ನಟಿ ಪ್ರಿಯಾಂಕಾ ಚೋಪ್ರಾ ಒಂದು ಕಾಲದಲ್ಲಿ ಬಾಲಿವುಡ್‌ನ ಸ್ಟಾರ್ ನಟಿಯಾಗಿ ಮೆರೆದವರು. ಸುಮಾರು ಒಂದು ದಶಕಗಳ ಕಾಲ ಬಾಲಿವುಡ್ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಪಟ್ಟದಲ್ಲಿ ಮೆರೆದವರು. ಅಷ್ಟೇ ಅಲ್ಲ, 30 ನವೆಂಬರ್ 2000 ದಲ್ಲಿ 'ವಿಶ್ವ ಸುಂದರಿ' ಪಟ್ಟವನ್ನೂ ಸಹ ಪಡೆದವರು..
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ನಟನೆ ಅಂದ್ರೆ ಏನು, ಅದು ಎಲ್ಲಿರಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟಿ ಪ್ರಿಯಾಂಕಾ, 'ಒಮ್ಮೆ ನಮ್ಮ ಮನೆಯಲ್ಲಿ ಒಂದು ಘಟನೆ ನಡೆಯಿತು. ನನಗೆ ಆಗ ಸುಮಾರು 22 ವಯಸ್ಸು. ನಾನು ನನ್ನ ಸಿನಿಮಾದ ಸೀನ್ ಒಂದನ್ನು ಮನೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದೆ. ನಾನು ಊಟ ಮಾಡುವ ದೃಶ್ಯವನ್ನು ತಲ್ಲೀನತೆಯಿಂದ ಖಾಯಿ ಕೈಯಲ್ಲಿ ನಟಿಸುತ್ತಿದ್ದೆ.
ಅದನ್ನು ನೋಡಿದ ನನ್ನ ತಾಯಿ ಹಿಂದಿನಿಂದ ಬಂದು ನನ್ನ ತಲೆಗೆ ತಟ್ಟಿ 'ಏಯ್, ಇದನ್ನೆಲ್ಲ ನೀನು ಮನೆಯಿಂದ ಆಚೆ ಮಾತ್ರ ಇಟ್ಟುಕೋ' ಎಂದು ಹೇಳಿದ್ದರು. ಅಂದು ನನಗೆ ಅಮ್ಮನ ಮಾತು ಜಸ್ಟ್ ತಮಾಷೆ ಎನಿಸಿತ್ತು. ಆದರೆ, ಕೆಲವು ವರ್ಷ ಕಳೆದ ಮೇಲೆ ನನಗೆ ಅಮ್ಮನ ಮಾತಿನಲ್ಲಿ ತುಂಬಾ ಅರ್ಥ ಗೋಚರಿಸಿತು. ನಾನು ಒಬ್ಬಳು ನಟಿ. ನನ್ನ ನಟನೆ ಒಂಥರಾ ಆಡ ಆಡಿದಂತೆ. ಅದು ನನ್ನ ಕೆಲಸ. ಅದನ್ನು ನಾನು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮಾಡಬೇಕೇ ಹೊರತೂ ಮನೆಯಲ್ಲಿ ಅಲ್ಲ ಎಂಬ ಸಂದೇಶ ಅಂದೇ ಅಮ್ಮನ ಮಾತಿನಲ್ಲಿ ಇತ್ತು.
ಮಹಾಲಿಂಗ ಭಾಗವತರ್ ನನ್ನ ಪತಿಯಲ್ಲ, ಗಾಡ್ ಫಾದರ್ ಅಷ್ಟೇ; ಆಪ್ತರ ಬಳಿ ಹೇಳಿದ್ರಂತೆ ನಟಿ ಲೀಲಾವತಿ!
