ನಾನು ಮತ್ತೊಬ್ಬ ಸುಶಾಂತ್ ಸಿಂಗ್ ಆಗಲ್ಲ; ಪತ್ನಿ ರಾಖಿ ಸಾವಂತ್ ಆರೋಪಗಳಿಗೆ ಸಿಡಿದೆದ್ದ ಆದಿಲ್ ಖಾನ್

By Shruthi Krishna  |  First Published Feb 6, 2023, 11:54 AM IST

ರಾಖಿ ಸಾವಂತ್ ಆರೋಪಗಳಿಗೆ ಪತಿ ಆದಿಲ್ ಖಾನ್ ದುರಾನಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸುಶಾಂತ್ ಸಿಂಗ್ ರಜಪೂತ್ ಆಗಲು ಬಯಸುವುದಿಲ್ಲ ಎಂದು ಹೇಳಿದರು. 


ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಮದುವೆ ಸಿಕ್ರೆಟ್ ಇತ್ತೀಚಿಗಷ್ಟೆ ರಿವೀಲ್ ಆಗಿದೆ. ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್ ಇತ್ತೀಚಿಗಷ್ಟೆ ತನ್ನ ತಾಯಿಯನ್ನು ಕಳೆದುಕೊಂಡರು. ತಾಯಿ ನಿಧನಹೊಂದಿದ ಬೆನ್ನಲ್ಲೇ ರಾಖಿ ತನ್ನ ಪತಿ ಆದಿಲ್ ವಿರುದ್ಧ ಗಂಭೀರ ಅರೋಪ ಮಾಡಿದ್ದಾರೆ. ಆದಿಲ್ ಗೆ ಬೇರೆ ಯುವತಿ ಜೊತೆ ಸಂಬಂಧವಿದೆ, ಹಾಗಾಗಿ ತಮ್ಮ ಮದುವೆಯನ್ನು ಗುಟ್ಟಾಗಿ ಇಡುವಂತೆ ಒತ್ತಾಯ ಮಾಡಿದ್ದ ಎಂದು ಆರೋಪಸಿದ್ದಾರೆ. ಪತ್ನಿ ರಾಖಿ ಸಾವಂತ್ ಮಾತಿಗೆ ಆದಿಲ್ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿರುವ ಆದಿಲ್ ತಾನು ಮತ್ತೊಬ್ಬ ಸುಶಾಂತ್ ಸಿಂಗ್ ಆಗಲು ಇಷ್ಟ ಪಡಲ್ಲ ಎಂದು ಹೇಳಿದ್ದಾರೆ. 

ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆದಿಲ್, 'ನಾನು ಮಹಿಳೆಯ ಬಗ್ಗೆ ಮಾತನಾಡಲ್ಲ ಎಂದರೆ ನಾನು ತಪ್ಪು ಮಾಡಿದ್ದೀನಿ ಅಂತ ಅರ್ಥವಲ್ಲ. ನಾನು ನನ್ನ ಧರ್ಮವನ್ನು ಗೌರವಿಸುತ್ತೇನೆ ಮತ್ತು ನಾನು ಮಹಿಳೆಯರನ್ನು ಗೌರವಿಸಲು ಕಲಿತಿದ್ದೀನಿ. ನಾನು ಏನು ಮಾತನಾಡುತ್ತಿದ್ದೇನೆ ಮತ್ತು ಅವಳು ನನ್ನೊಂದಿದೆ ಏನು ಮಾತನಾಡುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಅವಳು ಪ್ರತಿದಿನ ಜನರ ಬಳಿಗೆ ಬಂದು ಹೇಳುವುದೇ ಒಂದೇ ಮಾತು ಆದಿಲ್ ಕೆಟ್ಟವನು ಅಂತ. ನಾನು ಸುಶಾಂತ್ ಸಿಂಗ್ ರಜಪೂತ್ ಆಗಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ. 

Tap to resize

Latest Videos

ಆದಿಲ್ ಖಾನ್ ಪ್ರಚಾರಕ್ಕಾಗಿ ತನ್ನ ಜೊತೆಗಿದ್ದಾನೆ, ಆತನನ್ನು ಮೀಡಿಯಾದವರು ತೋರಿಸಬೇಡಿ ಎಂದು ರಾಖಿ ಸಾವಂತ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆದಿಲ್, ಸತ್ಯಗಳೊಂದಿದೆ ಆದಿಲ್ ಬರ್ತಾನೆ ಎನ್ನುವ ಕಾರಣಕ್ಕೆ, ಅದಕ್ಕೆ ಯಾಕೆ ಹೆದರುವೆ' ಎಂದು ಕೇಳಿದ್ದಾರೆ. 

Rakhi Sawant: ನಾನು ಫ್ರಿಡ್ಜ್​ ಒಳಗೆ ಹೋಗಲ್ಲ ಅಂತ ಗೋಳೋ ಎಂದ ರಾಖಿ ಸಾವಂತ್​ಗೆ ಆಗಿದ್ದಾದ್ರೂ ಏನು?

ರಾಖಿ ಸಾವಂತ್ ಆರೋಪ

ಇತ್ತೀಚಿಗಷ್ಟೆ ರಾಖಿ ಸಾವಂತ್ ಮಾಧ್ಯಮದ ಜೊತೆ ಮಾತನಾಡಿ, ನಿಮ್ಮೆಲ್ಲರ ಮೂಲಕ ನಾನು ಆದಿಲ್ ಜೀವನದಲ್ಲಿರುವ ಹುಡುಗಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಾನು ಬಿಗ್ ಬಾಸ್ ಮರಾಠಿ 4ಗೆ ಎಂಟ್ಕಿ ಕೊಟ್ಟಾಗ ಪರಿಸ್ಥಿತಿಯನ್ನು ಲಾಭಕ್ಕೆ ಪಡೆದರು. ನಾನು ಅವಳ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಸಮಯ ಬಂದಾಗ ನಾನು ಅವರ ಎಲ್ಲಾ ಫೋಟೋಗಳನ್ನು ತೋರಿಸುತ್ತೇನೆ.  ಆಕೆಯ ಜೊತೆ ಆದಿಲ್ ಅನೈತಿಕ ಸಂಬಂಧ ಹೊಂದಿದ್ದಾರೆ. 8 ತಿಂಗಳ ಕಾಲ ಮದುವೆಯ ಬಗ್ಗೆ ಮೌನವಾಗಿರುವಂತೆ ಮಾಡಿದ. ನಾನು ಇಲ್ಲಿಯ ವರೆಗೂ ಮೌನವಾಗಿದ್ದೆ. ಬಳಿಕ ಮದುವೆಯನ್ನು ನಿರಾಕರಿಸಿದರು. ಆದರೆ ಮಾಧ್ಯಮದ ಕಾರಣ ಮದುವೆ ಒಪ್ಪಿಕೊಂಡರು' ಎಂದು ಆರೋಪಿಸಿದ್ದರು. 

ಎಲ್ಲಿ ಹೋಗಲಿ, ಯಾರನ್ನು ತಬ್ಬಿಕೊಳ್ಳಲಿ; ಅಗಲಿದ ತಾಯಿಗೆ ರಾಖಿ ಸಾವಂತ್ ಭಾವುಕ ಪತ್ರ

ಬಳಿಕ ವಿಡಿಯೋದಲ್ಲಿ ಆದಿಲ್ ಮರಳಿ ಬಂದರೆ ನಾನು ಕ್ಷಮಿಸಲು ಸಿದ್ಧ. ಆದರೆ ಫ್ರಿಡ್ಜ್​ ಒಳಗೆ ಹೋಗಲಾರೆ. ನನ್ನ ಸ್ವಾಭಿಮಾನಕ್ಕಾಗಿ ಹೇಗೆ ಹೋರಾಡಬೇಕೆಂದು  ನನಗೆ ತಿಳಿದಿದೆ. ನಾನು ಇತರ ಹುಡುಗಿಯರಂತೆ ಮೌನವಾಗಿರುತ್ತೇನೆ ಎಂದು ಭಾವಿಸಬೇಡಿ. ನೀವು ನನಗೆ ಬೆದರಿಕೆ ಹಾಕಿದರೆ ನಾನು ಅದನ್ನು ಸಹಿಸುವುದಿಲ್ಲ ಎಂದು ರಾಖಿ ಹೇಳಿದ್ದರು. 

ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಇಬ್ಬರೂ ಕಳೆದ ವರ್ಷ ಜುಲೈನಲ್ಲಿ ರಹಸ್ಯವಾಗಿ ವಿವಾಹವಾದರು. ಆದರೆ ಮದುವೆಯಾಗಿ ಅನೇಕ ತಿಂಗಳ ಬಳಿಕ ಅಂದರೆ ಕಳೆದ ತಿಂಗಳು ತಮ್ಮ ಮದುವೆ ವಿಚಾರ ಬಹಿರಂಗ ಪಡಿಸಿದರು. 

click me!