38ನೇ ವಯಸ್ಸಿನಲ್ಲಿ ಗರ್ಭ ಧರಿಸೋದು ಎಷ್ಟು ಅಪಾಯ? ಸಾವು ಬದುಕಿನ ಮಧ್ಯೆ ಹೋರಾಡಿದ ನಟಿ

By Roopa Hegde  |  First Published Dec 30, 2024, 1:24 PM IST

ಹಾಲಿವುಡ್ ನಟಿ ಗಾಲ್ ಗಡೋಟ್ ಪ್ರೆಗ್ನೆನ್ಸಿ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಮಗು ಬರುವ ಸಂತೋಷದಲ್ಲಿರಬೇಕಾಗಿದ್ದ ಗಾಲ್ ಗಡೋಟ್, ನೋವು ತಿನ್ನುವಂತಾಗಿತ್ತು. ವರ್ಷದ ಕೊನೆಯಲ್ಲಿ ಫ್ಯಾನ್ಸ್ ಗೆ ತಮ್ಮ ಕಥೆ ಬಿಚ್ಚಿಟ್ಟಿದ್ದಾರೆ ನಟಿ.
 


ಹಾಲಿವುಡ್‌ನ ವಂಡರ್ ವುಮನ್ (Hollywood  Wonder Woman) ಮತ್ತು ಸೂಪರ್‌ಸ್ಟಾರ್ ಗಾಲ್ ಗಡೋಟ್ (superstar Gal Gadot) ವರ್ಷದ ಕೊನೆಯಲ್ಲಿ ಫ್ಯಾನ್ಸ್ ಗೆ ಶಾಕ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಗಾಲ್ ಗಡೋಟ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಅವರು ತಮ್ಮ ಹೆರಿಗೆ ಮತ್ತು ಪ್ರೆಗ್ನೆನ್ಸಿ ಸಮಯದಲ್ಲಿ ಕಾಡಿದ ರೋಗದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ನಟಿ ಗಾಲ್ ಗಡೋಲ್ ನಾಲ್ಕನೇ ಬಾರಿ ಅಮ್ಮನಾಗಿ ಈ ಹಿಂದೆಯೇ ಅಭಿಮಾನಿಗಳಿಗೆ ಅಚ್ಚರಿ ಹುಟ್ಟಿಸಿದ್ರು. ಈಗ ಅವರ ಖಾಯಿಲೆ ಅಭಿಮಾನಿಗಳನ್ನು ಆಘಾತಗೊಳಿಸಿದೆ. 

ಗಾಲ್ ಗಡೋಟ್ ಈ ವರ್ಷ ತಮ್ಮ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. 38 ವರ್ಷದ ಗಾಲ್ ಗಡೋಟ್, ಮಾರ್ಚ್ 6 ರಂದು ಹೆಣ್ಣು  ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟಿದ ವಿಷ್ಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಗಾಲ್ ಗಡೋಲ್, ಪ್ರೆಗ್ನೆಂಟ್ ಎಂಬ ವಿಷ್ಯವೇ ಅಭಿಮಾನಿಗಳಿಗೆ ತಿಳಿದಿರಲಿಲ್ಲ. ಅವರ ಪೋಸ್ಟ್ ನೋಡಿ ಫ್ಯಾನ್ಸ್ ಅಚ್ಚರಿಗೊಳಗಾಗಿದ್ದರು. ಮಗುವನ್ನು ಎದೆಗವಚಿಕೊಂಡ ಫೋಟೋ ಹಾಕಿದ್ದ ಗಾಲ್ ಗಡೋಟ್, ನಾಲ್ಕನೇ ಬಾರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ, ಪ್ರಗ್ನೆನ್ಸಿ ಸುಲಭವಾಗಿರಲಿಲ್ಲ ಎಂದು ಶೀರ್ಷಿಕೆ ಹಾಕಿದ್ದರು. ಈಗ ಪ್ರೆಗ್ನಿನ್ಸಿ ಸಮಯದಲ್ಲಿ ಯಾವೆಲ್ಲ ಸಮಸ್ಯೆ ಕಾಡಿತ್ತು ಎಂಬುದನ್ನು ಗಾಲ್ ಗಡೋಲ್ ವಿವರಿಸಿದ್ದಾರೆ.  ಗಾಲ್ ಗಡೋಟ್, ಮೆದುಳಿ (brain)ನಲ್ಲಿ ರಕ್ತ ಹೆಪ್ಪುಗಟ್ಟುವಿಕೆ (blood clot) ಯಂತಹ ಗಂಭೀರ ಸಮಸ್ಯೆಯಿಂದ ಬಳಲಿದ್ದರು.  

Tap to resize

Latest Videos

ಮರದ ಚಾಪಿಂಗ್ ಬೋರ್ಡ್ ಬಳಸಿದ್ರೂ ರೋಗ ಬರ್ಬಹುದು, ಹಾಗಾದ್ರೆ ಯಾವ್ದು ಬಳಸಬೇಕು?

