ತುರ್ತು ಪರಿಸ್ಥಿತಿಯ ಸತ್ಯ ಮರೆಮಾಚಲು ಸೆನ್ಸಾರ್ ಮಂಡಳಿಗೇ ಬೆದರಿಕೆ ಬಂದಿದೆ ಎಂದಿರುವ ಎಮರ್ಜೆನ್ಸಿ ಚಿತ್ರದ ನಟಿ ಕಂಗನಾ ರಣಾವತ್ ಹೇಳಿದ್ದೇನು?
ನಟಿ, ಸಂಸದೆ ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಚಿತ್ರಕ್ಕೆ ಮತ್ತೆ ಕರಾಳ ಛಾಯೆ ಮೂಡಿದೆ. ಇದಾಗಲೇ ಹಲವಾರು ಬಾರಿ ಈ ಚಿತ್ರದ ಬಿಡುಗಡೆ ಅನೇಕ ಕಾರಣಗಳಿಂದ ಮುಂದೂಡುತ್ತಲೇ ಹೋಗಿದೆ. ನಾಲ್ಕೈದು ಬಾರಿ ಮುಂದೂಡಿದ ಮೇಲೆ ಕೊನೆಗೂ ಬರುವ ಸೆಪ್ಟೆಂಬರ್ 6ರಂದು ಕೊನೆಗೂ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಇದೀಗ ಮತ್ತೆ ಚಿತ್ರ ಬಿಡುಗಡೆ ಡೌಟ್ ಆಗಿದೆ. ಇದಕ್ಕೆ ಕಾರಣ ನೀಡಿರುವ ಕಂಗನಾ ರಣಾವತ್, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಬೆದರಿಕೆ ಕರೆಗಳು ಬರುತ್ತಿವೆ. ಈ ಸಿನಿಮಾದಲ್ಲಿ ಎಮರ್ಜೆನ್ಸಿ ಸಮಯದಲ್ಲಿ ಉಂಟಾದ ಪಂಜಾಬ್ ಗಲಭೆ ತೋರಿಸಲಾಗಿದೆ. ಅದನ್ನು ತೋರಿಸದಂತೆ, ಇಂದಿರಾಗಾಂಧಿಯವರ ಹತ್ಯೆಯನ್ನು ತೋರಿಸದಂತೆ ಹೇಳಲಾಗುತ್ತಿದೆ. ಸತ್ಯವನ್ನು ಮರೆಮಾಚುವಂತೆ ತಿಳಿಸುತ್ತಿರುವುದನ್ನು ನೋಡಿದರೆ ವಿಚಿತ್ರವಾಗಿ ತೋರುತ್ತದೆ ಎಂದಿದ್ದಾರೆ.
ಈ ಚಿತ್ರಕ್ಕೆ ಇದಾಗಲೇ ಬಿಡುಗಡೆಗೆ ಅನುಮತಿ ಸಿಕ್ಕಿತ್ತು. ಆದರೆ ಸತ್ಯ ಮರೆಮಾಚಲುಹೇಳಲಾಗುತ್ತಿದೆ. ಪಂಜಾಬ್ ಗಲಭೆ, ಇಂದಿರಾಗಾಂಧಿಯವರ ಹತ್ಯೆ, ಸಿಖ್ ಮೇಲೆ ನಡೆದ ದೌರ್ಜನ್ಯ ಇವೆಲ್ಲವನ್ನೂ ತೋರಿಸದಂತೆ ಒತ್ತಡ ಹೇರಲಾಗುತ್ತಿದೆ. ಇವೆಲ್ಲವೂ ಚಿತ್ರದ ಬಂಡವಾಳ. ಸತ್ಯವನ್ನು ತೋರಿಸದೇ ಹೋದರೆ ಚಿತ್ರದಲ್ಲಿ ಇನ್ನೇನು ತೋರಿಸಬೇಕು ಎಂದು ಪ್ರಶ್ನಿಸಿದ್ದಾರೆ ನಟಿ ಕಂಗನಾ. ಈ ನಡುವೆಯಯೇ, ದೆಹಲಿಯ ಶಿರೋಮಣಿ ಅಕಾಲಿದಳ(ಎಸ್‌ಎಡಿ) ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಕೋರಿ ಸಿಬಿಎಫ್‌ಸಿಗೆ ನೊಟೀಸ್ ನೀಡಿದೆ. ಈ ಚಿತ್ರ 'ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ' ಮತ್ತು 'ತಪ್ಪು ಮಾಹಿತಿ ಹರಡಬಹುದು' ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಚಿತ್ರದ ಟ್ರೇಲರ್ ನೋಡಿದರೆ, ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುವುದು ಮಾತ್ರವಲ್ಲದೆ ದ್ವೇಷ ಮತ್ತು ಸಾಮಾಜಿಕ ಅಪಶ್ರುತಿಯನ್ನು ಉತ್ತೇಜಿಸುವ ತಪ್ಪಾದ ಐತಿಹಾಸಿಕ ಸಂಗತಿಗಳನ್ನು ಚಿತ್ರಿಸಲಾಗಿದೆ ಎನ್ನುವುದು ಅವರ ವಾದ.
