ವರ್ಲ್ಡ್ ಚೆಸ್ ಚಾಂಪಿಯನ್ ಗುಕೇಶ್ ಡಿ ಅವರ ಮೆಚ್ಚಿನ ಸಿನಿಮಾಗಳು ಯಾವವು ಎಂಬ ಮಾಹಿತಿ ಸದ್ಯ ಭಾರೀ ವೈರಲ್ ಆಗಿದೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಗುಕೇಶ್ ಅವರಿಗೆ 'ನಿಮ್ಮ ಮೆಚ್ಚಿನ ಸಿನಿಮಾಗಳು ಯಾವವು' ಎಂಬ ಬಗ್ಗೆ ಕೇಳಲಾಗಿದೆ. ಈ ಬಗ್ಗೆ ಅವರು..
ಸದ್ಯ ಜಗತ್ತಿನಲ್ಲಿ ಎಲ್ಲೆಲ್ಲೂ ಗುಕೇಶ್ ದೊಮ್ಮರಾಜು (Gukesh Dommaraju) ಅವರದೇ ಸುದ್ದಿ. ಈ ಬಾರಿಯ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ 18ರ ಹರೆಯದ ಗುಕೇಶ್ ದೊಮ್ಮರಾಜು. ತಮಿಳುನಾಡು, ಚೆನ್ನೈನ ಹುಟ್ಟೂರಲ್ಲಿ ಓದುತ್ತಿರುವ ಗುಕೇಶ್ ಅವರು 2019ರಲ್ಲಿಯೇ ಚೆಸ್ ಗ್ರಾಂಡ್ ಮಾಸ್ಟರ್ ಪಟ್ಟ ಪಡೆದವರು. ಇದೀಗ 2024ರಲ್ಲಿ ವರ್ಲ್ಡ್ ಚೆಸ್ ಚಾಂಪಿಯನ್ ಪಟ್ಟ ಪಡೆದುಕೊಂಡು ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ.
ಇಂಥ ಗುಕೇಶ್ ಡಿ ಅವರ ಮೆಚ್ಚಿನ ಸಿನಿಮಾಗಳು ಯಾವವು ಎಂಬ ಮಾಹಿತಿ ಸದ್ಯ ಭಾರೀ ವೈರಲ್ ಆಗಿದೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಗುಕೇಶ್ ಅವರಿಗೆ 'ನಿಮ್ಮ ಮೆಚ್ಚಿನ ಸಿನಿಮಾಗಳು ಯಾವವು' ಎಂಬ ಬಗ್ಗೆ ಕೇಳಲಾಗಿದೆ. ಈ ಬಗ್ಗೆ ಅವರು ಅದೇನು ಹೇಳಿದ್ದಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲಿ ಇದೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.. ಉತ್ತರ ಕೊಡುವುದಕ್ಕೂ ಮೊದಲು ಗುಕೇಶ್ ಅವರು 'ಯಾವ ಭಾಷೆಯ ಸಿನಿಮಾ ಬಗ್ಗೆ ಹೇಳಲಿ?' ಎಂದು ಕೇಳಿ ಬಳಿಕ ಉತ್ತರಿಸಿದ್ದಾರೆ.
undefined
ಸಿತಾರಾ ಗಟ್ಟಿ ನಿರ್ಧಾರದಿಂದ ಬಹಳಷ್ಟು ಪುರುಷರು ಬ್ರಹ್ಮಚಾರಿಗಳಾಗಿಯೇ ಉಳಿದ್ರಾ!
ಮೊದಲಿಗೆ, ತಮ್ಮ ಮೆಚ್ಚಿನ ತಮಿಳು ಸಿನಿಮಾ ಬಗ್ಗೆ ಹೇಳಿದ ಗುಕೇಶ್ ಅವರು 'ವಾರಣಂ ಆಯಿರಂ' ಎಂದಿದ್ದಾರೆ. ಬಹುತೇಕ ಎಲ್ಲರಿಗೂ ಗೊತ್ತಿರುವಂತೆ ಇದು ತಮಿಳು ಸ್ಟಾರ್ ನಟ ಸೂರ್ಯ ನಟನೆಯ (Varanam Aayiram) ಚಿತ್ರ. ಈ ಚಿತ್ರದಲ್ಲಿ ಕನ್ನಡದ ನಟಿ ರಮ್ಯಾ ಕೂಡ ನಟಿಸಿದ್ದಾರೆ. ಈ ಚಿತ್ರವು 2008ರಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಈ ಚಿತ್ರವು ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಅವರ ಮೆಚ್ಚುಗೆ ಗಳಿಸಿದೆ ಎಂಬುದು ಈ ಚಿತ್ರಕ್ಕೆ ಒಂದು ಕಿರೀಟ ಇದ್ದಂತೆ ಎನ್ನಬಹುದು.
