ಆದಿಪುರುಷ್ ಟೀಸರ್ ಟ್ರೋಲ್ ಆದ ಬಗ್ಗೆ ಮತ್ತು ಟೀಸರ್ ಬಗ್ಗೆ ನಿರ್ದೇಶಕ ಓಂ ರಾವುತ್ ಪ್ರತಿಕ್ರಿಯೆ ನೀಡಿದ್ದಾರೆ.
ತೆಲುಗು ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಚಿತ್ರದ ಟೀಸರ್ ನೋಡಿ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಟೀಸರ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ರಾವಣ ಪಾತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಕಳಪೆ ವಿಎಫ್‌ಎಕ್ಸ್ ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಟೀಸರ್ ನೋಡಿದ ಬಳಿಕ ನಿರ್ದೇಶಕ ಓಂ ರಾವುತ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದಿಪುರುಷ್ ಟೀಸರ್ ಟ್ರೋಲ್‌ನದ್ದೇ ಸದ್ದು. ಇದೀಗ ಟ್ರೋಲ್‌ಗಳ ಬಗ್ಗೆ ಮತ್ತು ಟೀಸರ್ ಬಗ್ಗೆ ನಿರ್ದೇಶಕ ಓಂ ರಾವುತ್ ಪ್ರತಿಕ್ರಿಯೆ ನೀಡಿದ್ದಾರೆ.
ಟೀಸರ್‌ಗೆ ನೆಗೆಟಿವ್ ಪ್ರತಿಕ್ರಿಯೆ ಬಂದ ಬಗ್ಗೆ ನಿರ್ದೇಶಕ ಓಂ ರಾವುತ್ ಬೇಸರ ವ್ಯಕ್ತಪಡಿಸಿದ್ದಾರೆ. ಟ್ರೋಲ್ ಮತ್ತು ಮೀಮ್‌ಗಳಿಂದ ಭಾರಿ ಬೇಸರ ಆಗಿದೆ ಎಂದು ಹೇಳಿದರು. ಆದರೆ ಇದನ್ನು ನಿರೀಕ್ಷೆ ಮಾಡಿದ್ದೆ ಹಾಗಾಗಿ ತುಂಬಾ ಅಚ್ಚರಿ ಏನು ಆಗಲಿಲ್ಲ ಎಂದು ಓಂ ರಾವುತ್ ಹೇಳಿದರು. ಆದಿಪುರುಷ್ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡಿದಾಗ ವಿಎಫ್‌ಎಕ್ಸ್ ಮತ್ತು ಸಿಜಿಐ ಎಲ್ಲಾ ಸರಿಯಾಗಿ ಗೊತ್ತಾಗಲಿದೆ, ಆಗ ಪ್ರೇಕ್ಷಕರಿಗೆ ವಿಭಿನ್ನ ಅನುಭವ ಸಿಗಲಿದೆ ಎಂದು ಹೇಳಿದರು.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಓಂ ರಾವುತ್, ನನಗೆ ನಿರಾಸೆಯಾಗಿದ್ದು ನಿಜ. ಆಶ್ಚರ್ಯವೇನಿಲ್ಲ, ಯಾಕೆಂದರೆ ಈ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಬೇಕು, ದೊಡ್ಡ ಮಾಧ್ಯಮಕ್ಕಾಗಿ ನಿರ್ಮಿಸಲಾಗಿದೆ. ಇದನ್ನು ಮೊಬೈಲ್ ಫೋನ್‌ನಲ್ಲಿ ನೋಡಲು ಮಾಡಿಲ್ಲ. ನಾನು ಇದನ್ನು ಯೂಟ್ಯೂಬ್‌ಗಾಗಿ ಮಾಡಿಲ್ಲ' ಎಂದು ಹೇಳಿದರು.
Adipurush; ಟೀಸರ್ ನೋಡಿ ಗರಂ ಆದ್ರಾ ಪ್ರಭಾಸ್? ಕೋಪದಿಂದ ನಿರ್ದೇಶಕರನ್ನು ಕರೆದ ವಿಡಿಯೋ ವೈರಲ್
'ನನ್ನ ಪಾಲುದಾರ ಸ್ಟುಡಿಯೋ (ಟಿ-ಸಿರೀಸ್) ವಿಶ್ವದ ಅತಿದೊಡ್ಡ ಯೂಟ್ಯೂಬ್ ಚಾನೆಲ್ ಹೊಂದಿದೆ. ಆದರೆ ಈ ಚಿತ್ರಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಅಗತ್ಯವಿರುತ್ತದೆ. ಮುಖ್ಯವಾಗಿ ಹಿರಿಯ ನಾಗರಿಕರು ಚಿತ್ರಮಂದಿರಗಳಿಗೆ ಬರುತ್ತಿರಲಿಲ್ಲ, ಅವರೆಲ್ಲ ಚಿತ್ರಮಂದಿರಕ್ಕೆ ಬರಬೇಕು. ದೂರದ ಪ್ರದೇಶದ ಜನರು ಸಹ ಚಿತ್ರಮಂದಿರಕ್ಕೆ ಬರುವುದಿಲ್ಲ. ಇದು ರಾಮಾಯಣ ಸಿನಿಮಾ ವಾಗಿದ್ದರಿಂದ ಇವರೆಲ್ಲರೂ ಚಿತ್ರಮಂದಿರಕ್ಕೆ ಬರಬೇಕು. ಈ ಸಿನಿಮಾ ಹೆಚ್ಚಿನ ಪ್ರೇಕ್ಷಕರನ್ನು ತಲುಪಬೇಕು. ಇದು ಚಿಕ್ಕ ಪರದೆಗಾಗಿ ಮಾಡಲಾಗಿಲ್ಲ, ಇದು ದೊಡ್ಡ ಪರದೆಗಾಗಿ ಮಾಡಿದ ಸಿನಿಮಾ. ಈ ಸಿನಿಮಾವನ್ನು ನಾನು ಚಿಕ್ಕ ಪರದೆಯಲ್ಲಿ ಬಳಸಲು ಸಾಧ್ಯವಿಲ್ಲ' ಎಂದು ಹೇಳಿದರು.
Adipurush; ಪ್ರಭಾಸ್‌ಗೆ ಬೆವರು ಒರೆಸಲು ತನ್ನದೇ ದುಪಟ್ಟಾ ನೀಡಿದ ಕೃತಿ, ವಿಡಿಯೋ ವೈರಲ್
ಆದಿಪುರುಷ್ ಸಿನಿಮಾದಲ್ಲಿ ರಾಮನಾಗಿ ಪ್ರಭಾಸ್ ನಟಿಸಿದ್ರೆ, ಸೀತೆಯಾಗಿ ಬಾಲಿವುಡ್ ನಟಿ ಕೃತಿ ಸನೂನ್ ಕಾಣಿಸಿಕೊಂಡಿದ್ದಾರೆ. ರಾವಣ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಅಂದಹಾಗೆ ಆದಿಪುರುಷ್ ಮುಂದಿನ ವರ್ಷ ಜನವರಿ 12ರಂದು ಸಿನಿಮಾ ರಿಲೀಸ್ ಆಗುತ್ತಿದೆ.