ಆದರೆ ನನಗದು ಅರ್ಥವಾಗಿದ್ದು ನಾನು ನಟಿಯಾಗಿ ವೃತ್ತಿಜೀವನ ಆರಂಭಿಸಿ ಕೆಲವು ವರ್ಷಗಳು ಕಳೆದ ಮೇಲಷ್ಟೇ. ನಾವು ಕ್ಯಾಮೆರಾ ಮುಂದೆ ಹಣ ತೆಗೆದುಕೊಂಡು ನಟನೆ ಮಾಡುವ ಕಲಾವಿದರು ಅಷ್ಟೇ. ನಟಿ ಪ್ರಿಯಾಂಕಾ ಚೋಪ್ರಾ ಒಂದು ಕಾಲದಲ್ಲಿ ಬಾಲಿವುಡ್‌ನ ಸ್ಟಾರ್ ನಟಿಯಾಗಿ ಮೆರೆದವರು. ಸುಮಾರು ಒಂದು ದಶಕಗಳ ಕಾಲ ಬಾಲಿವುಡ್ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಪಟ್ಟದಲ್ಲಿ ಮೆರೆದವರು. ಅಷ್ಟೇ ಅಲ್ಲ, 30 ನವೆಂಬರ್ 2000 ದಲ್ಲಿ 'ವಿಶ್ವ ಸುಂದರಿ' ಪಟ್ಟವನ್ನೂ ಸಹ ಪಡೆದವರು ಪ್ರಿಯಾಂಕಾ ಚೋಪ್ರಾ.
ಹಿಂದಿ ಭಾಷಿಗರಿಗೆ ಯಾಕೆ 'ಥ್ಯಾಂಕ್ಸ್' ಹೇಳಿದ್ರು ತೆಲುಗು ನಟ ರಾಮ್ ಚರಣ್; ಸೌತ್ ಸಿನಿಮಂದಿ ಏನಂದ್ರು?
ಭಾರತದ 5ನೇ ವಿಶ್ವ ಸುಂದರಿಯಾಗಿ (Mis World) ಪ್ರಿಯಾಂಕಾ ಚೋಪ್ರಾ ಕಿರೀಟ ಧರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹರಡಿದವರು. ಬಳಿಕ ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾದರು. ಸದ್ಯ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಸಿನಿಮಾಗಳು ಹಾಗು ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ ಅವರನ್ನು ಮದುವೆಯಾಗಿರುವ ಪ್ರಿಯಾಂಕಾ ಈಗ ಗಂಡನ ಜತೆ ಅಮೆರಿಕಾದಲ್ಲೇ ಸೆಟ್ಲ್ ಆಗಿದ್ದಾರೆ.
ಮತ್ತೆ ಒಂದಾಯ್ತು 'ರಂಗಸ್ಥಳಂ' ಜೋಡಿ, ಬರಲಿದೆ ರಾಮ್ ಚರಣ್-ಸುಕುಮಾರ್ ಸಂಗಮದ ಮತ್ತೊಂದು ಸಿನಿಮಾ!
ಅಚ್ಚರಿ ಎಂಬಂತೆ, ಬಾಲಿವುಡ್‌ನಲ್ಲಿ ಬೇಡಿಕೆಯಿದ್ದರೂ ಪ್ರಿಯಾಂಕಾ ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡು ನಟಿಸುತ್ತಿಲ್ಲ. ಆದರೆ, ಹಾಲಿವುಡ್ ಸಿನಿಮಾಗಳಲ್ಲಿ ನಟನೆ ಮುಂದುವರೆಸಿದ್ದಾರೆ. 'ನಾನು ನನ್ನಗಂಡನನ್ನು ಬಿಟ್ಟು ಭಾರತಕ್ಕೆ ಬಂದು ಶೂಟಿಂಗ್ ಮಾಡಲು ಈಗ ಸಾಧ್ಯವಿಲ್ಲ. ಹಾಲಿವುಡ್ ಸಿನಿಮಾಗಳು ಅಮೆರಿಕಾದಲ್ಲೇ ಆಗುತ್ತವೆ, ಹೀಗಾಗಿ ನಾನು ನಟಿಸುತ್ತಿದ್ದೇನೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.