ಮೂರೂವರೆ ದಶಕಗಳಿಂದ ಚಿತ್ರರಂಗದಲ್ಲಿರುವ ಬಹುಭಾಷಾ ನಟಿ ರೇವತಿ ಅವರ ಖಾಸಗಿ ಜೀವನದ ನೋವಿನ ಸಂಗತಿಯೇನು? ಅವರು ಐವಿಎಫ್ ಮೂಲಕ ಮಗಳನ್ನು ಮಾಡಿಕೊಂಡಿದ್ದೇಕೆ?
80- 90ರ ದಶಕದಲ್ಲಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟಿಯರಲ್ಲಿ ಒಬ್ಬರು ರೇವತಿ (Revathi). ತಮಿಳು, ಮಲಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚ ಭಾಷಾ ತಾರೆ ಎನಿಸಿಕೊಂಡಿದ್ದಾರೆ ನಟಿ ರೇವತಿ. ಮೂಲತಃ ಕೆರಳದವರಾದ ಇವರು ನಟನೆ ಶುರು ಮಾಡಿದ್ದು ತಮಿಳು ಸಿನಿಮಾ ಮೂಲಕ. 17 ವರ್ಷದವರಿದ್ದಾಗ ನಾಯಕಿಯಾದವರು. ಮೊದಲ ಸಿನಿಮಾದಲ್ಲಿಯೇ ಫಿಲ್ಮ್ ಫೇರ್ ಅವಾರ್ಡ್ ಪಡೆದಿದ್ದರು. ಕನ್ನಡದಲ್ಲಿ ಶಂಕರ್ ನಾಗ್ (Shankar Nag)ಅವರ ಜೊತೆ ಇದು ಸಾಧ್ಯ ಸಿನಿಮಾ ಮತ್ತು ಡಾ. ವಿಷ್ಣುವರ್ಧನ್ ಅವರೊಡನೆ ನಿಶ್ಶಬ್ಧ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ, ಅರುಂಧತಿ ನಾಗ್ ಅವರ ರಂಗಶಂಕರದಲ್ಲಿ ಕೆಲವು ನಾಟಕಗಳಲ್ಲಿ ಕೂಡ ನಟಿಸಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಲವ್ ಚಿತ್ರದ ಮೂಲಕ ರೇವತಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಇದರ ನಂತರ ಅವರು ಸಲ್ಮಾನ್ ಮತ್ತು ಶಿಲ್ಪಾ ಶೆಟ್ಟಿ ಅಭಿನಯದ 'ಫಿರ್ ಮಿಲೇಂಗೆ' ಚಿತ್ರದಲ್ಲೂ ಕಾಣಿಸಿಕೊಂಡರು.
ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ವಿವಿಧ ವಿಭಾಗಗಳಲ್ಲಿ ಆರು ಸೌತ್ ಫಿಲ್ಮ್‌ಫೇರ್ (Filmfare)ಪ್ರಶಸ್ತಿಗಳನ್ನು ಒಳಗೊಂಡಂತೆ ಅವರು ಇಲ್ಲಿಯವರೆಗೆ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವರ ಅಭಿನಯದ ಮೌನರಾಗಂ ಕನ್ನಡಕ್ಕೆ ರಿಮೇಕ್ ಕೂಡ ಆಗಿದೆ. ನಿರ್ದೇಶಕಿ ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ ರೇವತಿ. ಸದ್ಯ ಅಷ್ಟಾಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣವನ್ನೂ ಈಚೆಗೆ ನಟಿ ಹೇಳಿದ್ದರು. ನನ್ನ ವಯಸ್ಸಿಗೆ ತಕ್ಕಂತೆ ನನಗೆ ಪಾತ್ರಗಳು ಸಿಗುತ್ತಿವೆ. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಆದರೆ ಸಿಗುತ್ತಿರುವ ಪಾತ್ರ ಸವಾಲು ಎಂಬ ಭಾವನೆ ಹುಟ್ಟಿಸುತ್ತಿಲ್ಲ. ಎಷ್ಟು ಸಿನಿಮಾ ಮಾಡಿದ್ದೇನೆ ಎಂಬುದಕ್ಕಿಂತ ಪಾತ್ರಗಳ ಮೌಲ್ಯ ಮುಖ್ಯವಾಗುತ್ತದೆ. ಅಂತಹ ಮೌಲ್ಯಯುತ ಪಾತ್ರ ಮಾಡಲು ನನಗೆ ಬಹಳ ಇಷ್ಟ.ಅಂತಹ ಪಾತ್ರಗಳನ್ನು ಹುಡುಕುತ್ತಿರುವುದರಿಂದಲೇ ಇಂದು ನಾನು 2 ವರ್ಷಗಳಿಗೊಮ್ಮೆ 1 ಚಿತ್ರದಲ್ಲಿ ಅಭಿನಯಿಸುತ್ತಿರುವುದು ಎಂದಿದ್ದರು.
