ತ್ರಿಶಾ ಜೊತೆ ರೇಪ್​, ಬೆಡ್​ರೂಂ ಸೀನ್​ ಬೇಕು ಎಂದ ವಿಡಿಯೋ ವೈರಲ್​ ಆಗ್ತಿದ್ದಂತೇ ಉಲ್ಟಾ ಹೊಡೆದ ನಟ ಖಾನ್​!

By Suvarna News  |  First Published Nov 19, 2023, 6:38 PM IST

 ನಟಿ ತ್ರಿಶಾ ಜೊತೆ ರೇಪ್​, ಬೆಡ್​ರೂಂ ಸೀನ್​ ಬೇಕು ಎಂದ ವಿಡಿಯೋ ವೈರಲ್​ ಆಗ್ತಿದ್ದಂತೇ ಉಲ್ಟಾ ಹೊಡೆದ ನಟ ಖಾನ್​!
 


ದಕ್ಷಿಣ ಭಾರತದ ನಟ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದು, ಅದರ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ತಮಿಳು ಚಿತ್ರ 'ಲಿಯೋ'ಕ್ಕೆ ಸಂಬಂಧಿಸಿದಂತೆ ಈ ಚಿತ್ರದ ಖಳ ನಟರಾಗಿರುವ ಖಾನ್​ ಈ ಅಸಹ್ಯ ಹೇಳಿಕೆ ಕೊಟ್ಟಿದ್ದಾರೆ ಎನ್ನುವ ವಿಡಿಯೋ ವೈರಲ್​ ಆಗುತ್ತಿದೆ. ಅವರು  ಸಂದರ್ಶನವೊಂದರಲ್ಲಿ ಹೇಳಿದ್ದು, 'ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ವಿಡಿಯೋ ವೈರಲ್​ ಆಗುತ್ತಿದೆ. 


ಸದ್ಯ ಲಿಯೋ ಸಿನಿಮಾ ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ಗಳಿಕೆ ಮಾಡುತ್ತಿದೆ. ನಟ ವಿಜಯ್‌ ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ತ್ರಿಶಾ ಹೀರೋಯಿನ್ ಆಗಿದ್ದಾರೆ. ಸಿನಿಮಾ ತಂಡ ಮೂವಿ ಸಕ್ಸಸ್‌ನ ಖುಷಿಯಲ್ಲಿರುವಾಗಲೇ ನಟ ಖಾನ್​ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.  ತಮಿಳು ಚಿತ್ರರಂಗದ ವಿವಾದಾತ್ಮಕ ನಟ ಮನ್ಸೂರ್ ಅಲಿ ಖಾನ್ ಸದ್ಯ ನಟಿ ತ್ರಿಶಾ ಬಗ್ಗೆ ಆಡಿರೋ ಮಾತು ಎಲ್ಲೆಡೆ ವೈರಲ್ ಆಗ್ತಿದೆ. ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಖುದ್ದು ನಟಿ ತ್ರಿಶಾ ಕೂಡ  ನಟನ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ಆ ನಟನ ಮಾತುಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಗೌರವ, ಸ್ತ್ರೀದ್ವೇಷ, ಕೆಟ್ಟ ಅಭಿರುಚಿ ಹಾಗೂ ಲೈಂಗಿಕ ಲೋಭವನ್ನು ಹೊಂದಿದೆ. ನನ್ನೊಂದಿಗೆ ನಟಿಸಲು ಅವರು ಬಯಸಬಹುದು ಆದರೆ ನಾನು ಅವರಂತಹ ಕೆಟ್ಟ ವ್ಯಕ್ತಿಯೊಂದಿಗೆ ಎಂದಿಗೂ ಪರದೆಯನ್ನು ಹಂಚಿಕೊಳ್ಳುವುದಿಲ್ಲ ಎಂದಿದ್ದರು. ಚಿತ್ರದ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಬೇಸರ ವ್ಯಕ್ತಪಡಿಸಿದರು. ನಟ ಖಾನ್​ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿಯೂ ಸಾಕಷ್ಟು  ಮಂದಿ ಟೀಕೆ  ಮಾಡುತ್ತಿದ್ದಾರೆ. 

