ಇದೊಂದೆ ವಿಷಯಕ್ಕೆ ರಶ್ಮಿಕಾ ಮಂದಣ್ಣ ನಾಚುವುದಂತೆ..: ಆದರೂ ಇದು ನಿಮಗಾಗಿ ಎಂದಿದ್ಯಾಕೆ ನ್ಯಾಷನಲ್ ಕ್ರಶ್!

By Govindaraj S  |  First Published Jul 11, 2024, 8:01 PM IST

ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗ್ತಿದ್ದು, ಡಿಮ್ಯಾಂಡ್ ಕೂಡ ಹೆಚ್ಚಿದೆ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ಶ್ರೀವಲ್ಲಿ ಲೇಟೆಸ್ಟ್​ ಫೋಟೋ ಹಂಚಿಕೊಂಡಿದ್ದಾರೆ. 


ಬಹುಭಾಷೆಗಳಲ್ಲಿ ನಟಿಸಿ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಬಳಗ ದೊಡ್ಡದಿದೆ. ಹೌದು! ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಮುಟ್ಟಿದೆಲ್ಲಾ ಚಿನ್ನವಾಗ್ತಿದ್ದು, ಡಿಮ್ಯಾಂಡ್ ಕೂಡ ಹೆಚ್ಚಿದೆ. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಟಿ ಶ್ರೀವಲ್ಲಿ ಲೇಟೆಸ್ಟ್​ ಫೋಟೋ ಹಂಚಿಕೊಂಡಿದ್ದಾರೆ. ಹೌದು! ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ತಮ್ಮದೇ ಸ್ಟೈಲ್‌ನಲ್ಲಿ ಸೆಲ್ಫಿಗೆ ಪೋಸ್ ಕೊಟ್ಟಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಕ್ಯಾಮೆರಾ ಎಲ್ಲೇ ಕಂಡರೂ ರಶ್ಮಿಕಾ ಆಗಾಗ ಕೈಯಲ್ಲಿ ಸನ್ನೆ ಮಾಡುತ್ತಾ ಬಗೆ ಬಗೆಯ ಪೋಸ್ ಕೊಡುತ್ತಲೇ ಇರುತ್ತಾರೆ. ಈಗ ಸ್ಟೈಲ್‌ ಆಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ನನ್ನ ಆತ್ಮೀಯರೇ, ನಾನು ಯಾವಾಗಲೂ ನನ್ನ ಸೆಲ್ಫಿಗಳನ್ನು ಪೋಸ್ಟ್ ಮಾಡಲು ನಾಚಿಕೆಪಡುತ್ತೇನೆ. ಇದು ನಿಮಗಾಗಿ, ಹೆಚ್ಚು ಸೆಲ್ಫಿಗಳನ್ನು ಪೋಸ್ಟ್ ಮಾಡುವುದರಿಂದ ನಾನು ಆರಾಮದಾಯಕವಾಗಿರುತ್ತೇನೆ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರಶ್ಮಿಕಾ ಹಂಚಿಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ಸ್ಟೈಲ್‌ನಲ್ಲಿ ತರೇಹವಾರಿ ಕಮೆಂಟ್ ಮಾಡಿದ್ದಾರೆ.
 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Rashmika Mandanna (@rashmika_mandanna)


ಸಿನಿಮಾ ವಿಚಾರ ಗಮನಿಸುವುದಾದರೆ, ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ವಿಶ್ವಾಂಭರ' ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲು ರಶ್ಮಿಕಾಗೆ ಚಾನ್ಸ್ ಸಿಕ್ಕಿದೆ. ಸ್ಪೆಷಲ್ ರೋಲ್ ಆಗಿದ್ರೂ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ತಿರುವು ಕೊಡಲಿದೆಯಂತೆ. ನಟಿಗೂ ಕೂಡ ಇಷ್ಟವಾಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ 'ಕುಬೇರ' ಸಿನಿಮಾ ಕೂಡ ಅವರ ವೃತ್ತಿಜೀವನಕ್ಕೆ ಪ್ಲಸ್​ ಆಗುವ ಸೂಚನೆ ಸಿಕ್ಕಿದೆ. ಇತ್ತೀಚೆಗೆ ಬಿಡುಗಡೆಗೊಂಡ 48 ಸೆಕೆಂಡ್​ಗಳ ಟೀಸರ್​ನಲ್ಲಿ ರಶ್ಮಿಕಾ ಮಂದಣ್ಣ ಅವರು ನೆಲದ ಒಳಗೆ ಹುದಿಗಿಟ್ಟ ದೊಡ್ಡ ಸೂಟ್​ಕೇಸ್​ ಹೊರಗೆ ತೆಯುತ್ತಾರೆ. ಅದರ ತುಂಬ ಹಣದ ಕಂತೆಗಳೇ ಇವೆ. 

ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಅಂತಿದಾರೆ ಫ್ಯಾನ್ಸ್‌!

ದುಡ್ಡು ನೋಡಿ ಖುಷಿ ಆಗುವ ರಶ್ಮಿಕಾ ಅವರು ಎಲ್ಲವನ್ನು ತೆಗೆದುಕೊಂಡು ಹೋಗುತ್ತಾರೆ. ಅಷ್ಟು ದುಡ್ಡು ಯಾರದ್ದು? ನೆಲೆದ ಒಳಗೆ ಹೂತಿಟ್ಟಿದ್ದು ಯಾಕೆ? ಈಗ ಅದನ್ನು ರಶ್ಮಿಕಾ ತೆಗೆದುಕೊಂಡು ಹೋಗುತ್ತಿರುವುದು ಎಲ್ಲಿಗೆ? ಇಂಥ ಹಲವು ಪ್ರಶ್ನೆಗಳು ಸಿನಿಪ್ರಿಯರ ಮನದಲ್ಲಿ ಹುಟ್ಟಿಕೊಂಡಿವೆ. ಕುಬೇರ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಧನುಷ್​ ಜೊತೆ ಅಕ್ಕಿನೇನಿ ನಾಗಾರ್ಜುನ ಅವರು ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹೈದರಾಬಾದ್​ನಲ್ಲಿ ಈ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಧನುಷ್ ಮತ್ತು ನಾಗಾರ್ಜುನ ಅವರ ಫಸ್ಟ್​ ಲುಕ್​ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 

ಕೊಡವ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ: ಕೊಡಗಿನೊಳು ಬೆಡಗಿನೊಳು ನನ್ನೆಂಡ್ರು ನಂಜೀ ಎಂದು ಹಾಡಿದ ಪಡ್ಡೆಹೈಕ್ಳು!

ರಿಲೀಸ್​ ದಿನಾಂಕ ಇನ್ನಷ್ಟೇ ಗೊತಾಗಬೇಕಿದೆ. ಈ ಚಿತ್ರಕ್ಕೆ ಶೇಖರ್​ ಕಮ್ಮುಲ ನಿರ್ದೇಶನ ಮಾಡುತ್ತಿದ್ದಾರೆ. ಅದಲ್ಲದೇ, ಸಲ್ಮಾನ್​ ಖಾನ್ ಜೊತೆ ‘ಸಿಕಂದರ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ‘ಅನಿಮಲ್​’ ಸಿನಿಮಾದ ದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್​ನಲ್ಲಿ ರಶ್ಮಿಕಾ ಒಪ್ಪಿಕೊಂಡ ಸಿನಿಮಾ ಇದು. ‘ಸಿಕಂದರ್​’ಗೆ ಎ.ಆರ್​. ಮುರುಗದಾಸ್​ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಇದೇ ಸಾಲಿನಲ್ಲಿ ತೆರೆಕಾಣಲಿದೆ. ಪುಷ್ಪ ರಾಜ್ ಪಾತ್ರದಲ್ಲಿ ನಟಿಸಲಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಜೊತೆ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಮಂದಣ್ಣ ಮುಂದುವರಿಸಲಿದ್ದಾರೆ. ಇದಲ್ಲದೇ ದಿ ಗರ್ಲ್​ಫ್ರೆಂಡ್​​​, ಛಾವಾ, ರೈನ್​ಬೋ ಪ್ರಾಜೆಕ್ಟ್​ಗಳು ನಟಿ ಬಳಿ ಇವೆ.

click me!