ಐಶ್ವರ್ಯ ರೈ ದುಪ್ಪಟ ಜಾರದಂತೆ ಹಿಡಿದ ಪತಿ, ಡಿವೋರ್ಸ್ ಸುದ್ದಿ ನಡುವೆ ಒಟ್ಟಿಗೆ ಕಾಣಿಸಿದ ಬಚ್ಚನ್ ಕುಟುಂಬ!

By Chethan Kumar  |  First Published Dec 19, 2024, 11:08 PM IST

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಸಂಬಂಧದಲ್ಲಿ ಬಿರುಕು ಮೂಡಿದೆ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದರ ನಡುವೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.


ಮುಂಬೈ(ಡಿ.19) ಬಾಲಿವುಡ್ ಸೆಲೆಬ್ರೆಟಿಗಳ ಬೈಕಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ನಡುವೆ ಸಂಬಂಧದಲ್ಲಿ ಬಿರುಕು ಮೂಡಿದೆ. ಇವರಿಬ್ಬರು ಬೇರೆಯಾಗುತ್ತಿದ್ದಾರೆ ಅನ್ನೋ ಸುದ್ದಿಗಳು ಭಾರಿ ಹರಿದಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಹಲವು ಘಟನೆಗಳು ನಡೆದಿದೆ. ಆದರೆ ಈ ಕುರಿತು ಬಚ್ಚನ್ ಕುಟುಂಬವಾಗಲಿ, ಐಶ್ವರ್ಯ ರೈ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಎಲ್ಲಾ ಗಾಳಿ ಸುದ್ದಿಗಳ ನಡುವೆ ಇದೀಗ ಐಶ್ವರ್ಯ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಪುತ್ರಿ ಅರಾಧ್ಯ ಶಾಲಾ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬ ಜೊತೆಯಾಗಿ ಕಾಣಿಸಿಕೊಂಡಿದೆ.

ಧೀರೂಬಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯ ವಾರ್ಷಿಕೋತ್ಸವದಲ್ಲಿ ಬಚ್ಚನ್ ಕುಟುಂಬ ಜೊತೆಯಾಗಿ ಕಾಣಿಸಿಕೊಂಡಿದೆ. ವಿಶೇಷ ಅಂದರೆ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯ ದುಪ್ಪಟ ಕೆಳಗೆ ಬೀಳದಂತೆ ಹಿಡಿದ್ದರು. ಇತ್ತ ಅಮಿತಾಬ್ ಬಚ್ಚನ್ ಕೂಡ ಜೊತೆಗಿದ್ದರು.  ಅಮಿತಾಬ್ ಬಚ್ಚನ್ ಮುಂದಿದ್ದರೆ ಅದರೆ ಹಿಂದೆ ಐಶ್ವರ್ಯ ರೈ, ಅಮಿತಾಬ್ ಅಡೆ ತಡೆ ಇಲ್ಲದೆ ನಡೆಯಲು ಅವರ ಕೈ ಹಿಡಿದ್ದರು. ಇತ್ತ ಅಭಿಷೇಕ್ ಬಚ್ಚನ್ ಪತ್ನಿಯ ದುಪ್ಪಟ ಹಿಡಿದು ಪತ್ನಿಗೆ ಸಹರಿಸಿದ್ದ ಫೋಟೋ ವೈರಲ್ ಆಗಿದೆ.

Tap to resize

Latest Videos

undefined

ವಿಚ್ಛೇದನ ವದಂತಿ ಮಧ್ಯೆ ಐಶ್‌ ಸೆಲ್ಫಿ ವೈರಲ್‌, ಅತ್ತೆ ಜೊತೆ ಅಭಿಷೇಕ್‌ ಪೋಸ್

ಆರಾಧ್ಯ ಶಾಲಾ ವಾರ್ಷಿಕೋತ್ಸವಕ್ಕೆ ಆಗಮಿಸಿದ ಬಚ್ಚನ್ ಕುಟುಂಬ, ಬಳಿಕ ಅರಾಧ್ಯ ಸೇರಿದಂತೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ್ದಾರೆ. ಪುತ್ರಿ ಅರಾಧ್ಯ ನೃತ್ಯವನ್ನು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ತಮ್ಮ ಮೊಬೈಲ್ ಮೂಲಕ ಸೆರೆ ಹಿಡಿದ್ದಾರೆ. ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಬ್ ಬಚ್ಚನ್ ಮೂವರು ಒಂದೇ ಸಾಲಿನಲ್ಲಿ ಜೊತೆಯಾಗಿ ಕುಳಿತುಕೊಂಡು ಸಾಂಸ್ಕೃತಿ ಕಾರ್ಯಕ್ರಮ ವೀಕ್ಷಿಸಿದ್ದಾರೆ. 

 

Family bonding always brings immense joy to its members and well-wishers alike. Look at the warmth in Abhishek’s subtle, close-lipped smile and the radiant glow of Aishwarya’s expression. Aishwarya Rai, accompanied by the legendary Amitabh Bachchan, makes a graceful entrance to… pic.twitter.com/381S762nU4

— yogen shah (@yogenshahyogen)

 

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಚೇದನ ಸುದ್ದಿಗಳ ಹರಿದಾಡುತ್ತಿರುವ ನಡುವೆ ಇದೀಗ ಮತ್ತೊಮ್ಮೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಜೊತೆಯಾಗಿ ಕಾಣಿಸಿಕೊಂಡು ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಡಿವೋರ್ಸ್ ಸುದ್ದಿ ಸುಳ್ಳು ಎಂದು ಹಲವರು ಇವರ ಫೋಟೋ ಹಾಗೂ ವಿಡಿಯೋಗಳಿಗೆ ಕಮೆಂಟ್ ಮಾಡಿದ್ದಾರೆ.

ಡಿವೋರ್ಸ್ ಸುದ್ದಿ ಹರಿದಾಡಿದ ಬಳಿಕ ಕೆಲ ಕಾರ್ಯಕ್ರಮಗಳಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ಅದ್ಧೂರಿ ಮದುವೆ ಪಾರ್ಟಿ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬ ಜೊತೆಯಾಗಿ ಕಾಣಸಿಕೊಂಡಿತ್ತು. ಬಾಲಿವುಡ್ ಸ್ಟಾರ್‌ಗಳ ದಂಡೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.  

ಅಮಿತಾಭ್ ಬಚ್ಚನ್ ಮಾಜಿ ಪ್ರೇಯಸಿ ರೇಖಾರನ್ನ ಸೊಸೆ ಐಶ್ವರ್ಯಾ ರೈ ಅಮ್ಮ ಅಂತ ಕರೆಯುವುದೇಕೆ?
 

click me!