ಸಿದ್ಧಾರ್ಥ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ನಟಿ ಅದಿತಿ ರಾವ್ ಹೈದರಿ

Published : Mar 06, 2023, 04:47 PM IST
ಸಿದ್ಧಾರ್ಥ್ ಜೊತೆ ಡೇಟಿಂಗ್ ವದಂತಿ; ಮೌನ ಮುರಿದ ನಟಿ ಅದಿತಿ ರಾವ್ ಹೈದರಿ

ಸಾರಾಂಶ

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಮತ್ತು ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಅದಿತಿ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಮತ್ತು ಕಾಲಿವುಡ್ ಸ್ಟಾರ್ ಸಿದ್ಧಾರ್ಥ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಕದ್ದುಮುಚ್ಚಿ  ಓಡಾಡುತ್ತಿದ್ದ ಈ ಜೋಡಿ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೀಗ ಇಬ್ಬರೂ ರಾಜರೋಶವಾಗಿ ಓಡಾಡುತ್ತಿದ್ದಾರೆ, ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಪ್ರೀತಿ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗಷ್ಟೆ ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ಮಸ್ತ್ ಡಾನ್ಸ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಡಾನ್ಸ್ ವಿಡಿಯೋ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಪ್ರೇಮದ ವಿಚಾರ ಜೋರಾಗಿ ಸದ್ದು ಮಾಡಲು ಪ್ರಾರಂಭಿಸಿದೆ. 

ಇಬ್ಬರೂ ಮಹಾ ಸಮುದ್ರಾಂ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ. ಸದ್ಯ ಅದಿತಿ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ವೆಬ್ ಸೀರಿಸ್ ಕೂಡ ಮಾಡುತ್ತಿದ್ದಾರೆ. ತಾಜ್ ಮತ್ತು ಅನಾರ್ಕಲಿ ಯಲ್ಲಿ ಬ್ಯುಸಿಯಾಗಿದ್ದಾರೆ. ಈ ಸೀರಿಸ್ ವಿಚಾರವಾಗಿ ಅದಿತಿ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಸಂದರ್ಶನದಲ್ಲಿ ನಟ ಅದಿತಿ, ಸಿದ್ದಾರ್ಥ್ ಜೊತೆಗಿನ ಡೇಟಿಂಗ್ ವದಂತಿ ಬಗ್ಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ "ನಾನು ಸಿನಿಮಾರಂಗಕ್ಕೆ ಕಾಲಿಟ್ಟಾಗಿನಿಂದ ಈ ರೀತಿಯ ಹಲವಾರು ವದಂತಿಗಳನ್ನು ಕೇಳುತ್ತಿದ್ದೇನೆ. ಆದರೆ ನಾನು ಆ ಕಡೆ ಹೆಚ್ಚು ಗಮನ ಹರಿಸಲು ಬಯಸಲ್ಲ. ಸತ್ಯ ಏನಿರುತ್ತದೆ ಎಂದು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ, ತಮಗೆ ಅನಿಸಿದ್ದನ್ನು ಹಾಗೆ ಮಾತನಾಡುತ್ತಾರೆ' ಎಂದು ಹೇಳಿದರು. 

ಸಿದ್ಧಾರ್ಥ್ ಜೊತೆಗಿನ ಲಿಂಕ್ ಅಪ್ ವದಂತಿಯನ್ನು ಅದಿತಿ ತಳ್ಳಿ ಹಾಕಿದರು.  ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ವದಂತಿಗೆ ಯಾವುದೇ ಸತ್ಯವಿಲ್ಲ ಎಂದು ಹೇಳಿದರು. ಸಿದ್ಧಾರ್ಥ್-ಕಿಯಾರಾ, ರಣಬೀರ್-ಆಲಿಯಾ, ವಿಕ್ಕಿ-ಕತ್ರಿನಾ ಹಾಗೆ ಸಿದ್ಧಾರ್ಥ್ ಮತ್ತು ಅದಿತಿ ಇ್ಬಬರೂ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿದರು.

ಸಮಂತಾ ಎಕ್ಸ್ ಬಾಯ್‌ಫ್ರೆಂಡ್ ಜೊತೆ ಪ್ರೀತಿಯಲ್ಲಿ ಬಿದ್ದ ನಟಿ ಅದಿತಿ ರಾವ್ ಹೈದರಿ

ಅದಿತಿ ಮತ್ತು ಸಿದ್ಧಾರ್ಥ್ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದಿತಿ ಸದ್ಯ ಸೌತ್ ಸಿನಿರಂಗದಲ್ಲಿ ನಿರತರಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಅದಿತಿ ಉತ್ತಮ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅದಿತಿ, ಸಿದ್ಧಾರ್ಥ್ ಜೊತೆ ಮಹಾ ಸಮುದ್ರಂದಲ್ಲಿ ನಟಿಸಿದ್ದರು. ಇದೇ ಸಿನಿಮಾದ ಸೆಟ್ ನಲ್ಲಿ ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು ಎನ್ನಲಾಗುತ್ತು. ಆದರೀಗ ಅದಿತಿ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. 

ಅದಿತಿ ಜೊತೆ ಸಿದ್ಧಾರ್ಥ್ ಮಸ್ತ್ ಡಾನ್ಸ್; ಲವ್‌ಬರ್ಡ್ಸ್ ಕ್ಯೂಟ್ ವಿಡಿಯೋ ವೈರಲ್

ಮದುವೆಯಾಗಿ ವಿಚ್ಛೇದನ ಪಡೆದಿರುವ ನಟಿ

ಅದಿತಿ ರಾವ್ ಹೈದರಿ ಬಗ್ಗೆ ಹೇಳುವುದಾದರೆ ನಟಿ ಈಗಾಗಲೇ ಮದುವೆಯಾಗಿದ್ದು ಪತಿಯಿಂದ ದೂರ ಆಗಿದ್ದಾರೆ. 2011ರಲ್ಲಿ ಅದಿತಿ ನಟ ಸತ್ಯದೀಪ್ ಮಿಶ್ರ ಜೊತೆ ಹಸೆಮಣೆ ಏರಿದ್ದರು. ಆದರೆ ಮದುವೆಯಾಗಿ ಎರಡು ವರ್ಷದಲ್ಲೇ ಪತಿಯಿಂದ ವಿಚ್ಛೇದನ ಪಡೆದು ದೂರ ಆದರು. ಬಳಿಕ ಸಿಂಗಲ್ ಆಗಿದ್ದ ಅದಿತಿ ಇದೀಗ ಸಿದ್ಧಾರ್ಥ್ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಸಿದ್ಧಾರ್ಥ್ ಬಗ್ಗೆ

ಇನ್ನು ಸಿದ್ಧಾರ್ಥ್ ಬಗ್ಗೆ ಹೇಳುವುದಾದರೆ ಸಿದ್ಧಾರ್ಥ್ 2003ರಲ್ಲಿ ಮೇಘನಾ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆ ಆಗಿ ಕೆಲವೇ ವರ್ಷಗಳಲ್ಲಿ 2007ರಲ್ಲಿ ಇಬ್ಬರು ವಿಚ್ಛೇದನ ಪಡೆದು ದೂರ ಆದರು. ಬಳಿಕ ಸಿದ್ದಾರ್ಥ್ ನಟಿ ಸಮಂತಾ ಜೊತೆ ಪ್ರೀತಿಯಲ್ಲಿದ್ದರು. ಆದರೆ ಸಮಂತಾ ಅವರಿಂದನೂ ದೂರ ಆಗಿ ಸಿಂಗಲ್ ಆಗಿದ್ದರು. ಇದೀಗ ಅದಿತಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.   
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?