
ಭಾರತೀಯ ಚಿತ್ರರಂಗದಲ್ಲಿ ಪಂಚ ಭಾಷೆಗಳಲ್ಲಿ ಬಿಡುಗಡೆ ಆಗಿರುವ ರಣಬೀರ್ ಕಪೂರ್ ಅವರ ಅನಿಮಲ್ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿದ ತೃಪ್ರಿ ದಿಮ್ರಿ ಅವರು ತುಂಬು ಬಟ್ಟೆ ತೊಟ್ಟಿದ್ದಕ್ಕಿಂತ ತುಂಡುಡುಗೆ ತೊಟ್ಟಿದ್ದೇ ಅಧಿಕವಾಗಿದೆ. ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಟಿಸಿದರೂ ಯಶಸ್ಸು ಸಿಗದ ನಟಿಗೆ, ರಣಬೀರ್ ಜೊತೆಗಿನ 'ನ್ಯೂಡ್ ಸೀನ್' ನಂತರ ಪಡ್ಡೆಗಳ ಲೇಟೆಸ್ಟ್ ಕ್ರಶ್ ಆಗಿದ್ದಾರೆ. ಅನಿಮಲ್ ಚಿತ್ರದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿರುವ ನಟಿ ತೃಪ್ತಿ ದಿಮ್ರಿಗೆ ಈಗ ನ್ಯಾಷನಲ್ ಕ್ರಷ್ ಪಟ್ಟ ಸಿಕ್ಕಿದೆ. ಚಿತ್ರದ ನಾಯಕಿ ನಟಿ ರಶ್ಮಿಕಾ ಮಂದಣ್ಣಗಿಂತಲೂ ತೃಪ್ತಿ ದಿಮ್ರಿ ಹೆಸರು, ನಟನೆ ಹೆಚ್ಚು ಫೇಮಸ್ ಆಗಿದೆ. ಈಗ ಬಿ-ಟೌನ್ನಲ್ಲಿ ನಟಿ ತೃಪ್ತಿ ದಿಮ್ರಿಯದ್ದೇ ಹವಾ.
ಕೆಲ ದಿನಗಳ ಹಿಂದೆ ಹೀಗೊಬ್ಬ ನಟಿ ಇದ್ದಳೆಂದು ತಿಳಿಯದವರೂ ಇದೀಗ ಈಕೆಯ ಬಗ್ಗೆ ಗೂಗಲ್ನಲ್ಲಿ ಸರ್ಚ್ ಶುರುವಿಟ್ಟುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗದಿದ್ದ ತೃಪ್ತಿ ರಾತ್ರೋರಾತ್ರಿ 20 ಲಕ್ಷ ಫಾಲೋವರ್ಸ್ ಅಭಿಮಾನಿ (Fans)ಯಾಗಿದ್ದಾರೆ. ಇದೇ ಡಿಸೆಂಬರ್1 ರಂದು ಬಿಡುಗಡೆಯಾಗಿರುವ ನಟ ರಣಬೀರ್ ಕಪೂರ್ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರ ಅನಿಮಲ್ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಇದಾಗಲೇ ಐದಾರು ದಿನಗಳಲ್ಲಿಯೇ ಜಗತ್ತಿನಾದ್ಯಂತ 500 ಕೋಟಿ ರೂಪಾಯಿ ಗಳಿಸಿದೆ.
'ಅನಿಮಲ್' ಸಿನಿಮಾದಲ್ಲಿ ಪೂರ್ತಿ ಬೆತ್ತಲಾಗಿ ನಟಿಸಬೇಕೆಂದು ಬಯಸಿದ್ದರಂತೆ ಈ ಖ್ಯಾತ ನಟನ ಪುತ್ರಿ!
ತೃಪ್ತಿ ದಿಮ್ರಿಗೆ ಸೌತ್‌ನ ಈ ನಟನ ಜೊತೆ ರೋಮ್ಯಾನ್ಸ್ ಮಾಡೋ ಆಸೆಯಂತೆ
ರಣಬೀರ್ ಜೊತೆಗಿನ 'ನ್ಯೂಡ್ ಸೀನ್' ತೃಪ್ತಿ ದಿಮ್ರಿಯನ್ನು ಫೇಮಸ್ಸಾಗಿಸಿದೆ. ಈಗ ಭಾರತೀಯ ಹಾಟ್ ನಟಿಯರ ಸಾಲಿನಲ್ಲಿ ತೃಪ್ತಿ ದಿಮ್ರಿ ಕೂಡ ಸೇರಿಕೊಂಡಿದ್ದಾರೆ. ಅನಿಮಲ್ ಚಿತ್ರದ ನಂತರ ತೃಪ್ತಿ ದಿಮ್ರಿ ಅವರ ಮಾದಕ ನೋಟದತ್ತ ಎಲ್ಲರ ಕಣ್ಣುಗಳು ಬಿದ್ದಿವೆ. ಈ ನಟಿಯ ಎಲ್ಲ ಅವತಾರದ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಆದ್ರೆ ನಟಿಗೆ ಮಾತ್ರ ರಣಬೀರ್ ಕಪೂರ್ ಜೊತೆ ಬೆತ್ತಲಾದ ಬಳಿಕ ಸೌತ್‌ನ ಈ ನಟನ ಜೊತೆ ನಟಿಸೋ ಆಸೆಯಂತೆ.