ತೋರಿಸ್ಬೇಕೋ, ಬೇಡವೋ ಗೊತ್ತಾಗದೇ ನಟಿ ಪಾಲಕ್ ಪಟ್ಟ ಪರಿಪಾಟಲಿಗೆ ಅಯ್ಯೋ ಪಾಪ ಎಂದ ನೆಟ್ಟಿಗರು!
ಸದ್ಯ ಚಿತ್ರ ಸೆನ್ಸಾರ್ ಮಂಡಳಿಯಲ್ಲಿಯೇ ಇದೆ ಎನ್ನುವ ಮೂಲಕ ಸೆಪ್ಟೆಂಬರ್ 6ರಂದು ಚಿತ್ರ ಬಿಡುಗಡೆ ಸಂದೇಹದ ಮುನ್ಸೂಚನೆ ನೀಡಿದ್ದಾರೆ ಕಂಗನಾ. ಅಂದಹಾಗೆ, ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಜೂನ್ 25, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿ ( National Emergency) ಕರಾಳ ಮುಖವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಕಂಗನಾ ಹೇಳಿದ್ದಾರೆ. 21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು. ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದಿರುವ ನಟಿ, ತಮ್ಮ ಈ ಚಿತ್ರವನ್ನು ವೀಕ್ಷಿಸಿ, ನಮ್ಮ ಇತಿಹಾಸವನ್ನು ತಿಳಿದುಕೊಳ್ಳಿ ಎಂದಿದ್ದರು.
ಈ ಕುರಿತು ಹೇಳಿಕೆ ನೀಡಿರುವ ನಟಿ, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದ ಕರಾಳ ಘಟ್ಟವನ್ನು ನೋಡಿ ಮತ್ತು ಅಧಿಕಾರದ ಲಾಲಸೆಯನ್ನು ನೋಡಿ ಎಂದಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ ಮತ್ತು ದಿವಂಗತ ಸತೀಶ್ ಕೌಶಿಕ್ ಅವರ ಸಂಗೀತವನ್ನು ಸಂಚಿತ್ ಬಲ್ಹಾರಾ ಅವರು ಸಂಯೋಜಿಸಿದ್ದಾರೆ. ಕಥೆ ಮತ್ತು ಸಂಭಾಷಣೆಗಳನ್ನು ರಿತೇಶ್ ಷಾ ಬರೆದಿದ್ದಾರೆ. ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡುತ್ತಲೇ ಹೋಗುತ್ತಿತ್ತು. ನವೆಂಬರ್ 24, 2023 ರಂದು ಬಿಡುಗಡೆಯಾಗಬೇಕಿತ್ತು. ನಂತರ ಜೂನ್ 14ರಂದು ಚಿತ್ರ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಕಂಗನಾ ಥೇಟ್ ಇಂದಿರಾ ಗಾಂಧಿಯವರಂತೆ ಮೇಕಪ್ ಮಾಡಿಕೊಂಡು, ಅವರಂತೆಯೇ ಟ್ರೇಲರ್ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಯಾಕೋ ಈ ಚಿತ್ರಕ್ಕೆ ಇನ್ನೂ ಮುಹೂರ್ತ ಕೂಡಿ ಬರುತ್ತಲೇ ಇರಲಿಲ್ಲ. ಇದೀಗ ಬಿಜೆಪಿಯ ಸಂಸದೆ ಆದ ಮೇಲೆ ನಟಿಯ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮನೆ ಮಾಡಿದೆ. ಇದೀಗ ನಟಿ ಸೆಪ್ಟೆಂಬರ್ 6ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ. ಈ ಚಿತ್ರವನ್ನು ಸುಮಾರು 25 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ರೆಡಿ ಮಾಡಲಾಗಿದೆ ಎನ್ನಲಾಗುತ್ತಿದೆ.
ಸಕ್ಸಸ್ ಅನ್ನೋದು ಅಂಡರ್ವೇರ್ ಇದ್ದಂಗೆ, ನೀವ್ಯಾಕೆ ಪದೇ ಪದೇ ಷರ್ಟ್ ಬಿಚ್ಚೋದು? ಸಲ್ಮಾನ್ಗೆ ನಟಿ ಪೂಜಾ ಪ್ರಶ್ನೆ