ನಿಗೂಢ ವ್ಯಕ್ತಿ ಜೊತೆ ಉರ್ಫಿ ಎಂಗೇಜ್​ಮೆಂಟ್​ ಸುದ್ದಿ ಕೇಳುತ್ತಲೇ ಮಾಜಿ ಬಾಯ್​ಫ್ರೆಂಡ್​ನಿಂದ ದುಬಾರಿ ಗಿಫ್ಟ್​!

By Suvarna News  |  First Published Oct 5, 2023, 5:47 PM IST

ನಿಗೂಢ ವ್ಯಕ್ತಿ ಜೊತೆ ನಟಿ ಉರ್ಫಿ ಎಂಗೇಜ್​ಮೆಂಟ್​ ಸುದ್ದಿ ಕೇಳುತ್ತಲೇ ಮಾಜಿ ಬಾಯ್​ಫ್ರೆಂಡ್​ನಿಂದ ದುಬಾರಿ ಗಿಫ್ಟ್ ನೀಡಿರುವುದಾಗಿ ನಟಿ ಹೇಳಿದ್ದಾರೆ.   
 


ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ಈಕೆಗೆ ತುಂಬಾ ಖುಷಿ. ಇವರ ವಿಶೇಷ ಎಂದರೆ ಬಟ್ಟೆ ಹಾಕಿದರೂ ಟ್ರೋಲ್​ಗೆ ಒಳಗಾಗುತ್ತಾರೆ.

ತಮ್ಮ ಬಟ್ಟೆಯ ಕಾರಣದಿಂದ ಯಾರೂ ಮನೆ ಕೊಡುವುದಿಲ್ಲ, ಹೋಟೆಲ್​ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದೆಲ್ಲಾ ಹೇಳುತ್ತಿದ್ದ ಉರ್ಫಿಯ ಎಂಗೇಜ್​ಮೆಂಟ್​ ಕೊನೆಗೂ ಆದಂತಿದೆ. ಮೊನ್ನೆ ಫೋಟೋ ಒಂದು ವೈರಲ್​ ಆಗಿದ್ದು, ಸಕತ್​ ಸದ್ದು ಮಾಡುತ್ತಿದೆ.  ಉರ್ಫಿ ಸಹೋದರಿ ಉರುಸಾ  ಫೋಟೋ ಹಂಚಿಕೊಂಡಿದ್ದಾರೆ.   ಉರ್ಫಿ ಜಾವೇದ್ ಮತ್ತು ಒಬ್ಬ ನಿಗೂಢ ವ್ಯಕ್ತಿಯ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಈ ಫೋಟೋ ನಿಶ್ಚಿತಾರ್ಥದ ವದಂತಿಗಳನ್ನು ಹುಟ್ಟುಹಾಕಿದೆ.

Tap to resize

Latest Videos

ರುಂಡವಿಲ್ಲದೇ ಕಾರಿನಿಂದ ಇಳಿದು ಜನರಿಗೆ ಶಾಕ್‌ ನೀಡಿದ ಉರ್ಫಿ ಜಾವೇದ್!

ಈ ಜೋಡಿ ಪವಿತ್ರ ಹೋಮ ಕುಂಡದ ಮುಂದೆ ಕುಳಿತು ಅರ್ಚಕರು ಹೇಳಿದಂತೆ ಮಾಡುತ್ತಿದ್ದಾರೆ. ಹೀಗಾಗಿ ಉರ್ಫಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ನಂಬಿದ್ದಾರೆ. ಇನ್ನು, ತನಗೆ ಗಂಡು ಸಿಗುತ್ತಿಲ್ಲ, ಯಾರು ಮದುವೆಯಾಗಲ್ಲ ಎಂದು ಹೇಳಿತ್ತಿದ್ದದ್ದನ್ನು ನಿಲ್ಲಿಸಬಹುದು ಎಂದು ಅನೇಕರು ಮಾತನಾಡುತ್ತಿದ್ದಾರೆ. ಆದರೂ, ಬಿಗ್ ಬಾಸ್ ಖ್ಯಾತಿಯ ಉರ್ಫಿ ಸೋರಿಕೆಯಾದ ಫೋಟೋಗಳ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
 
