ವೆಡ್ಡಿಂಗ್​ ಡೆಸ್ಟಿನೇಷನ್​ ಬಿಟ್ಟು ಪುರಾತನ ದೇಗುಲದಲ್ಲಿ ಅದಿತಿ ಮದ್ವೆ: ರಾಜವಂಶಸ್ಥೆ ನಟಿಯ ಹಿನ್ನೆಲೆ ಕೆದಕಿದಷ್ಟೂ ರೋಚಕ!

By Suchethana D  |  First Published Aug 31, 2024, 5:52 PM IST

ಬಾಲಿವುಡ್​ ನಟಿ ಅದಿತಿ ರಾವ್​ ಹೈದರಿ ಮತ್ತು ತಮಿಳು ನಟ ಸಿದ್ಧಾರ್ಥ್​ ಮದುವೆ 400 ವರ್ಷ ಹಳೆಯ ದೇಗುಲದಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಎರಡು ರಾಜರ ಕುಟುಂಬಸ್ಥಳಾದ ನಟಿಯ ರೋಚಕ ಹಿನ್ನೆಲೆ ಇಲ್ಲಿದೆ... 
 


ಕಳೆದ ಮಾರ್ಚ್​ ತಿಂಗಳಿನಲ್ಲಿ ತಮಿಳು ನಟ ಸಿದ್ಧಾರ್ಥ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಾಲಿವುಡ್​ ನಟಿ ಅದಿತಿ ರಾವ್​ ಹೈದರಿ ಇನ್ನೊಂದರೆಡು ತಿಂಗಳಿನಲ್ಲಿ ತೆಲಂಗಾಣದ 400 ವರ್ಷ ಹಳೆಯ ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ಹೇಳಿದ್ದಾರೆ.  ಚಿತ್ರ ತಾರೆಯರು ಮ್ಯಾರೇಜ್​ ಡೆಸ್ಟಿನೇಷನ್​ ಎಂದು ವಿದೇಶ ಸೇರಿದಂತೆ ಭಾರತದಲ್ಲಿನ ವಿವಿಧ ಪ್ರದೇಶಗಳ ತಡಕಾಟದಲ್ಲಿ ತೊಡಗುವುದು ಸಹಜ. ಅದರಲ್ಲಿಯೂ ಹಲವು ತಾರೆಯರು ರಾಜಸ್ಥಾನದಲ್ಲಿ ಮದುವೆಯಾಗುವುದು ಇದೆ. ಆದರೆ ನಟಿ ಇದ್ಯಾವುದೂ ನಮಗೆ ಬೇಡ ಎನ್ನುತ್ತಲೇ ತೆಲಂಗಾಣ ರಾಜ್ಯದ ವನಪರ್ತಿಯಲ್ಲಿ 400 ವರ್ಷಗಳಷ್ಟು ಹಳೆಯದಾದ ದೇವಾಲಯ ಎಂದರೆ ನನಗೂ ನಮ್ಮ ಕುಟುಂಬದವರಿಗೂ ಬಹಳ ಇಷ್ಟ. ನಾವು ಅಲ್ಲಿಯೇ ಮದುವೆ ಆದರೂ ಆಗಬಹುದು ಎಂದು ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಶೀಘ್ರದಲ್ಲೇ ಮದುವೆ ದಿನಾಂಕ ಹಾಗೂ ಸ್ಥಳವನ್ನು ಘೋಷಿಸುತ್ತೇವೆ ಎಂದೂ ತಿಳಿಸಿದ್ದಾರೆ.  ಅಜಯ್ ಭೂಪತಿ ನಿರ್ದೇಶನದ, 2021 ರಲ್ಲಿ ತೆರೆ ಕಂಡ ಮಹಾ ಸಮುದ್ರಂ ಸೆಟ್‌ನಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಮೊದಲ ಬಾರಿಗೆ ಭೇಟಿಯಾದರು. ಅಲ್ಲಿಂದ ಶುರುವಾದ ಪ್ರೀತಿ ಈಗ ದಾಂಪತ್ಯ ಜೀವನದವರೆಗೆ ಬಂದು ನಿಂತಿದೆ. 
 
