ಸುದೀಪ್​ ಅಮ್ಮನಾಗಿದ್ದ ನಟಿ ಶರಣ್ಯ ವಿರುದ್ಧ ಕೊಲೆ ಬೆದರಿಕೆ ಕೇಸ್​ ದಾಖಲು: ಅಷ್ಟಕ್ಕೂ ಆಗಿದ್ದೇನು?

By Suvarna NewsFirst Published Apr 2, 2024, 3:51 PM IST
Highlights

ದಿ ವಿಲನ್​ ಚಿತ್ರದಲ್ಲಿ  ಸುದೀಪ್​ ಅಮ್ಮನಾಗಿ ನಟಿಸಿದ್ದ ನಟಿ ಶರಣ್ಯ ವಿರುದ್ಧ ಕೊಲೆ ಬೆದರಿಕೆ ಕೇಸ್​ ದಾಖಲಾಗಿದೆ.  ಅಷ್ಟಕ್ಕೂ ಆಗಿದ್ದೇನು?
 

ಹಲವು ದಶಕಗಳಿಂದ ನಾಯಕಿಯಾಗಿ ಬಳಿಕ  ತಾಯಿಯ ಪಾತ್ರಗಳಿಂದ ಜನರ ಮನಸ್ಸನ್ನು ಗೆದ್ದು ಖ್ಯಾತಿ ಪಡೆದಿರುವ, ತಮಿಳು ನಟಿ ಶರಣ್ಯ ಪೊನ್ವಣ್ಣನ್. ಇದೀಗ ತಾಯಿ ಪಾತ್ರಗಳಿಂದ ಕಾಲಿವುಡ್​ನ ‘ತಾಯಿ’ ಎಂದೇ ಮನೆಮಾತಾಗಿರುವ ನಟಿಯ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲಾಗಿದೆ. ಅದೂ ನೆರೆಮನೆಯವರಿಂದಲೇ ದೂರು ದಾಖಲಾಗಿದೆ.  ಸೌಮ್ಯ ಸ್ವಭಾವದ ಪಾತ್ರಗಳ ಮೂಲಕವೇ ಜನಪ್ರಿಯಗೊಂಡಿರುವ ನಟಿಯ ಈ ಆರೋಪಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಶಿವರಾಜ್‌ಕುಮಾರ್ ಮತ್ತು  ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾದಲ್ಲಿ ಶರಣ್ಯ ಅವರು ನಟಿಸಿದ್ದರು. ಈ ಸಿನಿಮಾದಲ್ಲಿ ಸುದೀಪ್‌ಗೆ ತಾಯಿಯಾಗಿ ನಟಿಸಿದ್ದರು. ಇಷ್ಟೇ ಅಲ್ಲದೇ,  'ಅಪ್ಪಾಜಿ', 'ಬಾಸ್', 'ಸಮಯಕ್ಕೊಂದು ಸುಳ್ಳು', 'ಪೊಲೀಸ್ ಕ್ವಾಟ್ರರ್ಸ್', 'ಯಕ್ಷ', 'ಚಾರುಲತಾ' ಸಿನಿಮಾಗಳಲ್ಲಿಯೂ ಶರಣ್ಯ ನಟಿಸಿದ್ದಾರೆ.

ಅಂದಹಾಗೆ ಪಕ್ಕದ ಮನೆಯ ಶ್ರೀದೇವಿ ಎನ್ನುವವರು ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ.  ಚೆನ್ನೈನ ವಿರುಗಂಬಾಕ್ಕಂ ಪದ್ಮಾವತಿ ನಗರದಲ್ಲಿ ವಾಸವಾಗಿರೋ ನಟಿ ಹಾಗೂ ಪಕ್ಕದ ಮನೆಯ  ಶ್ರೀದೇವಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ,  ರಾತ್ರಿ ಶ್ರೀದೇವಿ ಆಸ್ಪತ್ರೆಗೆ ಹೋಗಲು ಕಾರನ್ನು ತೆಗೆದಿದ್ದಾರೆ, ಗೇಟ್ ತೆರೆಯುವಾಗ ಪಕ್ಕದಲ್ಲಿ ನಿಂತಿದ್ದ ಶರಣ್ಯ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕಾರು ಜಖಂಗೊಂಡಿದ್ದು, ನಟಿ ಶರಣ್ಯ ಹಾಗೂ ಶ್ರೀದೇವಿ ನಡುವೆ ಜಗಳ ಶುರುವಾಗಿದೆ. ವಾಗ್ವಾದದ ನಂತರ ಶರಣ್ಯ ಕುಟುಂಬಸ್ಥರ ವಿರುದ್ಧ ಶ್ರೀದೇವಿ ಪೊಲೀಸ್ ಕೇಸ್ ದಾಖಲಿಸಿರುವುದಾಗಿ ತಿಳಿದುಬಂದಿದೆ.  ಅಷ್ಟಕ್ಕೂ  ಕಾರು ಪಾರ್ಕಿಂಗ್ ವಿಚಾರದಲ್ಲಿ ಆಗಾಗ್ಗೆ ಜಗಳಗಳು ಆಗುತ್ತಲೇ ಇತ್ತಂತೆ. ಇದೀಗ ಜಗಳ ಮಿತಿ ಮೀರಿದ್ದು, ಪರಸ್ಪರ ನಿಂದನೆ ಮಾಡಿಕೊಂಡಿದ್ದಾರೆ. ನಟಿ ಶರಣ್ಯ, ಶ್ರೀದೇವಿಯನ್ನು ಕೊಲ್ಲುವುದಾಗಿ ಬೆದರಿಕೆ ಸಹ ಹಾಕಿದ್ದಾರೆಂದು ನೆರೆಮನೆಯವರು ಆರೋಪಿಸಿ ದೂರು ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶ್ರೀದೇವಿ ಅವರು,  ಸಿಸಿಟಿವಿ ದೃಶ್ಯಾವಳಿಗಳನ್ನು ಸಹ  ನೀಡಿದ್ದಾರೆ.

