ಸಿಂಪಲ್ ವಸ್ತುಗಳ ಮೂಲಕವೇ ಸೌಂದರ್ಯ ಕಾಪಾಡಿಕೊಳ್ಳುತ್ತಾರಂತೆ ಕಂಗನಾ ರಣಾವತ್!
cine-world Aug 16 2024
Author: Suvarna News Image Credits:social media
Kannada
ಕಂಗನಾ ರನಾವತ್ ಸೌಂದರ್ಯ ರಹಸ್ಯಗಳು
ತಾನೊಬ್ಬಳೇ ದೇಶ ಪ್ರೇಮಿ ಹೊಂದಿದೆ ಬಾಲಿವುಡ್ ನಟಿ ಎನ್ನುವಂತೆ ಮಾತನಾಡುವ ಕಂಗನಾ ಸೌಂದರ್ಯ ರಹಸ್ಯವಿದು.
Kannada
ಮುಖಕ್ಕೆ ಜೇನುತುಪ್ಪ
ಕಂಗನಾ ತಮ್ಮ ಮುಖಕ್ಕೆ ಜೇನುತುಪ್ಪವನ್ನು ಹಚ್ಚುತ್ತಾರೆ ಮತ್ತು ಇದನ್ನು ಇತರರಿಗೂ ಸಲಹೆ ನೀಡುತ್ತಾರೆ. ಇದಕ್ಕೆ ಆಂಟಿಬ್ಯಾಕ್ಟೀರಿಯಲ್ ಗುಣವಿದೆ.
Kannada
ಸೋಪ್ ರಹಿತ ಕ್ಲೆನ್ಸರ್
ಮುಖ ಸ್ವಚ್ಛಗೊಳಿಸಲು ಕಂಗನಾ ಸೋಪ್ ರಹಿತ ಕ್ಲೆನ್ಸರ್ ಬಳಸುತ್ತಾರಂತೆ. ಕೆಲವೊಮ್ಮೆ ಕ್ಲೀನ್‌ಅಪ್ ಮಾಡುತ್ತಾರೆ.
Kannada
ದೇಸಿ ಉಬ್ಟನ್ ಪ್ಯಾಕ್
ಕಂಗನಾ ಕೂಡ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಹಚ್ಚುವವರಲ್ಲಿ ಒಬ್ಬರು. ಅರಿಶಿನ, ಬೆಸನ್ ಮತ್ತು ಗುಲಾಬಿ ನೀರಿನಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿಯೇ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುತ್ತಾರೆ.
Kannada
ಸೋಪು ಬಳಸೋಲ್ಲ
ಕಂಗನಾ ಚರ್ಮ ಸೂಕ್ಷ್ಮವಾಗಿರುವುದರಿಂದ, ಫೇಶಿಯಲ್ ಮಾಡಿಸುವುದಿಲ್ಲವಂತೆ. ರಾಸಾಯನಿಕಯುಕ್ತ ಸೋಪನ್ನೂ ಬಳಸೋಲ್ವಂತೆ.
Kannada
ಬ್ಯೂಟಿ ಚಿಕಿತ್ಸೆ!
ಹೇರ್ ಸ್ಟೈಲಿಂಗ್ ಉತ್ಪನ್ನಗಳ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಕಂಗನಾ ಕೆಲವೊಮ್ಮೆ ಕೆಲವು ಚಿಕಿತ್ಸೆಗಳ ಮೊರೆ ಹೋಗುತ್ತಾರಂತೆ. ಇದು ಅವರ ಕೂದಲನ್ನು ಆರೋಗ್ಯಕರವಾಗಿರಿಸುತ್ತದೆ.
Kannada
ವಾರಕ್ಕೆ 3 ಬಾರಿ ಕೂದಲಿಗೆ ಎಣ್ಣೆ
ತಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು ವಾರಕ್ಕೆ ಮೂರು ಬಾರಿ ಕಂಗನಾ ಎಣ್ಣೆ ಹಚ್ಚುತ್ತಾರೆ. ಇದು ಅವರ ಕೂದಲನ್ನು ರೇಷ್ಮೆಯಂತೆ, ಹೊಳೆಯುವ ಮತ್ತು ಆರೋಗ್ಯಕರವಾಗಿರಿಸುತ್ತದೆ.
Kannada
ಸಾವಯವ ಉತ್ಪನ್ನ
ಕಂಗನಾ ಯಾವಾಗಲೂ ಕೂದಲು ಮತ್ತು ಚರ್ಮಕ್ಕೆ ಸಾವಯವ ಉತ್ಪನ್ನಗಳನ್ನೇ ಬಳಸೋದಂತೆ. ಎಲ್ಲೋ ಹೋಗುವ ಮೊದಲು ಟೋನರ್, ನಂತರ ಮಾಯಿಶ್ಚರೈಸರ್ ಮತ್ತು ನಂತರ ಐ ಕ್ರೀಮ್ ಅನ್ನು ಬಳಸುವುದಿದೆಯಂತೆ.