ನಟಿ ರಚಿತಾ ರಾಮ್ ತಮ್ಮ ಸೋಷಿಯಲ್ ಮೀಡಿಯಾ 'x' ಮೂಲಕ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ನೀಡಿದ್ದಾರೆ. ರಚಿತಾ ರಾಮ್ ತಮ್ಮ ಹುಟ್ಟುಹಬ್ಬದ ದಿನಕ್ಕೆ ಸಂಬಂಧಿಸಿ ಈ ಟ್ವೀಟ್ ಮಾಡಿದ್ದು, ಅದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಹಲವರು ಅವರ ಸಂದೇಶ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ.
ಡಿಂಪಲ್ ಕ್ವೀನ್, ಅಚ್ಚ ಕನ್ನಡದ ನಟಿ ರಚಿತಾ ರಾಮ್ ತಮ್ಮ ಸೋಷಿಯಲ್ ಮೀಡಿಯಾ 'x' ಮೂಲಕ ತಮ್ಮ ಅಭಿಮಾನಿಗಳಿಗೆ ಒಂದು ಸಂದೇಶವನ್ನು ನೀಡಿದ್ದಾರೆ. ರಚಿತಾ ರಾಮ್ ತಮ್ಮ ಹುಟ್ಟುಹಬ್ಬದ ದಿನಕ್ಕೆ ಸಂಬಂಧಿಸಿ ಈ ಟ್ವೀಟ್ ಮಾಡಿದ್ದು, ಅದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಹಲವರು ಅವರ ಸಂದೇಶ ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. 'ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ' ಎಂದು ಹಲವರು ರಚಿತಾ ರಾಮ್ ನಿರ್ಧಾರವನ್ನು ಮನಸಾರೆ ಶ್ಲಾಘಿಸಿದ್ದಾರೆ.
ಬದಲಾಯ್ತೇ ಬೆದರುಬೊಂಬೆ 'ಭಾಗ್ಯಲಕ್ಷ್ಮೀ' ವರಸೆ; ಮುಂದೇನು ತಾಂಡವ್ ಗತಿ..?
ಹಾಗಿದ್ದರೆ ನಟಿ ರಚಿತಾ ರಾಮ್ ಸಂದೇಶವೇನು ಗೊತ್ತೆ? "ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ವರ್ಷ ನನ್ನ ಜನ್ಮ,ದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿ .. ನಿಮ್ಮ ರಚ್ಚು" ಎಂದು ಬರೆದು ರೆಡ್ ಲವ್ ಇಮೋಜಿ ಹಾಕಿ ಅಭಿಮಾನಿಗಳಿಗೆ ವಿನಂತಿಸಿಕೊಂಡಿದ್ದಾರೆ ನಟಿ ರಚಿತಾ ರಾಮ್.
ರಾಜ್‌ಕುಮಾರ್ ಮಗಳು ವಾಸ್ತವಿಕ್ತಾ ವಿರುದ್ಧ FIR ದಾಖಲಿಸಿದ್ದ ನಟ ಶಾಹಿದ್ ಕಪೂರ್!
ಅಂದಹಾಗೆ, ನಟಿ ರಚಿತಾ ರಾಮ್ ಹುಟ್ಟುಹಬ್ಬವು (Rachita Ram Birthday) 3 ಅಕ್ಟೋಬರ್ 2023. ಆದರೆ, ಪ್ರತಿವರ್ಷದಂತೇ ಈ ವರ್ಷ ತಮ್ಮ ಬರ್ತ್‌ಡೇಯನ್ನು ಅಭಿಮಾನಿಗಳೊಂದಿಗೆ ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡದಿರಲು ನಿರ್ಧರಿಸಿದ್ದಾರೆ ನಟಿ ರಚಿತಾ ರಾಮ್. ಕರ್ನಾಟಕದ ಜನರು ಬಳಕೆಗೆ ಕಾವೇರಿ ನೀರು ಸಿಗದೇ ಕಣ್ಣೀರು ಹಾಕುತ್ತಿದ್ದಾರೆ. ಈ ಸಮಯದಲ್ಲಿ ತಾವು ತಮ್ಮ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸದಿರಲು ನಿರ್ಧಾರ ಮಾಡಿರುವ ರಚಿತಾ, ಅದನ್ನು ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಸಂದೇಶದ ಮೂಲಕ ತಿಳಿಸಿದ್ದಾರೆ.