ಸಕ್ಸಸ್ ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಬಾಲಿವುಡ್ ಬಿಟ್ಟ ಕಾರಣ ಬಹಿರಂಗ!

Published : Nov 19, 2023, 07:56 PM ISTUpdated : Nov 19, 2023, 08:06 PM IST
ಸಕ್ಸಸ್ ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಬಾಲಿವುಡ್ ಬಿಟ್ಟ ಕಾರಣ ಬಹಿರಂಗ!

ಸಾರಾಂಶ

ನಟಿ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್ ಚಿತ್ರಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನಟನೆ ಮುಂದುವರೆಸಿದ್ದಾರೆ. ಅಮೆರಿಕದ ಪಾಪ್ ಹಾಡುಗಾರ, ಬಿಸಿನೆಸ್‌ಮ್ಯಾನ್ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ಬಾಲಿವುಡ್ ಬೇಬಿಯಾಗಿದ್ದ ಪ್ರಿಯಾಂಕಾ ಅಮೆರಿಕಾ ವಾಸಿ ಆಗಿದ್ದಾರೆ. 

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ನಟನೆ ಹಾಗೂ ಜೀವನದ ಬಗ್ಗೆ ಮಾತನಾಡಿದ್ದಾರೆ. ನಾನು ಕಳೆದ 23 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದೇನೆ. 23 ವರ್ಷಗಳಷ್ಟು ದೀರ್ಘಕಾಲಗಳಿಂದ ನಾನು ಇಲ್ಲಿ ನೆಲೆಗೊಂಡಿದ್ದೇನೆ, ಇನ್ನೂ ಜನರ ಮನಸ್ಸಿನ್ಲಲಿ ಉಳಿದುಕೊಂಡಿದ್ದೇನೆ ಎಂದರೆ, ಎರಡು ಕಾರಣಗಳು ಇವೆ. ಅದರಲ್ಲಿ ಒಂದು, ನನ್ನನ್ನು, ನನ್ನ ನಟನೆಯನ್ನು ಪ್ರೀತಿಸುತ್ತಿರುವ ಪ್ರೇಕ್ಷಕರು. ಇನ್ನೊಂದು, ನಾನು ನನ್ನ ಸಿನಿಕೆರಿಯರ್‌ನಲ್ಲಿ ಬಂದ ದಾರಿ, ಅಂದರೆ ಆಯ್ಕೆ ಮಾಡಿಕೊಂಡ ಪಾತ್ರಗಳು, ಹಾಗೂ ಮಾಡಿರುವ ಸಿನಿಮಾಗಳು. 

ನನ್ನ ಪ್ರಕಾರ, ಒಂದು ನಟ ಅಥವಾ ನಟಿ, ಅಂದರೆ ಒಬ್ಬ ಕಲಾವಿದ ಯಾರೇ ಆಗಿರಲಿ, ಅವರಿಗೆ ಜನರು ಹಾಗೂ ಪ್ರೇಕ್ಷಕರ ಜತೆ ಕನೆಕ್ಟ್ ಆಗುವ ಕಲೆ ಗೊತ್ತಿರಬೇಕು. ಅದು ಪಾತ್ರದ ಮೂಲಕವೋ ಅಥವಾ ವ್ಯಕ್ತಿತ್ವದ ಮೂಲಕವೋ ಆಗಬಹುದು. ಎರಡರ ಮೂಲಕವೂ ಆದರೆ ಹೆಚ್ಚು ಒಳ್ಳೆಯದು. ಜನರ ಭಾವನೆಗಾಳ ಜತೆ ನಮ್ಮ ಪಾತ್ರ ಮತ್ತು ವ್ಯಕ್ತಿತ್ವಗಳು ಸಮೀಕರಣ ಆಗದೇ ಹೋದರೆ, ಆ ಕಲಾವಿದರು ದೀರ್ಘ ಕಾಲ ಅದೇ ವೃತ್ತಿಯಲ್ಲಿ ಜನರನ್ನು ರಂಜಿಸಲು ಅಥವಾ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. 

