35 ವರ್ಷಗಳ ನಟನೆಗೆ ಬ್ರೇಕ್ ಘೋಷಿಸಿದ ಮಿ.ಪರ್ಫೆಕ್ಷನಿಸ್ಟ್ ಆಮೀರ್ ಖಾನ್! ಮುಂದೇನು?

Published : Nov 15, 2022, 05:45 PM ISTUpdated : Nov 15, 2022, 06:03 PM IST
35 ವರ್ಷಗಳ ನಟನೆಗೆ ಬ್ರೇಕ್ ಘೋಷಿಸಿದ ಮಿ.ಪರ್ಫೆಕ್ಷನಿಸ್ಟ್ ಆಮೀರ್ ಖಾನ್! ಮುಂದೇನು?

ಸಾರಾಂಶ

ಬ್ಯಾಕ್ ಟು ಬ್ಯಾಕ್ ಸೋಲು ಆಮೀರ್ ಖಾನ್ ಅವರನ್ನು ನಟನೆಯಿಂದನೇ ದೂರ ಇಡುವಂತೆ ಮಾಡಿದೆ. ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ನಟನೆ ಬದುಕಿಗೆ ಬ್ರೇಕ್ ಘೋಷಿಸಿದ್ದಾರೆ. 

ಬಾಲಿವುಡ್ ಸ್ಟಾರ್ ಆಮೀರ್ ಖಾನ್ ಅವರಿಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲು ನಟನೆಯಿಂದನೇ ಬ್ರೇಕ್ ಪಡೆಯುವಂತೆ ಮಾಡಿದೆ. ಈ ಸಿನಿಮಾ ಮೇಲೆ ಆಮೀರ್ ಖಾನ್ ಭಾರಿ ನಿರೀಕ್ಷೆ ಇಟ್ಟಿದ್ದರು. ಸಿಕ್ಕಾಪಟ್ಟೆ ಶ್ರಮ ಹಾಕಿದ್ದರು, ಸಖತ್ ಪ್ರಮೋಷನ್  ಮಾಡಿದ್ದರು. ಆದರೆ ಲಾಲ್ ಸಿಂಗ್ ಚಡ್ಡಾ ಮೇಲೆ ಅಭಿಮಾನಿಗಳ ನಿರೀಕ್ಷೆ ಮಟ್ಟಮುಟ್ಟುವಲ್ಲಿ ವಿಫಲವಾಯಿತು. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಹೀನಾಯ ಸೋಲು ಕಂಡಿತು. ಅಲ್ಲದೇ ಆಮೀರ್ ಹಿಗ್ಗಾಮುಗ್ಗಾ ಟ್ರೋಲ್ ಆದರು, ಬಾಯ್ಕಟ್ ಸಮಸ್ಯೆ ಎದುರಿಸಿದರು. ಬ್ಯಾಕ್ ಟು ಬ್ಯಾಕ್ ಸೋಲು ಆಮೀರ್ ಖಾನ್ ಅವರನ್ನು ನಟನೆಯಿಂದನೇ ದೂರ ಇಡುವಂತೆ ಮಾಡಿದೆ. ಹೌದು ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ನಟನೆ ಬದುಕಿಗೆ ಬ್ರೇಕ್ ಘೋಷಿಸಿದ್ದಾರೆ. 

ಲಾಲ್ ಸಿಂಗ್ ಚಡ್ಡಾ ಬಳಿಕ ಆಮೀರ್ ಖಾನ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ದೆಹಲಿಯ ಕಾರ್ಯಕ್ರಮ ಒಂದರಲ್ಲಿ ಆಮೀರ್ ಕಾಣಿಸಿಕೊಂಡಿದ್ದರು. ಆಗ ನಟನೆಯಿಂದ ಬ್ರೇಕ್ ಪಡೆಯುವುದಾಗಿ ಆಮೀರ್ ಖಾನ್ ಘೋಷಣೆ ಮಾಡಿದರು. ಆಮೀರ್ ಖಾನ್ ಅಚ್ಚರಿಯ  ನಿರ್ಧಾರ ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಅಂದಹಾಗೆ ನಟನೆಯಿಂದ ಬ್ರೇಕ್ ಪಡೆಯುವುದಾಗಿ ಹೇಳಿರುವ ಆಮೀರ್ ಖಾನ್ ನಿರ್ಮಾಪಕನಾಗಿ ಮುಂದುವರೆಯುತ್ತೇನೆ ಎಂದರು. ಸದ್ಯ ಆಮೀರ್ ಖಾನ್ ಚಾಂಪಿಯನ್ ಎನ್ನುವ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಆಮೀರ್, ಸ್ಕ್ರಿಪ್ಟ್ ಅದ್ಭುತವಾಗಿದೆ ಎಂದು ಹೇಳಿದರು. 

