ಶೇಕ್​ಹ್ಯಾಂಡ್​ ಮಾಡುತ್ತಾ ವೃದ್ಧನಿಂದ ಲೈಂಗಿಕ ಕಿರುಕುಳ: ಶಾಕಿಂಗ್​ ಹೇಳಿಕೆ ರಿವೀಲ್​ ಮಾಡಿದ ನಟಿ ಈಶಾ ಚೋಪ್ರಾ

By Suvarna News  |  First Published Oct 6, 2023, 4:57 PM IST

ಶೇಕ್​ಹ್ಯಾಂಡ್ ಮಾಡುವ ನೆಪದಲ್ಲಿ ವೃದ್ಧನೊಬ್ಬ ಹೇಗೆ ತಮ್ಮ ಮೈಮೇಲೆ ಕೈ ಮಾಡಿದ ಎನ್ನುವ ಶಾಕಿಂಗ್​ ಘಟನೆಯನ್ನು ನಟಿ ಈಶಾ ಚೋಪ್ರಾ ರಿವೀಲ್​ ಮಾಡಿದ್ದಾರೆ. 
 


ಲೈಂಗಿಕ ಕಿರುಕುಳ ಎನ್ನುವುದು ಇಂದು ನಿನ್ನೆಯ ಮಾತಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಈ ರೀತಿಯ ಕಿರುಕುಳ ಅನುಭವಿಸಿದವರು ಹಲವರು. ಮಹಿಳೆಯರು ಮಾತ್ರವಲ್ಲದೇ ಎಷ್ಟೋ ಘಟನೆಗಳಲ್ಲಿ ಹುಡುಗರು, ಪುರುಷರು ಕೂಡ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಇದೆ. ಅದರಲ್ಲಿಯೂ ಕಾಮುಕರು ಸಾರ್ವಜನಿಕ ಸ್ಥಳಗಳು, ರಶ್​ ಇರುವ ಪ್ರದೇಶಗಳು, ಬಸ್​, ರೈಲು ಇತ್ಯಾದಿ ಸಾರ್ವಜನಿಕ ಸಾರಿಗೆಗಳನ್ನೇ ತಮ್ಮ ಟಾರ್ಗೆಟ್​ ಮಾಡಿಕೊಳ್ಳುತ್ತಾರೆ. ಇಂಥ ಕಾಮುಕತನಕ್ಕೆ ವಯಸ್ಸಿನ ಮಿತಿ ಇಲ್ಲ. ಈಗಲೋ ಆಗಲೋ ಎನ್ನುವವರೂ ಹೆಣ್ಣು ಮಕ್ಕಳ ಅಂಗಾಂಗಗಳನ್ನು ಮುಟ್ಟಿ ವಿಕೃತ ಸಂತೋಷ ಪಡುವುದು ಇದೆ. ಅಂಥದ್ದೇ ಒಂದು ಶಾಕಿಂಗ್​ ವಿಷಯವನ್ನು ಇದೀಗ ನಟಿಯೊಬ್ಬರು ರಿವೀಲ್​ ಮಾಡಿದ್ದಾರೆ. 

ಸಾಮಾನ್ಯವಾಗಿ ಇಂಥ ವಿಷಯಗಳನ್ನು ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ತಿಳಿಸುವುದು ದೂರದ ಮಾತು, ತಮ್ಮ ಮನೆಯಲ್ಲಿಯೂ ಮಾತನಾಡಲು ಹೆದರುತ್ತಾರೆ, ಅಂಜುತ್ತಾರೆ. ಆದರೆ ನಟಿ ತಮಗಾಗಿರುವ ಅನ್ಯಾಯವನ್ನು ಬಹಿರಂಗಗೊಳಿಸಿದ್ದಾರೆ. ಇವರು ಹೀಗೆ ಹೇಳುತ್ತಿದ್ದಂತೆಯೇ ಹಲವು ಮಹಿಳೆಯರು ತಮಗೆ ಈಗ ಮತ್ತು ಚಿಕ್ಕ ವಯಸ್ಸಿನಲ್ಲಿ ತಮಗಾಗಿರುವ ಕಹಿ ಅನುಭವವನ್ನೂ ಕಮೆಂಟ್​ಗಳಲ್ಲಿ ತಿಳಿಸುತ್ತಿದ್ದಾರೆ. ಅಷ್ಟಕ್ಕೂ ಇಂಥದ್ದೊಂದು ಅನುಭವ ಬಿಚ್ಚಿಟ್ಟ ನಟಿ ಬಾಲಿವುಡ್​ನ ಈಶಾ ಚೋಪ್ರಾ. 

Tap to resize

Latest Videos

ಪತ್ನಿ ಮತ್ತು ಪ್ರಿಯಕರನ ಕೊಲೆ ಮಾಡಿದ್ರಂತೆ ಸಂಜಯ್​ ದತ್​: ನಟನಿಂದ ಶಾಕಿಂಗ್​ ವಿಷ್ಯ ರಿವೀಲ್​!

