ಅಮೃತಧಾರೆ ನಟಿ ಸಾರಾ ಅಣ್ಣಯ್ಯ ಪ್ರಕಾರ ಭಾರತದ ಪ್ರಧಾನಿ ಪಪ್ಪಿ ಅಂತೆ; ಹಾಗಾದ್ರೆ ಯಾರೀ ಪಪ್ಪಿ?
ನಮ್ಮ ದೇಶದ ಪ್ರಧಾನಿ ಯಾರೆಂದರೆ ಎಲ್ಲರೂ ಫಟ್ ಅಂತ ನರೇಂದ್ರ ಮೋದಿ ಎಂದು ಹೇಳುತ್ತಾರೆ. ಆದರೆ, ಅಮೃತಧಾರೆ ಧಾರಾವಾಹಿಯ ನಟಿ ಸಾರಾ ಅಣ್ಣಯ್ಯ ಮಾತ್ರ 'ನಮ್ಮ ದೇಶದ ಪ್ರಧಾನಿ ಪಪ್ಪಿ' ಎಂದು ಹೇಳಿದ್ದಾರೆ.
Kannada Actress Sara Annaiah
ಲೋಕಸಭಾ ಚುನಾವಣೆಯ ಕಾವು ದೇಶಾದ್ಯಂತ ಭಾರಿ ಹೆಚ್ಚಾಗಿದೆ. ಬಿರು ಬೇಸಿಗೆಯಲ್ಲಿಯೇ ಲೋಕಸಭಾ ಅಭ್ಯರ್ಥಿಗಳು ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ. ಇದೇ ವೇಳೆ ಸುದ್ದಿ ಮಾಧ್ಯಮಗಳು ಜನರನ್ನು ಮಾತನಾಡಿಸಿದಾಗ ಅವರಿಂದ ಬರುವ ಉತ್ತರಗಳು ಮಾತ್ರ ಭಾರಿ ವೈರಲ್ ಆಗುತ್ತಿವೆ. ಅದೇ ರೀತಿ ನಟಿ ಸಾರಾ ಅಣ್ಣಯ್ಯ ಅವರ ಡೈಲಾಗ್ ಕೂಡ ವೈರಲ್ ಆಗಿದೆ.
ನಟಿ ಸಾರಾ ಅಣ್ಣಯ್ಯ ಹಾಗೂ ನಟ ಶಶಿ ಹೆಗಡೆ ಶೂಟಿಂಗ್ ಬಿಡುವಿನೆ ವೇಳೆ ರೀಲ್ಸ್ ಮಾಡಿದ್ದು, ಚುನಾವಣೆ ಕುರಿತು ಸುದ್ದಿ ಮಾಧ್ಯಮಗಳ ಮೂಲಕ ವೈರಲ್ ಆದ ಆಡಿಯೋ ತುಣುಕೊಂದಕ್ಕೆ ವಾಯ್ಸ್ ಡಬ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಶಶಿ ಹೆಗಡೆ ಅವರು ಬಾಚಣಿಕೆಯನ್ನು ಹಿಡಿದುಕೊಂಡು ಯಾರಿಗೆ ವೋಟ್ ಹಾಕ್ತೀರಾ ಎಂದು ಪ್ರಶ್ನೆ ಕೇಳಿದರೆ, ಸಾರಾ ಅಣ್ಣಯ್ಯ (Sara Annaiah) ನಾನು ಕಾಂಗ್ರೆಸ್ಗೆ ಹಾಕೋದು ಎಂದಿದ್ದಾರೆ. ಮುಂದುವರೆದು, ಇವಾಗ ಯಾರಿದ್ದಾರೆ ಪ್ರಧಾನಮಂತ್ರಿ ಎಂದು ಕೇಳಿದಾಗ 'ಅದೇ ಪಪ್ಪಿ' ಎಂದು ಸಾರಾ ಅಣ್ಣಯ್ಯ ಉತ್ತರಿಸಿದ್ದಾರೆ.
ಆಗ ಶಶಿ ಹೆಗಡೆ ಅವರು 'ಪಪ್ಪಿ ಇಲ್ಲಿಯ ಲೋಕಲ್, ಸ್ಥಳೀಯ ಲೀಡರ್' ಎಂದು ಹೇಳಿದ್ದಾರೆ. ಆಗ ಸಾರಾ, 'ನಾನು ಜಾಸ್ತಿ ಮಾತನಾಡೋಕೆ ಇಷ್ಟಪಡೊಲ್ಲ' ಎಂದು ಪ್ರಶ್ನೆ ಮಾಡುತ್ತಿದ್ದ ಜಾಗದಿಂದ ಹೊರಟು ಹೋಗಿದ್ದಾರೆ. ಆದರೆ, ಈ ಪಪ್ಪಿ ಯಾರೆಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇಲ್ಲಿದೆ ವೀಡಿಯೋ ಲಿಂಕ್: https://www.instagram.com/reel/C5yahvGPSZJ/?igsh=MTdrbGlycDVqa2U3bA%3D%3D
ಕನ್ನಡ ಸೀರಿಯಲ್ ನಟಿ ಸಾರಾ ಅಣ್ಣಯ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಆಗಾಗ ಸ್ಟೈಲಿಶ್ ಡ್ರೆಸ್ನಲ್ಲಿ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ. ಸೀರಿಯಲ್ನಲ್ಲಿ ಮಾಡರ್ನ್ ಲುಕ್ನಲ್ಲಿ ಕಾಣಿಸಿಕೊಳ್ಳೋ ಸಾರಾ ರಿಯಲ್ ಲೈಫ್ನಲ್ಲಿ ತುಂಬಾ ಎಂಜಾಯ್ ಮಾಡುವ ನಟಿಯಾಗಿದ್ದಾರೆ.
Kannada Actress Sara Annaiah
ಕನ್ನಡದ ಧಾರಾವಾಹಿ ಕ್ಷೇತ್ರದಲ್ಲಿ ಕನ್ನಡತಿ, ನಮ್ಮ ಲಚ್ಚಿ, ಅಮೃತಧಾರೆ ಸೀರಿಯಲ್ ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟಿ ಸಾರಾ ಅಣ್ಣಯ್ಯ ತಮ್ಮ ಸ್ಟೈಲ್ ನಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಈ ಬೋಲ್ಡ್ ಬ್ಯೂಟಿ ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತುಂಬಾನೆ ಫೇಮಸ್. ಕನ್ನಡ ಸಿನಿಮಾ, ತಮಿಳು ವೆಬ್ ಸೀರೀಸ್ ಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಅಮೃತಧಾರೆಯಲ್ಲಿ ಗೌತಮ್ ದಿವಾನ್ ತಂಗಿ ಮಹಿಮಾ ಪಾತ್ರ ಮಾಡುತ್ತಿದ್ದಾರೆ.
ಅಮೃತಧಾರೆ ಧಾರಾವಾಹಿಯ ನಟ ಶಶಿ ಹೆಗಡೆ ಹಾಗೂ ನಟಿ ಸಾರಾ ಅಣ್ಣಯ್ಯ ಅವರು ದಂಪತಿಯಾಗಿದ್ದಾರೆ. ಶಶಿ ಮಧ್ಯಮ ವರ್ಗದ ಕುಟುಂಬದ ಹುಡುಗನಾದರೆ, ಆತನನ್ನು ಪ್ರೀತಿಸಿ ಮದುವೆಯಾದ ಮಹಿಮಾ ಮಾತ್ರ ಅಲ್ಲಿಯೂ ತನ್ನ ಶ್ರೀಮಂತಿಕೆ ಜೀವನ ನಡೆಸಲು ಹೋಗಿ ಕೈ ಸುಟ್ಟುಕೊಂಡಿದ್ದಾಳೆ.
Sara annaiah
ಕನ್ನಡತಿ ಧಾರವಾಹಿಯಲ್ಲಿ ವರುಧಿನಿ ಖ್ಯಾತಿಯ ನಟಿ ಸಾರಾ ಅಣ್ಣಯ್ಯ ಈ ಬಾರಿ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಪಿಂಕ್ ಬಣ್ಣದ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದರು.