ಹಿಗ್ಗಾಮುಗ್ಗಾ ಟ್ರೋಲ್; ರಾವಣನ ಗಡ್ಡ ತೆಗೆಯಲು ನಿರ್ಧರಿಸಿದ 'ಆದಿಪುರುಷ್' ತಂಡ

By Shruthi Krishna  |  First Published Nov 16, 2022, 12:44 PM IST

ಪ್ರಭಾಸ್ ನಟನೆಯ ಆದಪುರುಷ್ ಸಿನಿಮಾದ ಟ್ರೈಲರ್ ಹಿಗ್ಗಾಮುಗ್ಗಾ ಟ್ರೋಲ್ ಆದ ಬಳಿಕ ರಾವಣನ ಪಾತ್ರದ ದಾಡಿ ತೆಗೆಯಲು ಸಿನಿಮಾತಂಡ ನಿರ್ಧರಿಸಿದೆ ಎನ್ನುವ ಮಾತು ಕೇಳಿಬಂದಿದೆ. 


ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ  ಅಷ್ಟೇ ನಿರಾಸೆ ಮೂಡಿಸಿತು. ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಇದರಿಂದ ಭಯಬಿದ್ದ ಸಿನಿಮಾತಂಡ ರಿಲೀಸ್ ಡೇಟ್ ಮುಂದೆ ಹಾಕಿದೆ. ಅಲ್ಲದೇ ಸಿನಿಮಾದ ಕೆಲವು ದೃಶ್ಯಗಳನ್ನು ರೀ ಶೂಟ್ ಮಾಡಲು ಸಿನಮಾತಂಡ ನಿರ್ಧರಿಸಿದೆ ಎನ್ನುವ ಮಾತು ಕೇಳಿಬಂದಿತ್ತು. ಆದಿಪುರುಷ್ ಸಿನಿಮಾದಿಂದ ಮತ್ತೊಂದು ಸುದ್ದಿ ವೈರಲ್ ಆಗಿದೆ. ಆದಿಪುರುಷ್ ಟ್ರೈಲರ್ ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದ ರಾವಣನ ಪಾತ್ರದ ಗೆಟಪ್‌ಅನ್ನು ಬದಲಾಯಿಸಲು ಸಿನಿಮಾತಂಡ ಮುಂದಾಗಿದೆ ಎನ್ನುವ ಮಾತು ಕೇಳಿ ಬಂದಿದೆ. 

ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದರು. ಸೈಫ್ ಅಲಿ ಖಾನ್ ದಾಡಿ ಬಿಟ್ಟು ಮೊಘಲ್ ದೊರೆಯ  ಹಾಗೆ ಕಾಣಿಸಿಕೊಂಡಿದ್ದರು. ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ರಾವಣನನ್ನು ಮತಾಂತರ ಮಾಡಲಾಗಿದೆ ಎಂದು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ರಾವಣನಿಗೆ ದಾಡಿ ಬಿಡುವ ಮೂಲಕ ಮುಸ್ಲಿಂ ಮಾಡಲಾಗಿದೆ ಎಂದು ಅನೇಕರು ಕಿಡಿ ಕಾರಿದ್ದರು. ಜೊತೆಗೆ ಸಿನಿಮಾದ ವಿಎಫ್‌ಎಕ್ಸ್ ಭಾರಿ ಟ್ರೋಲ್ ಆಗಿತ್ತು. ಕಳಪೆ ವಿಎಫ್‌ಎಕ್ಸ್ ಎಂದು ನೆಟ್ಟಿಗರು ಜರಿದಿದ್ದರು. ಇದರಿಂದ  ಬೇಸತ್ತ ಸಿನಿಮಾತಂಡ ಇದೀಗ ರೀ ಶೂಟ್ ಮಾಡಲು ಮುಂದಾಗಿದ್ದು ರಾವಣ ಪಾತ್ರದ ಲುಕ್ ಬದಯಾಲಿಸಲು ನಿರ್ಧರಿಸಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ವಿಎಫ್‌ಎಕ್ಸ್ ಮೂಲಕ ರಾವಣನ ದಾಡಿ ತೆಗೆಯಲು ಸಿನಿಮಾತಂಡ ನಿರ್ಧರಿಸಿದೆ ಎನ್ನಲಾಗಿದೆ. 

ಕಳಪೆ ಗ್ರಾಫಿಕ್ಸ್, ಹಿಗ್ಗಾಮುಗ್ಗಾ ಟ್ರೋಲ್; 'ಆದಿಪುರುಷ್' ಬಿಡುಗಡೆ ಮುಂದಕ್ಕೆ, ಹೊಸ ರಿಲೀಸ್ ಡೇಟ್ ಘೋಷಣೆ

Tap to resize

Latest Videos

ಅಂದಹಾಗೆ ಈಗಾಗಲೇ ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡಲಾಗಿದೆ. ಇದೀಗ ರೀ ಶೂಟ್ ಮತ್ತು ವಿಎಕ್ಸ್‌ಎಫ್ ಮೇಲೆ ಮರು ಕೆಲಸ ಮಾಡಲು ನಡೆಯುತ್ತಿದೆ. ಇದರಿಂದ ಮತ್ತಷ್ಟು ಕೋಟಿ ಸುರಿಯಬೇಕಾಗಿದೆ. ಹಾಗಾಗಿ ಆದಿಪುರುಷ್ ಸಿನಿಮಾದ ಬಜೆಟ್ ದುಪ್ಪಟ್ಟಾಗಲಿದೆ. ರಾವಣ ಪಾತ್ರ ಮತ್ತೇಗೆ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.  

Prabhas: ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಟ್ರೋಲ್: 500 ಕೋಟಿ ಬಜೆಟ್‌ನ ಆದಿಪುರುಷ್ ರೀಶೂಟ್‌ಗೆ ನಿರ್ಧಾರ

ಆದಿಪುರುಷ್ ಸಿನಿಮಾ ಮೇಲೆ ಮರ ಕೆಲಸ ಮಾಡುತ್ತಿರುವ ಕಾರಣ ಮತ್ತಷ್ಟು ಸಮಯ ಹಿಡಿಯಲಿದೆ. ಹಾಗಾಗಿ ರಿಲೀಸ್ ಡೇಟ್ ಸಹ ಜನವರಿಯಿಂದ ಜೂನ್‌ಗೆ ಮುಂದಕ್ಕೆ ಹೋಗಿದೆ. ಮುಂದಿನ ವರ್ಷ ಜೂನ್ 16ರಂದು ರಿಲೀಸ್ ಆದಿಪುರುಷ್ ರಿಲೀಸ್ ಆಗಲಿದೆ ಎಂದು ಸಿನಿಮಾತಂಡ ಅನೌನ್ಸ್ ಮಾಡಿದೆ.  ಅಂದಹಾಗೆ ಆದಿಪುರುಷ್ ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸನೂನ್ ನಟಿಸಿದ್ದಾರೆ. ಸಾಕಷ್ಟು ದೊಡ್ಡ ಸ್ಟಾರ್ ಕಾಸ್ಟ್ ಇರುವ ಆದಿಪುರುಷ್ ನೋಡಲು ಅಭಿಮಾನಿಗಳು ಜೂನ್ ವರೆಗೂ ಕಾಯಲೇ ಬೇಕು.  

click me!