tamanna beauty tips : ತಮನ್ನಾ ತರ ಬ್ಯೂಟಿಫುಲ್ ಆಗಬೇಕು ಅಂದ್ರೆ ಸಿಂಪಲ್, ಮುಖಕ್ಕೆ ಎಂಜಲು ಹಚ್ಕೊಳ್ಳಿ!?

By Roopa Hegde  |  First Published Aug 17, 2024, 3:22 PM IST

ಆಜ್ ಕೀ ರಾತ್… ಅಂತ ಪಡ್ಡೆ ಹುಡುಗ್ರ ನಿದ್ರೆಗೆಡಿಸಿರುವ ತಮನ್ನಾ ಭಾಟಿಯಾ, ಹೊಳೆಯುವ ಸ್ಕಿನ್ ಹೊಂದಿದ್ದಾರೆ. ಮಿಲ್ಕಿ ಕ್ವೀನ್ ಎಂದೇ ಪ್ರಸಿದ್ಧಿ ಪಡೆದಿರುವ ತಮನ್ನಾ, ಮೊಡವೆಗೆ ಬಳಸೋ ಮದ್ದು ಅಚ್ಚರಿ ಹುಟ್ಟಿಸುವಂತಿದೆ. 
 


ಮಿಲ್ಕಿ ಕ್ವೀನ್ ನಟಿ ತಮನ್ನಾ ಭಾಟಿಯಾ (Milky Queen actress Tamannaah Bhatia) ನಟನೆಯಲ್ಲಿ ಮಾತ್ರವಲ್ಲ ಸೌಂದರ್ಯ (beauty) ದಲ್ಲೂ ಎತ್ತಿದ ಕೈ. ಕತ್ತಲಲ್ಲೂ ಹೊಳೆಯುವ ತ್ವಚೆ (Skin) ಹೊಂದಿರುವ ತಮನ್ನಾ 34 ವರ್ಷವಾದ್ರೂ 18 ವರ್ಷದವರನ್ನು ನಾಚಿಸುವ ಬ್ಯೂಟಿ ಕ್ವೀನ್ (Beauty Queen). ಟಾಲಿವುಡ್ ನಲ್ಲಿ ಪ್ರಸಿದ್ಧಿ ಪಡೆದಿರುವ ತಮನ್ನಾ, ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ತಮ್ಮ ಸೌಂದರ್ಯದ ಗುಟ್ಟೇನು ಎಂಬುದನ್ನು ತಮನ್ನಾ ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ತಮನ್ನಾ, ಬ್ಯೂಟಿಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಆದ್ರೆ ಇದನ್ನು ಕೇಳಿದ ಅಭಿಮಾನಿಗಳು ಶಾಕ್ ಆದ್ರೆ ಕೆಲವರು ಮೂಗು ಮುರಿದಿದ್ದಾರೆ. 

ತಮನ್ನಾ ಮುಖಕ್ಕೆ ಏನು ಹಚ್ಚುತ್ತಾರೆ ಗೊತ್ತಾ? : ತಮನ್ನಾ ಭಾಟಿಯಾ ಹಳೆ ಸಂದರ್ಶನವೊಂದರಲ್ಲಿ ಈ ವಿಷ್ಯ ಹೇಳಿದ್ದಾರೆ. ಈಗ ಮತ್ತೆ ಅವರು ವಿಡಿಯೋ ವೈರಲ್ ಆಗಿದೆ. ಬೆಳಿಗ್ಗೆ ತಮ್ಮ ಎಂಜಲನ್ನು ಮುಖಕ್ಕೆ ಹಚ್ಚಿಕೊಳ್ತೇನೆ ಎಂದ ತಮನ್ನಾ ಭಾಟಿಯಾ ಅದಕ್ಕೆ ಕಾರಣವೇನು ಎಂಬುದನ್ನು ಕೂಡ ಹೇಳಿದ್ದಾರೆ. 

Tap to resize

Latest Videos

ನಿರ್ದೇಶಕ ರಾಜ್ ಜೊತೆ ಪ್ರೇಮ ಸಂಬಂಧ, ಮುಂಬೈನಲ್ಲಿ ಕಾಣಿಸಿಕೊಂಡ ಸಮಂತಾ!

ತಮನ್ನಾ ಹೇಳಿದ್ದೇನು? : ಇಂಟರ್ವ್ಯೂನಲ್ಲಿ ಮಾತನಾಡಿದ ತಮನ್ನಾ ಎಲ್ಲರಂತೆ ತಮಗೂ ಮೊಡವೆ ಸಮಸ್ಯೆ ಇದೆ ಎಂದಿದ್ದಾರೆ. ಮೊಡವೆಯಿಂದ ತಮ್ಮ ಮುಖ ಕೆಂಪಾಗುತ್ತದೆ. ಇದಕ್ಕೆ ಪರಿಹಾರವಾಗಿ ನಾನು ಏನು ಮಾಡ್ತೇನೆ ಎಂಬುದನ್ನು ಕೂಡ ಅವರು ಹೇಳಿದ್ದಾರೆ. ಮೊಡವೆ, ಮುಖ ಕೆಂಪಾಗುವ ಸಮಸ್ಯೆಗೆ ಲಾಲಾರಸ ಔಷಧವೆಂದು ತಮನ್ನಾ ಹೇಳಿದ್ದಾರೆ. ಮುಂಜಾನೆ ಎದ್ದ ತಕ್ಷಣ ಬರುವ ಎಂಜಲನ್ನು ಮೊಡವೆಗೆ ಹಚ್ಚಿಕೊಳ್ಬೇಕು. ಮೊಡವೆಗಳನ್ನು ಒಣಗಿಸುವ ಶಕ್ತಿ ಈ ಲಾಲಾರಸಕ್ಕೆ ಇದೆ ಎಂದು ತಮನ್ನಾ ಹೇಳಿದ್ದಾರೆ. ನಾನು ಎಂಜಲನ್ನು ಹಚ್ಚಿಕೊಳ್ತೇನೆ ಎಂದ್ರೆ ನಿಮಗೆ ಅಸಹ್ಯ ಎನ್ನಿಸಬಹುದು. ಆದ್ರೆ ಇದು ವರ್ಕ್ ಔಟ್ ಆಗುತ್ತೆ ಎನ್ನುತ್ತಾರೆ ನಟಿ ತಮನ್ನಾ. 