ಎರಡು ವರ್ಷ ಕದ್ದುಮುಚ್ಚಿ ಹಿಂದೂ ಯುವತಿ ಜೊತೆ ಸಂಸಾರ ಮಾಡಿದ್ದ ಆಮೀರ್ ಖಾನ್!
ರೇವತಿಯ (Revathi) ವೈಯಕ್ತಿಕ ಜೀವನ ಮಾತ್ರ ಕಲರ್‌ಫುಲ್ ಆದದ್ದಲ್ಲ. ಇದು ನೋವಿನ ಬೀಡು. ಹೌದು! ನಟಿ ರೇವತಿ, 1986 ರಲ್ಲಿ ನಿಮಾಟೋಗ್ರಾಫರ್ ಸುರೇಶ್ ಚಂದ್ರ ಮೆನನ್ (Suresh Chandra Menon) ಅವರನ್ನು ಪ್ರೀತಿಸಿ ವಿವಾಹವಾದರು. ಈ ಸಂದರ್ಭದಲ್ಲಿ ಅವರು ಸಿನಿಮಾ ಕ್ಷೇತ್ರದಲ್ಲಿ ಪೀಕ್‌ನಲ್ಲಿದ್ದರು. ಇವರಿಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೇ ಕೆಲಸ ಮಾಡಿದ್ದಾರೆ. ಎರಡು ಸಿನಿಮಾಗಳಲ್ಲಿ, ರೇವತಿ ಅವರು ತಮ್ಮ ಜೀವನದ ಗಳಿಕೆಯನ್ನು ಇನ್ವೆಸ್ಟ್ ಮಾಡಿ, ನಿರ್ಮಾಣ ಮಾಡಿದ್ದರು. ಸುರೇಶ್ ನಿರ್ದೇಶನ ಮಾಡಿದ್ದರು. ಎರಡೂ ಚಿತ್ರಗಳು ಹಿಟ್ ಆದರೂ, ಒಂದು ಸಿನಿಮಾ ಭಾರಿ ನಷ್ಟಕ್ಕೆ ಒಳಗಾಗಿತು. ಇದಾಗಲೇ ದುಡಿಮೆಯನ್ನು ಕಳಕೊಂಡಿದ್ದರು ರೇವತಿ. ಹಣಕ್ಕಾಗಿ ಪರದಾಡುವ ಸ್ಥಿತಿ ಉಂಟಾದಾಗ ಸುರೇಶ್ ಅವರು ಈ ಸಂದರ್ಭದಲ್ಲಿ ಮಕ್ಕಳಾದರೆ ಕಷ್ಟ ಎಂದು ಆಪರೇಷನ್ ಮಾಡಿಸಿಕೊಂಡುಬಿಟ್ಟರಂತೆ.
ಈ ವಿಷಯ ಖುದ್ದು ರೇವತಿಯವರಿಗೂ ತಿಳಿದಿರಲಿಲ್ಲವಂತೆ. ಆದರೆ ವರ್ಷಗಳಾದರೂ ಮಕ್ಕಳಾಗದ್ದರಿಂದ ಮನೆಯಲ್ಲಿ ಕೇಳಲು ಶುರು ಮಾಡಿದಾಗ, ರೇವತಿಯವರದ್ದೇ ತಪ್ಪಿಗೆ ಎಂದುಬಿಟ್ಟಿದ್ದರು ಸುರೇಶ್. (Suresh) ಮೊದಲಿಗೆ ಇದು ನಿಜ ಎಂದುಕೊಂಡಿದ್ದರೂ ನಂತರ ಸತ್ಯದ ಅರಿವಾಯಿತು ರೇವತಿಯವರಿಗೆ. ಇದು ಅವರಿಗೆ ಆಘಾತ ತಂದಿತ್ತು. ಪತಿ ಈ ರೀತಿ ಮೋಸ ಮಾಡಿರುವುದನ್ನು ಸಹಿಸಿಕೊಳ್ಳದ ಆಕೆ, ಬಹಳ ನೋವುಂಡರು. ಆದರೆ ಇದರ ನಡುವೆಯೇ ಸುರೇಶ್ ಅವರ ಹೆಸರಿನಲ್ಲಿ ಸ್ಟುಡಿಯೋ ಆರಂಭಿಸಿ ಅವರಿಗಾಗಿ ಶೇರ್ ಗಳನ್ನು ಖರೀದಿಸಿದ್ದರು. ಇಬ್ಬರು ಸೇರಿ ತಮಿಳು ಕಿರುತೆರೆಗೆ ಹಲವಾರು ಧಾರಾವಾಹಿಗಳನ್ನು ನಿರ್ಮಾಣ ಮಾಡಿ, ನಿರ್ದೇಶನ ಮಾಡಿ, ನಟನೆ ಕೂಡ ಮಾಡಿದರು. ಅವೆಲ್ಲವೂ ಸಕ್ಸಸ್ ಆಗುತ್ತಲೇ ಬಂದವು. ಆದರೆ ಪತಿ ಆಪರೇಷನ್ (Opeation) ಮಾಡಿಸಿಕೊಂಡು ಎಲ್ಲರೆದರು ತಮ್ಮನ್ನು ಬಂಜೆ ಎಂದು ಹೇಳುತ್ತಿದ್ದುದನ್ನು ಅರಿತ ರೇವತಿಯವರು ತುಂಬಾ ನೊಂದು ಡಿವೋರ್ಸ್ ಕೊಟ್ಟರು.
Twinkle Khanna: ಹೊಟ್ಟೆಯೊಳಗೆ ಫುಲ್ ಗ್ಯಾಸ್ ಇದ್ದಾಗ್ಲೇ ಶಾರುಖ್ ಎತ್ತಿಕೊಂಡು ಬಿಟ್ರಪ್ಪೋ...
ಮದುವೆಯಾದ 16 ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು. ವಿಚ್ಛೇದನದ ಕೆಲವು ವರ್ಷಗಳ ನಂತರ ನಟಿ ವೀರ್ಯ ದಾನಿಗಳ ಸಹಾಯದಿಂದ IVF (ಇನ್ ವಿಟ್ರೋ ಫರ್ಟಿಲೈಸೇಶನ್) ಮೂಲಕ 48 ನೇ ವಯಸ್ಸಿನಲ್ಲಿ ಅಮ್ಮನಾದರು. ಮಗಳು ಮಹಿಗೆ 5 ವರ್ಷ. ಆಕೆಯಿಂದ ತಮ್ಮ ಜೀವನಕ್ಕೆ ಅರ್ಥ ಸಿಕ್ಕಿದೆ ಎಂದಿರುವ ರೇವತಿ, ಮಗಳು ಸ್ವಲ್ಪ ದೊಡ್ಡವಳಾದ ಮೇಲೆ ಎಲ್ಲಾ ವಿಷಯಗಳನ್ನು ಹೇಳುವುದಾಗಿ ಹೇಳಿದ್ದಾರೆ.