ನಟಿ ಶ್ರೀದೇವಿ ಸಡನ್ನಾಗಿ ನಟನೆ ನಿಲ್ಲಿಸಿದ್ದು ಯಾಕೆ, ಕೆರಿಯರ್‌ಗೆ ಮೇನ್ ವಿಲನ್‌ ಆಗಿದ್ದು ಇವರೇ ನೋಡಿ!

By Shriram Bhat  |  First Published Nov 19, 2023, 8:02 PM IST

ಮದುವೆ ಬಳಿಕ ಮರು ವರ್ಷ ಬಿಡುಗಡೆಯಾದ ಸಿನಿಮಾ ಜುದಾಯಿ. ಬಾಲಿವುಡ್ ಸ್ಟಾರ್ ನಟ. ಬಿಗ್ ಬಿ ಖ್ಯಾತಿಯ ನಟ ಅಮಿತಾಭ್ ಬಚ್ಚನ್ ಜತೆ ನಟಿ ಶ್ರೀದೇವಿ ಜುದಾಯಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಸಕ್ಸಸ್ ದಾಖಲಿಸಲಿಲ್ಲ. ತೀವ್ರ ನಿರೀಕ್ಷೆ ಮೂಡಿಸಿದ್ದ ಶ್ರೀದೇವಿ-ಅಮಿತಾಭ್ ಜೋಡಿಯ ಚಿತ್ರ ಫ್ಲಾಪ್ ಸಿನಿಮಾ ಎನಿಸಿಕೊಂಡಿತು.


ನಟಿ ಶ್ರೀದೇವಿ ಯಾರಿಗೆ ಗೊತ್ತಿಲ್ಲ? ಇಡೀ ಜಗತ್ತಿಗೆ ಒಬ್ಬರೇ ಶ್ರೀದೇವಿ ಎಂಬಂತೆ ಬೆಳಗಿದ, ಬದುಕಿದ ನಟಿ ಶ್ರೀದೇವಿ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೇ ಆದೀತು. ತಮ್ಮ 5ನೆಯ ವರ್ಷದಲ್ಲಿಯೇ 1967ರಲ್ಲಿ ತಮಿಳು ಸಿನಿಮಾದಲ್ಲಿ ಬಾಲನಟಿಯಾಗಿ ನಟನೆ ಪ್ರಾರಂಭಿಸಿದ ನಟಿ ಶ್ರೀದೇವಿ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಸಿನಿರಂಗಗಳಲ್ಲಿ ನಟಿಸುತ್ತಲೇ ಇದ್ದವರು ಶ್ರೀದೇವಿ. ಜೂನ್ 2, 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಜತೆ ನಟಿ ಶ್ರೀದೇವಿ ಮದುವೆ ನೆರವೇರಿತು. 

ಶ್ರೀದೇವಿ ಮದುವೆಗೂ ಮೊದಲು ಒಪ್ಪಿಕೊಂಡು ನಟಿಸಿದ್ದು, ಆದರೆ ಮದುವೆ ಬಳಿಕ ಮರು ವರ್ಷ ಬಿಡುಗಡೆಯಾದ ಸಿನಿಮಾ ಜುದಾಯಿ. ಬಾಲಿವುಡ್ ಸ್ಟಾರ್ ನಟ. ಬಿಗ್ ಬಿ ಖ್ಯಾತಿಯ ನಟ ಅಮಿತಾಭ್ ಬಚ್ಚನ್ ಜತೆ ನಟಿ ಶ್ರೀದೇವಿ ಜುದಾಯಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾ ಸಕ್ಸಸ್ ದಾಖಲಿಸಲಿಲ್ಲ. ತೀವ್ರ ನಿರೀಕ್ಷೆ ಮೂಡಿಸಿದ್ದ ಶ್ರೀದೇವಿ-ಅಮಿತಾಭ್ ಜೋಡಿಯ ಚಿತ್ರ ಫ್ಲಾಪ್ ಸಿನಿಮಾ ಎನಿಸಿಕೊಂಡಿತು. ಅದಾದ ಬಳಿಕ ಶ್ರೀದೇವಿ ಸಿನಿಮಾಗೆ ಸಹಿ ಹಾಕುವುದನ್ನೇ ಬಿಟ್ಟುಬಿಟ್ಟರು. ಹಾಗಿದ್ದರೆ, ಜುದಾಯಿ ಸಿನಿಮಾವೇ ಶ್ರೀದೇವಿ ವೃತ್ತಿಜೀವನಕ್ಕೆ ಮುಳುವಾಯ್ತೇ? ನೋ ಎನ್ನಬಹುದು. ಅದಕ್ಕೂ ಮೊದಲು ಕೂಡ ಈ ನಟಿಯ ಸಿನಿಮಾಗಳಲ್ಲಿ ಕೆಲವು ಸೋಲು ಅನುಭವಿಸಿತ್ತು.

