ಅಯ್ಯೋ, ಮತ್ತೊಂದು ಡಿವೋರ್ಸ್ ಆಗುತ್ತಾ; ಮ್ಯಾರೇಜ್ ಬಗ್ಗೆ ರಿಗ್ರೇಟ್ ಇದೆ ಅಂದ್ಬಿಟ್ರು ಪ್ರಿಯಾಂಕಾ ಗಂಡ!

By Shriram Bhat  |  First Published Jul 8, 2024, 11:44 AM IST

ಪಿಗ್ಗಿ ಪತಿ, ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ತಮ್ಮ ಹಾಗು ಪ್ರಿಯಾಂಕಾ ಚೋಪ್ರಾ ಬಗ್ಗೆ ವೇದಿಕೆಯೊಂದರಲ್ಲಿ ಮಾತನಾಡುತ್ತ ಅಚ್ಚರಿ ಸ್ಟೇಟ್‌ಮೆಂಟ್ ನೀಡಿದ್ದಾರೆ. 'ನನಗೆ ನಮ್ಮಿಬ್ಬರ ಮದುವೆ ಬಗ್ಗೆ ರೀಗ್ರೇಟ್ ಇದೆ' ಎಂದಿದ್ದಾರೆ.


ಬಾಲಿವುಡ್‌ನಲ್ಲಿ ಮಿಂಚಿ ಮೆರೆದು ಈಗ ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಯಾರಿಗೆ ಗೊತ್ತಿಲ್ಲ? ಆರು ವರ್ಷಗಳ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಹಾಗು ಹಾಲಿವುಡ್ ಪಾಪ್ ಸಿಂಗರ್‌ ನಿಕ್ ಜೊನಾಸ್ ಅವರಿಬ್ಬರೂ ಮದುವೆಯಾಗಿದ್ದಾರೆ. ಅದು ಅತಿಂಥ ಮದುವೆಯಲ್ಲ. ಪ್ರಿಯಾಂಕಾ-ನಿಕ್ ಮದುವೆ ಅದೆಷ್ಟು ಅದ್ದೂರಿಯಾಗಿತ್ತು ಎಂದರೆ ಅ ಮದುವೆಗೆ ಬಹಳಷ್ಟು ಜನರನ್ನು ಆಹ್ವಾನಿಸಲಾಗಿತ್ತು.

ಜೊತೆಗೆ, ವೆಡ್ಡಿಂಗ್‌ಗೆ ಬರೋಬ್ಬರಿ ಖರ್ಚು ಮಾಡಲಾಗಿತ್ತು. ಈ ಜೋಡಿಗೆ ಈಗ ಒಬ್ಬಳು ಮಗಳು ಸಹ ಇದ್ದಾಳೆ. ಹೊಸ ಸುದ್ದಿ ಎಂದರೆ, ಈಗ ನಿಕ್ ಜೊನಾಸ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಬಹಳಷ್ಟು ಜನರಿಗೆ ತಿಳಿದಿರುವಂತೆ, ನಿಕ್ ಜೊನಾಸ್ ಹಾಗು ಪ್ರಿಯಾಂಕಾ ಚೋಪ್ರಾ ಮಧ್ಯೆ ಬರೋಬ್ಬರಿ ಹತ್ತು ವರ್ಷಗಳ ಗ್ಯಾಪ್ ಇದೆ. ಸಾಮಾನ್ಯವಾಗಿ ಒಂದೆರಡು ವರ್ಷಗಳ ಅಂತರ ಇದ್ದೆ ಇರುತ್ತದೆ. ಆದರೆ, ಈ ಹತ್ತು ವರ್ಷಗಳ ಗ್ಯಾಪ್ ಎನ್ನುವುದು ಅತಿಯಾಯಿತು ಎಂಬುದು ಬಲ್ಲವರ ಅಭಿಪ್ರಾಯ.

Tap to resize

Latest Videos

undefined

ಅನುಶ್ರೀ ಕಣ್ಣೀರ ಕಥೆ ಕೇಳಿದರೆ ಕರುಳು ಕಿತ್ತು ಬರುತ್ತೆ, ಕೆನ್ನೆ ಮೇಲೆ ಹನಿ ಜಾರದಿದ್ದರೆ ನಿಮ್ಮಲ್ಲೇನೋ ಪ್ರಾಬ್ಲಂ ಇದೆ..!

ಹಲವರು ಮದುವೆಯಾದ ದಿನದಿಂದಲೂ ಈ ಮದುವೆ ಬಹಳಷ್ಟು ದಿನ ನಿಲ್ಲಲ್ಲ ಎಂದು ಹೇಳುತ್ತಲೇ ಬಂದಿದ್ದರು. ಅವರಿಬ್ಬರು ಯಾವಾಗ ದೂರವಾಗುತ್ತಾರೆ ಎಂದು ಕಾಯುತ್ತಲೇ ಇದ್ದರು. ಆದರೆ ಅಂತಹ ಕೆಲವರ ನಿರೀಕ್ಷೆ ಸುಳ್ಳು ಮಾಡುವಂತೆ ಅವರಿಬ್ಬರೂ ಅನ್ಯೋನ್ಯವಾಗಿದ್ದು ಆರು ವರ್ಷಗಳನ್ನು ಒಟ್ಟಿಗೇ ಇದ್ದು ಕಳೆದಿದ್ದಾರೆ. ಹಾಗಿದ್ದರೆ ಈಗ ಆಗಿರುವುದೇನು? ಅಲ್ಲೇ ಇರುವುದು ಅಚ್ಚರಿ ಸಂಗತಿ.

ಸೋಮವಾರದ ವೃತ ಕೆಡಿಸಿಬಿಟ್ಟಿದ್ರು ಅಂಬರೀಷ್; ಡಾ ರಾಜ್ ಆಚರಣೆ ಬಗ್ಗೆ ಪಾರ್ವತಮ್ಮ ಏನಂದಿದ್ರು?

ಪಿಗ್ಗಿ ಪತಿ, ಹಾಲಿವುಡ್ ಸಿಂಗರ್ ನಿಕ್ ಜೋನಾಸ್ ತಮ್ಮ ಹಾಗು ಪ್ರಿಯಾಂಕಾ ಚೋಪ್ರಾ ಬಗ್ಗೆ ವೇದಿಕೆಯೊಂದರಲ್ಲಿ ಮಾತನಾಡುತ್ತ ಅಚ್ಚರಿ ಸ್ಟೇಟ್‌ಮೆಂಟ್ ನೀಡಿದ್ದಾರೆ. 'ನನಗೆ ನಮ್ಮಿಬ್ಬರ ಮದುವೆ ಬಗ್ಗೆ ರೀಗ್ರೇಟ್ ಇದೆ' ಎಂದಿದ್ದಾರೆ. ಅವರ ಮಾತನ್ನು ಕೇಳಿ ಸ್ಟೇಜ್ ಮೇಲಿದ್ದ ಹಲವರು ಶಾಕ್‌ಗೆ ಒಳಗಾಗಿದ್ದಾರೆ. ಇನ್ನೇನು ಅವರಿಬ್ಬರು ದೂರವಾಗುವ ದಿನ ಬಂದೇ ಬಿಡ್ತು ಅಂತ ಯೋಚಿಸಿ ಬಿಟ್ಟ ಕಣ್ಣು ಮುಚ್ಚದೇ ನಿಕ್‌ ಅವರನ್ನೇ ನೋಡಲು ಶುರು ಮಾಡಿದ್ದಾರೆ.

ಪ್ಯಾನ್ ಇಂಡಿಯಾ ಚಿತ್ರದಲ್ಲಿ ಸತ್ಯದೇವ್ ನಟ ಧನಂಜಯ್, ಜೀಬ್ರಾದಲ್ಲೂ ಕನ್ನಡಿಗ..!

ಆದರೆ ನಿಕ್ ಹೇಳಿದ್ದು ಬೇರೆಯದೇ ಸಂಗತಿ..! ನಿಕ್ ಜೊನಾಸ್ ಅವರು 'ನಾನು ಹಾಗು ಪ್ರಿಯಾಂಕಾ ಇಬ್ಬರೂ ನಮ್ಮ ವೆಡ್ಡಿಂಗ್ ಸಲುವಾಗಿ ಬಹಳಷ್ಟನ್ನು ಖರ್ಚು ಮಾಡಿದ್ದೇವೆ. ಆ ಬಗ್ಗೆ ನನಗೆ ರೀಗ್ರೆಟ್ ಇದೆ ಎಂದಿದ್ದಾರೆ. ನಿಕ್ ಹೇಳಿದ್ದೇನೆಂದರೆ, ನಾವಿಬ್ಬರೂ ನಮ್ಮ ಮದುವೆಯನ್ನು ಸಿಂಪಲ್ ಆಗಿ ಮಾಡಿಕೊಂಡಿದ್ದರೆ ಸಾಕಿತ್ತು. ಮದುವೆಯನ್ನು ಅಷ್ಟೊಂದು ವಿಜೃಂಭಣೆಯಿಂದ ಮಾಡಬೇಕಾದ ಯಾವ ಅಗತ್ಯವೂ ಇರಲಿಲ್ಲ.

KGF 3 ಚಿತ್ರಕ್ಕೆಂದು ಏನೇನೋ ರೆಡಿ ಇದೆ, ಆದ್ರೆ ಒಂದೇ ಒಂದು ಪ್ರಾಬ್ಲಂ; ಯಶ್ ಮಾತಿನ ಒಳಗುಟ್ಟೇನು?

ಯಾಕೆ ಅಷ್ಟೊಂದು ಗ್ರಾಂಡ್ ಆಗಿ, ಅಷ್ಟೊಂದು ಡಾಲರ್, ಅಷ್ಟೊಂದು ಯೂರೋ, ಅಷ್ಟೊಂದು ರೂಪಾಯಿ ವ್ಯಯಿಸಿ ಮದುವೆ ಮಾಡಿಕೊಳ್ಳಬೇಕಿತ್ತು. ಅದು ಅನಾವಶ್ಯಕ ಖರ್ಚು ಎನಿಸುತ್ತಿದೆ. ಆದರೆ, ಆಗಿದ್ದು ಆಗಿಹೋಗಿದೆ. ಆ ಬಗ್ಗೆ ನನಗೆ ಅಪರಾಧೀ ಭಾವ ಕಾಡುತ್ತಿದೆ. ಆದರೆ, ಈಗ ರೀಗ್ರೇಟ್ ಮಾಡಿಕೊಳ್ಳುವುದು ಬಿಟ್ಟರೆ ಬೇರೆ ಏನು ಮಾಡಲು ಸಾಧ್ಯ' ಎಂದಿದ್ದಾರೆ ನಿಕ್ ಜೊನಾಸ್.

ಆ ಡ್ರೆಸ್‌ ಮಾತ್ರ ನನ್ ಲೈಫಲ್ಲೇ ಹಾಕಿಲ್ಲ, ಯಾಕಂದ್ರೆ ನನ್ ಲೆಗ್ ಅದಕ್ಕೆ ಮ್ಯಾಚ್ ಆಗಲ್ಲ; ನಟಿ ಅಂಬಿಕಾ!

click me!