ಖಾಯಿಲೆ ಬಿದ್ದರೂ ಕಂಗಾಲಾಗದ ನಟಿ ಸಮಂತಾ ಹೇಳ್ಬಿಟ್ರು ಲೈಫ್‌ ಮಹಾ ಸೀಕ್ರೆಟ್, ರಿಯಲಿ ಗ್ರೇಟ್!

Published : Mar 27, 2024, 05:32 PM ISTUpdated : Mar 27, 2024, 05:45 PM IST
ಖಾಯಿಲೆ ಬಿದ್ದರೂ ಕಂಗಾಲಾಗದ ನಟಿ ಸಮಂತಾ ಹೇಳ್ಬಿಟ್ರು ಲೈಫ್‌ ಮಹಾ ಸೀಕ್ರೆಟ್, ರಿಯಲಿ ಗ್ರೇಟ್!

ಸಾರಾಂಶ

ಕಾಲೇಜು ಸ್ಟಡಿ ಮುಗಿದ ಬಳಿಕ ನಾನು ನನಗೆ ಇಷ್ಟವಾಗದ ಕೆಲಸಕ್ಕೆ ಸೇರಿಕೊಂಡೆ. ಕನಿಷ್ಠ ಎರಡು ತಿಂಗಳುಗಳ ಕಾಲ ನಾನು ಹಣದ ಸಮಸ್ಯೆಯಿಂದ ದಿನಕ್ಕೆ ಕೇವಲ ಒಂದೇ ಹೊತ್ತು ಊಟ ಮಾಡಿಕೊಂಡಿದ್ದೆ. ಸ್ವಲ್ಪ ಕಾಲ ನಾನು ಅದೇ ನನ್ನ ಇಷ್ಟವಾಗದ ಕೆಲಸದಲ್ಲಿದ್ದೆ..

ಖ್ಯಾತ ನಟಿ ಸಮಂತಾ (Samantha Ruth Prabhu) ಮುತ್ತಿನಂಥಾ ಮಾತೊಂದನ್ನು ಯುವ ಜನಾಂಗಕ್ಕೆ ಹೇಳಿದ್ದಾರೆ. 'ನಾನು ಸ್ಕೂಲಿಗೆ ಹಾಗೂ ಕಾಲೇಜಿಗೆ ಹೋಗುವಾಗ ನನ್ನ ಪೇರೆಂಟ್ಸ್ ಅಂದರೆ, ನನ್ನ ಡ್ಯಾಡ್ ಹಾಗೂ ಮಾಮ್ ಇಬ್ಬರೂ ನನ್ನನ್ನು ಓದು ಓದು, ಚೆನ್ನಾಗಿ ಓದು ಎಂದು ಯಾವಾಗಲೂ ಒತ್ತಾಯಿಸುತ್ತಿದ್ದರು. ಅವರು ಹೇಳಿದಂತೆ ನಾನು ತುಂಬಾ ಚೆನ್ನಾಗಿ ಓದುತ್ತಿದ್ದೆ. ನಾನು ಸ್ಕೂಲ್ ಹಾಗೂ ಕಾಲೇಜಿನಲ್ಲಿ ಟಾಪರ್. ಹಾರ್ಡ್‌ ಸ್ಟಡಿ ಮಾಡುತ್ತಿದ್ದೆ, ಅಪ್ಪ-ಅಮ್ಮ ಹೇಳಿದಂತೆ ಕೇಳುತ್ತಿದ್ದೆ, ಚೆನ್ನಾಗಿ ಓದುತ್ತಿದ್ದೆ. ಕಾಲೇಜಿಗೇ ನಾನು ಟಾಪರ್ ಆಗಿದ್ದರೂ ನನ್ನ ಅಪ್ಪ-ಅಮ್ಮನಿಗೆ ನನಗೆ ಮುಂದೆ ಓದಿಸಲು ಆರ್ಥಿಕ ಶಕ್ತಿ ಇರಲಿಲ್ಲ.

ಕಾಲೇಜು ಸ್ಟಡಿ ಮುಗಿದ ಬಳಿಕ ನಾನು ನನಗೆ ಇಷ್ಟವಾಗದ ಕೆಲಸಕ್ಕೆ ಸೇರಿಕೊಂಡೆ. ಕನಿಷ್ಠ ಎರಡು ತಿಂಗಳುಗಳ ಕಾಲ ನಾನು ಹಣದ ಸಮಸ್ಯೆಯಿಂದ ದಿನಕ್ಕೆ ಕೇವಲ ಒಂದೇ ಹೊತ್ತು ಊಟ ಮಾಡಿಕೊಂಡಿದ್ದೆ. ಸ್ವಲ್ಪ ಕಾಲ ನಾನು ಅದೇ ನನ್ನ ಇಷ್ಟವಾಗದ ಕೆಲಸದಲ್ಲಿದ್ದೆ, ಅದನ್ನು ಇಷ್ಟವಾದದ ಕೆಲಸ ಎನ್ನುವುದಕ್ಕಿಂತ ನನಗೆ, ನನ್ನ ಮನಸ್ಥಿತಿಗೆ ಒಪ್ಪದ ಕೆಲಸ ಎನ್ನಬಹುದು. ನಾನು ನಿಮಗೆಲ್ಲ ಒಂದು ಸತ್ಯವಾದ ಸಂಗತಿ ಹೇಳುತ್ತೇನೆ ಕೇಳಿ, ನಾವೆಲ್ಲರೂ ನಮ್ಮವರು ಅಂದರೆ ನಮ್ಮ ಪೇರೆಂಟ್ಸ್‌ ಹಾಗೂ ಸ್ನೇಹಿತರು-ಆಪ್ತರ ಬಳಗದ ಮಾತು ಕೇಳುತ್ತ ಅದರಂತೆ ನಡೆದುಕೊಳ್ಳಲು ಬಯಸುತ್ತೇವೆ. 

