ಕೆಲ ನಟಿಯರು ಪದೇ ಪದೇ ವಿವಾದಕ್ಕೆ ಒಳಗಾಗುತ್ತಿರುತ್ತಾರೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋ, ವಿಡಿಯೋಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.
ಹೈದರಾಬಾದ್: ಒಮ್ಮೆ ಬಿಗ್‌ಬಾಸ್ ಎಂಬ ಮಾಯಾಲೋಕಕ್ಕೆ ಹೋಗಿ ಬಂದ್ರೆ ಸ್ಟಾರ್ ಪಟ್ಟದ ಜೊತೆಯಲ್ಲಿ ಅಭಿಮಾನಿಗಳ ಬಳಗವೂ ಸೃಷ್ಟಿಯಾಗುತ್ತದೆ. ಹಾಗಾಗಿ ಕೆಲವರು ಬಿಗ್‌ಬಾಸ್ ಮನೆಗೆ ಹೋಗಲು ಸರ್ಕಸ್ ಮಾಡುತ್ತಿರುತ್ತಾರೆ. ಬಿಗ್‌ಬಾಸ್ ನಿಂದ ಹೊರ ಬಂದ ಬಳಿಕ ಒಳ್ಳೆಯ ಜೀವನ ಕಟ್ಟಿಕೊಂಡವರು ಮತ್ತು ಫೇಮ್ ತಲೆಗೇರಿಸಿಕೊಂಡು ಹುಚ್ಚರಾದವರ ಉದಾಹರಣೆಗಳು ನಮ್ಮೆಲ್ಲರ ಮುಂದಿವೆ. ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ಪ್ರಿಯಕರ ಜೊತೆಗಿನ ಬೆಡ್‌ರೂಮ್‌ನಲ್ಲಿ ಅರೆ ಬೆತ್ತಲಾದ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ಇನಾಯಾ ಸುಲ್ತಾನಾ ಖಾಸಗಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಿಗ್‌ಬಾಸ್ ಸ್ಪರ್ಧಿ. ಯಾವಾಗಲೂ ಬೋಲ್ಡ್ ಆಂಡ್ ಫೋಟೋ ಹಂಚಿಕೊಳ್ಳುವ ಮೂಲಕ ಇನಾಯಾ ಆಪಾರ ಮೇಲ್ ಫ್ಯಾನ್ಸ್ ಹೊಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಬೋಲ್ಡ್ ಹೇಳಿಕೆಗಳಿಂದಲೂ ಇನಾಯಾ ಸುಲ್ತಾನಾ ಸುದ್ದಿಯಲ್ಲಿರುತ್ತಾರೆ. ಬಿಗ್‌ಬಾಸ್ ಮನೆ ಸೇರಿದ ದಿನದಿಂದಲೂ ಅಲ್ಲಿ ಮಾಡಿಕೊಳ್ಳುತ್ತಿದ್ದ ಕಿರಿಕ್‌ಗಳಿಂದಲೇ ಇನಾಯಾ ಬಹುದಿನದವರೆಗೆ ಅಲ್ಲಿ ಉಳಿಯುವಂತಾಗಿತ್ತು. ಸಹ ಸ್ಪರ್ಧಿಗಳ ಜೊತೆ ಇನಾಯಾ ಜಗಳ ಮಾಡಿಕೊಳ್ಳುತ್ತಲೇ ಇದ್ದರು. ಬಿಗ್‌ಬಾಸ್ ನಿಂದ ಹೊರ ಬಂದ ಬಳಿಕ ರಾಮ್ ಗೋಪಾಲ್ ವರ್ಮಾ ಜೊತೆ ಇನಾಯಾ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಹೆಚ್ಚು ನೆಗಟಿವ್ ಕಮೆಂಟ್ ಬಂದ ಹಿನ್ನೆಲೆ ವಿಡಿಯೋವನ್ನು ಡಿಲೀಟ್ ಮಾಡಿಕೊಂಡಿದ್ದರು.
ನಿಮ್ಮ ಗಂಡ ಬೇರೆ ಹುಡುಗಿ ಜೊತೆ ಮಜಾ ಮಾಡ್ತಿದ್ದಾನೆ .. ನಿಮಗೇನೂ ಅನ್ನಿಸಲ್ವಾ? ಕತ್ರಿನಾಗೆ ಫ್ಯಾನ್ಸ್ ಪ್ರಶ್ನೆ
ಇನಾಯಾ ಸುಲ್ತಾನಾಳ ಬೋಲ್ಡ್ ಫೋಟೋಗಳ ಮೂಲಕ ಪಡ್ಡೆ ಹುಡುಗರನ್ನ ಹುಚ್ಚರನ್ನಾಗಿ ಮಾಡುತ್ತಿರುತ್ತಾರೆ. ಆದ್ರೆ ಇತ್ತೀಚೆಗೆ ಹಂಚಿಕೊಂಡ ಫೋಟೋ ಮತ್ತು ರೀಲ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಬೆಡ್‌ರೂಮ್‌ನಲ್ಲಿ ಟವೆಲ್ ಕಟ್ಟಿಕೊಂಡು ಗೆಳೆಯನ ಜೊತೆಯಲ್ಲಿ ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲಾಗಿದೆ. ಈ ಫೋಟೋ ನೋಡಿದ್ರೆ ಕೆಲಸ ಇನ್ಮೇಲೆ ಶುರು ಆಗಬೇಕಾ ಅಂದ್ರೆ ಕೆಲ ಬಳಕೆದಾರರು ಎಲ್ಲಾ ಮುಗಿದ್ಮೇಲೆ ಜೋಡಿ ಸ್ನಾನ ಮಾಡಿ ಫ್ರೆಶ್ ಆದಂತಿದೆ ಎಂದು ಕಾಲೆಳೆದಿದ್ದಾರೆ. ವಿಡಿಯೋದಲ್ಲಿ ಇನಾಯಾಗೆ ಆಕೆ ಗೆಳೆಯ ಕಿಸ್ ಮಾಡುತ್ತಾನೆ. ಹೀಗೆ ಗೆಳೆಯನ ಜೊತೆ ಇನಾಯಾ ಫುಲ್ ಎಂಜಾಯ್ ಮಾಡಿದ್ದಾರೆ.
ಹಾಟ್ ಬ್ಯೂಟಿಯ ಬಾಯ್‌ಫ್ರೆಂಡ್ ಯಾರು?
ಇನಾಯಾ ಸುಲ್ತಾಳ ಎಂಬ ಮಾದಕ ಚೆಲುವಿಯ ಗೆಳೆಯನ ಹೆಸರು ಗೌತಮ್ ಕೊಪ್ಪಿಶೆಟ್ಟಿ. ಜಿಮ್ ಹಾಗೂ ಯೋಗ ತರಬೇತುದಾರರಾಗಿ ಕೆಲಸ ಮಾಡಿಕೊಂಡಿರುವ ಗೌತಮ್ ಹಲವು ದಿನಗಳಿಂದ ಇನಾಯಾ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಇಬ್ಬರೂ ಒಂದೇ ಮನೆಯಲ್ಲಿಯೇ ವಾಸವಾಗಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುವ ಇನಾಯಾ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಅಂಗಡಿಗಳ ಉದ್ಘಾಟನೆ ಹಾಗೂ ಮಾಡೆಲಿಂಗ್ ಶೋಗಳಲ್ಲಿ ಆಗಾಗ್ಗೆ ಇನಾಯಾ ಕಾಣಿಸಿಕೊಳ್ಳುತ್ತಿರುತ್ತಾರೆ. ಕುಟುಂಬಸ್ಥರ ವಿರೋಧ ನಡುವೆ ಬಣ್ಣದ ಲೋಕಕ್ಕೆ ಬಂದ ಹಿನ್ನೆಲೆ ಇನಾಯಾ ಎಲ್ಲಿಂದ ದೂರವಾಗಿದ್ದಾರೆ.
ಈ ಕೆಲಸ ಮಾಡಿದ್ದು ಜೀವನದಲ್ಲಿ ಮೊದಲ ಬಾರಿ ಎಂದ ಅನು ಪ್ರಭಾಕರ್