ಅಕ್ಷಯ್ ಕುಮಾರ್ ಪತ್ನಿ, ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ತಮ್ಮ ಇಬ್ಬರೂ ಮಕ್ಕಳು ಓಡಿ ಹೋಗಿ ಮದ್ವೆಯಾಗ್ಲಿ ಎಂದು ದೇವರನ್ನು ಕೇಳಿಕೊಳ್ತಿದ್ದಾರೆ. ಯಾಕೆ ಗೊತ್ತಾ?
ಬಾಲಿವುಡ್ ತಾರಾ ಜೋಡಿಗಳ ಪೈಕಿ ಹೆಚ್ಚಿನ ಜೋಡಿಗಳು ಬಹುಕಾಲ ಒಟ್ಟಿಗೆ ಇದ್ದದ್ದು ಕಡಿಮೆಯೇ. ಒಂದೇ ಮದುವೆಯಾಗಿ ಸುದೀರ್ಘ ದಾಂಪತ್ಯ ಜೀವನ ನಡೆಸುತ್ತಿರುವ ಬೆರಳೆಣಿಕೆಯಷ್ಟು ಜೋಡಿಗಳ ಪೈಕಿ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಜೋಡಿಯೂ ಒಂದು. ಇವರಿಬ್ಬರೂ 2001 ರಲ್ಲಿ ಮದುವೆಯಾಗಿದ್ದಾರೆ. ಅವರಿಗೆ ನಿತಾರಾ ಮತ್ತು ಆರವ್ ಎಂಬ ಇಬ್ಬರು ಮಕ್ಕಳು ಇದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಸಕತ್ ಫೇಮಸ್ ಆಗಿದ್ದ ಟ್ವಿಂಕಲ್ ಖನ್ನಾ, ಈಗಲೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಸದ್ಯ ಇವರು ಲೇಖಕಿಯಾಗಿ ಫೇಮಸ್ ಆಗಿದ್ದಾರೆ. ಟ್ವಿಂಕಲ್ 1995 ರಲ್ಲಿ ಬರ್ಸಾತ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಹಲವಾರು ಚಿತ್ರಗಳಲ್ಲಿ ನಟಿಸಿದ ನಂತರ ಅವರು 2001 ರಲ್ಲಿ ನಟನೆಯನ್ನು ತೊರೆದರು. ಅವರು ಕೊನೆಯದಾಗಿ ಲವ್ ಕೆ ಲಿಯೆ ಕುಚ್ ಭಿ ಕರೇಗಾ (2001) ಚಿತ್ರದಲ್ಲಿ ಕಾಣಿಸಿಕೊಂಡರು. ಇದೀಗ ಲೇಖಕಿಯಾಗಿ ಮುಂದುವರೆದಿದ್ದಾರೆ.
ಇದೀಗ ಟ್ವಿಂಕಲ್ ಖನ್ನಾ ತಮ್ಮ ಮಕ್ಕಳ ಮದುವೆಯ ಬಗ್ಗೆ ಮಾತನಾಡುವ ಮೂಲಕ ಸಕತ್ ಸದ್ದು ಮಾಡುತ್ತಿದ್ದಾರೆ. ಅದು ಏನೆಂದರೆ, ತಮ್ಮ ಇಬ್ಬರೂ ಮಕ್ಕಳು ಓಡಿ ಹೋಗಿ ಮದ್ವೆಯಾದ್ರೆ ಬೆಸ್ಟ್ ಎಂದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಅಂಕಣದಲ್ಲಿ ಟ್ವಿಂಕಲ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಪೂರ್ವ ವಿವಾಹದ ಪಾರ್ಟಿಯ ಬಗ್ಗೆ ಹೇಳುವ ಸಮಯದಲ್ಲಿ ಈ ವಿಷಯವನ್ನು ತಿಳಿಸಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಂದ ಹಾಗೆ ಅಕ್ಷಯ್ ಮತ್ತು ಟ್ವಿಂಕಲ್ ಅವರ ಮಗ ಆರವ್ಗೆ ಈಗ 21 ವರ್ಷ ಹಾಗೂ ಮಗಳು ನಿತಾರಾಗೆ 11 ವರ್ಷ. ಇವರಿಬ್ಬರೂ ಮದುವೆ ವಯಸ್ಸಿಗೆ ಬಂದಾಗ ಓಡಿ ಹೋಗಿ ಮದ್ವೆಯಾಗೋದೆ ಒಳ್ಳೆಯದು ಎಂದು ಟ್ವಿಂಕಲ್ ಖನ್ನಾ ಹೇಳಿದ್ದಾರೆ.