Tap to resize

Latest Videos

ಧೂಮ್ ಸರಣಿ ಚಿತ್ರಗಳ ನಿರ್ದೇಶಕ ಸಂಜಯ್ ಗಧ್ವಿ ತೀವ್ರ ಹೃದಯಾಘಾತದಿಂದ ನಿಧನ 

ಹಾಗಿದ್ದರೆ ನಟಿ ಶ್ರೀದೇವಿ ಸಡನ್ನಾಗಿ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಲು ಕಾರಣವೇನು? ಬೋನಿ ಕಪೂರ್ ಜತೆ ಮದುವೆ. ಹೌದು, ಬಾಲಿವುಡ್ ಸಿನಿ-ಪಂಡಿತರು ಹಾಗೂ ನಟಿಯ ಆಪ್ತರ ಪ್ರಕಾರ, ತಮ್ಮ ಹೆಂಡತಿಗೆ ಡೈವೋರ್ಸ್ ನೀಡಿ ತುಂಬಾ ಇಷ್ಟಪಟ್ಟು ಮದುವೆಯಾಗಿದ್ದ ಬೋನಿ ಕಪೂರ್, ಶ್ರೀದೇವಿಗೆ ಸಿನಿಮಾ ನಟನೆ ಬೇಡ ಅಂದಿದ್ದರಂತೆ. ಅತಿಲೋಕ ಸುಂದರಿ, ತಮ್ಮ ಅರಗಿಣಿ ಶ್ರೀದೇವಿ ಬೇರೊಬ್ಬರ ಜತೆ ನಟಿಸುವುದು, ತೋಳ ತೆಕ್ಕೆಯಲ್ಲಿ ಬಂಧಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುವುದು ಬೋನಿ ಕಪೂರ್‌ಗೆ ಸುತಾರಾಂ ಇಷ್ಟವಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಶ್ರೀದೇವಿ ತಕ್ಷಣಕ್ಕೆ ನಟನೆಗೆ ನೋ ಅಂದುಬಿಟ್ಟರಂತೆ. 

ಯಶಸ್ಸಿನ ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಬಾಲಿವುಡ್ ಬಿಟ್ಟ ಕಾರಣ ಬಹಿರಂಗ!

ಬೋನಿ ಕಪೂರ್ ಜತೆ ವಿವಾಹದ ಬಳಿಕ, ಜಾಹ್ನವಿ ಹಾಗೂ ಖುಷಿಗೆ ತಾಯಿಯಾದ ಶ್ರೀದೇವಿ ಅವರು ಗಂಡ, ಸಂಸಾರ, ಮಕ್ಕಳು ಎಂಬ ಅಷ್ಟೇ ಪ್ರಪಂಚಕ್ಕೆ ಸೀಮಿತರಾಗಿ ತಾವೊಬ್ಬರು ನಟಿ ಎಂಬುದನ್ನೇ ಮರೆತುಬಿಟ್ಟರು. ನಟಿಯ ವೃತ್ತಿಜೀವನ ಮುಗಿಯಲು ಕಾರಣ ಗಂಡ ಬೋನಿ ಕಪೂರ್ ಕಾರಣ ಎಂಬುದು ಅವರನ್ನು ಬಲ್ಲವರ ಮಾತು. ಹಂಡತಿ ಶ್ರೀದೇವಿಯ ಬಗ್ಗೆ ಅತಿಯಾದ ವ್ಯಾಮೋಹ ಬೆಳೆಸಿಕೊಂಡಿದ್ದ ಬೊನಿ, ನಟಿಸುವುದಿರಲಿ, ಸ್ವತಂತ್ರವಾಗಿ ಮುಂಬೈ ಸುತ್ತಲೂ ಶ್ರೀದೇವಿಗೆ ಬಿಡುತ್ತಿರಲಿಲ್ಲ ಎಂಬ ಮಾತಿದೆ. ಒಟ್ಟಿನಲ್ಲಿ, ಆಗ ಅಕ್ಷರಶಃ ಪಂಜರದ ಪಕ್ಷಿಯಾದರು ಶ್ರೀದೇವಿ!

ಪಾರ್ಕ್ ಮಾಡಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ; ಸೌತ್ ಸಿನಿರಂಗಕ್ಕೆ ಬಿಗ್ ಶಾಕ್!

2012ರಲ್ಲಿ ಕಾಮಿಡಿ ಬೇಸ್ಡ್ ಸಿನಿಮಾ ಇಂಗ್ಲಿಷ್ ವಿಂಗ್ಲಿಷ್ ಮೂಲಕ ಮತ್ತೆ ಸಿನಿಮಾರಂಗಕ್ಕೆ ಧುಮುಕಿದರು ಶ್ರೀದೇವಿ, ಮದುವೆ ಬಳಿಕ ಈ ಚಿತ್ರಕ್ಕೂ ಮೊದಲು ನಟಿ ಶ್ರೀದೇವಿ 'ಮಾಲಿನಿ ಐಯ್ಯರ್' ಎಂಬ ಟಿವಿ ಶೋದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. 2012ರಲ್ಲಿ ಮತ್ತೆ ಸಕ್ರಿಯರಾದರೂ ಸಿನಿಮಾ ಆಯ್ಕೆಯಲ್ಲಿ ತುಂಬಾ ಚೂಸಿ ಆಗಿಬಿಟ್ಟರು. 2017ರಲ್ಲಿ ತೆರೆಗೆ ಬಂದ 'ಮಾಮ್' ನಟಿಯ ಲೊನೆಯ ಚಿತ್ರವಾಯಿತು. 24 ಫೆಬ್ರವರಿ 2018ರಂದು ದುಬೈನಲ್ಲಿ ನಟಿ ಶ್ರೀದೇವಿ ನಿಧನರಾದರು. ಭಾರತದ ಚಿತ್ರರಂಗ ಹಾಗೂ  ಪ್ರೇಕ್ಷಕರು 'ಅತಿಲೋಕ ಸುಂದರಿ'ಯನ್ನು, ಶ್ರೇಷ್ಠ ನಟಿಯೊಬ್ಬರನ್ನು ಕಳೆದುಕೊಂಡಿತು. 

click me!