ಬಿಗ್‌ಬಾಸ್ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ನಿಕ್ಕಿ ಇದೀಗ ಹಾಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಬ್ರಾಲೆಟ್, ವಿ ಸ್ಕರ್ಟ್ ಕಾಂಬೋದಲ್ಲಿ ನಿಕ್ಕಿಯ ಸೌಂದರ್ಯಕ್ಕೆ ಫ್ಯಾನ್ಸ್ ಮನಸೋತಿದ್ದಾರೆ.
ಮುಂಬೈ(ಜು.07) ಮಾಡೆಲ್, ನಟನೆಯಲ್ಲಿ ತೊಡಗಿಸಿಕೊಂಡರು ಬಿಗ್‌ಬಾಸ್ 14ರ ಮೂಲಕ ಎಲ್ಲ ಮನೆ ಮಾತಾಗಿರುವ ನಿಕ್ಕಿ ತಾಂಬೋಲಿ ಇದೀಗ ಮತ್ತೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಕಿನಿ, ಸೀರೆ, ಮೊನೊಕಿನಿ ಸೇರಿದಂತೆ ಹಲವು ಅವತಾರದಲ್ಲಿ ಸೌಂದರ್ಯ ಪ್ರದರ್ಶಿಸಿರುವ ನಿಕ್ಕಿ ಇದೀಗ ಬ್ಲಾಕ್ ಬ್ಲಾಲೆಟ್ ಹಾಗೂ ವಿ ಸ್ಕರ್ಟ್ ಕಾಂಬಿನೇಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಟ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಹೌಹಾರಿದ್ದಾರೆ. ನಿಕ್ಕಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ನಿಕ್ಕಿ ಹೊಸ ಪೋಸ್, ಬೋಲ್ಡ್ ಅವತಾರಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಮಾದಕ ನೋಟ, ಬಳುಕುವ ಸೊಂಟ, ಸೆಳೆಯುವ ಕೆಂದುಟಿಗಳ ಕೊಲ್ಮಿಂಚಿನ ಈ ವಿಡಿಯೋ ಎಂತವರನ್ನು ಒಂದು ಕ್ಷಣ ತಲ್ಲೀನಗೊಳಿಸುತ್ತದೆ. ಕಪ್ಪು ಬಣ್ಣದ ಬ್ರಾಲೈಟ್ ನಿಕ್ಕಿಯ ಮಾದಕತೆಯನ್ನು ಹೆಚ್ಚಿಸಿದೆ. ಜೊತೆಗೆ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಕಲರ್ ನೀಡಿದ ಕೂದಲು ಹಾಟ್ ಅವತಾರಕ್ಕೆ ಒಪ್ಪು ವಂತಿದೆ. ಬಿಳಿ ಬಣ್ಣದ ವಿ ಸ್ಕರ್ಟ್ ಧರಿಸಿರುವ ನಿಕ್ಕಿ, ಒಂದಿಷ್ಟು ಬಿಚ್ಚಮ್ಮಳಾಗಿ ಫ್ಯಾನ್ಸ್ ಮನತಣಿಸಿದ್ದಾರೆ.
ಡೀಪ್ ನೆಕ್ ಬ್ಲೌಸ್‌ನಲ್ಲಿ ನಿಕ್ಕಿಯ ಬೆಂಕಿ ಬ್ಯೂಟಿ, ಸೊಂಟ ಬಳುಕಿಸಿ ಹಾಟ್ ಫೋಟೋ ಹಂಚಿಕೊಂಡ ನಟಿ!
ಈ ಹಾಟ್ ವಿಡಿಯೋ ಶೇರ್ ಮಾಡಿರುವ ನಿಕ್ಕಿ, ಒಂದು ಸಂದೇಶ ನೀಡಿದ್ದಾರೆ. ನಿಮ್ಮ ಫೀಡ್‌ಗೆ ಬೆಚ್ಚಗೆ ಅನುಭವ ತರುವುದು ಎಂದಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಭಾರಿ ಮಳೆ ಇದ್ದರೂ ವಿಡಿಯೋದಿಂದ ಬಿಸಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ನಿಕ್ಕಿಯ ಬಿಕಿನಿ ಸೇರಿದಂತೆ ಹಲವು ವಿಡಿಯೋಗಳ ಪೈಕಿ ಈ ವಿಡಿಯೋ ಹುಚ್ಚು ಹಿಡಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ನಿಕ್ಕಿ ತಾಂಬೋಲಿ ತಮಿಳು, ತೆಲುಗು ಚಿತ್ರಗಳಲ್ಲಿ ಮಿಂಚಿದ್ದಾರೆ. ಆದರೆ ಹಿಂದಿ ಬಿಗ್‌ಬಾಸ್ 15 ನಿಕ್ಕಗೆ ಭಾರಿ ಜನಪ್ರಿಯತೆ ತಂದಿಕೊಟ್ಟಿತು. 14ನೇ ಆವೃತ್ತಿಯಲ್ಲಿ ನಿಕ್ಕಿ ಟ್ರೋಫಿ ಗೆಲ್ಲುವ ಅಚ್ಚುಮೆಚ್ಚಿನ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ ನಿಕ್ಕಿಗೆ ಬಿಗ್ ಬಾಸ್ 14 ಭಾರಿ ಜನಪ್ರಿಯತೆ ತಂದುಕೊಟ್ಟಿತು. ಆದರೆ ಹಿಂದಿ ಬಿಗ್ ಬಾಸ್‌ನಲ್ಲಿ ಹೆಸರು ಮಾಡಿದರೂ ಬಾಲಿವುಡ್‌ನಲ್ಲಿ ಅವಕಾಶ ಸಿಗಲಿಲ್ಲ.
ಬ್ಲೂ ಬಿಕಿನಿಯಲ್ಲಿ ಮಿಂಚಿದ ನಿಕ್ಕಿ ತಂಬೋಲಿ,ಬೋಲ್ಡ್ ಫೋಟೋಗೆ ದಂಗಾದ ಫ್ಯಾನ್ಸ್!
ಖತ್ರೋಂಕಿ ಕಿಲಾಡಿ, ಕೇಪ್ ಟೌನ್, ಖತ್ರಾ ಖತ್ರಾ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ನಿಕ್ಕಿ ಕಾಣಿಸಿಕೊಂಡಿದ್ದಾರೆ. 2019ರಲ್ಲಿ ತೆಲುಗು ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ನಿಕ್ಕಿ ಟಾಲಿವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು. ಹೀಗಾಗಿ ತಮಿಳು ಚಿತ್ರದಲ್ಲೂ ಕಾಣಿಸಿಕೊಂಡರು. 2023ರಲ್ಲಿ ಜೋಗಿರಾ ಸಾರಾ ರಾರಾ ಹಿಂದಿ ಸಿನಿಮಾದಲ್ಲಿ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡ ನಿಕ್ಕಿ ಬಳಿಕ ರಿಯಾಲಿಟಿ ಶೋಗಳಲ್ಲೇ ಬ್ಯೂಸಿಯಾಗಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ.