ನಟಿ ಮಲೈಕಾ ಅರೋರಾ ಹೋಟೆಲ್ ಒಂದರಲ್ಲಿ ತಮ್ಮ ಡ್ರೆಸ್ ಸರಿಪಡಿಸಿಕೊಳ್ತಿರೋ ವಿಡಿಯೋ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಹೇಳ್ತಿರೋದೇನು?
ಚಿತ್ರತಾರೆಯರು ಎಲ್ಲಿಯೇ ಹೋದರೂ ಕ್ಯಾಮೆರಾ ಕಣ್ಣು ಅವರ ಹಿಂದೆಯೇ ಹೋಗುವುದು ಸಾಮಾನ್ಯ. ಆದರೆ ಕೆಲವೊಮ್ಮೆ ನಟ-ನಟಿಯರಿಗೂ ಖಾಸಗಿ ಜೀವನ ಇರುತ್ತದೆ ಎನ್ನುವುದನ್ನು ಮರೆತು ಪಾಪರಾಜಿಗಳು ಅವರ ವಿಡಿಯೋ ಶೂಟ್ ಮಾಡುವುದು ಇದೆ. ಈ ಬಗ್ಗೆ ಇದಾಗಲೇ ಕೆಲವು ನಟ-ನಟಿಯರು ಗರಂ ಆಗಿದ್ದೂ ಇದೆ. ಅದೇನೇ ಆದರೂ ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೇ ಹೆಚ್ಚು ಡಿಮಾಂಡ್ ಎನ್ನುವ ಕಾರಣಕ್ಕೆ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡಲಾಗುತ್ತದೆ. ಇದೀಗ ಹಾಟೆಸ್ಟ್ ನಟಿ ಮಲೈಕಾ ಅರೋರಾ ಸರದಿ. ಇವರು ಹೋಟೆಲ್ ಒಂದರಲ್ಲಿ ಇರುವ ಖಾಸಗಿ ವಿಡಿಯೋ ವೈರಲ್ ಆಗಿದೆ.
ಅಷ್ಟಕ್ಕೂ ಮಲೈಕಾ ಅರೋರಾಗೆ ಈಗ 49 ವರ್ಷ ವಯಸ್ಸು. ಅರ್ಬಾಜ್ ಖಾನ್ ಜೊತೆ ಬೇರ್ಪಟ್ಟ ಬಳಿಕ 12 ವರ್ಷ ಚಿಕ್ಕವಾಗಿರುವ ನಟ ಅರ್ಜುನ್ ಕಪೂರ್ (Arjun Kapoor) ಜೊತೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಮಲೈಕಾ. ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಾಗ ಆಗುವಷ್ಟು ಟ್ರೋಲ್ ಇನ್ನಾವುದಕ್ಕೂ ಆಗುತ್ತಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಇವರಿಬ್ಬರೂ ಯಾರಿಗೂ ಡೋಂಟ್ಕೇರ್ ಎನ್ನದೇ ಜೀವನ ನಡೆಸುತ್ತಿದ್ದಾರೆ. ಮಲೈಕಾ ಅರ್ಜುನ್ ಕಪೂರ್ ಜೊತೆ ಡೇಟಿಂಗ್ನಲ್ಲಿದ್ದರೂ ಮಗನಿಗಾಗಿ ಆಗಾಗ್ಗೆ ಅರ್ಬಾಜ್ ಖಾನ್ರನ್ನು ಭೇಟಿಯಾಗುವುದು, ತಬ್ಬಿಕೊಳ್ಳುವುದು ನಡೆದಿದ್ದು, ಇವುಗಳ ವಿಡಿಯೋಗಳೂ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇದರ ಬೆನ್ನಲ್ಲೇ ಇವರಿಬ್ಬರೂ ಬ್ರೇಕಪ್ ಆಗಿದ್ದಾರೆ ಎಂಬ ಭಾರಿ ಸುದ್ದಿ ಬಿ ಟೌನ್ನಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಮಲೈಕಾ ಜೊತೆ ಟ್ರಿಪ್ಗೆ ಹೋಗುತ್ತಿದ್ದ ಅರ್ಜುನ್ ಈಗ ಒಂಟಿಯಾಗಿ ತಿರುಗಾಡಲು ಶುರು ಮಾಡಿದ್ದೇ ಈ ಗಾಳಿ ಸುದ್ದಿಗೆ ಕಾರಣವಾಗಿತ್ತು. ನಂತರ ಏನೇನೋ ಪ್ಯಾಚಪ್‌ಗಳೂ ನಡೆದವು.