ಯಶ್ ಕೊಟ್ರು ಶಾಕಿಂಗ್ ಸ್ಟೇಟ್‌ಮೆಂಟ್, ರಾಕಿಂಗ್ ಸ್ಟಾರ್ ಮಾತಿಗೆ ಫುಲ್ ಫಿದಾ ಆಗೋದ್ರು ಫ್ಯಾನ್ಸ್!

ಆದರೆ, ಜೀವನ ಎಂದರೆ ಅದಲ್ಲ. ನೀವು ಏನಾಗಬೇಕೆಂದು ಬಯಸುತ್ತೀರೋ ಅದಾಗಬೇಕು. ನಮ್ಮ ಪೇರೆಂಟ್ಸ್ ಅಥವಾ ಹಿತೈಷಿಗಳು ನಮಗೆ ಸಲಹೆ ನೀಡುವುದು ತಪ್ಪಲ್ಲ. ಆದರೆ ನಾವೆಲ್ಲರೂ ಅದರಂತೆ ನಡೆಯಬೇಕು ಎಂದು ಎಣಿಸುವುದು ತಪ್ಪು. ನಾವು ದೊಡ್ಡ ದೊಡ್ಡ ಕನಸು ಕಾಣಬೇಕು, ನಮ್ಮ ಬಯಕೆಯಂತೆ ನಾವು ಮುನ್ನಡೆಯಬೇಕು. ನಾನು ಹಾಗೇ ಮಾಡಿದ್ದೇನೆ. ನನಗೆ ಸಾಧ್ಯವಾಗಿದ್ದು ನಿಮಗೂ ಆಗುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ. ದಯವಿಟ್ಟು ದೊಡ್ಡ ದೊಡ್ಡ ಕನಸು ಕಾಣಿರಿ ಹಾಗು ಅದನ್ನು ನೆರವೇರಿಸಲು ಹಗಲಿರುಳೂ ಶ್ರಮಿಸಿ..'ಎಂದಿದ್ದಾರೆ ನಟಿ ಸಮಂತಾ.

ಕರ್ನಾಟಕದ 'ಜಲ ಸಂಕಷ್ಟ'ಪರಿಹಾರಕ್ಕೆ ಸಾಥ್ ನೀಡಿದ ಸ್ಟಾರ್ ಸುವರ್ಣ; ಉಚಿತ ಜಲ ವಿತರಣೆ!

ಅಂದಹಾಗೆ, ನಟಿ ಸಮಂತಾ ಅವರು ಸದ್ಯ ಮೆಯೋಸಿಟಿಸ್ (Myositis) ಖಾಯಿಲೆಯಿಂದ ಬಳಲುತ್ತಿದ್ದು, ಅಮೆರಿಕಾದಲ್ಲಿ ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಕಾರಣಕ್ಕೆ ನಟಿ ಸಮಂತಾ ಸದ್ಯ ಯಾವುದೇ ಸಿನಿಮಾದಲ್ಲಿ ಒಪ್ಪಿ ನಟಿಸುತ್ತಿಲ್ಲ. ವಿಜಯ್ ದೇವರಕೊಂಡ ಜತೆ ನಟಿಸಿದ್ದ ಖುಷಿ ಸಿನಿಮಾ ಬಿಡುಗಡೆ ವೇಳೆ ಸಮಂತಾ ಈ ವಿಚಿತ್ರ ರೋಗಕ್ಕೆ ತುತ್ತಾಗಿದ್ದಾರೆ. ಈ ಕಾಯಿಲೆಯಿಂದ ಬಹಳಷ್ಟು ನೋವು ಅನುಭವಿಸುತ್ತಿರುವ ಸಮಂತಾ, ಸದ್ಯ ಸಿನಿಮಾ ನಟನೆಯಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದಾರೆ. 

ಸಿನಿಮಾ ನಟ ಮಾತ್ರ ಹೀರೋ ಅಲ್ಲ, ಯಾರಾದ್ರೂ ಆಗಬಹುದು; ಯಾಕೆ ಹೀಗಂದ್ಬಿಟ್ರು ರಾಮ್‌ ಚರಣ್?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?