ಪೇರಲೆ ಹಣ್ಣು ಮಾರೋ ಹೆಂಗಸಿಗೆ ಸೆಲ್ಯೂಟ್‌ ಹೊಡೆದ ನಟಿ ಪ್ರಿಯಾಂಕಾ ಚೋಪ್ರಾ! ಏನಪ್ಪಾ ಅಂಥ ವಿಶೇಷ?

Published : Mar 20, 2025, 02:22 PM ISTUpdated : Mar 20, 2025, 02:50 PM IST
ಪೇರಲೆ ಹಣ್ಣು ಮಾರೋ ಹೆಂಗಸಿಗೆ ಸೆಲ್ಯೂಟ್‌ ಹೊಡೆದ ನಟಿ ಪ್ರಿಯಾಂಕಾ ಚೋಪ್ರಾ! ಏನಪ್ಪಾ ಅಂಥ ವಿಶೇಷ?

ಸಾರಾಂಶ

ಬಾಲಿವುಡ್‌ನಲ್ಲಿ ಮಿಂಚಿ, ಈಗ ಹಾಲಿವುಡ್‌ನಲ್ಲಿ ಸಿನಿಮಾ ಮಾಡ್ತಿರುವ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ಆಗಮಿಸಿದ್ದರು. ಈ ಬಾರಿ ಅವರು ಪೇರಳೆ ಹಣ್ಣು ಮಾರುವ ಹೆಂಗಸಿಗೆ ಅವರು ಮಾರು ಹೋಗಿದ್ದಾರಂತೆ.

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಿಯಾಂಕಾ ಚೋಪ್ರಾ ಈಗ ಎಸ್‌ ಎಸ್ ರಾಜಮೌಳಿ ಅವರ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಒಡಿಶಾದಲ್ಲಿ ಶೂಟಿಂಗ್ ಹೇಗಿತ್ತು ಅಂತ ಹೇಳಿಕೊಂಡಿದ್ರು. ಆಬಳಿಕ ವಿಶಾಖಪಟ್ಟಣಂ ಏರ್‌ಪೋರ್ಟ್‌ಗೆ ಹೋಗೋ ದಾರಿಯಲ್ಲಿ ಒಂದು ಸಣ್ಣ ಘಟನೆ ಅವರ ಗಮನಸೆಳೆದಿದೆ. ಅದನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಪೇರಲೆ ಹಣ್ಣು ಮಾರುವ ಹೆಂಗಸು!
ಪ್ರಿಯಾಂಕಾ ಚೋಪ್ರಾ ಹೇಳಿದ್ರು, 'ನಾನು ಈ ತರ ಯಾವಾಗಲೂ ಹೇಳಲ್ಲ, ಆದರೆ ಇಂದು ನನಗೆ ಸಿಕ್ಕಾಪಟ್ಟೆ ಸ್ಫೂರ್ತಿ ನೀಡಿದ ಘಟನೆ ಬಗ್ಗೆ ಹೇಳಿಕೊಳ್ಳಬೇಕಿದೆ. ನಾನು ಮುಂಬೈಗೆ ಹೋಗೋಕೆ ವಿಶಾಖಪಟ್ಟಣಂ ಏರ್‌ಪೋರ್ಟ್‌ಗೆ ಹೋಗ್ತಿದ್ದೆ, ಆಗ ಓರ್ವ ಮಹಿಳೆ ಸೀಬೆ ಹಣ್ಣು ಮಾರೋದನ್ನು ನೋಡಿದೆ. ನನಗೆ ಹಸಿ ಸೀಬೆ ಹಣ್ಣು ಅಂದ್ರೆ ಇಷ್ಟ, ಅದಕ್ಕೆ ನಾನು ನಿಲ್ಲಿಸಿ ಎಷ್ಟು ಅಂತ ಕೇಳಿದೆ, ಅವರು 150 ರೂಪಾಯಿ ಅಂದ್ರು, ನಾನು 200 ರೂಪಾಯಿ ಕೊಟ್ಟೆ. ಅವರು ನನಗೆ ಚೇಂಜ್ ಕೊಡೋಕೆ ಟ್ರೈ ಮಾಡ್ತಿದ್ರು. ನಾನು ಬೇಡ ಇಟ್ಕೊಳ್ಳಿ ಅಂದೆ” ಎಂದು ಹೇಳಿದ್ದಾರೆ.

