ಸನ್ನಿ ಲಿಯೋನ್ ತಮ್ಮ ಎಲ್ಲಾ ಕೆಲಸಕಾರ್ಯಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಅದೇ ರೀತಿ, ಅವರ ಫ್ಯಾನ್ಸ್ ಸಹ ತಮ್ಮ ಅಚ್ಚುಮೆಚ್ಚಿನ ನಟಿ ಸನ್ನಿಯ ಎಲ್ಲಾ ಕೆಲಸಗಳನ್ನು ತಪ್ಪದೇ ನೋಡಿ ಆನಂದಿಸಿ ಕಾಮೆಂಟ್ ಮಾಡುತ್ತಾರೆ.
ನಟಿ ಸನ್ನಿ ಲಿಯೋನ್ ತಪ್ಪೊಪ್ಪಿಗೆ Video ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಡಾನ್ಸ್ ಫ್ಲೋರ್‌ನಲ್ಲಿ ತಮ್ಮ ತಪ್ಪು ಹೆಜ್ಜೆಗಳ ಬಗ್ಗೆ ಪ್ರಾಕ್ಟಿಸ್ ಬಳಿಕ ತಿಳಿದುಕೊಂಡ ನಟ ಸನ್ನಿ ಲಿಯೋನ್, ಈ ಬಗ್ಗೆ ತಪ್ಪೊಪ್ಪಿಗೆ ಕೇಳಿಕೊಂಡಿದ್ದಾರೆ. ಡಾನ್ಸ್ ಪ್ರಾಕ್ಟಿಸ್ ವಿಡಿಯೋ ಹಂಚಿಕೊಂಡಿರುವ ನಟಿ ಸನ್ನಿ, ತಾವು ಇದರಲ್ಲಿ Confessions ಮಾಡಿತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ನಟಿ ಡಾನ್ಸ್ ಮಾಡುತ್ತಿರುವುದು, ಬಳಿಕ ರಿಲ್ಯಾಕ್ಸ್ ಮೂಡ್‌ನಲ್ಲಿ ಮಾತನಾಡುತ್ತಿರುವುದು ಶೂಟ್ ಮಾಡಲಾಗಿದೆ.
ನಟಿ ಸನ್ನಿ ಲಿಯೋನ್ ಭಾರತಕ್ಕೆ ಬಂದಿದ್ದು ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಶೋ ಸಲುವಾಗಿ. ಆದರೆ ಬಳಿಕ ಹೆಚ್ಚುಕಡಿಮೆ ಇಲ್ಲೇ ತಮ್ಮ ನೆಲೆ ಕಂಡುಕೊಂಡಿದ್ದಾರೆ ಎನ್ನಬಹುದು. ಬಿಗ್ ಬಾಸ್ ಶೋ ಬಳಿಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಭಾರತೀಯರ ಪ್ರೀತಿ-ಗೌರವ ಸಂಪಾದಿಸಿಕೊಂಡಿರುವ ನಟಿ ಸನ್ನಿ ಲಿಯೋನ್, ಕೆನಡಾ ಹಾಗೂ ಅಮೆರಿಕಾ ಸಿಟಿಜನ್ ಶಿಪ್ ಹೊಂದಿದ್ದಾರೆ. ಭಾರತದ ಪಂಜಾಬ್ ಮೂಲದ ಈ ನಟಿ ಹುಟ್ಟಿದ್ದು ಕೆನಡಾದಲ್ಲಿ ಮತ್ತು ಬೆಳೆದಿದ್ದು ಅಮೆರಿಕಾದಲ್ಲಿ ಎಂಬುದು ವಿಶೇಷ.
ದುಬೈ 'ಮೇಣದ ಪ್ರತಿಮೆ' ಮುಂದೆ ಸ್ಟಾರ್ ಅಲ್ಲು ಅರ್ಜುನ್ ನಿಂತಾಗ...!
ಒಟ್ಟಿನಲ್ಲಿ, ಸನ್ನಿ ಲಿಯೋನ್ ತಮ್ಮ ಎಲ್ಲಾ ಕೆಲಸಕಾರ್ಯಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಾರೆ. ಅದೇ ರೀತಿ, ಅವರ ಫ್ಯಾನ್ಸ್ ಸಹ ತಮ್ಮ ಅಚ್ಚುಮೆಚ್ಚಿನ ನಟಿ ಸನ್ನಿಯ ಎಲ್ಲಾ ಕೆಲಸಗಳನ್ನು ತಪ್ಪದೇ ನೋಡಿ ಆನಂದಿಸಿ, ತಮಗೆ ತೋಚಿದ ಕಾಮೆಂಟ್ ಮಾಡುತ್ತಾರೆ. ಹೀಗೆ ನಡೆಯುತ್ತಿದೆ ನಟಿ ಹಾಗೂ ಫ್ಯಾನ್ಸ್‌ಗಳ ಒಡನಾಟ!
ಕೂಡಿ ಬಾಳೋಣಾ ಎಂದೆಂದೂ ಸೇರಿ ದುಡಿಯೋಣ ಎಂದ ಭಾರತದ 'ದಿಗ್ಗಜರು'