ಗಾಲ್ ಗಡೋಟ್ ಪೋಸ್ಟ್ನಲ್ಲಿ ಏನಿದೆ? : ತಮ್ಮ  ಸೋಶಿಯಲ್ ಮೀಡಿಯಾದಲ್ಲಿ ಗರ್ಭಧಾರಣೆ ಪಯಣವನ್ನು ವಿವರಿಸಿದ ಅವರು, ಅದ್ರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಗಾಲ್ ಗಡೋಟ್ ಮಗಳಿಗೆ ಹಾಲುಣಿಸುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ವರ್ಷ ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೇನೆ. ನಾಲ್ಕನೇ ಮಗುವಿನ ಗರ್ಭಾವಸ್ಥೆಯಲ್ಲಿ ದೊಡ್ಡ ಸವಾಲನ್ನು ನಾನು ಎದುರಿಸಿದ್ದೆ ಎಂದು ಬರೆದಿದ್ದಾರೆ. ಫೆಬ್ರವರಿಯಲ್ಲಿ, ನನ್ನ ಗರ್ಭಧಾರಣೆಯ ಎಂಟನೇ ತಿಂಗಳಿನಲ್ಲಿ, ನನ್ನ ಮೆದುಳಿನಲ್ಲಿ ಬೃಹತ್ ರಕ್ತ ಹೆಪ್ಪುಗಟ್ಟುವಿಕೆ ಇರುವುದು ಪತ್ತೆಯಾಯಿತು. ವಾರಗಳವರೆಗೆ, ನಾನು ಹಾಸಿಗೆಯಲ್ಲಿಯೇ ಮಲಗಬೇಕಾಯ್ತು. ಅಸಹನೀಯ ತಲೆನೋವು ನನ್ನನ್ನು ಕಾಡಿತ್ತು. ಅದನ್ನು ಸಹಿಸಿಕೊಳ್ಳೋದು ಕಷ್ಟವಾಗಿತ್ತು.  ಅಂತಿಮವಾಗಿ ಎಂಆರ್ ಐ ಸ್ಕ್ಯಾನ್ ಮಾಡಲಾಯ್ತು. ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಅನಿಶ್ಚಿತತೆ ಮತ್ತು ಭಯದ ಆ ಕ್ಷಣದಲ್ಲಿ ನನ್ನ ಮಗಳು ಓರಿ ಜನಿಸಿದ್ದಳು ಎಂದು ಎಂದು ಗಾಲ್ ಬರೆದಿದ್ದಾರೆ. ಮಗಳಿಗೆ ಗಾಲ್ ಓರಿ ಎಂದು ನಾಮಕರಣ ಮಾಡಿದ್ದಾಳೆ. ತನ್ನ ಮಗು, ವೈದ್ಯರು ಹಾಗೂ ಕುಟುಂಬಸ್ಥರಿಗೆ ಧನ್ಯವಾದ. ಇಂದು ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಮತ್ತೆ ಹೊಸ ಜೀವನ ಶುರು ಮಾಡಿದ್ದು, ಎಲ್ಲರಿಗೂ ಧನ್ಯವಾದ ಎಂದು ಗಾಲ್ ಬರೆದಿದ್ದಾರೆ. 

ನಟಿ ಸಮಂತಾ ಬೇಬಿ ಬಂಪ್ ಫೋಟೋ ಎಲ್ಲಿಂದ ಬಂತು ಗೊತ್ತಾ? ಇಲ್ಲಿದೆ ಸತ್ಯಾಂಶ..!

ಈ ಪ್ರಯಾಣ ನನಗೆ ಸಾಕಷ್ಟು ಕಲಿಸಿದೆ. ಮೊದಲನೆಯದಾಗಿ, ನಮ್ಮ ದೇಹವನ್ನು ಆಲಿಸುವುದು ಮತ್ತು ಬೇರೆಯವರ ಮಾತನ್ನು ನಂಬುವುದು ಅತ್ಯಗತ್ಯ. ನೋವು, ಅಸ್ವಸ್ಥತೆ ಅಥವಾ ಸೂಕ್ಷ್ಮ ಬದಲಾವಣೆಗಳು ಹೆಚ್ಚಾಗಿ ಆಳವಾದ ಅರ್ಥವನ್ನು ಹೊಂದಿರುತ್ತವೆ. ಅರಿವು ನಮಗೆ ಬಹಳ ಮುಖ್ಯ. 30 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 100,000 ಗರ್ಭಿಣಿ ಮಹಿಳೆಯರಲ್ಲಿ 3 ಜನರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ರೋಗ ಕಾಡುತ್ತದೆ ಎಂದು ಗಾಲ್ ಬರೆದಿದ್ದಾರೆ. ಸಾರಾ ಅರ್ಫೀನ್ ಖಾನ್ ಇಸ್ರೇಲಿ ಚಲನಚಿತ್ರ ನಿರ್ಮಾಪಕ ಜರೋನ್ ವರ್ಸಾನೊ ಅವರನ್ನು ಗಾಲ್ ಗಡೋಟ್ ಮದುವೆಯಾಗಿದ್ದಾರೆ. ಅವರು ಈಗ ನಾಲ್ಕು ಹೆಣ್ಣು ಮಕ್ಕಳ ತಾಯಿ. 

click me!