Pathaan ಸಿನಿಮಾ ಇಷ್ಟವಾಗಿಲ್ಲ; ಪುಟ್ಟ ಕಂದನ ಮಾತಿಗೆ ಶಾರುಖ್ ಪ್ರೀತಿಯ ಉತ್ತರ, ವಿಡಿಯೋ ವೈರಲ್

Published : Feb 06, 2023, 10:49 AM IST
Pathaan ಸಿನಿಮಾ ಇಷ್ಟವಾಗಿಲ್ಲ; ಪುಟ್ಟ ಕಂದನ ಮಾತಿಗೆ ಶಾರುಖ್ ಪ್ರೀತಿಯ ಉತ್ತರ, ವಿಡಿಯೋ ವೈರಲ್

ಸಾರಾಂಶ

ಪಠಾಣ್ ಸಿನಿಮಾ ಇಷ್ಟವಾಗಿಲ್ಲ ಎಂದು ಪುಟ್ಟ ಕಂದನಿಗೆ ಶಾರುಖ್ ನೀಡಿದ ಉತ್ತರ ವೈರಲ್ ಆಗಿದೆ. 

ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಸೊರಗಿದ್ದ ಬಾಲಿವುಡ್‌ಗೆ ಪಠಾಣ್ ಹೊಸ ಚೈತನ್ಯ ತುಂಬಿದೆ. ಈ ವರ್ಷದ ಆರಂಭದಲ್ಲೇ ಬಂದ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಶಾರುಖ್ ಅಭಿಮಾನಿಗಳು ಸಿನಿಮಾ ನೋಡಿ ಫುಲ್ ಖುಷ್ ಆಗಿದ್ದಾರೆ. ವಿಶ್ವದಾದ್ಯಂತ ಪಠಾಣ್ ಸಿನಿಮಾ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.  ಎರಡನೇ ವೀಕೆಂಡ್​ನಲ್ಲೂ‘ಪಠಾಣ್​’ ಅನೇಕ ಕಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಕೆಲವರಿಗೆ ಪಠಾಣ್ ಸಿನಿಮಾ ಇಷ್ಟವಾಗಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿರುತ್ತಾರೆ. ಇದೀಗ ಪುಟ್ಟ ಮಗುವಿನ ವಿಮರ್ಶೆ ವೈರಲ್ ಆಗಿದೆ. ಅಷ್ಟೆಯಲ್ಲ ಶಾರುಖ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.‘ನನಗೆ ಪಠಾಣ್​ ಚಿತ್ರ ಇಷ್ಟವಾಗಿಲ್ಲ’ ಎಂದು ಚಿಕ್ಕ ಬಾಲಕಿ ನೇರವಾಗಿ ಹೇಳಿದ್ದಾಳೆ. ಆ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡುತ್ತಿದೆ. 

ಶಾರುಖ್ ಖಾನ್ ಮಗುವಿನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅಹಾನಾ ಎನ್ನುವ ಚಿಕ್ಕ ಬಾಲಕಿ ಪಠಾಣ್ ಸಿನಿಮಾ ವೀಕ್ಷಿಸಿದ್ದಾಳೆ. ಸಿನಿಮಾ ನೋಡಿದ ಬಳಿಕ ಪಾಲಕರು ಸಿನಿಮಾ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಹಾನಾ ನೇರವಾಗಿ ಇಲ್ಲ ಎಂದು ಹೇಳಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಗಮನಿಸಿದ ಶಾರುಖ್ ಪ್ರತಿಕ್ರಿಯೆ ನೀಡಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

Shah Rukh Khan: 'ಪಠಾಣ್'​ ಅಬ್ಬರದ ನಡುವೆಯೇ ಶಾರುಖ್​ ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​!

‘ಓಹ್​.. ಇನ್ನೂ ಕಷ್ಟಪಟ್ಟು ಕೆಲಸ ಮಾಡಬೇಕು ಈಗ. ಚಿಕ್ಕ ವಯಸ್ಸಿನ ವೀಕ್ಷಕರು ನಿರಾಶರಾಗಬಾರದು. ದೇಶದ ಯುವ ಜನತೆಯ ವಿಷಯ ಇದು. ಆಕೆಗೆ ಡಿಡಿಎಲ್​ಜೆ ಸಿನಿಮಾ ತೋರಿಸಿ ದಯಯವಿಟ್ಟು. ಆಕೆ ರೊಮ್ಯಾಂಟಿಕ್​ ಚಿತ್ರ ಇಷ್ಟಪಡಬಹುದು’ ಎಂದು ಶಾರುಖ್​ ಖಾನ್​ ಅವರು ಟ್ವೀಟ್​ ಮಾಡಿದ್ದಾರೆ.

ಶಾರುಖ್ ಖಾನ್ ಪ್ರತಿಕ್ರಿಯೆಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಷ್ಟು ಸುಂದರವಾಗಿ ಪ್ರತಿಕ್ರಿಯೆ ನೀಡಿದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ನೀವು ಯಾವಾಗಲೂ ನಗುವನ್ನು ಹಂಚುತ್ತಿರುತ್ತೀರಿ, ಸಂತೋಷ ಹಂಚುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. 

'ಪಠಾಣ್' ಭಾರತದಲ್ಲಿ ಕ್ರಾಂತಿ ಆರಂಭಿಸಿದೆ; ನಿರ್ದೇಶಕ ಅನುರಾಗ್ ಕಶ್ಯಪ್

ಪಠಾಣ್ ಕಲೆಕ್ಷನ್ 

ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬಂದಿರುವ ಪಠಾಣ್ ಸಿನಿಮಾ ಬರೋಬ್ಬರಿ 729 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತ ಮತ್ತು ವಿದೇಶದಲ್ಲೂ ಪಠಾಣ್ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಪಠಾಣ್ ನಲ್ಲಿ ಶಾರುಖ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ವಿಲನ್ ಆಗಿ ಜಾನ್ ಅಬ್ರಾಹಂ ಅಬ್ಬರಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಲ್ಲಿ ಸಿನಿಮಾ ಮೂಡಿಬಂದಿದೆ. ಪಠಾಣ್ ಹಿಂದಿ ಸೇರಿದಂತೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗಿದೆ.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?