Tap to resize

Latest Videos

undefined

ತ್ರಿಶಾ ಜೊತೆ ಬೆಡ್ ರೂಮ್ ಸೀನ್ ಇರುತ್ತೆ, ಎತ್ತಿಕೊಂಡು ಹೋಗ್ಬೋದು ಅಂದುಕೊಂಡಿದ್ದೆ ಎಂದ ಸಹನಟ!

ಈ ವಿಷಯ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆಯೇ, ಈಗ ನಟ  ಮನ್ಸೂರ್​ ಅಲಿ ಖಾನ್​ ಉಲ್ಟಾ ಹೊಡೆದಿದ್ದಾರೆ. ನಾನು ಹೇಳಿರುವ ಹೇಳಿಕೆಗಳನ್ನು ತಿರುಚಲಾಗಿದೆ. ಎಡಿಟ್​ ಮಾಡಿರುವ ವಿಡಿಯೋ ಅನ್ನು ತ್ರಿಶಾ ಅವರಿಗೆ ತೋರಿಸಲಾಗಿದೆ ಎಂದಿದ್ದಾರೆ! ನಾನು ಆ ರೀತಿ ಹಗುರವಾದ ಧಾಟಿಯಲ್ಲಿ ಹೇಳಿದೆ. ಆದರೆ ವಿವಾದ ಸೃಷ್ಟಿಸುವ ರೀತಿಯಲ್ಲಿ ವಿಡಿಯೋ ಟ್ರಿಮ್ ಮಾಡಿ ಸ್ಪ್ರೆಡ್​ ಮಾಡಲಾಗುತ್ತಿದೆ ಎಂದಿರುವ ನಟ ಖಾನ್​,  ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷವನ್ನು ಬೆಂಬಲಿಸಿ ನಾನು ಸ್ಪರ್ಧಿಸಲಿದ್ದೇನೆ ಎನ್ನುವ ಕಾರಣ ಈ ರೀತಿ ಮಾಡಲಾಗಿದೆ ಎಂದಿದ್ದಾರೆ! ಹಳೆ ಕಾಲದ ಹಾಗೆ ಈಗಿನ ಕಾಲದಲ್ಲಿ ನಾಯಕಿಯರ ಜೊತೆ ನಟಿಸುವ ಅವಕಾಶಗಳು ಸಿಗುತ್ತಿಲ್ಲ ಎಂದು ನಾನು ನನ್ನ ಹತಾಶೆಯನ್ನು ಹೊರಹಾಕಿದ್ದೆ ಅಷ್ಟೇ. ಆದರೆ ವಿಡಿಯೋ ಎಡಿಟ್​ ಮಾಡಲಾಗಿದೆ ಎಂದಿರೋ ನಟ, ಇದಕ್ಕೆ ಹೆದರುವ ವ್ಯಕ್ತಿ ನಾನಲ್ಲ ಎಂದಿದ್ದಾರೆ.

ಇದೇ ವೇಳೆ  ನನ್ನ ಜೊತೆ ನಟಿಸಿದ್ದ ನಾಯಕಿಯರು ಈಗ ಎಂಎಲ್ ಎ, ಎಂಪಿ ಆಗಿದ್ದಾರೆ. ಅವರು ಯಶಸ್ವಿ ಉದ್ಯಮಿಗಳನ್ನು ವಿವಾಹವಾಗಿದ್ದಾರೆ ಎಂದಿರುವ ಮನ್ಸೂರ್​ ಅಲಿ ಖಾನ್​, ನನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಲು ನಾನು 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೆ. ನಾನು ಯಾವಾಗಲೂ ನನ್ನ ಸಹನಟರನ್ನು ಗೌರವಿಸುವವನು. ಇದು ನನ್ನ ವಿರುದ್ಧ ಇರುವ ಕೆಲವರ ಕೃತ್ಯ ಮಾಡಿದ್ದಾರೆ ಎಂದಿದ್ದಾರೆ. 

ಉದ್ಯಮಿ ಲಲಿತ್ ಮೋದಿ ಜೊತೆ ಸುಷ್ಮಿತಾ ಸಂಬಂಧ? ಕೊನೆಗೂ ಮೌನ ಮುರಿದ ನಟಿ ಹೇಳಿದ್ದೇನು?
 

click me!