ವ್ಯಾನಿಟಿ ವ್ಯಾನ್‌ನಲ್ಲಿ ನಟಿಯರ ನೇಕೆಡ್ ಚಿತ್ರೀಕರಣ ಮಾಡ್ತಾರೆ: ರಾಧಿಕಾ ಶರತ್‌ಕುಮಾರ್ ಗಂಭೀರ ಆರೋಪ

By Shriram Bhat  |  First Published Aug 31, 2024, 5:14 PM IST

'ನಾನೊಮ್ಮೆ ಕೇರಳದಲ್ಲಿ ಶೂಟಿಂಗ್‌ನಲ್ಲಿದ್ದೆ. ಅಲ್ಲಿ ಶೂಟಿಂಗ್ ಸೆಟ್‌ನಲ್ಲಿದ್ದ ಕೆಲವು ಹುಡುಗರು ಒಂದೆಡೆ ಕುಳಿತು ಮೊಬೈಲಲ್ಲಿ ಏನನ್ನೋ ನೋಡುತ್ತ ನಗುತ್ತಾ ಇದ್ದರು. ನನಗೆ ಏನೋ ಸಂಶಯ ಬಂದು ಅಲ್ಲೇ ಆ ಕಡೆಯಿಂದ ಈ ಕಡೆ ಹೋಗಿ..


ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿರುವ ರಾಧಿಕಾ ಶರತ್‌ಕುಮಾರ್ ಅವರು ಸ್ಫೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ನಟಿಯರಿಗೆ ನೀಡಲಾಗುವ ಲೈಂಗಿಕ ಕಿರುಕುಳ ಕೇವಲ ಮಲಯಾಳಂ ಚಿತ್ರರಂಗಕ್ಕೆ ಸೀಮಿತವಾಗಿಲ್ಲ, ಅದು ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಕೂಡ ಸಾಕಷ್ಟಿದೆ. ಇತ್ತೀಚೆಗೆ ತಾವು ಈ ಬಗ್ಗೆ ಮಾಹಿತಿ ಹೊಂದಿರುವುದಾಗಿಯೂ ಅವರು ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 

ನಟಿ ರಾಧಿಕಾ ಶರತ್‌ಕುಮಾರ್ ಅವರು 'ನಾನೊಮ್ಮೆ ಕೇರಳದಲ್ಲಿ ಶೂಟಿಂಗ್‌ನಲ್ಲಿದ್ದೆ. ಅಲ್ಲಿ ಶೂಟಿಂಗ್ ಸೆಟ್‌ನಲ್ಲಿದ್ದ ಕೆಲವು ಹುಡುಗರು ಒಂದೆಡೆ ಕುಳಿತು ಮೊಬೈಲಲ್ಲಿ ಏನನ್ನೋ ನೋಡುತ್ತ ನಗುತ್ತಾ ಇದ್ದರು. ನನಗೆ ಏನೋ ಸಂಶಯ ಬಂದು ಅಲ್ಲೇ ಆ ಕಡೆಯಿಂದ ಈ ಕಡೆ ಹೋಗಿ ಮೊಬೈಲಲ್ಲಿ ಅದೇನು ನೋಡುತ್ತಿದ್ದಾರೆ ಎಂದು ನೋಡಿದರೆ ಅವರು ವಿಡಿಯೋ ಒಂದನ್ನು ನೋಡುತ್ತಿದ್ದರು. ಅದರ ಬಗ್ಗೆ ನಾನು ಒಬ್ಬರ ಬಳಿ ವಿಚಾರಿಸಿದೆ. 

Tap to resize

Latest Videos

undefined

ರಿಷಬ್ ಶೆಟ್ಟಿ ಡ್ರೀಮ್ 'ಲಾಫಿಂಗ್ ಬುದ್ಧ'ನಲ್ಲಿ ಪ್ರಮೋದ್ ಶೆಟ್ಟಿ ಹಾಸ್ಯ ಹೊನಲಿಗೆ ಪ್ರೇಕ್ಷಕ ಫಿದಾ!

