
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಬಹಳ ದಿನಗಳ ಸೆಲೆಬ್ರೇಷನ್ ಬಳಿ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಚಿತ್ರರಂಗದ ಘಟಾನುಘಟಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಶುಭಾಶಯ ಕೋರಿದ್ದಾರೆ. ಸಹಸ್ರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಮತ್ತು ಮದುವೆ ಸಂಭ್ರಮಕ್ಕೆ ದೇಶ-ವಿದೇಶಗಳಿಂದ ಗಣ್ಯಾತಿಗಣ್ಯರ ದಂಡೇ ಆಗಮಿಸಿತ್ತು. ಈ ಮೂಲಕ ಭಾರತ ಅತ್ಯಂತ ವೈಭವೋಪೇತ ಮದುವೆಯೊಂದಕ್ಕೆ ಸಾಕ್ಷಿಯಾಯಿತು. ಮದುವೆಯ ಬೆನ್ನಲ್ಲೇ ಮದುವೆಗೆ ಸಂಬಂಧಿಸಿದಂತೆ ಒಂದೊಂದೇ ವಿಶೇಷ ಹಾಗೂ ಅಚ್ಚರಿಯ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ಮದುವೆಗೆ ಸಂಬಂಧಿಸಿದಂತೆ ಇದಾಗಲೇ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದ್ದು, ಔಚಿತ್ಯಪೂರ್ಣ ಮದುವೆಯ ಕುರಿತು ಇಂಟರೆಸ್ಟಿಂಗ್ ವಿಷಯಗಳು ಹೊರಬರುತ್ತಿವೆ.
ಇದರ ಮಧ್ಯೆಯೇ ಅಮಿತಾಭ್ ಬಚ್ಚನ್ ಫ್ಯಾಮಿಲಿಯ ಬಿಗ್ ಸೀಕ್ರೆಟ್ ಒಂದು ಕೂಡ ಅಂಬಾನಿ ಪುತ್ರನ ಮದುವೆಯಲ್ಲಿ ಬಯಲಾಗಿದೆ. ಖುಲ್ಲಂ ಖುಲ್ಲಾ ಆಗಿ ನಡೆದ ಈ ಘಟನೆಯಿಂದ ಇಲ್ಲಿಯವರೆಗೆ ಇದ್ದ ಹಲವು ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತಾಗಿದೆ. ದೊಡ್ಡವರ ಮನೆಯಲ್ಲಿ ಎಲ್ಲವೂ ಸರಿಯಾಗಿ ಇರುವುದಿಲ್ಲ ಎನ್ನುವುದಕ್ಕೆ ಈ ಮದುವೆ ಸಾಕ್ಷಿಯಾಗಿದೆ. ಅಷ್ಟಕ್ಕೂ ಬಿಗ್-ಬಿ ಮನೆಯಲ್ಲಿ ಎಲ್ಲವೂ ಸರಿಯಲ್ಲ ಎಂದು ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಾಗುತ್ತಲೇ ಇದೆ. ನಟಿ ಐಶ್ವರ್ಯ ರೈ ಮತ್ತು ನಟ ಅಭಿಷೇಕ್ ಬಚ್ಚನ್ ಅವರ ಡಿವೋರ್ಸ್ ವದಂತಿಯಂತೂ ವರ್ಷಗಳವರೆಗೆ ಬಹು ಚರ್ಚೆಯಲ್ಲೇ ಇತ್ತು. ಇದರ ನಡುವೆ ಸಾಕಷ್ಟು ಬೆಳವಣಿಗೆ ಆದರೂ, ಎಲ್ಲವೂ ಮೇಲ್ನೋಟಕ್ಕೆ ಸರಿ ಇರುವಂತೆ ಕಾಣುತ್ತಿದ್ದರೂ ಯಾಕೋ ಮಾವಂಗೂ ಸೊಸೆಗೂ ಇನ್ನೂ ಆಗಿಬರುವಂತೆ ಕಾಣುತ್ತಿಲ್ಲ ಎಂದೇ ಹೇಳಲಾಗುತ್ತಿದೆ.
