ಬೊಂಬಾಟ್‌ ಡ್ರೆಸ್‌ನಲ್ಲಿ 'ಘರ್ ಆಯಾ' ಎನ್ನುತ್ತಿರುವ ಸನ್ನಿ ಲಿಯೋನ್ ಝಲಕ್ ನೋಡಿ!

Published : Oct 05, 2023, 06:12 PM ISTUpdated : Oct 05, 2023, 06:15 PM IST
ಬೊಂಬಾಟ್‌ ಡ್ರೆಸ್‌ನಲ್ಲಿ 'ಘರ್ ಆಯಾ' ಎನ್ನುತ್ತಿರುವ ಸನ್ನಿ ಲಿಯೋನ್ ಝಲಕ್ ನೋಡಿ!

ಸಾರಾಂಶ

ನಟಿ ಸನ್ನಿ ಲಿಯೋನ್ ಮಾದಕವಾಗಿ ಕಾಣಿಸಿಕೊಂಡಿದ್ದು, ಪಡ್ಡೆಗಳ ಹೃದಯ ಬಡಿತ ಹೆಚ್ಚುಕಡಿಮೆ ಆಗುವುದು ಪಕ್ಕಾ ಎನ್ನಬಹುದು. ಅಕ್ಟೋಬರ್ 8, 2023 ರಂದು ಬಿಡುಗಡೆ ಆಗಲಿರುವ ಈ ಆಲ್ಬಂ ಅದೆಷ್ಟು ಮಿಲಿಯನ್ ಜನರ ಹೃದಯದಲ್ಲಿ ಸ್ಥಾನ ಪಡೆಯುವುದೋ ಬಲ್ಲವರಾರು? 

ಬಾಲಿವುಡ್ ನಟಿ, ಇಂಟರ್‌ ನ್ಯಾಷನಲ್ ಖ್ಯಾತಿಯ ಸನ್ನಿ ಲಿಯೋನ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೊಸ ವೀಡಿಯೋ ಝಲಕ್ ಒಂದನ್ನು ರಿಲೀಸ್ ಮಾಡಿದ್ದಾರೆ. ಇದೇ ತಿಂಗಳು 8ರಂದು (8 ಅಕ್ಟೋಬರ್ 2023) ಬಿಡುಗಡೆ ಆಗಲಿರುವ ನಟಿ ಸನ್ನಿ ಲಿಯೋನ್ ವಿಡಿಯೋದ ಟ್ರೈಲರ್ ಝಲಕ್ ಇದಾಗಿದ್ದು, ಬಿಡುಗಡೆಯಾದ 5 ತಾಸುಗಳಲ್ಲಿ ಸುಮಾರು 50, 000 ಲೈಕ್ಸ್ ಪಡೆದುಕೊಂಡಿದೆ. ಇದು ನಟಿ ಸನ್ನಿ ಲಿಯೋನ್ ಮಹಿಮೆ!

ಕೆನಡಾ ಮತ್ತು ಅಮೆರಿಕಾ ಸಿಟಿಜನ್‌ಶಿಪ್ ಹೊಂದಿರುವ ನಟಿ ಸನ್ನಿ ಲಿಯೋನ್, ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸುವ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಭಾರತಕ್ಕೆ ಬಂದಿದ್ದು ಗೊತ್ತೇ ಇದೆ. ಬಳಿಕ ಸನ್ನಿ ಲಿಯೋನ್ ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ 'ಬಾಲಿವುಡ್ ನಟಿ' ಎಂಬ ಖ್ಯಾತಿಗೆ ಪಾತ್ರರಾದರು. ಆಗಾಗ, ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ 'ಆಲ್ಬಂ'ಗಳನ್ನು ರಿಲೀಸ್ ಮಾಡಿ ತಮ್ಮ ಅಭಿಮಾನಿಗಳನ್ನು ರಂಜಿಸುವ ಸನ್ನಿ, ಇದೀಗ ಹೊಸದೊಂದು ಸಾಹಸಕ್ಕೆ ಮುಂದಾಗಿದ್ದಾರೆ. 'ಮೇರಾ ಪಿಯಾ ಘರ್ ಆಯಾ 2.0' ವೀಡಿಯೋ ಆಲ್ಬಂ ನ ಟ್ರೈಲರ್ ಝಲಕ್ ಹರಿಬಿಟ್ಟಿದ್ದಾರೆ.