ಇನ್ನು ತೆಲುಗಿನಲ್ಲಿ ತಮ್ಮ ಮೆಚ್ಚಿನ ಚಿತ್ರ 'ಗೀತ ಗೋವಿಂದಂ' ಎಂದಿದ್ದಾರೆ ಗುಕೇಶ್ ಡಿ. ಕನ್ನಡತಿ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಜೋಡಿಯ ಈ (Geetha Govindam) ಚಿತ್ರವು 2018ರಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಮೆಚ್ಚಿದ್ದು, ಈ ಚಿತ್ರತಂಡಕ್ಕೆ ಹೊಸ ಕೋಡು ಮೂಡಿಸಲಿದೆ ಎನ್ನಬಹುದು.
ಅಮೆರಿಕಾಗೆ ಹೊರಟ ಶಿವಣ್ಣ: ಈ ಸರ್ಜರಿ ಅದೆಷ್ಟು ಡೇಂಜರ್? ಹೇಗಿರುತ್ತೆ ಶಸ್ತ್ರಚಿಕಿತ್ಸೆ?
ಇನ್ನು ಬಾಲಿವುಡ್ ಚಿತ್ರದ ಬಗ್ಗೆಯೂ ಗುಕೇಶ್ ಅವರು ಮಾತನ್ನಾಡಿದ್ದಾರೆ. ಹೃತಿಕ್ ರೋಶನ್ ನಟನೆಯ ಹಿಂದಿಯ 'ಜಿಂದಗಿ ನ ಮಿಲೇಗಿ ದೊಬಾರಾ' ಚಿತ್ರವನ್ನು ತಮ್ಮ ಮೆಚ್ಚಿನ ಚಿತ್ರವೆಂದು ಹೇಳಿರುವ ಗುಕೇಶ್, ಅದು ತುಂಬಾ ಹಳೆಯದು ಎಂದಿದ್ದಾರೆ. ಹೌದು, ಇದೀಗ ಕೇವಲ ಹದಿನೆಂಟು ವರ್ಷದ ಹುಡುಗನಾಗಿರುವ ಗುಕೇಶ್ ಅವರಿಗೆ ಅದು ತುಂಬಾ ಹಳೆಯದೇ ಆಗಿದೆ. ಏಕೆಂದರೆ, ಆ (Jindagi Na Milegi Dobara) ಚಿತ್ರವು 2011ರಲ್ಲಿ ತೆರೆಗೆ ಬಂದಿತ್ತು. ಆಗ ಗುಕೇಶ್ ವಯಸ್ಸು ಕೇವಲ 6.
ಇನ್ನು ಹಾಲಿವುಡ್ ಚಿತ್ರದ ಬಗ್ಗೆಯೂ ಚೆಸ್ ಚಾಂಪಿಯನ್ ಗುಕೇಶ್ ಹೇಳಿದ್ದಾರೆ. 'ಅಬೌಟ್ ಟೈಮ್' ತಮ್ಮ ಮೆಚ್ಚಿನ ಇಂಗ್ಲಿಷ್ ಚಿತ್ರ ಎಂದಿದ್ದಾರೆ ಗುಕೇಶ್ ದೊಮ್ಮರಾಜು. ಅಷ್ಟು ಹೇಳಿ ಬಳಿಕ, 'ಬಹುಶಃ ನಿಮಗೂ ಸಹ ಅದು (About Time) ಇಷ್ಟ ಆಗಿರಬಹುದಲ್ಲವೇ?' ಎಂದು ಆಂಕರ್‌ಗೆ ಪ್ರಶ್ನೆ ಮಾಡಿದ್ದಾರೆ ಗುಕೇಶ್. ಆದರೆ, ವಿಡಿಯೋದಲ್ಲಿ ನಿರೂಪಕರ ಉತ್ತರವಿಲ್ಲ ಬಿಡಿ!. ಒಟ್ಟಿನಲ್ಲಿ, ಇದೀಗ ಭಾರತದ ವಿಶ್ವ ಚೆಸ್ ಚಾಂಪಿಯನ್ ಎಲ್ಲೆಲ್ಲೂ ಸಖತ್ ಸದ್ದು-ಸುದ್ದಿ ಮಾಡುತ್ತಿದ್ದಾರೆ.
ನಟಿ ಆರತಿ ಚಿತ್ರರಂಗವನ್ನು ತೊರೆದ ನಿಜವಾದ ಕಾರಣ ಕೊನೆಗೂ ಬಹಿರಂಗವಾಯ್ತು!