ಸಲ್ಮಾನ್ ಖಾನ್ ನಟನೆಯ ಕಭಿ ಈದ್ ಕಭಿ ದಿವಾಳಿ ಸಿನಿಮಾದಿಂದ ನಿರ್ಮಾಪಕ ಸಾಜಿದ್ ನಾದಿಯಾವಾಲಾ, ನಿರ್ದೇಶಕ ಫರ್ಹಾದ್ ಸಾಮ್ಜಿ ಹಾಗೂ ನಟ, ಸಲ್ಮಾನ್ ಖಾನ್ ತಂಗಿಯ ಗಂಡ ಆಯುಷ್ ಶರ್ಮಾ ಸಿನಿಮಾದಿಂದ ಹೊರನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸುದ್ದಿ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೀಗ ಸಿನಿಮಾಗೆ ಸೌತ್‌ನ ಸ್ಟಾರ್ ವಿಲನ್ ಆಯ್ಕೆಯಾಗುವ ಮೂಲಕ ಸಿನಿಮಾದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Khan) ಅವರ ಹೊಸ ಸಿನಿಮಾ ಕಭಿ ಈದ್ ಕಭಿ ದಿವಾಳಿ(Kabhi Eid Kabhi Diwali)ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಸಲ್ಮಾನ್ ಖಾನ್ ಅವರ ಈ ಸಿನಿಮಾ ಬಾಲಿವುಡ್‌ನ ಹಾಟ್ ಟಾಪಿಕ್ ಆಗಿದೆ. ಈ ಸಿನಿಮಾದಿಂದ ಒಬ್ಬರೇ ಹೊರನಡೆಯುತ್ತಿರುವ ವಿಚಾರ ಅನೇಕ ದಿನಗಳಿಂದ ಸದ್ದು ಮಾಡುತ್ತಿತ್ತು. ಇದೀಗ ಸಿನಿಮಾಗೆ ಆಯ್ಕೆಯಾದ ಸೌತ್ ಕಲಾವಿದರ ವಿಚಾರವಾಗಿ ಸದ್ದು ಮಾಡುತ್ತಿದೆ.
ಇತ್ತೀಚಿಗಷ್ಟೆ ಈ ಸಿನಿಮಾದಿಂದ ನಿರ್ಮಾಪಕ ಸಾಜಿದ್ ನಾದಿಯಾವಾಲಾ, ನಿರ್ದೇಶಕ ಫರ್ಹಾದ್ ಸಾಮ್ಜಿ ಹಾಗೂ ನಟ, ಸಲ್ಮಾನ್ ಖಾನ್ ತಂಗಿಯ ಗಂಡ ಆಯುಷ್ ಶರ್ಮಾ ಸಿನಿಮಾದಿಂದ ಹೊರನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸುದ್ದಿ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೀಗ ಸಿನಿಮಾಗೆ ಸೌತ್‌ನ ಸ್ಟಾರ್ ವಿಲನ್ ಆಯ್ಕೆಯಾಗುವ ಮೂಲಕ ಸಿನಿಮಾದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ಸಲ್ಮಾನ್ ಸಿನಿಮಾದಲ್ಲಿ ಈಗಾಗಲೇ ಸೌತ್ ಸ್ಟಾರ್ ನಟಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದರು. ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಪೂಜಾ ಬಳಿಕ ತೆಲುಗು ನಟ ವೆಂಕಟೇಶ್ ಸಿನಿಮಾತಂಡ ಸೇರಿಕೊಂಡಿದ್ದಾರೆ. ಇವರಿಬ್ಬರ ಬಳಿಕ ಇದೀಗ ಮತ್ತೋರ್ವ ಸೌತ್ ಸ್ಟಾರ್ ಸಲ್ಮಾನ್ ಸಿನಿಮಾ ಸೇರಿಕೊಂಡಿದ್ದಾರೆ. ಅದು ಮತ್ಯಾರು ಅಲ್ಲ ದಕ್ಷಿಣ ಭಾರತದ ಖ್ಯಾತ ಖಳನಟ ಜಗಪತಿ ಬಾಬು(Jagapathi Babu). ಹೌದು, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‌ಗೆ ವಿಲನ್ ಆಗಿ ಜಗಪತಿ ಬಾಬು ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ತನ್ನ ಸಿನಿಮಾದಿಂದ ಹೊರನಡೆಯುವಂತೆ ತಂಗಿ ಗಂಡನಿಗೆ ಹೇಳಿದ್ದೇ ಸಲ್ಮಾನ್ ಖಾನ್; ಕಾರಣವೇನು?
