ಪತಿಯ ಪ್ರೋತ್ಸಾಹದಿಂದ ಬೆತ್ತಲಾಗಿ ಸೆಕ್ಸ್​ ಸೀನ್​ ಆರಾಮಾಗಿ ಮಾಡಿದೆ: ಲಸ್ಟ್​ ಸ್ಟೋರಿಸ್​ ನಟಿ ಅಮೃತಾ ಸುಭಾಷ್‌!

By Suvarna News  |  First Published Dec 14, 2023, 12:02 PM IST

ಲಸ್ಟ್​ ಸ್ಟೋರೀಸ್​ ಚಿತ್ರದಲ್ಲಿ ಸೆಕ್ಸ್​ ಸೀನ್​ ಮಾಡುವಾಗ ಭಯಪಟ್ಟ ನಟಿ ಅಮೃತಾ ಸುಭಾಷ್​ ಅವರಿಗೆ ಪತಿಯೇ ಪ್ರೋತ್ಸಾಹ ನೀಡಿದ್ರಂತೆ. ಈ ಕುರಿತು ನಟಿ ಹೇಳಿದ್ದೇನು? 
 


ಖ್ಯಾತ ನಟಿ ತಮನ್ನಾ, ನೀನಾ ಗುಪ್ತಾ, ಕಾಜೋಲ್, ವಿಜಯ್ ವರ್ಮಾ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ನಟಿಸಿರುವ ಲಸ್ಟ್ ಸ್ಟೋರಿ 2 ಕಳೆದ ಜುಲೈನಲ್ಲಿ ರಿಲೀಸ್ ಆಗಿದ್ದು ಇಂದಿಗೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ.  ಸ್ಟಾರ್ ನಟಿಯರು ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ತಮನ್ನಾ ಮೊದಲ ಬಾರಿಗೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೆಯಲ್ಲದೇ ವಿಜಯ್ ವರ್ಮಾ ಜೊತೆ ಬೆಡ್ ರೂಮ್ ಸೀನ್‌ಗಳಲ್ಲಿ ಮಾಡಿದ್ದಾರೆ. ತಮನ್ನಾ ಕಿಸ್ಸಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿವೆ.  ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದ 'ಲಸ್ಟ್ ಸ್ಟೋರಿ'ಯಲ್ಲಿನ ಬೋಲ್ಡ್​ ದೃಶ್ಯಗಳಿಗೆ ಫ್ಯಾನ್ಸ್​ ಉಫ್​ ಎನ್ನುತ್ತಿದ್ದಾರೆ. 

ಈ ಹಿಂದೆ, ಲಸ್ಟ್ ಸ್ಟೋರಿ 2ನಲ್ಲಿ ಹಾಟ್ ಸೀನ್ ಮಾಡುವಾಗ ಹೇಗನಿಸಿತು ಎಂದು ತಮನ್ನಾ ಹೇಳಿದ್ದರು.  ವಿಜಯ್ ವರ್ಮಾ ತುಂಬಾ ಸೇಫ್ ಫೀಲ್ ನೀಡಿದ್ರು ಎಂದು ಹೇಳಿದ್ದರು ತಮನ್ನಾ ಹೇಳಿದ್ದರು. 'ನಟರ ಜೊತೆ ನಟಿಸುವಾಗ ನನಗೆ ಯಾವಾಗಲೂ ತುಂಬಾ ಸೇಫ್ ಅಂತ ಅನಿಸುತ್ತಿರಲಿಲ್ಲ. ಕಲಾವಿದರಿಗೆ ನಿಜವಾಗಿಯೂ ಇದು ಮುಖ್ಯ. ನೀವು ನಿಜಕ್ಕೂ ಅಂತ ಸುರಕ್ಷತತೆಯನ್ನು ಅನುಭವಿಸಬೇಕು. ಇದು ವಿಶೇಷವಾಗಿ ಇಂತಹ ಚಿತ್ರದಲ್ಲಿ ನೀವು ತೆಗೆದುಕೊಳ್ಳುವ ಜಂಪ್ ಆಗಿದೆ. ನಾನು ಏನನ್ನೂ ಹೇಳಲು, ಏನನ್ನೂ ಮಾಡಲು, ಒಂದು ನಿರ್ದಿಷ್ಟ ರೀತಿಯಲ್ಲಿ ಭಾವೋದ್ರಿಕ್ತನಾಗಲು ಹೆದರಿಲ್ಲ ನನಗೆ ತುಂಬಾ ಸೇಫ್ ಫೀಲ್ ಮಾಡಿದ್ರು. ತುಂಬಾ ಸುಲಭ ಎನ್ನುವ ಭಾವನೆ ಮುಡಿಸಿದ್ರು. ಅದು ತುಂಬಾ ಇಷ್ಟವಾಯಿತು' ಎಂದು ವಿಜಯ್ ವರ್ಮಾ ಬಗ್ಗೆ ಹೇಳಿದ್ದರು.