ನಟನೆಯಿಂದ ಬ್ರೇಕ್ ಪಡೆಯಲು ಕಾರಣವನ್ನು ಸಹ ನೀಡಿದ್ದಾರೆ ಆಮೀರ್ ಖಾನ್. ನಟನೆ ಮಾಡುವಾಗ ನಾನು ನನ್ನ ಜೀವನದಲ್ಲಿ ತುಂಬಾ ಕಳೆದುಕೊಂಡೆ. ನನ್ನ ಜೀವನದಲ್ಲಿ ಏನು ಆಗಿಲ್ಲ. ಹಾಗಾಗಿ ನಾನು ವಿರಾಮ ಪಡೆಯಲು ನಿರ್ಧರಿಸಿದೆ. ನಾನು ನನ್ನ ಕುಟುಂಬದ ಜೊತೆ ಸಮಯ ಕಳೆಯಲು ಬಯಸುತ್ತೇನೆ. ನನ್ನ ತಾಯಿ ಜೊತೆ ಇರಲು ಇಷ್ಟಪಡುತ್ತೇನೆ. ನನ್ನ ಮಕ್ಕಳಿಗೆ ಸಮಯ ಕೊಡಬೇಕು. 35 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನಾನು ಸಿನಿಮಾಗಳ ಕಡೆ ಮಾತ್ರ ಗಮನ ಹರಿಸಿದ್ದೇನೆ. ಇದು ನನ್ನ ಹತ್ತಿರವಿದ್ದವರಿಗೆ ನ್ಯಾಯಸಮ್ಮತವಲ್ಲ ಎಂದು ಭಾವಿಸುತ್ತೇನೆ' ಎಂದರು.  

Salaam Venky Trailer; 'ಲಾಲ್ ಸಿಂಗ್ ಚಡ್ಡಾ' ಸೋಲಿನ ಬಳಿಕ ಫ್ಯಾನ್ಸ್ ಮುಂದೆ ಆಮೀರ್, ವಾವ್ ಎಂದ ನೆಟ್ಟಿಗರು

'ನಾನು ನಟನಾಗಿ ಕೆಲಸ ಮಾಡುತ್ತಿಲ್ಲ ಮತ್ತು ನಾನು ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ' ಎಂದು ಆಮೀರ್ ಖಾನ್ ಹೇಳಿದರು. ಅಲ್ಲದೇ ಜೀವನದ ವಿಭಿನ್ನ ಭಾಗವನ್ನು ಅನುಭವಿಸಲು ಬಯಸುವುದಾಗಿ ಹೇಳಿದರು.

ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಳಿಕ ಸಲಾಂ ವೆಂಕಿ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಆದರೆ ಈ ಸಿನಿಮಾದಲ್ಲಿ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರೈಲರ್ ನ ಕೊನೆಯಲ್ಲಿ ಆಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ನಟಿ ಕಾಜೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫನಾ ಸಿನಿಮಾ ಬಳಿಕ ಕಾಜೋಲ್ ಮತ್ತು ಆಮೀರ್ ಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 

ಆಮೀರ್ ಖಾನ್ ತಾಯಿಗೆ ಹೃದಯಾಘಾತ, ಊಹಾಪೋಹಗಳಿಂದ ಖಾನ್‌ ಬೇಸರ

ಸತತ ಸೋಲಿನ ಬಳಿಕ ಶಾರುಖ್ ಖಾನ್ ಕೂಡ ಕೆಲವು ಸಮಯ ಬ್ರೇಕ್ ಪಡೆದಿದ್ದರು. ಇದೀಗ ಶಾರುಖ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಮೀರ್ ಖಾನ್ ಕೂಡ ನಟನೆಗೆ ಬ್ರೇಕ್ ನೀಡಿದ್ದಾರೆ. ಮತ್ತೆ ಯಾವಾಗ ತೆರೆಮೇಲೆ ಮಿಂಚಲಿದ್ದಾರೆ? ಯಾವ ಸಿನಿಮಾ ಮೂಲಕ ಬರಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?