ನೀರ್ಜಾ, ಎ ಚೀಟ್​ ಡೇ, ನೋ ಲ್ಯಾಂಡ್ಸ್​ ಮ್ಯಾನ್​, ಅಫ್ವಾ, ನೀರಜ್​,  ನೋ ಒನ್​ ಕಿಲ್ಡ್​ ಜೆಸ್ಸಿಕಾ, ಅಲಿಘರ್​, ಮಾಮಾಸ್​ ಬಾಯ್ಸ್​, ಪರಚಾಯಿನಂತ ಹಲವು ಚಿತ್ರಗಳಲ್ಲಿ ನಟಿಸಿರುವ ಈಶಾ, ಪ್ರಸಿದ್ಧ ಬರಹಗಾರ್ತಿ ಕೂಡ ಹೌದು. 30 ವರ್ಷದ ನಟಿ ಈಶಾ ತಮಗೆ  70 ವರ್ಷದ ವೃದ್ಧ ಕಿರುಕುಳ ನೀಡಿದ ಘಟನೆಯನ್ನು ವಿವರಿಸಿದ್ದಾರೆ. 70ರ ವೃದ್ಧನೊಬ್ಬ ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ  ಕೈ ಹಿಡಿದು ಎಳೆದು ಬೇಕಾಬಿಟ್ಟಿಯಾಗಿ  ದೇಹ ಸ್ಪರ್ಶಿಸಿದ್ದಾನಂತೆ. 10 ದಿನಗಳ ಹಿಂದೆ ನನಗೆ ವ್ಯಕ್ತಿಯೊಬ್ಬ ದೈಹಿಕವಾಗಿ ಕಿರುಕುಳ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ 70 ವರ್ಷ ವಯಸ್ಸಿರಬಹುದಾದ ವ್ಯಕ್ತಿ ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ ನನ್ನನ್ನು ಎಳೆದು ದೇಹ ಸ್ಪರ್ಶಿಸಿದ್ದಾನೆ ಎಂದು  ನಟಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಈ ಘಟನೆಯ ನಂತರ ತಾವು ಖಿನ್ನತೆ ಜಾರಿದ್ದುದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯಿಂದ ಹೊರಕ್ಕೆ ಬರಲು ತುಂಬಾ  ದಿನಗಳೇ ಬೇಕಾದವು. ಇದರಿಂದ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದೆ. ತುಂಬಾ ಗಾಬರಿಯಿಂದ ಇದ್ದೆ ಎಂದು ಬರೆದುಕೊಂಡಿದ್ದಾರೆ.
 
 ನಾನು ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಿದ್ದೆ. ನಾನು ವಾಸ್ತವದಲ್ಲಿರಲಿಲ್ಲ. ನಾನು ಶಾಕ್​ನಲ್ಲಿದ್ದೆ. ರಾತ್ರಿ ನಿದ್ರಿಸಲಾದೆ, ಹಗಲು ಹೆಚ್ಚು ಮಲಗುತ್ತಾ ನನ್ನ ದಿನಚರಿಯೇ ಏರುಪೇರಾಗಿತ್ತು.  ಕೈಗಳು ನಡುಗುತ್ತಿದ್ದವು. ಆದರೆ ಟ್ರಾಮಾವನ್ನು ಹೊರಹಾಕಲು ನಡುಗುವಿಕೆಯೂ ಒಂದು ವಿಧಾನವಾದ ಕಾರಣ ನಾನು ಇದನ್ನು ಮಾಮೂಲಾಗಿ ತೆಗೆದುಕೊಂಡೆ. ಈ ದಿನಗಳನ್ನು ದಾಟಿ ಇದನ್ನ ಬರೆಯುವ ಧೈರ್ಯ ಮಾಡಿದ್ದೇನೆ ಎಂದಿದ್ದಾರೆ. ಅಂದು  ನನ್ನೊಂದಿಗಿದ್ದ ಗೆಳತಿ ಬಿಟ್ಟು ಬೇರೆ ಯಾರೂ ಗಮನಿಸಲಿಲ್ಲ. ಆದರೆ ಅವಳೂ ಕೂಡಾ ನನ್ನೊಂದಿಗೆ ಶಾಕ್​ ಆಗಿದ್ದಳು ಎಂದಿರೋ ನಟಿ, ತಾವು  7 ವರ್ಷದವಳಾಗಿದ್ದಾಗ ಇಂಥದ್ದೇ ಘಟನೆ  ಸಿನಿಮಾ ಥಿಯೇಟರ್​ನಲ್ಲಿ ನಡೆದಿತ್ತು ಎಂದು ನೆನಪಿಸಿಕೊಂಡಿದ್ದಾರೆ.  ಆ ಮುಖ ಈಗಲೂ ನೆನಪಾದರೆ ಭಯವಾಗುತ್ತದೆ ಎಂದು ಹೇಳಿದ್ದು, ಹಲವರು ತಮ್ಮ ಚಿಕ್ಕ ವಯಸ್ಸಿನ ಕಥೆಯನ್ನು ಶೇರ್ ಮಾಡಿಕೊಂಡಿದ್ದಾರೆ. 

Vinod Khanna Bday: ಪ್ರೀತಿಸ್ತೇನೆ ಆದ್ರೆ ಮದ್ವೆಯಾಗಲ್ಲ ಎಂದವಳ ಕೈಹಿಡಿದಿದ್ದ ವಿನೋದ್​ ಖನ್ನಾ!

click me!