ಕಣ್ಣು ಮುಚ್ಚಿ 'ಬಾರಮ್ಮ' ಎಂದು ಕರೆದ ವೈಷ್ಣವ್ 'ಲಕ್ಷ್ಮೀ'ಗೆ ತೋರಿಸಿದ್ದೇನು ನೋಡಿ!

ಈಗಾಗಲೇ ನಟಿ ಸನ್ನಿ ಲಿಯೋನ್ 'ಮೇರಾ ಪಿಯಾ ಘರ್ ಆಯಾ 2.0' ವಿಡಿಯೋ ಬಿಡುಗಡೆ ಮಾಡಲಾಗಿದೆ. ಇದು ಬಹಳಷ್ಟು ಕ್ರೇಜ್ ಹುಟ್ಟಿಸಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ವೀಡಿಯೋದ 2.0 ಅಂದರೆ ಎರಡನೇ ವರ್ಷನ್ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ವೀಡಿಯೋ ಬಿಡುಗಡೆಗೂ ಮೊದಲು ಟ್ರೈಲರ್ ಲಾಂಚ್ ಪ್ರೊಗ್ರಾಂ ಇದ್ದು, ಅದು ಅಕ್ಟೋಬರ್ 8 ರಂದು ಫೀಕ್ಸ್ ಆಗಿದೆ. ಅದರ ಪ್ರೀಮಿಯರ್ ಶೋ ಎಂಬಂತೆ ಈ ಟ್ರೈಲರ್ ವಿಡಿಯೋ ರಿಲೀಸ್ ಆಗಿ ಇದೀಗ ಭಾರೀ ವೈರಲ್ ಆಗತೊಡಗಿದೆ. 

ಬಿಗ್ ಬಾಸ್ ಮನೆಗೆ 'ಮಜಾ ಭಾರತ'ದ ಚಂದ್ರಪ್ರಭ ಎಂಟ್ರಿ; ಇದು ಲೇಟೆಸ್ಟ್ ಗಾಸಿಪ್!

ಈ ವೀಡಿಯೋದಲ್ಲಿ ನಟಿ ಸನ್ನಿ ಲಿಯೋನ್ ಮಾದಕವಾಗಿ ಕಾಣಿಸಿಕೊಂಡಿದ್ದು, ಪಡ್ಡೆಗಳ ಹೃದಯ ಬಡಿತ ಹೆಚ್ಚುಕಡಿಮೆ ಆಗುವುದು ಪಕ್ಕಾ ಎನ್ನಬಹುದು. ಸನ್ನಿ  ಲಿಯೋನ್ ಸೊಂಟ ಬಳುಕಿಸುತ್ತ ಸ್ಟುಡಿಯೋ ಸೆಟ್‌ನಲ್ಲಿ ಬ್ಯಾಂಕ್‌ಗ್ರೌಂಡ್‌ ಮ್ಯೂಸಿಕ್ ಹಾಗೂ ಆರ್ಟಿಸ್ಟ್ ನಡುವೆ ಕುಣಿಯುತ್ತ ಬರಲು, ಸಖತ್ ಕಿಕ್ ಬರುವಂತಿದೆ. ಹಸಿರು ಝರಿ ಡ್ರೆಸ್‌ನಲ್ಲಿ ಮಿಂಚುತ್ತಿರುವ ಸನ್ನಿ ಲಿಯೋನ್ ನೋಡುವುದು ಕಣ್ಣಿಗೆ ಹಬ್ಬ ಎಂಬಂತಿದೆ. ಒಟ್ಟನಲ್ಲಿ, 8 ರಂದು ಬಿಡುಗಡೆ ಆಗಲಿರುವ ಈ ಆಲ್ಬಂ ಅದೆಷ್ಟು ಮಿಲಿಯನ್ ಜನರ ಹೃದಯದಲ್ಲಿ ಸ್ಥಾನ ಪಡೆಯುವುದೋ ಬಲ್ಲವರಾರು? 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?