ರಾಧಿಕಾ ಮರ್ಚೆಂಟ್‌ ಆಪ್ತ ಸ್ನೇಹಿತೆ ಜಾನ್ವಿ ಕಪೂರ್‌ ಅಂಬಾನಿ ಕುಟುಂಬಕ್ಕೆ ಹತ್ತಿರದ ಸಂಬಂಧಿ, ಹೇಗೆ ಗೊತ್ತಾ!

By Gowthami K  |  First Published Jul 23, 2024, 12:28 PM IST

ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್ ಮತ್ತು ಜಾನ್ವಿ ಕಪೂರ್ ಉತ್ತಮ ಸ್ನೇಹಿತರು. ಆದರೆ ಜಾನ್ವಿ ಅಂಬಾನಿ ಕುಟುಂಬದ ಸಂಬಂಧಿ ಅನ್ನುವುದು ನಿಮಗೆ ಗೊತ್ತೇ. ಇಲ್ಲಿದೆ ಈ ಬಗ್ಗೆ ಮಾಹಿತಿ.


ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಜುಲೈ 12 ರಂದು ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾದರು. ಇವರಿಬ್ಬರದು ಪ್ರೇಮ ವಿವಾಹ. ಈ ಅದ್ಧುರಿ ಮದುವೆಗೆ ವಿಶ್ವದ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು ಆಗಮಿಸಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವಗಳಲ್ಲಿ ಮಾತ್ರವಲ್ಲದೆ ಅದಕ್ಕೂ ಮುನ್ನ ನಡೆದ ಎಲ್ಲಾ ಕಾರ್ಯಕ್ರಮಗಳಲ್ಲೂ ಬಾಲಿವುಡ್ ನಟಿ ಜಾನ್ವಿ ಕಪೂರ್ ಭಾಗವಹಿಸಿದ್ದರು.

ಓರ್ವ ನಟಿಯಾಗಿ ಜಾನ್ವಿ ಕಪೂರ್  ಅಂಬಾನಿ ಕುಟುಂಬದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಲ್ಲ. ಅಂಬಾನಿ ಮಗಳು ಇಶಾಗೆ ಗೆಳತಿಯಾಗಿ ಭಾಗವಹಿಸಿದ್ದಲ್ಲ ಅದಕ್ಕೂ ಹೆಚ್ಚಿನ ಸಂಬಂಧವನ್ನು ಜಾನ್ವಿ ಹೊಂದಿದ್ದಾರೆ. ಅಂಬಾನಿ ಕುಟುಂಬ ಮತ್ತು ಕಪೂರ್ ಕುಟುಂಬ ಸಂಬಂಧಿಕರಾಗಿದ್ದಾರೆ. ಅದು ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Tap to resize

Latest Videos

undefined

ಅಂಬಾನಿ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿದ ಛಾಯಾಗ್ರಾಹಕ ಇವರೇ, ಸಂಭಾವನೆ ಪಡೆದಿದ್ದೆಷ್ಟು?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್  ಮದುವೆಯಲ್ಲಿ  ಜಾನ್ವಿ ಕಪೂರ್  ಅಷ್ಟು ಆರಾಮವಾಗಿ ಎಲ್ಲಾ ಸಮಾರಂಭದಲ್ಲಿ ಭಾಗವಹಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ನಟಿ ಜಾನ್ವಿ, ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್  ಆಪ್ತ ಸ್ನೇಹಿತರಾಗಿದ್ದಾರೆ. ಮದುವೆಗೂ ಮುನ್ನ ಸ್ನೇಹಿತರೆಲ್ಲರೂ ಸೇರಿ ರಾಧಿಕಾಗೆ ಬ್ರೈಡಲ್ ಶೋವರ್ ಮಾಡಿದ್ದರು. ಇದನ್ನು ಹೊರತುಪಡಿಸಿ ಇಡೀ ಅಂಬಾನಿ ಕುಟುಂಬಕ್ಕೆ ಜಾನ್ವಿ ಕಪೂರ್ ಕುಟುಂಬವು ಹತ್ತಿರದ ಸಂಬಂಧವನ್ನು ಹೊಂದಿದೆ.

