ಅಮಿತಾಭ್​ರ 55 ವರ್ಷಗಳ ದಾಖಲೆ ಮುರಿತು ಕಲ್ಕಿ 2898 AD: 81ನೇ ವಯಸ್ಸಿನಲ್ಲಿ ಏನಿದು ಅಚ್ಚರಿ?

By Suchethana D  |  First Published Jul 11, 2024, 5:37 PM IST

ಅಮಿತಾಭ್​ ಬಚ್ಚನ್​ ಅವರ 55 ವರ್ಷಗಳ ಸಿನಿಮಾ ದಾಖಲೆ ಮುರಿದಿದೆ  ಕಲ್ಕಿ 2898 AD ಚಿತ್ರ. 81ನೇ ವಯಸ್ಸಿನಲ್ಲಿ ಏನಿದು ಅಚ್ಚರಿ?
 


ಸೂಪರ್ ಹಿಟ್ ವೈಜ್ಞಾನಿಕ ಆಕ್ಷನ್ ಚಲನಚಿತ್ರ ಕಲ್ಕಿ 2898 AD ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ವೈಜಯಂತಿ ಮೂವೀಸ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನಾಗ್ ಅಶ್ವಿನ್ ವಹಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ಚಿತ್ರರಂಗದಿಂದ ಪ್ರಭಾಸ್ ಮತ್ತು ಕಮಲ್ ಹಾಸನ್ ನಟಿಸಿದ್ದರೆ, ದೀಪಿಕಾ ಪಡುಕೋಣೆ ಮತ್ತು ಅಮಿತಾಭ್​ ಬಚ್ಚನ್ ಬಾಲಿವುಡ್‌ನಿಂದ ಕಾಣಿಸಿಕೊಂಡಿದ್ದಾರೆ, ಜೊತೆಗೆ ದಿಶಾ ಪಟಾನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಕಿ 2898 ಎಡಿ’ ತೆಲುಗು ಸಿನಿಮಾ. ಈ ಚಿತ್ರ ತೆಲುಗಿನ ಜೊತೆಗೆ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್ ಆಗಿದೆ.  ಕಳೆದ ಜೂನ್​ 27ರಂದು ಬಿಡುಗಡೆಯಾಗಿರುವ ಈ ಚಿತ್ರ ಇದಾಗಲೇ  ಬಾಕ್ಸ್ ಆಫೀಸ್​ನಲ್ಲಿ ಸಾವಿರ ಕೋಟಿ ಹತ್ತಿರ ಗಳಿಕೆ ಮಾಡಿದೆ. ಇಂದು ಚಿತ್ರ ಬಿಡುಗಡೆಯಾಗಿ 14ನೇ ದಿನವಾಗಿದ್ದು, ಬಾಕ್ಸ್ ಆಫೀಸ್​ನಲ್ಲಿ 7.5 ಕೋಟಿ ರೂಪಾಯಿ ಗಳಿಸಿದೆ. ಇಲ್ಲಿಯವರೆಗಿನ ಲೆಕ್ಕಾಚಾರ ಹಾಕುವುದಾದರೆ, ಭಾರತದಲ್ಲಿ 536.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

ಈ ಚಿತ್ರದಿಂದ ಅಮಿತಾಭ್ ಬಚ್ಚನ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್ ಸಿಕ್ಕಿದೆ. ಇದು ಅವರ ವೃತ್ತಿ ಜೀವನದ ಅತಿದೊಡ್ಡ ಗಳಿಕೆ ಮಾಡಿದ ಸಿನಿಮಾ ಇದು. ವಿಶೇಷ ಎಂದರೆ,  ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ 191.5 ಕೋಟಿ ಗಳಿಸಿರೋ ಈ ಚಿತ್ರ  ತನ್ನ ಹೆಸರಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಐದು ದೊಡ್ಡ ದಾಖಲೆಗಳೇ ಚಿತ್ರಕ್ಕೆ ಸಿಕ್ಕಿವೆ.  'ಕಲ್ಕಿ 2898 AD' ಬಾಕ್ಸ್ ಆಫೀಸ್‌ನಲ್ಲಿ 2024 ರ ಅತಿದೊಡ್ಡ ಚಿತ್ರವಾಗಿದೆ. ಈ ವರ್ಷ ‘ಫೈಟರ್’, ‘ಶೈತಾನ್’, ‘ಬಡೆ ಮಿಯಾನ್ ಚೋಟೆ ಮಿಯಾನ್’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಇಡೀ ಜಗತ್ತಿನಲ್ಲಿ ಯಾರೂ ಮೊದಲ ದಿನ ಇಷ್ಟು ದುಡ್ಡು ಗಳಿಸಲು ಸಾಧ್ಯವಾಗಲಿಲ್ಲ.

Tap to resize

Latest Videos

ಮೇಕಪ್​ಗೆ ನಾಲ್ಕು ಗಂಟೆ, ತೆಗೆಯಲು ಒಂದು ಗಂಟೆ... 81 ವರ್ಷದ 'ಅಶ್ವತ್ಥಾಮ'ನ ತೆರೆಮರೆಯ ಕಥೆಯಿದು...