ಅವರು ಹೇಳಿದ್ದು ಕೇಳಿ ನಾನು ಅಕ್ಷರಶಃ ದಂಗಾಗಿ ಹೋದೆ. ಕಾರಣ, ನಾವು ಮಹಿಳಾ ಕಲಾವಿದರು ಉಪಯೋಗಿಸುವ ವ್ಯಾನಿಟಿ ವ್ಯಾನ್‌ನಲ್ಲಿ ಅವರು ಹಿಡನ್ ಕ್ಯಾಮರಾ ಅಳವಡಿಸಿದ್ದಾರಂತೆ. ಆ ಸ್ಪೈ ಕ್ಯಾಮೆರಾ ಮೂಲಕ ಅವರು ನಾವೆಲ್ಲರೂ ಬಟ್ಟೆ ಬದಲಾಯಿಸುವುದನ್ನು ಹಾಗು ಖಾಸಗಿ ಕ್ಷಣಗಳ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂಬುದು ತಿಳಿಯಿತು. ಅಷ್ಟೇ ಅಲ್ಲ, ಅವರು ಅದನ್ನು ಅದೆಷ್ಟು ನಿಖರವಾಗಿ ಇಟ್ಟುಕೊಂಡಿದ್ದಾರೆ ಎಂದರೆ, ಯಾವುದೇ ನಟಿಯ ಹೆಸರು ಟೈಪ್ ಮಾಡಿದರೆ ತಕ್ಷಣ ವಿಡಿಯೋ ನೋಡಲು ಸಿಗುತ್ತದೆಯಂತೆ. 

ಆ ಸಂಗತಿ ತಿಳಿದ ಬಳಿಕ ನಾನು ವ್ಯಾನಿಟಿ ವ್ಯಾನ್ ಉಪಯೋಗವನ್ನೇ ನಿಲ್ಲಿಸಿಬಿಟ್ಟೆ. ಡ್ರೆಸ್ ಬದಲಾಯಿಸಲು ನಾನು ಹೊಟೆಲ್ ರೂಂಗೆ ಹೋಗುತ್ತೇನೆ, ಅಥವಾ ನಮ್ಮದೇ ಆತ ಖಾಸಗಿ ಜಾಗಕ್ಕೆ ಹೋಗುತ್ತೇನೆ. ಯಾವುದೇ ಕಾರಣಕ್ಕೆ ನಾನು ಈಗ ವ್ಯಾನಿಟಿ ವ್ಯಾನ್ ಉಪಯೋಗಿಸುವುದಿಲ್ಲ ಎಂದಿದ್ದಾರೆ. ಜೊತೆಗೆ, ತಾವು ಅಲ್ಲಿದ್ದ ಎಲ್ಲಾ ಮಹಿಳೆಯರಿಗೂ ಈ ಸಂಗತಿ ಹೇಳಿ ವ್ಯಾನಿಟಿ ವ್ಯಾನ್ ಬಳಸಬೇಡಿ ಎಂದು ತಿಳಿಹೇಳಿದ್ದೇನೆ' ಎಂದಿದ್ದಾರೆ. 

ಪತ್ನಿ ವಿಜಯಲಕ್ಷ್ಮೀ ನೆನೆದು ದರ್ಶನ್ ಕಣ್ಣೀರು ಹಾಕಿದ್ರಾ? ಪಶ್ಚಾತ್ತಾಪದ ಮಾತುಗಳು ಬಂದಿವೆಯಾ?

ಮುಂದುವರೆದು ನಟಿ ರಾಧಿಕಾ ಶರತ್‌ಕುಮಾರ್ 'ನಾನು ನನ್ನ ಸಿನಿಮಾ ಟೀಮ್‌ ಹಾಗು ವ್ಯಾನಿಟಿ ವ್ಯಾನ್ ಟೀಮ್‌ ಕರೆದು, ವ್ಯಾನ್ ಒಳಗೆ ನನ್ನ ಕಣ್ಣಿಗೇನಾದ್ರೂ ಕ್ಯಾಮೆರಾ ಕಂಡರೆ ನಾನು ಅಲ್ಲಿ ಸಿಕ್ಕವರಿಗೆ ಚಪ್ಪಲಿಯಲ್ಲಿ ಭಾರಿಸುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ. ಜೊತೆಗೆ, ಕೇವಲ ಕೇರಳ ಮಾತ್ರವಲ್ಲದೇ ತಮಿಳು ಹಾಗು ತೆಲುಗು ಚಿತ್ರರಂಗದಲ್ಲಿ ಕೂಡ ಹೇಮಾ ಸಮಿತಿ ಮಾದರಿ ವರದಿ ತರಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಕೇರಳದಲ್ಲಿ ಸ್ಫೋಟವಾದ ಹೇಮಾ ಸಮಿತಿ ವರದಿ ಈಗ ಅಕ್ಕಪಕ್ಕದ ಚಿತ್ರರಂಗಗಳಿಗೂ ಬಿಸಿ ಮುಟ್ಟಿಸುವ ಲಕ್ಷಣ ಕಾಣಿಸುತ್ತಿದೆ ಎನ್ನಬಹುದು. 

click me!