ಅದು ನಾನೇ ಆಗಿರಲಿ, ನನ್ನ ಗಂಡ ನಿಕ್ ಜೊನಾಸ್ ಆಗಿರಲಿ, ಕಲೆ, ಕಲಾವಿದ ಅಂತ ಬಂದಾಗ ಜನರ ಅಂದರೆ ಮುಖ್ಯವಾಗಿ ಪ್ರೇಕ್ಷಕರ ಹೃದಯದ ಭಾವನೆಗಳು ಹಾಗೂ ಇಷ್ಟಕಷ್ಟಗಳ ಬಗ್ಗೆ ಅರಿವಿರಬೇಕು. ಇಲ್ಲದಿದ್ದರೆ, ಅಂಥವರನ್ನು ಪ್ರೇಕ್ಷಕರನ್ನು ಸ್ವೀಕರಿಸಲಾರರು. ಒಮ್ಮ ನಮ್ಮ ಸಿನಿಮಾ ಫ್ಲಾಪ್ ಆದರೂ ಕೂಡ ನಮ್ಮ ವ್ಯಕ್ತಿತ್ವದಲ್ಲಿ ತೂಕವಿದ್ದರೆ, ಹೊರಗಡೆ ಹೋದಾಗ ಜನರ ಮನಸ್ಸು ಮುಟ್ಟುವ, ಹೃದಯ ತಟ್ಟುವ ಸಾಮರ್ಥ್ಯ ನಮಗಿದ್ದರೆ ಜನರೇ ಮತ್ತೊಮ್ಮೆ ನಮ್ಮ ಕೆಲಸಕ್ಕೆ ಚಪ್ಪಾಳೆ ತಟ್ಟುತ್ತಾರೆ. ನನ್ನ ಪ್ರಕಾರ ವೃತ್ತಿಪರರ ಮೂಲಮಂತ್ರವೇ ಇದು.

ಪಾರ್ಕ್ ಮಾಡಿದ್ದ ಕಾರಿನೊಳಗೆ ಖ್ಯಾತ ನಟನ ಶವ ಪತ್ತೆ; ಸೌತ್ ಸಿನಿರಂಗಕ್ಕೆ ಬಿಗ್ ಶಾಕ್! 

ಅಂದಹಾಗೆ, ನಟಿ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್ ಚಿತ್ರಗಳಲ್ಲಿ, ವೆಬ್ ಸಿರೀಸ್‌ಗಳಲ್ಲಿ ನಟನೆ ಮುಂದುವರೆಸಿದ್ದಾರೆ. ಅಮೆರಿಕದ ಪಾಪ್ ಹಾಡುಗಾರ, ಬಿಸಿನೆಸ್‌ಮ್ಯಾನ್ ನಿಕ್ ಜೊನಾಸ್ ಅವರನ್ನು ಮದುವೆಯಾದ ಬಳಿಕ ಬಾಲಿವುಡ್ ಬೇಬಿಯಾಗಿದ್ದ ಪ್ರಿಯಾಂಕಾ ಅಮೆರಿಕಾ ವಾಸಿ ಆಗಿದ್ದಾರೆ. ಭಾರತಕ್ಕೆ ಬರುತ್ತಾರೆ, ಇಲ್ಲಿ ಉಳಿದುಕೊಳ್ಳುತ್ತಾರೆ, ಹಲವು ಸಂಬಂಧಿಕರ ಜತೆ ಆಪ್ತತೆ ಉಳಿಸಿಕೊಂಡಿದ್ದಾರೆ.

ಫೇಕ್ ಪಟ್ಟ ಪಡೆದ ಬಿಗ್ ಬಾಸ್ ಆನೆ ವಿನಯ್ ಗೌಡ, ಸೋಷಿಯಲ್ ಮೀಡಿಯಾ ಸುದ್ದಿ ಭಾರೀ ವೈರಲ್! 

ಆದರೆ, ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಕಾರಣ, ಬಾಲಿವುಡ್‌ ಚಿತ್ರಗಳಲ್ಲಿ ಅವರಿಗೆ ಚಾನ್ಸ್ ಇಲ್ಲವೆಂದಲ್ಲ, ಬದಲಿಗೆ ಇಲ್ಲಿ ತಮ್ಮ ಪ್ರತಿಭೆ ತೋರಿಸಿಯಾಗಿದೆ, ಇನ್ನೇನಿದ್ದರೂ ಜಗತ್ತೇ ಗುರುತಿಸುವ ಹಾಲಿವುಡ್‌ನಲ್ಲಿ ಮಿಂಚಬೇಕು ಎಂಬ ಅವರಾಸೆ ಎನ್ನಲಾಗುತ್ತಿದೆ. ಒಳ್ಳೆಯ ಪಾತ್ರ ಸಿಕ್ಕರೆ ನಾನೂ ಇಲ್ಲೂ ಮಾಡುತ್ತೇನೆ, ಸೌತ್ ಇಂಡಿಸ್ಟ್ರಿಯಲ್ಲೂ ನಾನು ನಟಿಸಲು ರೆಡಿ ಎಂದೂ ಹೇಳಿದ್ದಾರೆ ಪ್ರಿಯಾಂಕಾ. ಆದರೆ, ಇಲ್ಲಿ ಅವರಿಗೆ ಆಫರ್ ಕೊಡುವ ಪಾತ್ರ ಅವರಿಗೆ  ಸೂಕ್ತ ಎನಿಸಬೇಕು ಅಷ್ಟೇ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!