ಇನ್ನು ನಟ ಅಮಿತಾಭ್​ ಬಚ್ಚನ್​ ಕುರಿತು ಹೇಳುವುದಾದರೆ, ನಟ ಸುಮಾರು  55 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು 1969 ರಲ್ಲಿ 'ಸತ್ ಹಿಂದೂಸ್ತಾನಿ' ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದಾಗ್ಯೂ, ಇದುವರೆಗೆ ಅವರ ಯಾವುದೇ ಚಿತ್ರಗಳು ಮೊದಲ ದಿನದಲ್ಲಿ 'ಕಲ್ಕಿ 2898 AD' ಗಳಿಸಿದಷ್ಟು ಗಳಿಸಿಲ್ಲ. ಈ ಮೂಲಕ 55 ವರ್ಷಗಳ ದಾಖಲೆಯನ್ನು ಕಲ್ಕಿ ಚಿತ್ರ ಮುರಿದಿದೆ.  ಅಮಿತಾಭ್ ಬಚ್ಚನ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಯಾವ ಚಿತ್ರವೂ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಲು ಅವರ ಸಿನಿಮಾಗಳಿಗೆ ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ದೊಡ್ಡ ಗೆಲುವು ಕಂಡ ಖುಷಿಯಲ್ಲಿ ಇದ್ದಾರೆ. ಅಶ್ವತ್ಥಾಮನಾಗಿ ಕಾಣಿಸಿಕೊಂಡು ಅಮಿತಾಭ್ ಇಷ್ಟ ಆಗುತ್ತಾರೆ. ಅಷ್ಟಕ್ಕೂ ಈ ಚಿತ್ರದಲ್ಲಿ ಪ್ರಭಾಸ್ ಅವರ ಪಾತ್ರಕ್ಕೆ ತೂಕ ಬರೋದು ಕೊನೆಯಲ್ಲಿ ಮಾತ್ರ. ಅಲ್ಲಿಯವರೆಗೂ ಅಮಿತಾಭ್ ಅವರೇ ಹೆಚ್ಚು ಗಮನ ಸೆಳೆಯುತ್ತಾರೆ. ಈ ಕಾರಣದಿಂದ ಹಿಂದಿ ಮಂದಿ ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.  
 
ಅಷ್ಟಕ್ಕೂ ಅಮಿತಾಭ್​ ಬಚ್ಚನ್​ ಅವರು ತಮ್ಮ 81ನೇ ವಯಸ್ಸಿನಲ್ಲಿಯೂ ಈ ಚಿತ್ರದ ಅಶ್ವತ್ಥಾಮ ಪಾತ್ರಕ್ಕೆ ಜೀವ ತುಂಬಿರುವ ಹಿಂದೆ ದೊಡ್ಡ ಕಥೆಯೇ ಇದೆ.  ಅಮಿತಾಭ್​ ಅವರು ಈ ಪಾತ್ರಕ್ಕಾಗಿ ಪ್ರತಿದಿನ ನಾಲ್ಕು ಗಂಟೆ ಮೇಕಪ್​ ಮಾಡಿಕೊಳ್ಳುತ್ತಿದ್ದಂತೆ. ಕರಣ್​ದೀಪ್​ ಸಿಂಗ್​ ಈ ಮೇಕಪ್​  ಕಲಾವಿದರು. ಮೇಕಪ್​ ಅನ್ನು ತೆಗೆಯಲು ಒಂದು ಗಂಟೆ ಹಿಡಿದಿತ್ತು ಎನ್ನುವ ಸತ್ಯವಿದು. ಅಷ್ಟಕ್ಕೂ ನಟ ಅಮಿತಾಭ್​ ಅವರು ಇದೇ ಮೊದಲಲ್ಲ. ಈ ಹಿಂದೆ ಕೂಡ ಬ್ಲ್ಯಾಕ್​ ಚಿತ್ರಕ್ಕೆ ಇದೇ ರೀತಿ ದಿನಪೂರ್ತಿ ಮೇಕಪ್​ ಮಾಡಿಕೊಂಡದ್ದು ಇದೆ. ವಯಸ್ಸು 81 ಆದರೂ ಇವರ ಎನರ್ಜಿ ಮಾತ್ರ ನಿಂತಿಲ್ಲ. ಇಷ್ಟು ದೀರ್ಘ ಅವಧಿಯವರೆಗೆ ಮೇಕಪ್​  ಮಾಡಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಆದರೆ ಅದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಅಮಿತಾಭ್​. 

ಮಣ್ಣು ಹದವಾದ್ರೆ ಮಾತ್ರ ಮೇಡಂ ಮೂರ್ತಿಯಾಗೋದು.. ಬಿಕಿನಿ ಧರಿಸಲ್ಲ ಅಂದ್ರೆ ನಿಮ್​ ಹಣೆಬರಹ... ಆ ದಿನ ನೆನೆದ ಮನಿಷಾ!
 

click me!