'ಲವ್ ಬರ್ಡ್ಸ್'ಆಗಿ ಮತ್ತೆ ಅಭಿಮಾನಿಗಳ ಮುಂದೆ ಡಾರ್ಲಿಂಗ್ ಜೋಡಿ; ಕೃಷ್ಣ-ಮಿಲನಾ ಹೊಸ ಸಿನಿಮಾದ ಅಪ್‌ಡೇಟ್

Published : May 25, 2022, 11:05 AM IST
'ಲವ್ ಬರ್ಡ್ಸ್'ಆಗಿ ಮತ್ತೆ ಅಭಿಮಾನಿಗಳ ಮುಂದೆ ಡಾರ್ಲಿಂಗ್ ಜೋಡಿ; ಕೃಷ್ಣ-ಮಿಲನಾ ಹೊಸ ಸಿನಿಮಾದ ಅಪ್‌ಡೇಟ್

ಸಾರಾಂಶ

ಸ್ಯಾಂಡಲ್‌ವುಡ್‌ ನಟ ಡಾರ್ಲಿಂಗ್ ಕೃಷ್ಣ(Darling Krishna) ಹಾಗೂ ನಿರ್ದೇಶಕ ಪಿಸಿ ಶೇಖರ್(PC Shekhar) ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಡಾರ್ಲಿಂಗ್ ಕೃಷ್ಣಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಇದೀಗ ಟೈಟಲ್ ರಿವೀಲ್ ಆಗುವ ಜೊತೆಗೆ ನಾಯಕಿ ಕೂಡ ಫಿಕ್ಸ್ ಆಗಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಡಾರ್ಲಿಂಗ್ ಕೃಷ್ಣ(Darling Krishna) ಹಾಗೂ ನಿರ್ದೇಶಕ ಪಿಸಿ ಶೇಖರ್(PC Shekhar) ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಡಾರ್ಲಿಂಗ್ ಕೃಷ್ಣಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿತ್ತು. ಇದೀಗ ಟೈಟಲ್ ರಿವೀಲ್ ಆಗುವ ಜೊತೆಗೆ ನಾಯಕಿ ಕೂಡ ಫಿಕ್ಸ್ ಆಗಿದ್ದಾರೆ. ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾಗೆ ಲವ್ ಬರ್ಡ್ಸ್(Love Birds)ಎಂದು ಹೆಸರಿಡಲಾಗಿದೆ. ಲವ್ ಬರ್ಡ್ಸ್ ನಲ್ಲಿ ನಾಯಕಿಯಗಿ ಮಿಲನಾ ನಾಗರಾಜ್(Milana Nagaraj) ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಡಾರ್ಲಿಂಗ್ ಜೋಡಿ ಲವ್ ಬರ್ಡ್ಸ್ ಆಗಿ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಲವ್ ಮಾಕ್‌ಟೇಲ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡಿರುವ ಈ ಜೋಡಿ ನಂತರ ಲವ್ ಮಾಕ್ ಟೇಲ್-2 ಮೂಲಕ ದೊಡ್ಡ ಸಕ್ಸಸ್ ಕಂಡರು. ಇದೀಗ ಲವ್ ಬರ್ಡ್ಸ್ ಮೂಲಕ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮದುವೆಯಾದ ಮೇಲಿನ ಪ್ರೀತಿಯ ಕಥೆಯನ್ನು ಹೊಂದಿದೆ ಎನ್ನಲಾಗಿದೆ. ಈ ಕಥೆಗೆ ಸ್ಯಾಂಡಲ್ ವುಡ್ ನ ಡಾರ್ಲಿಂಗ್ ಜೋಡಿ ಪಕ್ಕಾ ಸೂಟ್ ಆಗ್ತಾರೆ ಎನ್ನುವ ಕಾರಣಕ್ಕೆ ಇಬ್ಬರನ್ನು ಆಯ್ಕೆ ಮಾಡಿದೆ ಸಿನಿಮಾತಂಡ.

ಅಂದಹಾಗೆ ಈ ಸಿನಿಮಾಗೆ ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ. ತನ್ನ ಹೊಸ ಸಿನಿಮಾದ ಬಗ್ಗೆ ನಟಿ ಮಿಲನಾ ನಾಗರಾಜ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಕೃಷ್ಣ ಮತ್ತು ನಾನು ಒಟ್ಟಿಗೆ ನಟಿಸಬೇಕೆಂದು ಕೊಂಡಿದ್ದೆವು. ಸ್ಕ್ರಿಪ್ಟ್ ಬರೆಯಲು ಪ್ಲಾನ್ ಮಾಡುತ್ತಿದ್ದೆವು. ಆದರೆ ಇಬ್ಬರೂ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀವಿ. ಹಾಗಾಗಿ ಅದು ತಡವಾಗುತ್ತಿದೆ. ಆದರೀಗ ಈ ಸ್ಕ್ರಿಪ್ಟ್ ಕೇಳಿದಾಗ ಇಷ್ಟ ಆಯಿತು. ಇದು ಹೊಸ ರೀತಿಯ ಸಿನಿಮಾ. ಪಿಸಿ ಶೇಖರ್ ಜೊತೆ ನಾನು ಕೆಲಸ ಮಾಡುತ್ತಿರುವುದು ಖುಷಿಯಾಗಿದೆ' ಎಂದು ಹೇಳಿದ್ದಾರೆ.

ಸಿಂಗಾಪುರದಲ್ಲಿ ಕೃಷ್ಣ- ಮಿಲನಾ; ಡಾರ್ಲಿಂಗ್ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ವೈರಲ್

ಮತ್ತೊಮ್ಮೆ ಡಾರ್ಲಿಂಗ್ ಜೋಡಿಯನ್ನು ಒಟ್ಟಿಗೆ ತೆರೆಮೇಲೆ ತರುತ್ತಿವುದು ತುಂಬಾ ಸಂತಸವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿ, 'ಈ ಸಿನಿಮಾ ಆಧುನಿಕ ವಿವಾಹಿತ ದಂಪತಿಗಳ ಬಗ್ಗೆ ಇದೆ. ಚಿಕ್ಕ ಪುಟ್ಟ ಜಗಳ, ಕಳೆದ ಎರಡು ವರ್ಷಗಳಲ್ಲಾದ ಬದಲಾವಣೆ, ಮಹಿಳೆಯರು ಪುರುಷರ ಮೇಲೆ ಅವಲಂಬಿತರಲ್ಲ, ಅವರು ಆರ್ಥಿಕವಾಗಿ ಸ್ವತಂತ್ರರು ಎನ್ನುವ ಕಾನ್ಸೆಪ್ಟ್ ಮೇಲೆ ಸಿನಿಮಾ ಮೂಡಿಬರಲಿದೆ' ಎಂದು ಹೇಳಿದ್ದಾರೆ.


ಸಿನಿಮಾ ಯಶಸ್ಸಿನ ಬೆನ್ನಲ್ಲೇ ಮಗು ಬಗ್ಗೆ ಮಾತನಾಡಿದ ಮಿಲನಾ, ಡಾರ್ಲಿಂಗ್ ಕೃಷ್ಣ!

 

ಅಂದಹಾಗೆ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪಿಸಿ ಶೇಖರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್‌ನ ಒಂಬತ್ತನೇ ಸಿನಿಮಾ ಇದಾಗಿದೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಲವ್ ಮಾಕ್ ಟೇಲ್ ಸಕ್ಸಸ್ ನಲ್ಲಿರುವ ಈ ಜೋಡಿ ಲವ್ ಬರ್ಡ್ಸ್ ಆಗಿಯೂ ಅಭಿಮಾನಿಗಳ ಹೃದಯ ಗೆಲ್ತಾರಾ ಎಂದು ಕಾದು ನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?