ಶ್ರೀದೇವಿ ಪುತ್ರಿ ಜಾಹ್ನವಿ ರಾಜಕೀಯ ಧುರೀಣನ ಸೊಸೆಯಾಗೋದು ಪಕ್ಕನಾ? ಅಪ್ಪ ಬೋನಿ ಕಪೂರ್​ ಹೇಳಿದ್ದೇನು?

ಇದರ ವಿಡಿಯೋ ವೈರಲ್​ ಆಗಿದೆ.  ಪೊಲೀಸರು ಇಬ್ಬರ ದೂರುಗಳನ್ನು ಸ್ವೀಕರಿಸಿದ್ದು, ಸ್ಥಳ ಪರಿಶೀಲನೆ ಬಳಿಕ ಇಬ್ಬರನ್ನೂ ಕರೆಸಿ ವಿಚಾರಣೆ ಮಾಡಲಿದ್ದಾರೆ. ಇನ್ನು ಶರಣ್ಯ ಅವರ ಕುರಿತು ಹೇಳುವುದಾದರೆ, ಕಮಲ್ ಹಾಸನ್ ನಟಿಸಿ, ಮಣಿರತ್ನಂ ನಿರ್ದೇಶನ ಮಾಡಿದ್ದ ಕ್ಲಾಸಿಕ್ ಸಿನಿಮಾ ‘ನಾಯಗನ್’ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶರಣ್ಯ, ಹಲವು ಸಿನಿಮಾಗಳಲ್ಲಿ ನಾಯಕಿ ಪಾತ್ರಗಳಲ್ಲಿ ನಟಿಸಿ ಮಿಂಚಿದರು. ಕನ್ನಡದಲ್ಲಿಯೂ ಕೆಲವು ಸಿನಿಮಾಗಳಲ್ಲಿ ಶರಣ್ಯ ನಟಿಸಿದ್ದಾರೆ. ಆ ನಂತರ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
 
ಶರಣ್ಯ ಪತಿ ಪೊನ್ವಣ್ಣನ್ ಕೂಡ ಸಿನಿಮಾ ನಟರಾಗಿದ್ದಾರೆ. 'ನಾಯಗನ್' ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶರಣ್ಯ, 'ಥೆನ್‌ಮೆರ್ಕು ಪರುವಕಾಟ್ರು' ಸಿನಿಮಾದ ನಟನೆಗಾಗಿ 'ಅತ್ಯುತ್ತಮ ನಟಿ' ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಎರಡು ಬಾರಿ ರಾಜ್ಯ ಪ್ರಶಸ್ತಿ, 5 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಶರಣ್ಯ ಪಡೆದುಕೊಂಡಿದ್ದಾರೆ. ತಮಿಳಿನ ಜೊತೆಗೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಶರಣ್ಯ ಪೊನ್ವಣ್ಣನ್ ನಟಿಸಿದ್ದಾರೆ. 'ವೇಲೈಯಿಲ್ಲಾ ಪಟ್ಟಧಾರಿ' ಸಿನಿಮಾದಲ್ಲಿನ ಶರಣ್ಯ ಅವರ ತಾಯಿ ಪಾತ್ರಕ್ಕೆ ಅಪಾರ ಜನಮನ್ನಣೆ ಸಿಕ್ಕಿತ್ತು. 

ಐಶ್ವರ್ಯ ರೈ ವಿರುದ್ಧ ಅಮಿತಾಭ್​ ಮೊಮ್ಮಗಳು ನವ್ಯಾ ಹೀಗೆಲ್ಲಾ ಹೇಳಿದ್ರಾ? ಫ್ಯಾನ್ಸ್​ ಶಾಕ್​
 

click me!