ಅಮಿತಾಭ್ರ 55 ವರ್ಷಗಳ ದಾಖಲೆ ಮುರಿತು ಕಲ್ಕಿ 2898 AD: 81ನೇ ವಯಸ್ಸಿನಲ್ಲಿ ಏನಿದು ಅಚ್ಚರಿ?
ಕೆಲ ದಿನಗಳ ಹಿಂದಷ್ಟೇ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅಭಿನಯದ ಮಣಿರತ್ನಂ ನಿರ್ದೇಶನದ ಹಿಂದಿ ಸಿನಿಮಾ ರಾವನ್ 14 ವರ್ಷಗಳನ್ನು ಮುಗಿಸಿದ ಸಂದರ್ಭದಲ್ಲಿ ಅಮಿತಾಭ್ ಅವರು ‘ಅಭಿಷೇಕ್ ಅವರ ನಟನೆ ಮರೆಯಲು ಸಾಧ್ಯವಿಲ್ಲ. ಅವರ ಎಲ್ಲಾ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾದುದು. ಕಲಾವಿದನ ನಿಜವಾದ ಮೌಲ್ಯ ಇದು’ ಎಂದು ಹೇಳಿದ್ದರು. ಈ ಚಿತ್ರದಲ್ಲಿ ಸೊಸೆ ಐಶ್ವರ್ಯಾ ನಟಿಸಿದ್ದರೂ ಮಗ ಅಭಿಷೇಕ್ ನಟನೆಯನ್ನು ಅವರು ಮನಸಾರೆ ಹೊಗಳಿದ್ದರೇ ವಿನಾ ಸೊಸೆ ಐಶ್ವರ್ಯಾ ಬಗ್ಗೆ ಎಲ್ಲೂ ಉಲ್ಲೇಖ ಮಾಡಲಿಲ್ಲ. ಇದು ಹಲವು ಗುಮಾನಿಗಳನ್ನು ಸೃಷ್ಟಿಸಿತ್ತು.
ಈಗಲೂ ಅದೇ ರೀತಿ ಆಗಿದೆ. ಅನಂತ್ ಅಂಬಾನಿ ಮದುವೆಯಲ್ಲಿ ಅಮಿತಾಭ್, ಜಯಾ, ಅಭಿಷೇಕ್ ಸೇರಿದಂತೆ ಅಮಿತಾಭ್ ಪುತ್ರಿಯರೂ ಆಗಮಿಸಿದ್ದರು. ಮದುವೆಯಲ್ಲಿ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಕೂಡ ಭಾಗವಹಿಸಿದ್ದರು. ಆದರೆ ಕುತೂಹಲ ಎನ್ನುವಂತೆ ಅಲ್ಲಿ ನಡೆದ ಫೋಟೋಶೂಟ್ನಲ್ಲಿ ಐಶ್ವರ್ಯ ಮತ್ತು ಆರಾಧ್ಯ ಅವರನ್ನು ಹೊರತುಪಡಿಸಿ ಉಳಿದವರು ಫೋಟೋಗೆ ಪೋಸ್ ಕೊಟ್ಟಿದ್ದರು. ಇನ್ನೊಂದರಲ್ಲಿ ಪ್ರತ್ಯೇಕವಾಗಿ ತಾಯಿ-ಮಗಳು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮದುವೆ ಆಗಮಿಸುವ ಸಂದರ್ಭದಲ್ಲಿ ಕೂಡ ತಾಯಿ-ಮಗಳು ಪ್ರತ್ಯೇಕವಾಗಿ ಬಂದಿದ್ದರು, ಉಳಿದವರು ಒಟ್ಟಿಗೇ ಬಂದಿದ್ದರು. ಇದರಿಂದ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಸುದ್ದಿಗೆ ಮತ್ತಷ್ಟು ಬಲ ತುಂಬಿದೆ.
ಐಶ್ವರ್ಯಳನ್ನು ಕಂಡ್ರೆ ಅಮಿತಾಭ್ಗೆ ಆಗೋದಿಲ್ಲ ಅನ್ನೋದು ನಿಜವಾಗೋಯ್ತಾ? ಸತ್ಯ ಒಪ್ಪಿಕೊಂಡ್ರಾ ಬಿಗ್-ಬಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.