ಶಾರುಖ್ ಖಾನ್ ಜೊತೆ ನಾನು ಮಾತನಾಡಲ್ಲ.. ಪ್ರಿಯಾಂಕಾ ಚೋಪ್ರಾ ಕಾಮೆಂಟ್ ವೈರಲ್!

ಮತ್ತೆರಡು ಹಣ್ಣು ಕೊಡೋಕೆ ಬಂದ್ರು! 
“ಇನ್ನೇನು ಸಿಗ್ನಲ್‌ನಲ್ಲಿ ನನ್ನ ಕಾರ್‌ ನಿಂತಿತ್ತು. ಸ್ವಲ್ಪ ಹೊತ್ತಾದ ಬಳಿಕ, ರೆಡ್ ಲೈಟ್, ಗ್ರೀನ್ ಆಗೋಕೆ ಮುಂಚೆ ಅವರು ವಾಪಸ್ ಬಂದು ನನಗೆ ಇನ್ನೂ ಎರಡು ಸೀಬೆ ಹಣ್ಣು ಕೊಟ್ರು. ಆ ಮಹಿಳೆ ದುಡಿಯುವವಳು, ಅವರಿಗೆ ದಾನ ಬೇಡ. ಇದು ನನಗೆ ಸಿಕ್ಕಾಪಟ್ಟೆ ಇಷ್ಟ ಆಯ್ತು” ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಹೊಸ ಲುಕ್! ಎಲ್ಲರ ಕಣ್ಣು ಹೊಕ್ಕಳಿನಲ್ಲಿದ್ದ ₹2.7 ಕೋಟಿ ಮೌಲ್ಯದ ಡೈಮೆಂಡ್ ಪಿನ್ ಮೇಲಿತ್ತು!

ಸಿನಿಮಾಗಳಲ್ಲಿ ಬ್ಯುಸಿ! 
ಪ್ರಿಯಾಂಕಾ ಚೋಪ್ರಾ ಅವರು ಕಳೆದ ಬಾರಿ ಹಾಲಿವುಡ್ ಸಿನಿಮಾ 'ಲವ್ ಅಗೇನ್'ನಲ್ಲಿ ಕಾಣಿಸಿಕೊಂಡಿದ್ರು. ಹಾಲಿವುಡ್‌ನ 'ಹೆಡ್ಸ್ ಆಫ್ ಸ್ಟೇಟ್', 'ದ ಬ್ಲಫ್' ಮತ್ತೆ ತೆಲುಗು ಸಿನಿಮಾದ SSMB29 ಸೇರಿವೆ. ಈ ಸಿನಿಮಾಗಳು ಯಾವಾಗ ರಿಲೀಸ್ ಆಗಲಿವೆ ಎಂದು ಕಾದು ನೋಡಬೇಕಿದೆ. ಈ ಸಿನಿಮಾದಲ್ಲಿ ಮಹೇಶ್‌ ಬಾಬು ಹೀರೋ ಆಗಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. 

ಸರೋಗಸಿ ಮೂಲಕ ಪ್ರಿಯಾಂಕಾ ನಿಕ್‌ ಜೋನಾಸ್‌ ದಂಪತಿಗೆ ಮಾಲ್ತಿ ಮೇರಿ ಎಂಬ ಮಗಳು ಜನಿಸಿದ್ದಾಳೆ. ಮಗಳ ಜೊತೆಗೆ ಅವರು ಹೆಚ್ಚಿನ ಸಮಯ ಕಳೆಯುತ್ತಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?