ಬಾಲಿವುಡ್ ಬಳಿಕ ಟಾಲಿವುಡ್ಗೂ ಕಾಂತಾರಾ ಬೆಡಗಿ ಎಂಟ್ರಿ! ಸಪ್ತಮಿ ಗೌಡ ಹೇಳಿದ್ದೇನು?
ಆದರೆ ನಟಿ ಎಲ್ಲಿಯೇ ಹೋದರೂ ಕ್ಯಾಮೆರಾ ಕಣ್ಣು ಅವರ ಮೇಲೆಯೇ ಇರುತ್ತದೆ. ಇದೀಗ ಮಲೈಕಾ ಅರೋರಾ, ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ಸ್ನೇಹಿತರೊಟ್ಟಿಗೆ ಹೋಗಿರೋ ವಿಡಿಯೋ ವೈರಲ್ ಆಗಿದೆ. ಸಣ್ಣ ಬಿಳಿ ಜಂಪ್‌ಸೂಟ್ ಧರಿಸಿರುವ ಮಲೈಕಾ ಅವರನ್ನು ಪಾಪರಾಜಿಗಳು ಜೂಮ್ ಮಾಡುವ ಮೂಲಕ ಕಿಟಕಿ ಆಚೆಯಿಂದ ಸೆರೆ ಹಿಡಿದಿದ್ದಾರೆ. ಇದು ನಟಿಗೆ ತಿಳಿದಿಲ್ಲ ಎನ್ನುವುದು ವಿಡಿಯೋ ನೋಡಿದರೆ ಕಂಡುಬರುತ್ತದೆ. ಈ ವಿಡಿಯೋ ಅನ್ನು ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಲಾಗಿದ್ದು, ಇದಕ್ಕೆ ಕೆಲವು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಈ ವಿಡಿಯೋ ಕುರಿತು ಇದುವರೆಗೆ ನಟಿ ಏನೂ ಹೇಳಲಿಲ್ಲ. ಆದರೆ ಕೆಲವು ನೆಟ್ಟಿಗರು ಮಾತ್ರ, ಚಿತ್ರತಾರೆಯರಿಗೂ ಖಾಸಗಿ ಜೀವನ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆಲ್ಲಾ ಅವರ ಪರ್ಸನಲ್ ಜೀವನದ ಒಳಗೆ ನುಸುಳುವುದು ಸರಿಯಲ್ಲ ಎನ್ನುತ್ತಿದ್ದಾರೆ. ಈ ವಿಡಿಯೋದಲ್ಲಿ ನಟಿ ಹೊರಡಲು ಎದ್ದು ತನ್ನ ಡ್ರೆಸ್ ಸರಿಪಡಿಸಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ನಟಿಗೆ ವಿಡಿಯೋದ ಅರಿವು ಬಂದಂತೆ ಕಾಣಿಸುತ್ತಿದೆ. ತಕ್ಷಣ ಅಲ್ಲಿಂದ ಹೊರಡಲು ರೆಡಿಯಾಗಿ ಕೈಬೀಸಿ ಹೋಗಿದ್ದಾರೆ.
ಸೊಂಟದ ಭಾಗ ಜೀರೋಸೈಜ್, ಉಳಿದ ಭಾಗ ದೊಡ್ಡದಾಗಿಸಲು ಶಸ್ತ್ರಚಿಕಿತ್ಸೆ: ನಟಿ ಪ್ರಿಯಾಮಣಿ ಹೇಳಿದ್ದೇನು?