Tap to resize

Latest Videos

ಅರೆನಗ್ನ ನಟಿಯರನ್ನೆಲ್ಲಾ ಹಿಂದಿಕ್ಕಿದ 'ಅನಿಮಲ್' ಬೆತ್ತಲೆ ರಾಣಿ ತೃಪ್ತಿಗೆ ಸಿಕ್ತು ಇನ್ನೊಂದು ಪ್ರತಿಷ್ಠಿತ ಸ್ಥಾನ!

ಇದೀಗ, ಇನ್ನೋರ್ವ ನಟಿ ಶೂಟಿಂಗ್​ ಅನುಭವ ಹಂಚಿಕೊಂಡಿದ್ದಾರೆ.ಲಸ್ಟ್‌ ಸ್ಟೋರೀಸ್‌ 2ನಲ್ಲಿ ಮಿರರ್‌ ಎಂಬ ಒಂದು ಕಥೆಯಿದೆ. ಅದರಲ್ಲಿನ ಸೆಕ್ಸ್​ ದೃಶ್ಯಗಳ ಕುರಿತು  ಅಮೃತಾ ಅನುಭವ ಬಿಚ್ಚಿಟ್ಟಿದ್ದಾರೆ. ತಮ್ಮ ಸಹನಟ ಶ್ರೀಕಾಂತ್ ಯಾದವ್ ಜೊತೆ ಸೆಕ್ಸ್​ ಸೀನ್​ ಮಾಡುವಾಗಿನ ತಮ್ಮ ಅನುಭವದ ಕುರಿತು ಅವರು ಮಾತನಾಡಿದ್ದಾರೆ. ಈ ಚಿತ್ರದಲ್ಲಿ ಶ್ರೀಕಾಂತ್​ ಮತ್ತು ಅಮೃತಾ ಪತಿ-ಪತ್ನಿಯಾಗಿ ನಟಿಸಿದ್ದಾರೆ. ಶ್ರೀಕಾಂತ್​  ನನ್ನ ಆತ್ಮೀಯ ಸ್ನೇಹಿತ ಕೂಡ ಹೌದು. ಆದರೆ ಚಿತ್ರದಲ್ಲಿ  ಹಲವಾರು ಇಂಟಿಮೆಟ್‌ ದೃಶ್ಯಗಳಲ್ಲಿ ಆತನ ಜೊತೆ ಕಾಣಿಸಿಕೊಳ್ಳಬೇಕಿತ್ತು.  ಆತ್ಮೀಯ ಸ್ನೇಹಿತನ ಜತೆ ಇಂಥ ಬೆತ್ತಲೆ  ದೃಶ್ಯಗಳಲ್ಲಿ ನಟಿಸಲು  ಇರುಸುಮುರುಸು ಆಗಿತ್ತು. ಆದ್ದರಿಂದ ನರ್ವಸ್​ ಕೂಡ ಆಗಿದ್ದೆ. ಆದ್ದರಿಂದ  ನಟಿಸಲು ನಿರ್ದೇಶಕರಲ್ಲಿ ನಾನು ಕೊಂಚ ಸಮಯ ಕೇಳುತ್ತಿದ್ದೆ ಎಂದು ನಟಿ ಹೇಳಿದ್ದಾರೆ.
 
ಶ್ರೀಕಾಂತ್​ ಕೂಡ ನನ್ನ ಜೊತೆ ಬೆತ್ತಲಾಗಲು  ನರ್ವಸ್‌ ಆಗಿದ್ದ.  ನಾನು ಈ ದೃಶ್ಯದ ಸ್ಕ್ರಿಪ್ಟ್‌ ಓದುತ್ತಿದ್ದಾಗ ಹಲವು ಇಂಟಿಮೆಂಟ್‌ ಸೀನ್‌ಗಳು ಇರುವುದು ಅರಿವಾಯ್ತು. ನನಗೆ ಇದು ಭಯ ಹುಟ್ಟಿಸಿತು. ಇದರ ಬಗ್ಗೆ ನನ್ನ ಪತಿ ಕೊಕೊಗೆ ವಿಷಯ ತಿಳಿಸಿದೆ. ನನ್ನಿಂದ ಇದು ಸಾಧ್ಯವಿಲ್ಲ ಎಂದೆ. ಆದರೆ ಇಂಥ ದೃಶ್ಯಗಳನ್ನು ನೀನು ನಿರಾಯಾಸವಾಗಿ ಮಾಡಬಹುದು. ಭಯಪಡಬೇಡ. ಯಾವುದೇ ಮುಜುಗರ ಇಲ್ಲದೇ ಸೆಕ್ಸ್​ ಸೀನ್​ ಮಾಡು ಎಂದು ಹುರಿದುಂಬಿಸಿದರು. ಇದರಿಂದ ನಾನು ಆರಾಮಾಗಿ ಈ ದೃಶ್ಯ ಮಾಡಲು ಸಾಧ್ಯವಾಯಿತು ಎಂದು ನಟಿ ಹೇಳಿದ್ದಾರೆ. ಈ ಲಸ್ಟ್‌ ಸ್ಟೋರೀಸ್‌ ಗೋಷ್ಠಿಯಲ್ಲಿ ಕಾಜೋಲ್‌, ಜಯದೀಪ್‌, ಕರೀನಾ ಕಪೂರ್‌, ತಿಲೊತ್ತಮ ಶೋಮ್‌, ಸಿದ್ಧಾರ್ಥ ಮಲ್ಹೋತ್ರಾ ಮತ್ತು ಸಾನ್ಯಾ ಮಲ್ಹೋತ್ರಾ ಮುಂತಾದವರು ಭಾಗವಹಿಸಿದ್ದಾರೆ. ಅಂದಹಾಗೆ, ಲಸ್ಟ್ ಸ್ಟೋರೀಸ್ 2  ಲಸ್ಟ್‌ ಸ್ಟೋರೀಸ್‌  ಸಿನಿಮಾದ ಎರಡನೇ ಕಂತು. ಆರ್. ಬಾಲ್ಕಿ, ಕೊಂಕಣ ಸೇನ್ ಶರ್ಮಾ, ಅಮಿತ್ ರವೀಂದ್ರನಾಥ್ ಶರ್ಮಾ ಮತ್ತು ಸುಜೋಯ್ ಘೋಷ್ ನಿರ್ದೇಶಿಸಿದ ನಾಲ್ಕು ಕಿರುಚಿತ್ರಗಳನ್ನು ಈ ಲಸ್ಟ್‌ ಸ್ಟೋರೀಸ್‌ 2 ಒಳಗೊಂಡಿದೆ.  

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮದ್ವೆ ಗುಟ್ಟಾಗಿ ನಡೆದೋಯ್ತಾ? ವೈರಲ್​ ವಿಡಿಯೋ ನೋಡಿ ಭಾರಿ ಚರ್ಚೆ

click me!