ಅಷ್ಟಕ್ಕೂ ನಟಿ ಅದಿತಿ ರಾವ್​ ಹೈದರಿ ಅವರು ರಾಜವಂಶಸ್ಥೆ. ಇವರ ಬದುಕಿನ ಚರಿತ್ರೆಯೇ ಬಲು ರೋಚಕವಾಗಿದೆ.  1986 ರಂದು ಹೈದರಾಬಾದ್‌ನ ರಾಜ ಮನೆತನದಲ್ಲಿ ಹುಟ್ಟಿದ್ದಾರೆ ನಟಿ. ಅದಿತಿ ರಾವ್ ಹೈದರಿ ಎರಡು ರಾಜ ಕುಟುಂಬಗಳ ಜೊತೆ ಸಂಬಂಧ ಹೊಂದಿದವರು. ಮೊಹಮ್ಮದ್ ಸಾಹೇಲ್ ಅಕ್ಬರ್ ಹೈದರಿ ಮತ್ತು ರಾಜ ಜೆ.ರಾಮೇಶ್ವರ ರಾವ್ ಕುಟುಂಬಗಳಿಗೆ ಸೇರಿದವರು ಇವರು ಎನ್ನಲಾಗಿದೆ. 1941- 1869 ವರೆಗೆ ಹೈದರಾಬಾದ್ ಪ್ರಧಾನಿ ಆಗಿದ್ದ ಅಕ್ಬರ್ ಹೈದರಿ ಅವರ ಮರಿಮಗಳು ಈಕೆ, ಮಾತ್ರವಲ್ಲದೇ ನಟಿ ಆಮೀರ್​ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಸಂಬಂಧಿಕಳೂ ಹೌದು.  ಅದಿತಿ ಹಾಗೂ ಕಿರಣ್‌ ರಾವ್​ ದಕ್ಷಿಣ ಕನ್ನಡ ಮೂಲದ ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ ಗಿರಿ ಮೊಮ್ಮಕ್ಕಳು. 

ಪೂರ್ಣ ಬೆತ್ತಲಾಗೋಕೆ ರೆಡಿನಾ ಕೇಳಿದ... ಶಾಕಿಂಗ್​ ವಿಷ್ಯ ತಿಳಿಸಿದ ಬಿಗ್​ಬಾಸ್​ ತನಿಷಾ ಕುಪ್ಪಂಡ

Tap to resize

Latest Videos

ಇನ್ನು ತಾಯಿಯ ಕಡೆಗೆ ಬಂದರೆ ಅದಿತಿಯ ಅಜ್ಜ ರಾಜಾ ರಾಮೇಶ್ವರ ರಾವ್ ಹೈದರಾಬಾದ್ ನ ವಾನಪರ್ತಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದವರು. ಇವರು ಶಿಕ್ಷಣ ತಜ್ಞರಾಗಿ ಹೆಸರು ಮಾಡಿದವರು. ಹೈದರಾಬಾದ್ ನ ಪ್ರತಿಷ್ಠಿತ ಬ್ಲ್ಯಾಕ್ ಸ್ವಾನ್ ಪಬ್ಲಿಷಿಂಗ್ ಹೌಸ್ ಸ್ಥಾಪಕರೂ ಹೌದು. ಹೀಗೆ ಅದಿತಿಯ ಹಿನ್ನೆಲೆ ಬಹು ರೋಚಕವಾಗಿದೆ. ಅಂದಹಾಗೆ  ಅದಿತಿ ಅವರಿಗೆ ಇದು ಎರಡನೆಯ ಮದುವೆ ಎನ್ನುವ ವಿಷಯ ಬಯಲಾಗಿದೆ. 21ನೇ ವಯಸ್ಸಿನಲ್ಲಿಯೇ ಮದುವೆ ಆಗಿತ್ತು.  25ನೇ ವಯಸ್ಸಿನಲ್ಲಿಯೇ ವಿಚ್ಛೇದನ ಪಡೆದುಕೊಂಡರು. ಆದರೆ ಈ ಬಗ್ಗೆ ಅವರು ಮುಚ್ಚಿಟ್ಟಿದ್ದರು. ಬಹಳ ವರ್ಷಗಳ ಬಳಿಕ ಸತ್ಯ ಹೇಳಿದ್ದರು. 

ಅಂದಹಾಗೆ ಇವರು ಮದುವೆಯಾದದ್ದು   ನಟ ಸತ್ಯದೀಪ್‌ ಮಿಶ್ರಾ ಅವರನ್ನು. ಮಾಧ್ಯಮಗಳ ಪ್ರಕಾರ,  ಅದಿತಿ 2009 ರಲ್ಲಿ ನಟ ಸತ್ಯದೀಪ್‌ ಮಿಶ್ರಾ ಮದುವೆಯಾದಾಗ ಅವರಿಗೆ 21 ವರ್ಷ. ಡಿವೋರ್ಸ್​ ಬಳಿಕ ನಟಿಯ ಹೆಸರು ನಟ ಫರ್ಹಾನ್ ಅಕ್ತರ್ ಜೊತೆ ಕೇಳಿ ಬಂದಿತ್ತು. ಫರಾನ್ ಅವರ ಪತ್ನಿಯಿಂದ ಬೇರೆಯಾಗುವುದಾಗಿ ಘೋಷಿಸಿದ ಸಮಯದಲ್ಲಿ ನಟನ ಹೆಸರು ಅದಿತಿ ಜೊತೆ ಲಿಂಕ್‌ ಆಗಿತ್ತು.  
 

ಸಕ್ಸಸ್​ ಅನ್ನೋದು ಅಂಡರ್​ವೇರ್​ ಇದ್ದಂಗೆ, ನೀವ್ಯಾಕೆ ಪದೇ ಪದೇ ಷರ್ಟ್​ ಬಿಚ್ಚೋದು? ಸಲ್ಮಾನ್​ಗೆ ನಟಿ ಪೂಜಾ ಪ್ರಶ್ನೆ

 

 
 
 
 
 
 
 
 
 
 
 
 
 
 
 

A post shared by ETimes (@etimes)

click me!