ಇದನ್ನೇ ಪರಿಹಾರ ಅಂತ ನಾನು ಹೇಳೋದಿಲ್ಲ ಎಂದ ತಮನ್ನಾ, ಪ್ರತಿಯೊಬ್ಬರ ಚರ್ಮ ಭಿನ್ನವಾಗಿರುತ್ತದೆ. ಹಾಗಾಗಿ ನೀವು ಎಂಜಲು ಬಳಸಿದ್ರೂ ಚರ್ಮದ ಸಮಸ್ಯೆ ಮುಂದುವರೆದಿದೆ ಎಂದಾದ್ರೆ ವೈದ್ಯರನ್ನು ಭೇಟಿ ಮಾಡಿ ಎಂದು ತಮನ್ನಾ ಹೇಳಿದ್ದಾರೆ. 

ತಮನ್ನಾ ವಾದವನ್ನು ಸಪೋರ್ಟ್ ಮಾಡುತ್ತಾ ವಿಜ್ಞಾನಾ?: ನಟಿ ತಮನ್ನಾ ತಮ್ಮ ಮೊಡವೆಗೆ ಲಾಲಾರಸ ಬಳಸ್ತಾರೆ ಎಂದಾಗ ನೀವು ಶಾಕ್ ಆಗಿರ್ತೀರಿ. ಇದೇನ್ ಅಸಹ್ಯ ಅಂತ ನೀವು ಅಂದ್ಕೊಳ್ಬಹುದು. ಆದ್ರೆ ವಿಜ್ಞಾನ ಕೂಡ ನಟಿ ತಮನ್ನಾ ವಾದಕ್ಕೆ ಬೆಂಬಲ ನೀಡ್ತಿದೆ. ಬೆಳಗಿನ ಲಾಲಾರಸ ಮೊಡವೆ ಕಡಿಮೆ ಮಾಡೋದ್ರಲ್ಲಿ ಮ್ಯಾಜಿಕ್ ಮಾಡುತ್ತೆ ಎಂದು ತಮನ್ನಾ ಹೇಳಿದ್ದಾರೆ. 

2019 ರಲ್ಲಿ ಈ ಬಗ್ಗೆ ಅಧ್ಯಯನ ಕೂಡ ನಡೆದಿದೆ. ಇದ್ರಲ್ಲಿ ಕೂಡ ಮಾನವನ ಉಗುಳು ಮೌಖಿಕ ಮತ್ತು ಚರ್ಮದ ಗಾಯಗಳನ್ನು ಮುಚ್ಚಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

ವಟ ವಟ ಅಂತ ಮಾತಾಡೋ ಕಂಗನಾಳ ಲಕ ಲಕ ಹೊಳೆಯೋ ಸ್ಕಿನ್ ಸೀಕ್ರೆಟ್ಸ್!

ಲಾಲಾರಸದಲ್ಲಿ ಏನಿದೆ? : ಅಧ್ಯಯನದ ಪ್ರಕಾರ, ಮಾನವ ಲಾಲಾರಸವು ನೋವು ನಿವಾರಕಗಳು ಮತ್ತು ಒಪಿಯೋರ್ಫಿನ್ ಅನ್ನು ಹೊಂದಿರುತ್ತದೆ. ಹಿಸ್ಟಾಟಿನ್ ಎಂಬ ಪ್ರೋಟೀನ್ ಇದರಲ್ಲಿ ಕಂಡುಬರುತ್ತದೆ. ಇದು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ತೆರೆದ ಗಾಯಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಲಾಲಾರಸ ಬಳಸಬಹುದು ಎನ್ನಲಾಗುತ್ತದೆ. ಲಾಲಾರಸ ಹಚ್ಚಬೇಕೆ ಬೇಡವೇ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಇಲ್ಲ. ನೀವು ಹಚ್ಚಿ ಪ್ರಯೋಗ ಮಾಡ್ಬಹುದು. ಅದಕ್ಕಿಂತ ಮೊದಲು ನಿಮಗೆ ಮೊಡವೆ ಏಕೆ ಕಾಣಿಸಿಕೊಳ್ತಿದೆ ಎಂಬುದನ್ನು ಪತ್ತೆ ಮಾಡೋದು ಮುಖ್ಯ. ಸದ್ಯ ತಮನ್ನಾ ನಟನೆಗಿಂತ ಡಾನ್ಸ್ ನಲ್ಲಿ ಹೆಚ್ಚು ಕಾಣಿಸಿಕೊಳ್ತಿದ್ದಾರೆ. ಐಟಂ ಸಾಂಗ್ ಗಳಿಗೂ ತಮನ್ನಾ ಹೆಜ್ಜೆ ಹಾಕ್ತಿದ್ದು, ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಡೇಟ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. 
 

click me!