ಮಿಸ್ ವರ್ಲ್ಡ್ ವೇದಿಕೆಯಲ್ಲಿ ನೀತಾ ಅಂಬಾನಿಗೆ ವಿಶೇಷ ಮಾನವೀಯ ಪ್ರಶಸ್ತಿ: ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
ಅಷ್ಟಕ್ಕೂ ಟ್ವಿಂಕಲ್ ಅವರು ಈ ರೀತಿ ಹೇಳುವುದಕ್ಕೆ ಕಾರಣವೂ ಇದೆ. ಮುಕೇಶ್ ಮತ್ತು ನೀತಾ ಅಂಬಾನಿಯವರ ಪುತ್ರ ಅನಂತ್ ಅವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಅದು ಸಕತ್ ಅದ್ಧೂರಿಯಾಗಿತ್ತು ಎನ್ನುವ ಮೂಲಕ ವಿಷಯವನ್ನು ತೆರೆದಿಟ್ಟಿದ್ದಾರೆ ಟ್ವಿಂಕಲ್. ಅಷ್ಟಕ್ಕೂ ಈ ಪರಿ ಅದ್ಧೂರಿ ಅಲ್ಲದಿದ್ದರೂ 200 ಕೋಟಿಯ ಒಡತಿಯಾಗಿರುವ ಟ್ವಿಂಕಲ್ಗೆ ಮಕ್ಕಳ ಮದ್ವೆಯನ್ನು ಭರ್ಜರಿ ಮಾಡಲು ಹಣದ ತೊಂದರೆಯಂತೂ ಇಲ್ಲ. ಆದರೆ ವಿಷಯ ಅದಲ್ಲ. ಟ್ವಿಂಕಲ್ ಹೇಳಿದ್ದೇನೆಂದರೆ, ಪ್ರೀ ವೆಡ್ಡಿಂಗ್ ಭರ್ಜರಿಯೇನೋ ಆಯಿತು. ಆದರೆ ನೀತಾ ಬಾಬಿಯ ಡ್ಯಾನ್ಸ್ ನೋಡಿ ನನಗೆ ಸುಸ್ತಾಗಿ ಹೋಯಿತು. ನನ್ನ ಮಕ್ಕಳ ಮದುವೆಯಲ್ಲಿ, ಅಷ್ಟು ಸೊಗಸಾಗಿ, ಸುಂದರವಾಗಿ, ಅದ್ಭುತವಾಗಿ ಡ್ಯಾನ್ಸ್ ಮಾಡಲು ನನ್ನಿಂದತೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಮಕ್ಕಳು ಓಡಿ ಹೋಗಿ ಮದ್ವೆಯಾದರೆ ನಾನು ಡ್ಯಾನ್ಸ್ ಮಾಡುವ ಪ್ರಮೇಯ ಬರುವುದಿಲ್ಲ ಎಂದಿದ್ದಾರೆ.
ತಮ್ಮ ಡ್ಯಾನ್ಸ್ ಬಗ್ಗೆ ತಾವೇ ತಮಾಷೆ ಮಾಡಿಕೊಂಡಿರುವ ನಟಿ, ಕೊರೋನಾ ಸಮಯದಲ್ಲಿ ನಾನು ಕೊನೆಯ ಬಾರಿಗೆ ನೃತ್ಯ ಮಾಡಲು ಪ್ರಯತ್ನಿಸಿದ್ದೆ. ಆಗಲೇ ಗೊತ್ತಾಗಿದ್ದು ಏನೆಂದರೆ, ದೇವರು ಕೂಡ ನನ್ನ ಡ್ಯಾನ್ಸ್ ನೋಡಲು ಬಯಸಲಿಲ್ಲ ಎಂದು. ದೇವರು ಡ್ಯಾನ್ಸ್ ನೋಡಲು ಸಾಧ್ಯವಾಗಲೇ ನನ್ನನ್ನು ಬೀಳಿಸಿಯೇ ಬಿಟ್ಟ. ಕೆಳಗೆ ಬಿದ್ದು ನನ್ನ ಕಾಲು ಮುರಿದುಕೊಂಡೆ. ಇನ್ನು ಮಕ್ಕಳ ಮದ್ವೆಯಲ್ಲಿ ಡ್ಯಾನ್ಸ್ ಮಾಡಿದ್ರೆ ಅಷ್ಟೇ ಕಥೆ ಎಂದಿದ್ದಾರೆ. ಇನ್ನೂ ಕೆಲವು ಕಾರಣ ಕೊಟ್ಟಿರೋ ನಟಿ, ಅಕ್ಷಯ್ ಕುಮಾರ್ಗೆ ರಾತ್ರಿ 10 ಗಂಟೆಯ ನಂತರ ಎಚ್ಚರವೇ ಆಗಲ್ಲ. ನಾವಿಬ್ಬರೂ 20 ಕ್ಕೂ ಹೆಚ್ಚು ಜನರಿಗೆ ಔತಣಕೂಟಗಳನ್ನು ಆಯೋಜಿಸುವಾಗಲೇ ಸುಸ್ತಾಗಿ ಹೋಗ್ತೇವೆ. ಇನ್ನು ಅಂಬಾನಿಯ ಮದ್ವೆಯಂತೆ ಅಷ್ಟು ಜನ ಬಂದ್ರೆ ದೇವ್ರೆ ಗತಿ. ಇದನ್ನೆಲ್ಲಾ ನೋಡಿದ್ರೆ ಮಕ್ಕಳು ಓಡಿ ಹೋಗಿ ಮದ್ವೆಯಾಗೋದೇ ಬೆಸ್ಟ್ ಎಂದು ತಮಾಷೆ ಮಾಡಿದ್ದಾರೆ.
ಅಮಿತಾಭ್-ಅಭಿಷೇಕ್ ಒಟ್ಟಿಗೇ ಇಲ್ವಾ? ಇನ್ಸ್ಟಾದಲ್ಲಿನ ಚಾಟ್ ನೋಡಿ ಇದೆಲ್ಲಾ ಯಾಕೆ ಬೇಕು ಕೇಳ್ತಿದ್ದಾರೆ ಫ್ಯಾನ್ಸ್!