ಇದು ನಿಜನೋ, ಸುಳ್ಳೋ ಎನ್ನುವ ಬಗ್ಗೆ ಉರ್ಫಿ ಹೇಳಲಿಲ್ಲ. ಬದಲಿಗೆ ಇದೀಗ ತಮ್ಮ ಮಾಜಿ ಬಾಯ್​ಫ್ರೆಂಡ್​ ದುಬಾರಿ ಉಡುಗೊರೆ ನೀಡಿರುವುದಾಗಿ ತಿಳಿಸಿದ್ದಾರೆ. ನನ್ನ ಮಾಜಿ ಚೆಲುವ  ತನ್ನ ನೆಚ್ಚಿನ ಪುಸ್ತಕ ಮತ್ತು ಬೆಲೆ ಬಾಳುವ ಚಿನ್ನದ ಉಂಗುರ ನೀಡಿರುವುದಾಗಿ ಹೇಳಿದ್ದಾರೆ.  ನನಗೆ EX ಅಥವಾ ಯಾವುದೋ ಗೆಳೆಯನಿದ್ದ.  ಆ ಸಮಯದಲ್ಲಿ ಅವನು ಅಷ್ಟು ಸಂಪಾದಿಸುತ್ತಿರಲಿಲ್ಲ. ಆದರೂ ನನ್ನ ಗೆಳೆಯನಾಗಿದ್ದ ಎಂದಿರೋ ಉರ್ಫಿ, ಈಗ ಆ ಗೆಳೆಯ  ನೆಚ್ಚಿನ ಪುಸ್ತಕಗಳು ಮತ್ತು ಚಿನ್ನದ ಉಂಗುರ ನೀಡಿರುವುದಾಗಿ ಹೇಳಿದ್ದಾರೆ.
 
ಇದೇ ಸಂದರ್ಶನದಲ್ಲಿ ನಿಮ್ಮ ಸಂಗಾತಿಯಲ್ಲಿ  ಬಯಸುವ ಗುಣಗಳು ಯಾವುವು ಎಂದು ಕೇಳಲಾಯಿತು. ಇದಕ್ಕೆ ನಟಿ, ಆತ  ಸ್ವಂತ ವ್ಯವಹಾರವನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ಕಲಿತಿರಬೇಕು, ಅವನ ಮಿತಿಯಲ್ಲಿ ಉಳಿಸುವುದನ್ನು ಕಲಿಯಬೇಕು, ಆತ ಯಾವುದರಲ್ಲಿಯೂ ಹೆಚ್ಚು ಹಸ್ತಕ್ಷೇಪ ಮಾಡಬಾರದು ಎಂದಿದ್ದಾರೆ.   ದೀರ್ಘಾವಧಿಯ ಸಂಬಂಧಕ್ಕಾಗಿ ಏನು ಮಾಡಬೇಕು ಎಂಬ ಪ್ರಶ್ನೆಗೆ ನಟಿ,  ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ನೇರಾನೇರ ಹೇಳಬೇಕು. ಯಾರು ಏನೇ ಹೇಳಿದರೂ ಕೆಲಸವನ್ನು ಮಾಡುವುದನ್ನು ಮುಂದುವರಿಸುವುದು ಉತ್ತಮ ಎಂದಿದ್ದಾರೆ. ಯಾರು ಏನೇ ಹೇಳಿದರೂ,  ವಿಷಯಗಳನ್ನು ತುಂಬಾ ಕಠಿಣವಾಗಿ ತೆಗೆದುಕೊಳ್ಳಬೇಡಿ. ವಿಷಯಗಳನ್ನು ನಿಮ್ಮ ಹೃದಯಕ್ಕೆ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು ಮಾಡಿ ಮತ್ತು ಪರಸ್ಪರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದೂ ಸಲಹೆ ನೀಡಿದ್ದಾರೆ ಉರ್ಫಿ. 

ಸಸ್ಯಾಹಾರದ ಪ್ರಚಾರಕ್ಕೆ ಮತ್ಸ್ಯಕನ್ಯೆಯಾದ ಪಾಲಕ್​: ಸೈಫ್​ ಅಲಿ ಪುತ್ರಂಗೂ ನಾನ್​ವೆಜ್​ ಬಿಡಿಸುವೆಯಾ ಅಂದ ಫ್ಯಾನ್ಸ್​!

click me!