ತೃಪ್ತಿ ದಿಮ್ರಿಗೆ ಈಗ ಭಾರತೀಯ ಚಿತ್ರರಂಗದ ಹಲವು ಭಾಷೆಗಳಿಂದ ನಟನೆಗೆ ಆಫರ್ ಬರುತ್ತಿವೆ. ಆದ್ರೆ ತೃಪ್ತಿಗೆ ಮಾತ್ರ ದಕ್ಷಿಣದ ಜನಪ್ರಿಯ ಸೂಪರ್‌ಸ್ಟಾರ್‌ನೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ತಮ್ಮ ಮೊದಲ ಸೌತ್ ಸಿನಿಮಾದಲ್ಲಿ ಯಾವ ನಟನೊಂದಿಗೆ ಪಾದಾರ್ಪಣೆ ಮಾಡಲು ಬಯಸುತ್ತೀರಿ ಎಂದು ಕೇಳಲಾಯಿತು. ತೃಪ್ತಿ ತಕ್ಷಣವೇ ಜೂನಿಯರ್ ಎನ್ಟಿಆರ್ ಎಂದು ತಿಳಿಸಿದರು.
SS ರಾಜಮೌಳಿಯವರ ಜಾಗತಿಕ ಬ್ಲಾಕ್‌ಬಸ್ಟರ್ RRR ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೊಮರಂ ಭೀಮ್ ಆಗಿ ಜೂನಿಯರ್ NTR ಹಿಂದಿ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಚಿತ್ರದಲ್ಲಿ ಅಲ್ಲೂರಿ ಸೀತಾರಾಮ್ ರಾಜು ಪಾತ್ರದಲ್ಲಿ ನಟಿಸಿದ ಅವರ ಸಮಕಾಲೀನ ಸೂಪರ್‌ಸ್ಟಾರ್ ರಾಮ್ ಚರಣ್ ಅವರೊಂದಿಗಿನ ಅಭಿನಯದ ಭಾರತದಾದ್ಯಂತ ಜನರ ಹೃದಯವನ್ನು ಗೆದ್ದಿದೆ. ಅದೇ ರೀತಿ ತೃಪ್ತಿ ಸಹ ಜೂನಿಯರ್ NTRಗೆ ಫಿದಾ ಆಗಿದ್ದು, ಜೊತೆಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ತೃಪ್ತಿ ದಿಮ್ರಿ, ಅನಿಮಲ್‌ಗಿಂತ ಮೊದಲು, 2017ರಲ್ಲಿ 'ಮಾಮ್' ಮತ್ತು 'ಪೋಸ್ಟರ್ ಬಾಯ್ಸ್'ನಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2018ರ ಸಿನಿಮಾ, ಲೈಲಾ ಮಜ್ನು ಅವರ ನಟನಾ ಕೌಶಲ್ಯವನ್ನು ತೋರಿಸಿತು. ನಂತರ ಅವರು 2020 ಮತ್ತು 2022ರಲ್ಲಿ ಎರಡು ನೆಟ್‌ಫ್ಲಿಕ್ಸ್ ಚಲನಚಿತ್ರಗಳಾದ ಬುಲ್‌ಬುಲ್ ಮತ್ತು ಕ್ವಾಲಾದಲ್ಲಿ ತಮ್ಮ ಅಭಿನಯದಿಂದ ವೀಕ್ಷಕರ ಗಮನ ಸೆಳೆದರು.
ಮುಂದಿನ ವರ್ಷ ವಿಕ್ಕಿ ಕೌಶಲ್ ಅವರೊಂದಿಗೆ 'ಮೇರೆ ಮೆಹಬೂಬ್ ಮೇರೆ ಸನಮ್' ಎಂಬ ಸಿನಿಮಾದಲ್ಲಿ ಹಾಗೂ ರಾಜ್‌ಕುಮಾರ್ ರಾವ್ ಅವರೊಂದಿಗಿನ 'ವಿಕ್ಕಿ ವಿದ್ಯಾ ಕಾ ವೋ ವಾಲಾ' ಸಿನಿಮಾದಲ್ಲಿಯೂ ತೃಪ್ತಿ ನಟಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.