ಜಾನ್ವಿ ಕಪೂರ್ ಮತ್ತು ರಾಧಿಕಾ ಮರ್ಚೆಂಟ್ ಉತ್ತಮ ಸ್ನೇಹಿತರು. ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಕೂಡ ಸ್ನೇಹಿತರಾಗಿ ಈಗ ದಂಪತಿಯಾಗಿರುವವರು. ಹೀಗಾಗಿ  ಅದ್ಧೂರಿ ವಿವಾಹದಲ್ಲಿ ದೊಡ್ಡ ಸ್ನೇಹಿತರ ಗುಂಪು ಭಾಗವಹಿಸಿತ್ತು.

ಅನಂತ್-ರಾಧಿಕಾ ಅದ್ಧೂರಿಯಲ್ಲಅತೀ ಕಂಜೂಸ್‌ ಮದುವೆ, ಇದು ನಿಜ ಅಂಬಾನಿ ಜಿಪುಣರಲ್ಲೇ ಜಿಪುಣ, ಕಾರಣಗಳು ಹಲವು!

ಒಂದೇ ಶಾಲೆಯಲ್ಲಿ ಓದಿ, ಸ್ನೇಹದ  ಹೊರತಾಗಿತಾಗಿಯೂ ಜಾನ್ವಿ ಕಪೂರ್  ಸೋದರ ಅತ್ತೆ ಆಗಿರುವ ರೀನಾ ಕಪೂರ್, ಅಂಬಾನಿ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅಂದರೆ  ಬೋನಿ ಕಪೂರ್ ಅವರ ಸಹೋದರಿ ರೀನಾ ಕಪೂರ್  ಅವರ ಮಗ ಮೋಹಿತ್ ಮರ್ವಾ ಅವರು ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಅವರ ಸೊಸೆ ಅಂತಾರಾ ಮೋತಿವಾಲಾ ಅವರನ್ನು ವಿವಾಹವಾಗಿದ್ದಾರೆ. ಟೀನಾ ಅಂಬಾನಿ ಮತ್ತು ಅಂತರಾ ಮೋತಿವಾಲಾ ಮರ್ವಾ ಅವರ ತಾಯಿ ಭಾವನಾ ಮುನಿಮ್ ಸಹೋದರಿಯರು.

ಅನಿಲ್ ಅಂಬಾನಿ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಸಹೋದರನಾಗಿದ್ದಾರೆ. ಜಾನ್ವಿ ಕಪೂರ್  ಸೋದರ ಅತ್ತೆ ಮಗ ಮೋಹಿತ್ ಮರ್ವಾ ಅವರ ಮದುವೆ ಅನಿಲ್ ಅಂಬಾನಿ ಅವರ ಅತ್ತಿಗೆಯ ಮಗಳು ಅಂತರಾ ಮೋತಿವಾಲಾ ಅವರೊಂದಿಗೆ ಆಗಿರುವುದರಿಂದ ಜಾನ್ವಿ ಕಪೂರ್ ಕೂಡ ಅಂಬಾನಿ ಕುಟುಂಬದೊಂದಿಗೆ  ನಿಕಟ ಸಂಬಂಧ ಹೊಂದಿದ್ದಾರೆ. ಸೋನಮ್ ಕಪೂರ್, ಅರ್ಜುನ್ ಕಪೂರ್, ಹರ್ಷವರ್ಧನ್ ಕಪೂರ್, ರಿಯಾ ಕಪೂರ್, ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಇವೆಲ್ಲರೂ ಕಪೂರ್ ಕುಟುಂಬದ ಕುಡಿಗಳಾಗಿರುವುದರಿಂದ ಅಂಬಾನಿ ಕುಟುಂಬಕ್ಕೆ ದೂರದ ಸಂಬಂಧಿಕರು.

ಮೋಹಿತ್ ಮರ್ವಾ ಮತ್ತು ಅಂತರಾ ಮೋತಿವಾಲಾ ಫೆಬ್ರವರಿ 20, 2018 ರಂದು ವಿವಾಹವಾದರು. ಈಗ ಹೆಣ್ಣು ಮಗುವಿನ ಹೆಮ್ಮೆಯ ಪೋಷಕರಾಗಿದ್ದಾರೆ.

click me!