆನ್ಸರ್‌.. 'ನೀವ್ಯಾಕೆ ಈಗ ಭಾರತದ ಸಿನಿಮಾಗಳಲ್ಲಿ ಮತ್ತೆ ನಟಿಸುತ್ತಿಲ್ಲ' ಎಂಬ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಅವರು ಸ್ವಲ್ಪವೂ ಯೋಚಿಸದೇ 'ನನಗೆ ನನ್ನ ಹಸ್ಬಂಡ್ ನಿಕ್ ಬಿಟ್ಟು ಇರಲಾಗುವುದಿಲ್ಲ. ನನ್ನ ಗಂಡನೇ ನನಗೆ ಸರ್ವಸ್ವ. ನಿಕ್ ಜೊನಾಸ್ ಎಲ್ಲಿರುತ್ತಾರೋ ಅಲ್ಲಿಯೇ ಜೊತೆಗಿರಲು ನಾನು ಇಷ್ಟಪಡುತ್ತೇನೆ. ಆತನನ್ನು ಬಿಟ್ಟು ನಾನು ಇಂಡಿಯಾಗೆ ಹೋಗಲು ಬಯಸುವುದಿಲ್ಲ. ಒಮ್ಮೆ ನಾನು ಭಾರತದ ಸಿನಿಮಾ ಒಪ್ಪಿಕೊಂಡರೆ ನಾನು ಅಲ್ಲಿಯೇ ಇದ್ದು ಶೂಟಿಂಗ್ ಮುಗಿಸಬೇಕಾಗುತ್ತದೆ. 

ನನಗೆ ಈಗಲೂ ಇಂಡಿಯಾದಿಂದ ಸಿನಿಮಾ ಆಫರ್‌ಗಳು ಬರುತ್ತಲೇ ಇವೆ. ಮುಖ್ಯವಾಗಿ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳು ಈಗಲೂ ನನಗೆ ಆಫರ್ ನೀಡುತ್ತಿವೆ. ಆದರೆ, ನಾನೇ ಅವರ ಕ್ಷಮೆ ಕೇಳಿ ಆ ಆಫರ್‌ಗಳನ್ನು ರಿಜೆಕ್ಟ್ ಮಾಡುತ್ತಿದ್ದೇನೆ. ಕಾರಣ, ನಿಕ್ ಜೊನಾಸ್. ಅವನ ಜೊತೆ ಇಲ್ಲದೇ ನಾನು ಒಂದು ವಾರ ಕಳೆಯಲು ಅಸಾಧ್ಯವೇ ಸರಿ. ಅವನಿಲ್ಲದ ನನ್ನ ಜೀವನವನ್ನು ನಾನು ಕಲ್ಪಿಸಿಕೊಳ್ಳಲೂ ಆಗದು. 'ಅವನೆಲ್ಲೋ ನಾನಲ್ಲೇ ಇರುವೆ..' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ!

ಕರ್ನಾಟಕದಲ್ಲಿ ಜನರು ಈಗ ಅವ್ರನ್ನು ನೋಡಿ ತುಂಬಾ ಭಯ ಬೀಳ್ತಿದಾರೆ!

ಅಮೆರಿಕದ ಜನರಿಗೆ, ಅದರಲ್ಲೂ ಸಿನಿಮಾ ಸೆಲೆಬ್ರಿಟಗಳಿಗೆ ಗಂಡನ ಬಿಟ್ಟು ಇರಲಾರೆ ಎಂಬುದು ಅಚ್ಚರಿಯ ಸಂಗತಿಯೇ ಸರಿ. ಅದಕ್ಕಾಗಿ ಆಶ್ಚರ್ಯದಿಂದ ನೀವು ನಕ್ ಜೊನಾಸ್‌ರನ್ನು ಅಷ್ಟೊಂದು ಇಷ್ಟಪಡುತ್ತೀರಾ? ದೆನ್ ಹೀ ಈಸ್ ಸೋ ಮಚ್ ಲಕ್ಕೀ...' ಎಂದಿದ್ದಾರೆ ಸಂದರ್ಶಕಿ. ಕಾರಣ, ಅವರಿಗೆ ಹಸ್ಬಂಡ್ ಅಂದ್ರೆ ಪ್ಲೇ ಬಾಯ್ ತರಹ! 'ಆಟ ಮುಗಿದ ಮೇಲೆ ನನ್ನ ಲೈಪ್‌ ನನ್ನದು ನಿನ್ನ ಪ್ರಾಬ್ಲಂ ನಿನ್ನದು' ಎಂಬ ಮೆಂಟಾಲಿಟಿ ಅವರದು! ಹಾಗಿದ್ದಾಗ ನಟಿ ಪ್ರಿಯಾಂಕಾ ಮಾತು ಕೇಳಿ ಶಾಕ್ ಆಗದೇ ಇರುತ್ತಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್
ಬಾಲಯ್ಯರಿಂದ ಅನಿರೀಕ್ಷಿತ ಸರ್ಪ್ರೈಸ್.. ಅಖಂಡ 2 ಹೊಸ ರಿಲೀಸ್ ಡೇಟ್ ಫಿಕ್ಸ್: ಈ ಚಿತ್ರಗಳಿಗೆ ದೊಡ್ಡ ಹೊಡೆತ