ಅಂದಹಾಗೆ ಜಗಪತಿ ಬಾಬು ಈಗಾಗಲೇ ಸಲ್ಮಾನ್ ಖಾನ್ ನಟಿಸಬೇಕಿತ್ತು. ದಬಂಗ್-3 ಸಿನಿಮಾದಲ್ಲಿ ನಟಿಸಲು ಜಗಪತಿ ಬಾಬು ಅವರಿಗೆ ಅಪ್ರೋಚ್ ಮಾಡಲಾಗಿತ್ತು. ಆದರೆ ಡೇಟ್ ಸಮಸ್ಯೆಯಿಂದ ನಟಿಸಿರಲಿಲ್ಲ. ಆದರೀಗ ಸಲ್ಮಾನ್ ಖಾನ್ ಅವರೇ ಆಫರ್ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಜಗಪತಿ ಬಾಬು ನೋ ಎನ್ನದೆ ಚಿತ್ರಕ್ಕೆ ಸಹಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಲ್ಮಾನ್ ವಿರುದ್ಧ ಹೋರಾಡಲು ಜಗಪತಿ ಬಾಬುಗಿಂತ ಉತ್ತ ವಿಲನ್ ಯಾರಿಲ್ಲ ಎಂದು ಅವರನ್ನೇ ಆಯ್ಕೆ ಮಾಡಲಾಗಿದೆ.
ಕಭಿ ಈದ್ ಕಭಿ ದಿವಾಳಿ ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ನಟಿ ಪೂಜಾ ಹೆಗ್ಡೆ ತನ್ನ ಭಾಗದ ಚಿತ್ರೀಕರಣ ಮುಗಿಸಿ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದರು. ಇದೀಗ ವಾಪಾಸ್ ಬಂದಿರುವ ಪೂಜಾ ಚಿತ್ರೀಕರಣ ಸೆಟ್ ಸೇರಿಕೊಂಡಿದ್ದಾರೆ. ಮುಂದಿನ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಆಗ ಜಗಪತಿ ಬಾಬು ಎಂಟ್ರಿ ಕೊಡಲಿದ್ದಾರೆ.
ನಿರ್ಮಾಪಕ, ನಿರ್ದೇಶಕರ ಬಳಿಕ ಸಲ್ಮಾನ್ ಸಿನಿಮಾದಿಂದ ಹೊರ ನಡೆದ ತಂಗಿಯ ಗಂಡ; ಆಯುಷ್ ಜೊತೆ ದಬಂಗ್ ಸ್ಟಾರ್ ಕಿರಿಕ್?
ಅಂದಹಾಗೆ ಸಲ್ಮಾನ್ ಖಾನ್ ಈ ಬಾರಿ ಸೌತ್ ಸ್ಟಾರ್ಸಗೆ ಹೆಚ್ಚು ಮಣೆ ಹಾಕಿದ್ದಾರೆ. ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಸೋತ್ ನ ಅನೇಕ ಕಲಾವಿದರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ಶೆಹನಾಜ್ ಗಿಲ್, ಜಸ್ಸಿ ಗಿಲ್, ರಾಘವೇ ಸಿದ್ಧರ್ಥ್, ಮಾಳವಿಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡತೆ ಆದರೆ ಸಲ್ಮಾನ್ ಖಾನ್ ಈ ವರ್ಷದ ಕೊನೆಯಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.